For Quick Alerts
ALLOW NOTIFICATIONS  
For Daily Alerts

ಯುಪಿಐ ದಾಖಲೆ: ಫೆಬ್ರವರಿಯಲ್ಲಿ 2.29 ಬಿಲಿಯನ್ ವಹಿವಾಟು

|

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಫೆಬ್ರವರಿಯಲ್ಲಿ ಯುಪಿಐ ಪಾವತಿ ಬರೋಬ್ಬರಿ 4.25 ಲಕ್ಷ ಕೋಟಿ ಮೌಲ್ಯದ್ದಾಗಿದ್ದು , ದಾಖಲೆಯ 2.29 ಬಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ.

 

ಸರಾಸರಿ ವಹಿವಾಟು ಮೌಲ್ಯದ ದೃಷ್ಟಿಯಿಂದ, ಯುಪಿಐ ತನ್ನ ಹಿಂದಿನ ದಾಖಲೆಯನ್ನು ಫೆಬ್ರವರಿ 28 ದಿನಗಳಲ್ಲಿಯೂ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಜನವರಿಯಲ್ಲಿ ಇದು 4,31,181 ಕೋಟಿ ಅಥವಾ 4.31 ಲಕ್ಷ ಕೋಟಿ ಮೌಲ್ಯದ 2.3 ಬಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ.

ಯುಪಿಐ ದಾಖಲೆ: ಫೆಬ್ರವರಿಯಲ್ಲಿ 2.29 ಬಿಲಿಯನ್ ವಹಿವಾಟು

ಫೆಬ್ರವರಿಯಲ್ಲಿ ಡಿಜಿಟಲ್ ಪಾವತಿಗಳ ಪ್ರಮುಖ ಸಂಸ್ಥೆ ಫೋನ್‌ಪೇ ಯುಪಿಐ ವಹಿವಾಟಿನ ಪ್ರಮಾಣ ಮತ್ತು ಮೌಲ್ಯದ ದೃಷ್ಟಿಯಿಂದ ಗೂಗಲ್ ಪೇಗಿಂತ ಮುಂಚೂಣಿಯಲ್ಲಿತ್ತು. ಜನವರಿಯಲ್ಲಿ 1,91,973.77 ಕೋಟಿ ರೂ.ಗಳ 968.72 ಮಿಲಿಯನ್ ವಹಿವಾಟುಗಳನ್ನು ದಾಖಲಿಸಿದ್ದರೆ, ಗೂಗಲ್ ಪೇ 853.53 ಮಿಲಿಯನ್ ವಹಿವಾಟುಗಳನ್ನು 1,77,791.47 ಕೋಟಿ ರೂ. ತಲುಪಿದೆ.

ಫೋನ್‌ಪೇ ಮತ್ತು ಗೂಗಲ್ ಪೇ ಒಟ್ಟಾಗಿ ಯುಪಿಐ ವಹಿವಾಟು ವ್ಯವಸ್ಥೆಯಲ್ಲಿ ಶೇಕಡಾ 80ರಷ್ಟು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತಿವೆ. ಉಳಿದಂತೆ ಪೇಟಿಎಂ, ಅಮೆಜಾನ್ ಪೇ, ಭೀಮ್ ಇತರೆ ಯುಪಿಐ ಆ್ಯಪ್‌ಗಳು ಉಳಿದ ಮಾರುಕಟ್ಟೆ ಪಾಲನ್ನು ಹೊಂದಿದೆ.

English summary

UPI registers 2.29 billion transactions in February 2021

Unified Payments Interface or UPI has registered 2.29 billion transactions worth Rs 4,25,062 crore in February
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X