ವೊಡಾಫೋನ್ ಐಡಿಯಾ VS ರಿಲಯನ್ಸ್ ಜಿಯೋ 555 ರೂಪಾಯಿ ಪ್ರಿಪೇಯ್ಡ್ ಯೋಜನೆ
ಬಹುದೊಡ್ಡ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ನಡುವೆ ಭಾರತದಲ್ಲಿ ಸ್ಪರ್ಧೆ ಬಹು ಜೋರಾಗಿದೆ. ಈ ಎರಡು ಟೆಲಿಕಾಂ ಕಂಪನಿಗಳ ಹಗ್ಗ ಜಗ್ಗಾಟದ ಲಾಭ ಗ್ರಾಹಕರಿಗೆ ಸಿಗುತ್ತಿದೆ. ಏಕೆಂದರೆ ಇಬ್ಬರ ಬಹುತೇಕ ಯೋಜನೆಗಳು ಒಂದೇ ರೀತಿಯಲ್ಲಿ ಇರುತ್ತದೆ. ಆದರೂ ಎರಡು ಟೆಲಿಕಾಂ ಕಂಪನಿಯ ಪ್ರಿಪೇಯ್ಡ್ ಇತರೆ ಪ್ರಯೋಜನಗಳಲ್ಲಿ ವ್ಯತ್ಯಾಸಗಳಿವೆ.
ವಿಐಗೆ ಹೋಲಿಸಿದರೆ ರಿಲಯನ್ಸ್ ಜಿಯೋ ಯೋಜನೆಗಳು ಬಹುತೇಕ ಒಂದೇ ಸಮನಾದ ಪ್ರಯೋಜನ ಹೊಂದಿವೆ ರಿಲಯನ್ಸ್ ಜಿಯೋ 555 ರೂಪಾಯಿ ಪ್ರಿಪೇಯ್ಡ್ ಯೋಜನೆ ಮತ್ತು ವೊಡಾಫೋನ್ ಐಡಿಯಾ 555 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ನಡುವೆ ವ್ಯತ್ಯಾಸವನ್ನು ನಾವು ನಿಮಗೆ ತಿಳಿಸಲಿದ್ದೇವೆ. ಈ ಎರಡರಲ್ಲಿ ಯಾವುದು ಉತ್ತಮ ಎಂದು ನೀವೆ ಆಯ್ದುಕೊಳ್ಳಿ.

ವೊಡಾಫೋನ್ ಐಡಿಯಾದ 555 ರೂಗಳ ಪ್ಲಾನ್
555 ರೂಗಳ ವೊಡಾಫೋನ್ ಐಡಿಯಾ ಪ್ಲಾನ್ ದಿನಕ್ಕೆ 1.5 ಜಿಬಿ ಡೇಟಾ, ದಿನಕ್ಕೆ 100 ಎಸ್ಎಂಎಸ್ ಮತ್ತು ಅನಿಯಮಿತ ಕರೆ ಸೌಲಭ್ಯವನ್ನು 77 ದಿನಗಳವರೆಗೆ ನೀಡುತ್ತದೆ. ಇದು ಬಿಂಜ್ ಆಲ್ ನೈಟ್, ವೀಕೆಂಡ್ ಡಾಟಾ ರೋಲ್ಓವರ್ ಫೀಚರ್ ಮತ್ತು ಅದೇ ಅವಧಿಗೆ Vi ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ಪಡೆಯುತ್ತದೆ.

ರಿಲಯನ್ಸ್ ಜಿಯೋದ 555 ರೂ. ಪ್ರಿಪೇಯ್ಡ್ ಯೋಜನೆ
ರಿಲಯನ್ಸ್ ಜಿಯೋ ಈ ಪ್ಯಾಕ್ನೊಂದಿಗೆ ಹೆಚ್ಚಿನ ಡೇಟಾ ಪ್ರಯೋಜನಗಳನ್ನು ನೀಡುತ್ತದೆ. ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆ, ಜಿಯೋ ಆಪ್ಸ್ ಆಕ್ಸೆಸ್, JioNews, JioCloud, JioSecurity ಮತ್ತು ಹೆಚ್ಚಿನದನ್ನು ನೀಡುತ್ತದೆ. ಈ ಪ್ರಿಪೇಯ್ಡ್ ಯೋಜನೆ 84 ದಿನಗಳವರೆಗೆ ಬರುತ್ತದೆ.

ಇವೆರಡರಲ್ಲಿ ಯಾವ ಯೋಜನೆ ಉತ್ತಮವಾಗಿದೆ?
ಎರಡು ಪ್ಯಾಕ್ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ವಾರಾಂತ್ಯದ ಡೇಟಾ ರೋಲ್ಓವರ್, ವಿಐ ಎಲ್ಲಾ ಬಳಕೆದಾರರಿಗೆ ಶನಿವಾರ ಮತ್ತು ಭಾನುವಾರದಂದು ವಾರದ ಉಳಿದ ಡೇಟಾವನ್ನು ಬಳಸಲು ಅನುಮತಿಸಲಾಗಿದೆ. ಇದರ ಹೊರತಾಗಿ, ವೋಡಾಫೋನ್ ಐಡಿಯಾ ಯೋಜನೆಯಲ್ಲಿ ಬಿಂಜ್ ಆಲ್ ನೈಟ್ ನ ಪ್ರಯೋಜನವೂ ಲಭ್ಯವಿದೆ. ಅಂದರೆ, ಮಧ್ಯಾಹ್ನ 12 ರಿಂದ ಬೆಳಿಗ್ಗೆ 6 ರವರೆಗೆ, ಬಳಕೆದಾರರು ತಮಗೆ ಬೇಕಾದಷ್ಟು ಇಂಟರ್ನೆಟ್ ಅನ್ನು ಉಚಿತವಾಗಿ ವೀಕ್ಷಿಸಬಹುದು. ಆದರೆ ಈ ಸೌಲಭ್ಯ ಜಿಯೋದಲ್ಲಿ ಲಭ್ಯವಿಲ್ಲ.
ಆದಾಗ್ಯೂ, ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ 77 ದಿನಗಳ ಬದಲಿಗೆ 84 ದಿನಗಳ ಡೇಟಾವನ್ನು ನೀಡುತ್ತದೆ. ಆದರೆ ರಾತ್ರಿಯಲ್ಲಿ ಅನಿಯಮಿತ ಡೇಟಾವನ್ನು ನೀಡುವುದಿಲ್ಲ, ಈ ಕಾರಣದಿಂದಾಗಿ ವೊಡಾಫೋನ್ ಐಡಿಯಾ ಯೋಜನೆ ಜಿಯೋಗಿಂತ ತುಂಬಾ ಮುಂದಿದೆ.

ಜಿಯೋ ವರ್ಸಸ್ ಏರ್ಟೆಲ್ 599 ರೂಪಾಯಿ ಯೋಜನೆ
ರಿಲಯನ್ಸ್ ಜಿಯೋದ 599 ರೂಗಳ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬಳಕೆದಾರರು ಒಟ್ಟು 168 GB ಡೇಟಾವನ್ನು ಪಡೆಯುತ್ತಾರೆ. ಅಂದರೆ, 2GB ಹೈಸ್ಪೀಡ್ ಇಂಟರ್ನೆಟ್ ಡೇಟಾ ಪ್ರತಿದಿನ ಲಭ್ಯವಿದೆ ಮತ್ತು ಇದರ ವ್ಯಾಲಿಡಿಟಿ 84 ದಿನಗಳು. ಇದಲ್ಲದೇ, ಬಳಕೆದಾರರು ಈ ಪ್ಲಾನ್ನಲ್ಲಿ ಪ್ರತಿದಿನ 100 SMS ಪಡೆಯುತ್ತಾರೆ. ಮತ್ತು ಯಾವುದೇ ನೆಟ್ವರ್ಕ್ಗೆ ಕರೆ ಮಾಡಲು, ನೀವು ಅದರಲ್ಲಿ ಅನಿಯಮಿತ ಕರೆ ಪ್ರಯೋಜನವನ್ನು ಪಡೆಯುತ್ತೀರಿ.
ಇನ್ನು ಭಾರ್ತಿ ಏರ್ಟೆಲ್ನ 599 ರೂಪಾಯಿ ಪ್ಲಾನ್ ಬಗ್ಗೆ ನೋಡುವುದಾದರೆ ಬಳಕೆದಾರರು ಇದರಲ್ಲಿ 2GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಕರೆ ಮಾಡುವಾಗ, ನೀವು ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆಗಳನ್ನು ಮಾಡಬಹುದು. ಈ ಯೋಜನೆಯಲ್ಲಿ 100 ಎಸ್ಎಂಎಸ್ಗಳು ಲಭ್ಯವಿದೆ. ಆದರೆ ವ್ಯಾಲಿಡಿಟಿ ಕಡೆ ನೋಡುವುದಾದರೆ, ಬಳಕೆದಾರರು ಕೇವಲ 56 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ.

ಹಾಗಾದರೆ ಯಾವ ಯೋಜನೆ ಉತ್ತಮ?
ನೀವು ಡೇಟಾಕ್ಕಾಗಿ ಈ ಪ್ಲಾನ್ ಅನ್ನು ಆರಿಸಿಕೊಂಡರೆ ಮಾತ್ರ ಜಿಯೋ 599 ಪ್ಲಾನ್ ನಿಮಗೆ ಉತ್ತಮವಾಗಿರುತ್ತದೆ. ಏಕೆಂದರೆ ಇದರಲ್ಲಿ ನೀವು 84GB ಗೆ ಪ್ರತಿದಿನ 2GB ಡೇಟಾವನ್ನು ಪಡೆಯುತ್ತೀರಿ. ಆದರೆ ನೀವು OTT ಪ್ಲಾಟ್ಫಾರ್ಮ್ನ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಬೇಕೆಂದು ಬಯಸಿದರೆ, ಏರ್ಟೆಲ್ 599 ರೂ. ಪ್ಲಾನ್ ಆಯ್ಕೆ ಉತ್ತಮವಾಗಿರುತ್ತದೆ.