For Quick Alerts
ALLOW NOTIFICATIONS  
For Daily Alerts

ಫೆಬ್ರವರಿ ಆರಂಭದಿಂದ ಶೇ 100ರಷ್ಟು ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶನ

|

ಫೆಬ್ರವರಿ ಆರಂಭದಿಂದ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಪ್ರೇಕ್ಷಕರ ವೀಕ್ಷಣೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅವಕಾಶ ಮಾಡಿಕೊಟ್ಟಿದೆ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಮೂಲಕ ಸಿನಿಮಾ ಚಿತ್ರಮಂದಿರಗಳ ಪಾಲಿಗೆ ನಿರಾಳ ಆದಂತಾಗಿದೆ. ಕೊರೊನಾ ಕಾರಣಕ್ಕೆ ಏಳು ತಿಂಗಳಿಂದ ಚಿತ್ರಮಂದಿರಗಳು ಮುಚ್ಚಿದ್ದವು. ಈಚೆಗೆ ಮತ್ತೆ ಕಡಿಮೆ ಸಂಖ್ಯೆಯ ಪ್ರೇಕ್ಷಕರೊಂದಿಗೆ ಆರಂಭವಾಯಿತು. ಹಲವು ಆಫರ್ ಗಳನ್ನು ನೀಡಲಾಗಿತ್ತು.

 

"ಫೆಬ್ರವರಿ 1ರಿಂದ ಶೇಕಡಾ 100ರಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳೊಂದಿಗೆ ಶುರುವಾಗುತ್ತದೆ. ಇದರಿಂದಾಗಿ ಬಿಡುಗಡೆಗೆ ಬಾಕಿ ಇರುವ ಹಲವು ಸಿನಿಮಾಗಳು ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬಹುದು," ಎಂದು ಸಿನಿಮಾ ವಿತರಕ ಮತ್ತು ಪ್ರದರ್ಶಕ ಅಕ್ಷಯ್ ರಾಥಿ ಟ್ವೀಟ್ ಮಾಡಿದ್ದಾರೆ.

ಬಜೆಟ್ 2021: ವಿವಿಧ ಮಲ್ಟಿಪ್ಲೆಕ್ಸ್ ಪ್ರತಿನಿಧಿಗಳಿಂದ ನಿರ್ಮಲಾ ಸೀತಾರಾಮನ್ ಗೆ ಮನವಿ

ಆದರೆ, ಕಂಟೇನ್ ಮೆಂಟ್ ವಲಯದಲ್ಲಿ ಸಿನಿಮಾ ತೆರೆ ಕಾಣುವುದಿಲ್ಲ. ಉಳಿದೆಡೆಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಪಾಲಿಸುವಂತೆ ಸಚಿವಾಲಯದಿಂದ ತಿಳಿಸಲಾಗಿದೆ. ಎಲ್ಲ ಸಿಬ್ಬಂದಿ ಮತ್ತು ಪ್ರೇಕ್ಷಕರು ಸಾಮಾಜಿಕ ಅಂತರ ಪಾಲಿಸಬೇಕು ಹಾಗೂ ಮುಖಕ್ಕೆ ಮಾಸ್ಕ್ ಧರಿಸಿರಬೇಕು ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಇನ್ ಸ್ಟಾಲ್ ಮಾಡಿಕೊಂಡಿರಬೇಕು ಎನ್ನಲಾಗಿದೆ.

ಫೆಬ್ರವರಿ ಆರಂಭದಿಂದ ಶೇ 100ರಷ್ಟು ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶನ

ಹೆಚ್ಚು ದಟ್ಟಣೆ ಆಗದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಅವೆಲ್ಲ ಅನುಸರಿಸಲಾಗುತ್ತದೆ. ಚಿತ್ರಮಂದಿರ ಪ್ರತಿ ಸ್ಕ್ರೀನಿಂಗ್ ನಂತರ ಸ್ಯಾನಿಟೈಸ್ ಮಾಡಬೇಕು. ಏರ್ ಕಂಡೀಷನಿಂಗ್ ನಲ್ಲಿ 24ರಿಂದ 30 ಡಿಗ್ರಿಯಷ್ಟಿರಬೇಕು ಎಂದು ತಿಳಿಸಲಾಗಿದೆ.

ಈಚಿನ ಕೆಪಿಎಂಜಿ ವರದಿ ಪ್ರಕಾರ, FY21ರಲ್ಲಿ 67%ಗೂ ಹೆಚ್ಚು ಸಿನಿಮಾ ಸೆಗ್ಮೆಂಟ್ ಕುಗ್ಗಿದೆ. 6100 ಕೋಟಿ ರುಪಾಯಿ ಆದಾಯ ದಾಖಲಿಸಿದೆ. ಈ ಹಿಂದಿನ ವರ್ಷದಲ್ಲಿ 18300 ಕೋಟಿ ರುಪಾಯಿ ಬಂದಿತ್ತು. 1000ಕ್ಕೂ ಹೆಚ್ಚು ಚಿತ್ರಮಂದಿರಗಳು, ಅದರಲ್ಲೂ ಒಂದು ತೆರೆಯ ಚಿತ್ರಮಂದಿರಗಳು ದೇಶದಾದ್ಯಂತ ಮುಚ್ಚಿವೆ. ದೊಡ್ಡ ಬಜೆಟ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಬದಲು ನೇರವಾಗಿ ಒಟಿಟಿಯಲ್ಲಿ ಬಂದಿವೆ.

English summary

Union Government Allows 100 Percent Occupancy In Cinema Hall From February 1st

Central government on Saturday announces 100% occupancy in cinema hall from February 1st. Here is the details.
Story first published: Sunday, January 31, 2021, 10:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X