For Quick Alerts
ALLOW NOTIFICATIONS  
For Daily Alerts

ಚೀನಾ ಸೇನೆ ಜತೆ ನಂಟಿನ ಆರೋಪದಲ್ಲಿ ಶಿಯೋಮಿ ಸೇರಿ 9 ಕಂಪೆನಿ ಕಪ್ಪು ಪಟ್ಟಿಗೆ

By ಅನಿಲ್ ಆಚಾರ್
|

ಚೀನಾ ಸೇನೆಯೊಂದಿಗೆ ಸಂಪರ್ಕ ಇದೆ ಎಂಬ ಆರೋಪದಲ್ಲಿ ಸ್ಮಾರ್ಟ್ ಫೋನ್ ತಯಾರಕ ಕಂಪೆನಿ ಶಿಯೋಮಿ ಕಾರ್ಪೊರೇಷನ್, ಚೀನಾದ ಮೂರನೇ ಅತಿ ದೊಡ್ಡ ರಾಷ್ಟ್ರೀಯ ತೈಲ ಕಂಪೆನಿಯನ್ನು ಯು.ಎಸ್. ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದೆ. ಆ ಮೂಲಕ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಅವಧಿಯ ಕೊನೆ ವಾರದಲ್ಲಿ ಚೀನಾ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗಿದೆ.

ರಕ್ಷಣಾ ಇಲಾಖೆಯಿಂದ ಒಂಬತ್ತು ಚೀನಿ ಕಂಪೆನಿಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಶಿಯೋಮಿ, ಸರ್ಕಾರಿ ಸ್ವಾಮ್ಯದ ವಿಮಾನ ತಯಾರಿಕಾ ಸಂಸ್ಥೆ ಕಮರ್ಷಿಯಲ್ ಏರ್ ಕ್ರಾಫ್ಟ್ ಕಾರ್ಪ್ ಆಫ್ ಚೀನಾ (Comac) ಸಹ ಇದರಲ್ಲಿ ಒಳಗೊಂಡಿದೆ. ಈ ವರ್ಷದ ನವೆಂಬರ್ ತಿಂಗಳ ಒಳಗಾಗಿ ಯು.ಎಸ್. ಹೂಡಿಕೆದಾರು ಈ ಚೀನೀ ಕಂಪೆನಿಗಳಲ್ಲಿನ ತಮ್ಮ ಷೇರಿನ ಪಾಲನ್ನು ಹಿಂಪಡೆಯಬೇಕು.

 

ಚೀನಾದ ಐದು ವಸ್ತುಗಳ ಮೇಲೆ ನಿಷೇಧ ಹೇರಿದ ಯುಎಸ್: ಬಲವಂತಕ್ಕೆ ಭರ್ತಿ ಪೆಟ್ಟು

ಶಿಯೋಮಿ ಕಾರ್ಪ್ 2020ರ ಮೂರನೇ ತ್ರೈಮಾಸಿಕದಲ್ಲಿ ಆಪಲ್ ಕಂಪೆನಿಯನ್ನು ಹಿಂದಿಕ್ಕಿ, ಮಾರಾಟದ ಲೆಕ್ಕದಲ್ಲಿ ವಿಶ್ವದ ಮೂರನೇ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಎನಿಸಿಕೊಂಡಿತು. ಯಾವಾಗ ಯುಎಸ್ ನಿಂದ ಹುವೈ ಅನ್ನು ಕಪ್ಪು ಪಟ್ಟಿಗೆ ಸೇರಿಸಲಾಯಿತೋ ಶಿಯೋಮಿ ಮಾರುಕಟ್ಟೆ ಪಾಲು ಹೆಚ್ಚಾಯಿತು. ಅಷ್ಟೇ ಅಲ್ಲ, ಗೂಗಲ್ ನಿಂದ ಹುವೈ ಸ್ಮಾರ್ಟ್ ಪೋನ್ ಗಳನ್ನು ಅಗತ್ಯ ಸೇವೆಗಳಿಂದಲೂ ಕಡಿತ ಮಾಡಲಾಯಿತು.

ಚೀನಾ ಸೇನೆ ಜತೆ ನಂಟಿನ ಆರೋಪ; ಶಿಯೋಮಿ ಸೇರಿ 9 ಕಂಪೆನಿ ಕಪ್ಪು ಪಟ್ಟಿಗೆ

ಪ್ರತ್ಯೇಕವಾಗಿ, ವಾಣಿಜ್ಯ ಇಲಾಖೆಯಿಂದ ಚೀನಾ ನ್ಯಾಷನಲ್ ಆಫ್ ಶೋರ್ ಆಯಿಲ್ ಕಾರ್ಪ್ (CNOOC) ಕೂಡ ಪಟ್ಟಿಯಲ್ಲಿ ಸೇರಿಸಲಾಗಿದೆ. ಯು.ಎಸ್. ಸರ್ಕಾರದ ಪೂರ್ವಾನುಮತಿ ಪಡೆಯದೆ ಯಾವುದೇ ಯು.ಎಸ್. ಕಂಪೆನಿಯು ರಫ್ತು, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುವಂತಿಲ್ಲ. ಕಳೆದ ಡಿಸೆಂಬರ್ ನಲ್ಲಿ ಅರವತ್ತು ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು.

ಚೀನಾ ಸರ್ಕಾರಿ ಸ್ವಾಮ್ಯದ ಕಂಪೆನಿ Skyrizon ಆರ್ಥಿಕ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದು ವಿಮಾನ ಯಾನ ಸಂಸ್ಥೆ. ವಿದೇಶಿ ಮಿಲಿಟರಿ ತಂತ್ರಜ್ಞಾನ ಖರೀದಿ ಮತ್ತು ಅದನ್ನು ಸ್ಥಳೀಯವಾಗಿ ರೂಪಿಸುವ ಕೆಲಸ ಮಾಡುತ್ತಿದೆ. ಅತ್ಯಾಧುನಿಕ ಏರೋಸ್ಪೇಸ್ ತಂತ್ರಜ್ಞಾನವನ್ನು ಮಿಲಿಟರಿ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂಬ ಆತಂಕದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

English summary

US Government Government Blacklists 9 Chinese Companies Including Xiaomi

U.S. government blacklists 9 Chinese companies including mobile phone manufacturer Xiaomi. Here is the details.
Company Search
COVID-19