For Quick Alerts
ALLOW NOTIFICATIONS  
For Daily Alerts

ದೇಶದ 11 ನಗರದಲ್ಲಿ ವೀಸಾ ಅರ್ಜಿ ಸೇವಾ ಕೇಂದ್ರಗಳು ಜುಲೈ 6ರಿಂದ ಶುರು

|

ಕೊರೊನಾ ನಿರ್ಬಂಧಗಳೆಲ್ಲ ಒಂದೊಂದಾಗಿ ತೆರವಾಗುತ್ತಾ ಬಂದಂತೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ರಾಯಭಾರ ಕಚೇರಿಗಳು, ವಿಎಫ್ ಎಸ್ ಗ್ಲೋಬಲ್ ಭಾರತದಲ್ಲಿ ವೀಸಾ ಅರ್ಜಿಗಳ ಸೇವೆಯನ್ನು ಪುನರಾರಂಭ ಮಾಡಲು ಸಿದ್ಧತೆ ನಡೆಸಿವೆ. ಬೆಲಾರಸ್, ಡೆನ್ಮಾರ್ಕ್, ಡೊಮಿನಿಕನ್ ರಿಪಬ್ಲಿಕ್, ಐರ್ಲೆಂಡ್, ಇಟಲಿ, ನಾರ್ವೆ, ಪೋರ್ಚುಗಲ್, ದಕ್ಷಿಣ ಕೊರಿಯಾ, ಟರ್ಕಿ, ಯುಎಇ ಹಾಗೂ ಯುನೈಟೆಡ್ ಕಿಂಗ್ ಡಮ್ ಗೆ ನಿರ್ದಿಷ್ಟ ವೀಸಾ ಕ್ಯಾಟಗರಿ ಅಡಿ ಅರ್ಜಿ ಸಲ್ಲಿಸಬಹುದು.

ವಿಎಫ್ ಎಸ್ ಗ್ಲೋಬಲ್ ನಿಯಮಿತವಾಗಿ ನಗರಗಳಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ಪುನರಾರಂಭ ಮಾಡಲಿದೆ. ಅದಕ್ಕೆ ಭಾರತದಲ್ಲಿ ಇರುವ ಆಯಾ ರಾಯಭಾರ ಹಾಗೂ ದೂತಾವಾಸ ಕಚೇರಿಯ ಅನುಮತಿ ಪಡೆಯಲಿದೆ. ಇದರ ಜತೆಗೆ ಸ್ಥಳೀಯ ಆಡಳಿತದ ಒಪ್ಪಿಗೆಯನ್ನೂ ಪಡೆಯಲಾಗುತ್ತದೆ.

ದೇಶದ 11 ನಗರಗಳಲ್ಲಿ ವೀಸಾ ಅರ್ಜಿ ಸ್ವೀಕಾರ
 

ದೇಶದ 11 ನಗರಗಳಲ್ಲಿ ವೀಸಾ ಅರ್ಜಿ ಸ್ವೀಕಾರ

ವಿಎಫ್ ಎಸ್ ಗ್ಲೋಬಲ್ ಕೇಂದ್ರದಿಂದ ನಿರ್ದಿಷ್ಟ ದೇಶಗಳ, ವೀಸಾ ಕ್ಯಾಟಗರಿಗಳಲ್ಲಿ ನಿರ್ದಿಷ್ಟ ನಗರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜುಲೈ 6ನೇ ತಾರೀಕಿನಿಂದ ದೇಶದ 11 ನಗರಗಳಲ್ಲಿ ಯುನೈಟೆಡ್ ಕಿಂಗ್ ಡಮ್ ವೀಸಾ ಸೇವೆಗಳನ್ನು ಪುನರಾರಂಭ ಮಾಡಲಾಗುತ್ತದೆ. ಅಹ್ಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಜಲಂಧರ್, ಕೊಚ್ಚಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ (ಮಹಾಲಕ್ಷ್ಮೀ ಮಾತ್ರ), ನವ ದೆಹಲಿ (ಶಿವಾಜಿ ಮೆಟ್ರೋ ಸ್ಟೇಡಿಯಂ ಮಾತ್ರ) ಹಾಗೂ ಪುಣೆಯಲ್ಲಿ ವೀಸಾ ಸೇವೆ ಮತ್ತೆ ಶುರುವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ಯುಎಇಗೆ ಆನ್ ಲೈನ್ ಅರ್ಜಿ

ಯುಎಇಗೆ ಆನ್ ಲೈನ್ ಅರ್ಜಿ

ಟರ್ಕಿ, ಡೊಮಿನಿಕನ್ ರಿಪಬ್ಲಿಕ್, ದಕ್ಷಿಣ ಕೊರಿಯಾ, ಪೋರ್ಚುಗಲ್, ನಾರ್ವೆ, ಡೆನ್ಮಾರ್ಕ್ ಹಾಗೂ ಇಟಲಿ ವೀಸಾ ಅರ್ಜಿಗಳನ್ನು ದೆಹಲಿ ಕೇಂದ್ರದಲ್ಲಿ ಹಾಕಬಹುದು. ಯುಎಇ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು. ವೆಬ್ ಸೈಟ್ ಮೂಲಕ ವೀಸಾ ಅರ್ಜಿ ಕೇಂದ್ರಗಳಲ್ಲಿ ಭೇಟಿ ಅವಧಿಯನ್ನು ನಿಗದಿ ಮಾಡಿಕೊಳ್ಳಬೇಕು. ಅಲ್ಲಿ ಪ್ರವೇಶಕ್ಕೂ ಮುನ್ನ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ವಿಎಫ್ ಎಸ್ ಗ್ಲೋಬಲ್ ಔಟ್ ಸೋರ್ಸಿಂಗ್ ಕಂಪೆನಿ

ವಿಎಫ್ ಎಸ್ ಗ್ಲೋಬಲ್ ಔಟ್ ಸೋರ್ಸಿಂಗ್ ಕಂಪೆನಿ

ವಿಎಫ್ ಎಸ್ ಗ್ಲೋಬಲ್ ಎಂಬುದು ವಿಶ್ವದಾದ್ಯಂತ ಸರ್ಕಾರಗಳಿಗೆ ಹಾಗೂ ರಾಜತಾಂತ್ರಿಕ ಉದ್ದೇಶಗಳಿಗೆ ವೀಸಾ ಔಟ್ ಸೋರ್ಸಿಂಗ್ ಮತ್ತು ತಂತ್ರಜ್ಞಾನ ಸೇವೆ ಒದಗಿಸುತ್ತದೆ. ಮೇ 31ನೇ ತಾರೀಕಿನವರೆಗೆ ವಿಎಫ್ ಎಸ್ ನಿಂದ 22.3 ಕೋಟಿ ವೀಸಾ ಅರ್ಜಿಗಳನ್ನು 144 ದೇಶಗಳ 3390 ಕೇಂದ್ರಗಳಲ್ಲಿ ಪ್ರಕ್ರಿಯೆ ನಡೆಸಲಾಗಿದೆ.

ಹಂತಹಂತವಾಗಿ ಮತ್ತೆ ವಿಮಾನ ಯಾನ ಆರಂಭ
 

ಹಂತಹಂತವಾಗಿ ಮತ್ತೆ ವಿಮಾನ ಯಾನ ಆರಂಭ

ಮಾರ್ಚ್ ತಿಂಗಳ ಕೊನೆಯಲ್ಲಿ ಅಂತರರಾಷ್ಟ್ರೀಯ ವಿಮಾನ ಯಾನ ಸೇವೆಯನ್ನು ಕೇಂದ್ರ ಸರ್ಕಾರ ಅಮಾನತು ಮಾಡಿತ್ತು. ಇನ್ನು ಮುಂದೆ ವಂದೇ ಭಾರತ್ ಅಭಿಯಾನದಲ್ಲಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಹಂತಹಂತವಾಗಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.

English summary

Visa Applications for UK, Uae and 9 Countries Will Resume in India From July 6

Visa application service will start from VFS Global from July 6, in India's 11 cities. Here is the list of countries and service details.
Company Search
COVID-19