For Quick Alerts
ALLOW NOTIFICATIONS  
For Daily Alerts

ತ್ರೈಮಾಸಿಕ ವರದಿ: ವೊಡಾಫೋನ್ ಐಡಿಯಾಗೆ 4,532.4 ಕೋಟಿ ರೂಪಾಯಿ ನಿವ್ವಳ ನಷ್ಟ

|

ದೇಶದ ಅಗ್ರಮಾನ್ಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಒಟ್ಟು 4,532.4 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. ಹಿಂದಿನ ತ್ರೈಮಾಸಿಕದಲ್ಲಿ ಕಂಪನಿಯು 7,218.5 ಕೋಟಿ ನಿವ್ವಳ ನಷ್ಟವನ್ನು ದಾಖಲಿಸಿದೆ. ಈ ಬಾರಿಯ ತ್ರೈಮಾಸಿಕ ನಷ್ಟವು 2,118.9 ಕೋಟಿ ಗಳಿಕೆಯ ಹಿನ್ನಲೆಯಲ್ಲಿ ಕಡಿಮೆಯಾಗಿದೆ.

 

ನಿವ್ವಳ ನಷ್ಟದ ನಡುವೆ ಚಂದಾದಾರರ ಹೆಚ್ಚಳ ಮತ್ತು 2020-21ರ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚಿನ 4 ಜಿ ಸೇರ್ಪಡೆಗಳ ಹಿನ್ನಲೆಯಲ್ಲಿ ಆದಾಯವು ಶೇಕಡಾ 1ರಷ್ಟು ಹೆಚ್ಚಳವಾಗಿ 10,894 ಕೋಟಿ ರೂಪಾಯಿಗೆ ತಲುಪಿದೆ.

ವೊಡಾಫೋನ್-ಐಡಿಯಾಗೆ 4,532.4 ಕೋಟಿ ರೂ. ನಿವ್ವಳ ನಷ್ಟ

2020 ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 119 ರೂ.ಗಳಿಂದ ಪ್ರತಿ ಬಳಕೆದಾರರ ಸರಾಸರಿ ಆದಾಯ (ಎಆರ್‌ಪಿಯು) 121 ರೂ.ಗೆ ಸುಧಾರಿಸಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ, ಕಂಪನಿಯ ಒಟ್ಟು ಚಂದಾದಾರರ ಸೇರ್ಪಡೆ ಸುಧಾರಿಸಿದೆ.

2021ರ ಡಿಸೆಂಬರ್ ವೇಳೆಗೆ 4,000 ಕೋಟಿ ರೂ. ವಾರ್ಷಿಕ ಒಪೆಕ್ಸ್ ಉಳಿತಾಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ವೊಡಾಫೋನ್ ಐಡಿಯಾ ತಿಳಿಸಿದೆ.

English summary

Vodafone Idea Q3 Result: Net Loss At Rs 4532 Crore

Vodafone Idea on Saturday reported a consolidated net loss of Rs 4,532.4 crore for the quarter ended on 31 December.
Story first published: Saturday, February 13, 2021, 18:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X