For Quick Alerts
ALLOW NOTIFICATIONS  
For Daily Alerts

Vi ಹೊಸ ಪ್ರೀಪೇಯ್ಡ್ ಪ್ಲಾನ್ ಗಳು: ದಿನಕ್ಕೆ 2GB ಡೇಟಾ ಜತೆಗೆ ಒಂದಿಷ್ಟು ಆಫರ್

|

ವೊಡಾಫೋನ್ ಐಡಿಯಾ ಲಿಮಿಟೆಡ್ (Vi) ಪ್ರೀಪೇಯ್ಡ್ ಗ್ರಾಹಕರಿಗಾಗಿ ಹೊಸ ದರಗಳ ಪ್ಲಾನ್ ಆರಂಭಿಸಿದೆ. ಈ ಹೊಸ ಪ್ಲಾನ್ ಗಳ ಜತೆ ಕೆಲವೇ ಹೆಚ್ಚುವರಿ ಅನುಕೂಲಗಳು ಬರಲಿದೆ ಎಂದು ಕಂಪೆನಿಯ ವೆಬ್ ಸೈಟ್ ನಲ್ಲಿನ ಮಾಹಿತಿ ಮೂಲಕ ಗೊತ್ತಾಗುತ್ತದೆ. Zee5 ಚಂದಾದಾರರಾಗುವುದಕ್ಕೆ ಅವಕಾಶ ಅಥವಾ OTT ಪ್ಲಾಟ್ ಫಾರ್ಮ್ ಗಳ ಉಚಿತ ಮನರಂಜನೆ ಇಂಥವುಗಳನ್ನು ಕೆಲವು ಪ್ಲಾನ್ ಗಳಿಂದ ತೆಗೆಯಲಾಗಿದೆ.

 

ವೊಡಾಫೋನ್ ಇಂಡಿಯಾ- ಐಡಿಯಾ ಸೆಲ್ಯುಲಾರ್ ಒಟ್ಟಾಗಿ 'Vi' ಬ್ರ್ಯಾಂಡ್ ಅನಾವರಣ

ಈ ಹಿಂದೆ ಎಲ್ಲ ಪ್ರೀಪೇಯ್ಡ್ ಪ್ಲಾನ್ ಗಳಿಗೂ Zee5 ಉಚಿತ ಸಬ್ ಸ್ಕ್ರಿಪ್ಷನ್ ಇತ್ತು. ಈಗ ಹೊಸ ಪ್ಲಾನ್ 405 ರುಪಾಯಿಯಿಂದ ಶುರುವಾಗುತ್ತದೆ. ಆ ನಂತರ 595, 795 ಹಾಗೂ 2595 ರುಪಾಯಿಗಳ ಪ್ಲಾನ್ ಇದೆ. ಇನ್ನು ವ್ಯಾಲಿಡಿಟಿ 28 ದಿನದಿಂದ ಒಂದು ವರ್ಷದ ತನಕ ಇರುತ್ತದೆ.

ದಿನಕ್ಕೆ 2GBಯಂತೆ ಡೇಟಾ ದೊರೆಯುತ್ತದೆ

ದಿನಕ್ಕೆ 2GBಯಂತೆ ಡೇಟಾ ದೊರೆಯುತ್ತದೆ

405 ರುಪಾಯಿಯ ಪ್ಲಾನ್ ವೊಂದನ್ನು ಬಿಟ್ಟು ಉಳಿದವುಕ್ಕೆ ದಿನಕ್ಕೆ 2GBಯಂತೆ ಡೇಟಾ ದೊರೆಯುತ್ತದೆ. 405 ರುಪಾಯಿ ಪ್ಲಾನ್ ವ್ಯಾಲಿಡಿಟಿ 28 ದಿನ ಇದ್ದು, 90GB ಡೇಟಾ ದೊರೆಯುತ್ತದೆ. ಈ ಎಲ್ಲ ಪ್ಲಾನ್ ಗಳ ಜತೆಗೆ ಜೊಮ್ಯಾಟೋದಿಂದ ರಿಯಾಯಿತಿ ಆಫರ್ ಇದ್ದು, ಪ್ರತಿ ದಿನದ ಆರ್ಡರ್ ಮೇಲೆ 75 ರುಪಾಯಿ ರಿಯಾಯಿತಿ ಇದೆ. ಇದಕ್ಕೆ ಕೆಲವು ನಿಯಮಗಳು ಒಳಪಡುತ್ತವೆ. ಈಚೆಗಷ್ಟೇ ವೊಡಾಫೋನ್ ಹಾಗೂ ಐಡಿಯಾದಿಂದ ರೀಬ್ರ್ಯಾಂಡಿಂಗ್ ಶುರು ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ಹೊಸ ಪ್ಲಾನ್ ಗಳನ್ನು ಪರಿಚಯಿಸಲಾಗುತ್ತಿದೆ. ವೊಡಾಫೋನ್ ಗೆ ನಗರ ಪ್ರದೇಶದ ಹಾಗೂ ಪ್ರೀಮಿಯಂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ, ಐಡಿಯಾದಿಂದ ದೊಡ್ಡ ಮಟ್ಟದಲ್ಲಿ ಅರೆಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಗಮನ ಹರಿಸಲಾಗುತ್ತದೆ.

ವೊಡಾಫೋನ್- ಐಡಿಯಾ 2018ರ ಆಗಸ್ಟ್ ನಲ್ಲಿ ವಿಲೀನ
 

ವೊಡಾಫೋನ್- ಐಡಿಯಾ 2018ರ ಆಗಸ್ಟ್ ನಲ್ಲಿ ವಿಲೀನ

ಈ ಎರಡೂ ಕಂಪೆನಿಗಳು 2018ರ ಆಗಸ್ಟ್ ನಲ್ಲಿ ವಿಲೀನವಾಯಿತು. ಆದರೆ ಇತ್ತೀಚಿನ ತನಕ ಪ್ರತ್ಯೇಕವಾಗಿ ಸೇವೆ ಒದಗಿಸಿದವು. ಆವರೇಜ್ ರೆವೆನ್ಯೂ ಪರ್ ಯೂಸರ್ (ಎಆರ್ ಪಿಯು) ಮೊದಲಿಗೆ 200 ರುಪಾಯಿಗೆ ಹಾಗೂ ನಂತರ 300 ರುಪಾಯಿಗೆ ಹೆಚ್ಚು ಮಾಡುವ ಗುರಿಯಿಂದ ದರ ಹೆಚ್ಚಳದ ಬಗ್ಗೆ ಬಿರ್ಲಾ ಸಮೂಹ ಕಂಪೆನಿಯ ಆಡಳಿತ ಮಂಡಳಿ ಈಚೆಗೆ ಸುಳಿವು ನೀಡಿತ್ತು. ಈಗಿನ ಟೆಲಿಕಾಂ ದರಗಳಿಂದ ಉಳಿದುಕೊಳ್ಳುವುದು ಕಷ್ಟ. ಆದ್ದರಿಂದ ತಕ್ಷಣವೇ ದರ ಹೆಚ್ಚಿಸಬೇಕು ಎಂದು ವೊಡಾಫೋನ್ ಐಡಿಯಾ ಸಿಇಒ ರವೀಂದರ್ ಠಾಕೂರ್ ಹೇಳಿದ್ದರು. ಪ್ರತಿಸ್ಪರ್ಧಿ ಭಾರ್ತಿ ಏರ್ ಟೆಲ್ ಸಿಇಒ ಗೋಪಾಲ್ ವಿಠ್ಠಲ್ ಕೂಡ ದರ ಏರಿಕೆ ಕುರಿತು ತಿಳಿಸಿದ್ದರು.

7854 ಕೋಟಿ ರುಪಾಯಿ ಎಜಿಆರ್ ಬಾಕಿ ಪಾವತಿಸಲಾಗಿದೆ

7854 ಕೋಟಿ ರುಪಾಯಿ ಎಜಿಆರ್ ಬಾಕಿ ಪಾವತಿಸಲಾಗಿದೆ

ತಜ್ಞರು ಹೇಳುವ ಪ್ರಕಾರ, ವೊಡಾಫೋನ್ ಐಡಿಯಾದ ಆರ್ಥಿಕ ಸ್ಥಿತಿ ಒತ್ತಡದಲ್ಲಿದೆ. ಎಜಿಆರ್ (ಅಡ್ಜಸ್ಟಡ್ ಗ್ರಾಸ್ ರೆವೆನ್ಯೂ) ಸರ್ಕಾರಕ್ಕೆ ಪಾವತಿಸಬೇಕು ಎಂಬುದರ ಹೊರತಾಗಿಯೂ ನಗದಿನ ಅವಶ್ಯಕತೆ ಹೆಚ್ಚಿದೆ. ಡೆಟ್ ಹಾಗೂ ಈಕ್ವಿಟಿ ಮೂಲಕ 25 ಸಾವಿರ ಕೋಟಿ ರುಪಾಯಿ ಸಂಗ್ರಹಿಸಲು ಕಂಪೆನಿಯ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತ್ತು. ವೊಡಾಫೋನ್ ಐಡಿಯಾದಿಂದ ಈ ತನಕ 7854 ಕೋಟಿ ರುಪಾಯಿ ಎಜಿಆರ್ ಬಾಕಿ ಪಾವತಿಸಲಾಗಿದೆ. ಟೆಲಿಕಮ್ಯುನಿಕೇಷನ್ ಇಲಾಖೆಗೆ 50 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಪಾವತಿಸಬೇಕಿದೆ.

English summary

Vi New Pre Paid Mobile Plans Launched With Daily 2GB Data Benefit

Vodafone Idea launched new prepaid mobile plans with fewer benefits. After re branding of companies trying to expand user base and revenue.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X