For Quick Alerts
ALLOW NOTIFICATIONS  
For Daily Alerts

554 ರುಪಾಯಿಯ UTI AMC ಷೇರು 490.25ರಂತೆ ಲಿಸ್ಟಿಂಗ್

|

UTI AMC ಷೇರು ಸೋಮವಾರದಂದು (ಅಕ್ಟೋಬರ್ 12, 2020) ವಿತರಣೆ ಮಾಡಿದ್ದಕ್ಕಿಂತ 11% ಕಡಿಮೆ ಬೆಲೆಗೆ, ಅಂದರೆ ಪ್ರತಿ ಷೇರಿಗೆ 490.25ರಂತೆ ಲಿಸ್ಟ್ ಆಗಿದೆ. ಸೆಪ್ಟೆಂಬರ್ 20ರಿಂದ ಅಕ್ಟೋಬರ್ 1ನೇ ತಾರೀಕಿನ ತನಕ ಇದರ ಐಪಿಒ ಸಬ್ ಸ್ಕ್ರಿಪ್ಷನ್ ಅವಕಾಶ ಇತ್ತು. 2160 ಕೋಟಿ ರುಪಾಯಿ ಸಂಗ್ರಹ ಮಾಡುವ ಉದ್ದೇಶಕ್ಕೆ ಪ್ರತಿ ಷೇರಿಗೆ 554 ರುಪಾಯಿ ಬೆಲೆ ನಿಗದಿ ಆಗಿತ್ತು.

ನಿಗದಿಯಾಗಿ ಷೇರುಗಳ ಸಂಖ್ಯೆಗಿಂತ 2.3 ಪಟ್ಟು (ರೀಟೇಲ್ ಹೂಡಿಕೆದಾರರ ಪಾಲು) ಹೆಚ್ಚು ಬೇಡಿಕೆ ಬಂದಿತ್ತು. ಈ ವರ್ಷ ಬಿಡುಗಡೆ ಆಗಿರುವ ಐಪಿಒಗಳಲ್ಲೇ ಒಟ್ಟಾರೆಯಾಗಿ ಅತ್ಯಂತ ಕಡಿಮೆ ಸಬ್ ಸ್ಕ್ರಿಪ್ಷನ್ ಇದಾಗಿತ್ತು. ಅಂತಿಮ ದಿನದ ಬಿಡ್ಡಿಂಗ್ ನಂದೇ ಷೇರು ಪೂರ್ತಿಯಾಗಿ ಸಬ್ ಸ್ಕೈಬ್ ಆಗಿತ್ತು.

 

10 ಮೌಲ್ಯಯುತ ಕಂಪೆನಿಗಳಲ್ಲಿ 9ರ ಮೌಲ್ಯ 3.01 ಲಕ್ಷ ಕೋಟಿ ಏರಿಕೆ

HNI (ಹೈ ನೆಟ್ ವರ್ತ್ ಇಂಡಿವಿಷುವಲ್)ಗೆ ಮೀಸಲಾದ ಭಾಗವು ಪೂರ್ಣ ಪ್ರಮಾಣದಲ್ಲಿ ಸಬ್ ಸ್ಕ್ರೈಬ್ (93%) ಆಗಲಿಲ್ಲ. ಇನ್ನು ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಬೈಯರ್ಸ್ (QIB) 3.3 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಸಿದ್ದರು. ಅಲ್ಲಿಗೆ 2.73 ಕೋಟಿ ಷೇರು ವಿತರಣೆಗೆ ಮುಂದಾದ ಯುಟಿಐ ಎಎಂಸಿಗೆ 6.31 ಕೋಟಿ ಷೇರಿಗೆ ಬೇಡಿಕೆ ಬಂದಿತ್ತು.

554 ರುಪಾಯಿಯ UTI AMC ಷೇರು 490.25ರಂತೆ ಲಿಸ್ಟಿಂಗ್

UTI ಅಸೆಟ್ ಮ್ಯಾನೇಜ್ ಮೆಂಟ್ ಕಂಪೆನಿಯು ಅಸೆಟ್ ಅಂಡರ್ ಮ್ಯಾನೇಜ್ ಮೆಂಟ್ ಲೆಕ್ಕದಲ್ಲಿ (AUM) ದೇಶದಲ್ಲೇ ಎರಡನೇ ಅತಿ ದೊಡ್ದ ಎಎಂಸಿ. ಕೆಲವರ ಅಭಿಪ್ರಾಯದಂತೆ ಷೇರು ವಿತರಣೆಗೆ ನಿಗದಿ ಆಗಿದ್ದ ಮೊತ್ತ ಅಗ್ಗವೇನೂ ಆಗಿರಲಿಲ್ಲ.

English summary

UTI AMC Listed At 11 Percent Discount On October 12, 2020

UTI AMC listed at 490.25 on October 12, 2020. Issue price of this share 554 rupees.
Company Search
COVID-19