For Quick Alerts
ALLOW NOTIFICATIONS  
For Daily Alerts

ಚೀನಾ ವಿಮಾನಗಳಿಗೆ ಅಮೆರಿಕಗೆ ಇನ್ನು ಪ್ರವೇಶ ಇಲ್ಲ; ಟ್ರಂಪ್ ಆಡಳಿತದ ಚಾಟಿ

|

ಚೀನಾದ ವಿಮಾನಗಳಿಗೆ ಯು.ಎಸ್.ನೊಳಗೆ ಪ್ರವೇಶಕ್ಕೆ ಅವಕಾಶ ನೀಡದಿರಲು ಟ್ರಂಪ್ ಸರ್ಕಾರ ಆಲೋಚಿಸುತ್ತಿದೆ. ಜೂನ್ ತಿಂಗಳ ಮಧ್ಯ ಭಾಗದಿಂದಲೇ ಈ ನಿಯಮ ಜಾರಿಗೆ ತಂದು, ಚೀನಾದೊಳಗೆ ಅಮೆರಿಕದ ವಿಮಾನಗಳನ್ನು ಬಿಡುವಂತೆ ಒತ್ತಡ ಹೇರಲು ಹೀಗೆ ಮಾಡಬಹುದು ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿರುವಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

 

ಕೊರೊನಾ ವ್ಯಾಪಕವಾದ ನಂತರ ಚೀನಾ ಹಾಗೂ ಅಮೆರಿಕ ಮಧ್ಯೆ ಸಂಬಂಧ ಇನ್ನಷ್ಟು ಹಳಸಿದೆ. ಜತೆಗೆ ಅಂತರರಾಷ್ಟ್ರೀಯ ವಿಮಾನ ಯಾನ ಒಪ್ಪಂದಕ್ಕೆ ಚೀನಾ ಬದ್ಧವಾಗಿಲ್ಲ ಎಂದು ಅಮೆರಿಕ ಆರೋಪಿಸುತ್ತಿದೆ. ಒಂದು ವೇಳೆ ಚೀನಾ ವಿಮಾನಗಳಿಗೆ ನಿರ್ಬಂಧ ಹಾಕುವುದು ಪಕ್ಕಾ ಆದಲ್ಲಿ ಜೂನ್ 16ನೇ ತಾರೀಕಿನಿಂದಲೇ ಜಾರಿಗೆ ಬರಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚೀನಾ ವಿಮಾನಗಳಿಗೆ ನಿರ್ಬಂಧ

ಚೀನಾ ವಿಮಾನಗಳಿಗೆ ನಿರ್ಬಂಧ

ಕೊರೊನಾ ಸಂದರ್ಭದಲ್ಲಿ ಚೀನಾದಿಂದ ಯು.ಎಸ್.ಗೆ ವಿಮಾನ ಹಾರಾಟ ಇದೆ. ಆದರೆ ಯುನೈಟೆಡ್ ಏರ್ ಲೈನ್ಸ್ ಹಾಗೂ ಡೆಲ್ಟಾ ಏರ್ ಲೈನ್ಸ್ ಮತ್ತೆ ಕಾರ್ಯಾರಂಭ ಮಾಡಲು ಕೇಳಲಾಗಿತ್ತು. ಆದರೆ ಈಗ ಏರ್ ಚೀನಾ, ಚೀನಾ ಈಸ್ಟರ್ನ್ ಏರ್ ಲೈನ್ಸ್ ಕಾರ್ಪೊರೇಷನ್, ಚೀನಾ ಸದರ್ನ್ ಏರ್ ಲೈನ್ಸ್ ಮತ್ತು ಹೈನನ್ ಏರ್ ಲೈನ್ಸ್ ಹೋಲ್ಡಿಂಗ್ ಕೋ ಇವುಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಬಹುದು.

ಖಾಸಗಿ ವಿಮಾನಗಳಿಗೂ ಅನ್ವಯಿಸಬಹುದು

ಖಾಸಗಿ ವಿಮಾನಗಳಿಗೂ ಅನ್ವಯಿಸಬಹುದು

ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಶ್ವೇತ ಭವನ ಮತ್ತು ಸಾರಿಗೆ ಇಲಾಖೆಯು ನಿರಾಕರಿಸಿದೆ. ಅಮೆರಿಕದಲ್ಲಿನ ಚೀನಾ ರಾಯಭಾರಿ ಕೂಡ ಈ ವಿಚಾರವಾಗಿ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ವೇಳೆ ಟ್ರಂಪ್ ಆಡಳಿತವು ಚೀನಾದ ಖಾಸಗಿ ಪ್ರಯಾಣಿಕರ ವಿಮಾನಗಳ ಮೇಲೂ ನಿರ್ಬಂಧ ಹೇರಲಿದ್ದು, ಅವುಗಳಿಗೆ ಕೂಡ ಅನುಮತಿ ನೀಡದಿರಲು ಚಿಂತಿಸಿದೆ.

ಅಮೆರಿಕ ಸಂಸ್ಥೆಗಳು ವಿಮಾನ ಹಾರಾಟ ನಿಲ್ಲಿಸಿದ್ದವು
 

ಅಮೆರಿಕ ಸಂಸ್ಥೆಗಳು ವಿಮಾನ ಹಾರಾಟ ನಿಲ್ಲಿಸಿದ್ದವು

ಯು.ಎಸ್. ಸರ್ಕಾರವು ಜನವರಿ 31ರಂದು ಚೀನಾದಲ್ಲಿ ಇರುವ ಅಮೆರಿಕದ ಪ್ರಜೆಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶವನ್ನು ನಿರ್ಬಂಧ ಮಾಡಿತು. ಅಂದರೆ, ಜನವರಿ 31ಕ್ಕೂ ಹದಿನಾಲ್ಕು ದಿನಕ್ಕೆ ಮುನ್ನ ಯಾರು ಚೀನಾದಲ್ಲಿ ಇರುತ್ತಾರೋ ಅಂಥವರಿಗೆ, ಅಮೆರಿಕದ ಪ್ರಜೆಗಳನ್ನು ಹೊರತುಪಡಿಸಿ ಉಳಿದವರಿಗೆ ನಿರ್ಬಂಧ ಹಾಕಿತು. ಆದರೆ ಚೀನಾ ವಿಮಾನಗಳ ಮೇಲೆ ಯಾವ ನಿರ್ಬಂಧವೂ ಇರಲಿಲ್ಲ. ಆದರೆ ಫೆಬ್ರವರಿಯಲ್ಲಿ ಯು.ಎಸ್. ನ ಎಲ್ಲ ವಿಮಾನ ಯಾನ ಸಂಸ್ಥೆಗಳು ಚೀನಾಗೆ ವಿಮಾನ ಹಾರಾಟವನ್ನು ತಾವಾಗಿಯೇ ನಿಲ್ಲಿಸಿದವು.

English summary

US To Ban All Passenger Flights Of China From June 16

US- China crisis reached new high. US to ban China passenger flights from June 16.
Story first published: Thursday, June 4, 2020, 7:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X