For Quick Alerts
ALLOW NOTIFICATIONS  
For Daily Alerts

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 0 ಡಾಲರ್‌ಗಿಂತ ಕೆಳಗಿಳಿದ ಕಚ್ಚಾ ತೈಲ ದರ

|

ಕೊರೊನಾ ವೈರಸ್‌ನಿಂದ ಆಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಎಲ್ಲಾ ಉದ್ಯಮಗಳು ನೆಲಕಚ್ಚಿದ್ದು, ಇದರ ಜೊತೆಗೆ ತೈಲ ಬೆಲೆಯು ಪಾತಾಳಕ್ಕೆ ತಲುಪಿದೆ.

 

ಕೊರೊನಾ ಮೊದಲು ವಿಶ್ವದಲ್ಲಿ ಅವಶ್ಯಕ ಬಹುಬೇಡಿಕೆಯ ಸರಕು ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ ಒಂದು ಡಾಲರ್‌ಗಿಂತ ಕಡಿಮೆಯಾಗಿದೆ. ಈ ರೀತಿ ಆಗಿರುವುದು ಇತಿಹಾಸದಲ್ಲಿ ಇದೇ ಮೊದಲ ಬಾರಿ ಎನ್ನಲಾಗಿದೆ. ಅಮೆರಿಕಾದ ವೆಸ್ಟ್ ಟೆಕ್ಸಾಸ್ ಮಧ್ಯಂತರ(ಡಬ್ಲ್ಯುಟಿಐ) ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ ೦ ಡಾಲರ್‌ಗಿಂತಲೂ ಕಡಿಮೆಯಾಗಿದೆ. ಇದೇ ಮೊದಲ ಬಾರಿಗೆ ತೈಲ ಬೆಲೆಯು ನೆಗೆಟಿವ್ ಕಂಡು ಬಂದಿದ್ದು ಕಚ್ಚಾ ತೈಲ ದರವು - 37.63 ಡಾಲರ್‌ಗೆ ಇಳಿಯಿತು

ಇತಿಹಾಸದಲ್ಲಿ ಮೊದಲ ಬಾರಿಗೆ 0 ಡಾಲರ್‌ಗಿಂತ ಕೆಳಗಿಳಿದ ಕಚ್ಚಾ ತೈಲ ದರ

ಕೊರೊನಾ ವೈರಸ್ ಬಿಕ್ಕಟ್ಟು ನಿಯಂತ್ರಣಕ್ಕಾಗಿ ಭಾಗಶಃ ರಾಷ್ಟ್ರಗಳಲ್ಲಿ ಘೋಷಿಸಿರುವ ಲಾಕ್‌ಡೌನ್‌ನಿಂದ ಪೆಟ್ರೋಲ್‌ ಹಾಗೂ ಡಿಸೇಲ್‌ಗಳ ಬೇಡಿಕೆ ಕುಸಿತದ ಹಿನ್ನೆಲೆ ತೈಲ ಬೆಲೆಯು ಕುಸಿಯುತ್ತಿದೆ. ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ಮತ್ತು ಅದರ ಮಿತ್ರ ರಾಷ್ಟ್ರಗಳ ನಡುವಿನ ಇತ್ತೀಚಿನ ಉತ್ಪಾದನಾ ಕಡಿತದ ಒಪ್ಪಂದದ ಹೊರತಾಗಿಯೂ ಈ ಕುಸಿತ ಕಂಡುಬಂದಿದೆ.

ಒಪೆಕ್‌ ಮಾಡಿಕೊಂಡ ಒಪ್ಪಂದ ತೈಲ ಬೆಲೆಯನ್ನು ಸ್ಥಿರಗೊಳಿಸುತ್ತದೆ ಎಂಬ ಭರವಸೆ ಇತ್ತು. ಆದರೆ, ಕೊರೊನಾವೈರಸ್ ತನ್ನ ಆರ್ಭಟವನ್ನು ಮುಂದುವರೆಸಿದ ಪರಿಣಾಮ ಬೇಡಿಕೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ.

ಪೂರೈಕೆ ಹೆಚ್ಚಳ ಮತ್ತು ಬೇಡಿಕೆ ಕುಸಿತದ ಕಾರಣಕ್ಕೆ ಮಾರುಕಟ್ಟೆಯಲ್ಲಿ ತೈಲದ ಪ್ರವಾಹ ಹೆಚ್ಚಿದೆ. ಈಗಾಗಲೇ ವಿಶ್ವದ ಬಹುತೇಕ ತೈಲ ಸಂಗ್ರಹಾರಗಳು ಭರ್ತಿಯಾಗುತ್ತಿವೆ. ಹೆಚ್ಚುವರಿ ತೈಲ ಸಂಗ್ರಹಿಸಿ ಇಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಬೆಲೆಯು ಎರಡು ದಶಕಗಳಿಗಿಂತ ಹೆಚ್ಚಿನ ಮಟ್ಟದ ಕನಿಷ್ಟ ಮಟ್ಟಕ್ಕೆ ಕುಸಿದಿದೆ.

ಅಮೆರಿಕಾದ ತೈಲ ಮಾರುಕಟ್ಟೆ ವೆಸ್ಟ್‌ ಟೆಕ್ಸಾಸ್ ಇಂಟರ್‌ಮೀಡಿಯೇಟ್(ಡಬ್ಲುಟಿಐ) ಬೆಲೆಯು ಏಷ್ಯಾದ ಮಾರುಕಟ್ಟೆಯ ಸೋಮವಾರದ ವಹಿವಾಟಿನ ಆರಂಭದಲ್ಲಿ 20 ಪರ್ಸೆಂಟ್ ಕುಸಿದು ಪ್ರತಿ ಬ್ಯಾರೆಲ್‌ಗೆ 15 ಡಾಲರ್‌ಗೆ ತಲುಪಿತ್ತು. ಇದು 1999 ನಂತರದ ಕನಿಷ್ಟ ಮಟ್ಟವಾಗಿದೆ.

ಅಮೆರಿಕಾದಲ್ಲಿ ಪ್ರತಿ ಬ್ಯಾರೆಲ್‌ಗೆ ಮೈನಸ್‌ಗೆ ತಲುಪಿದ್ದ ಕಚ್ಚಾ ತೈಲ ಬೆಲೆಯು ಮಂಗಳವಾರ ಚೇತರಿಕೆ ಕಂಡಿದೆ. ವ್ಯಾಪಾರಿಗಳು ಈಗ ಜೂನ್ ವಿತರಣೆಯ ಒಪ್ಪಂದದ ಮೇಲೆ ಹೆಚ್ಚು ಗಮನಹರಿಸಿದ್ದಾರೆ. ಇದು ವ್ಯಾಪಾರದ ಪ್ರಮಾಣವನ್ನು 30 ಪರ್ಸೆಂಟ್ ಹೆಚ್ಚು ಹೊಂದಿದೆ. ಬ್ಯಾರೆಲ್‌ಗೆ 20.43 ಡಾಲರ್‌ಗೆ ಆರಂಭವಾಗಿ ನಂತರ 21 ಡಾಲರ್‌ಕ್ಕಿಂತ ಹೆಚ್ಚಾಗಿದೆ.

English summary

US Oil Price Have Crashed Below 0 Dollar

US crude fell to negative value for first time in history. before rebounding to just over $1 on Tuesday
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X