For Quick Alerts
ALLOW NOTIFICATIONS  
For Daily Alerts

ಸರ್ಕಾರ ನೆರವು ಕೊಡದಿದ್ರೆ ವೊಡಾಫೋನ್-ಐಡಿಯಾ ಮುಚ್ಚಬೇಕು: ಕೆ.ಎಂ. ಬಿರ್ಲಾ

|

ಈಗಾಗಲೇ ನಷ್ಟಕ್ಕೆ ತುತ್ತಾಗಿರುವ ಭಾರತದ ಬೃಹತ್ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೊಡಾಫೋನ್-ಐಡಿಯಾಕ್ಕೆ, ಕೇಂದ್ರ ಸರ್ಕಾರದಿಂದ ನೆರವು ಬರದಿದ್ರೆ ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಶುಕ್ರವಾರ ಹೇಳಿದ್ದಾರೆ.

ದೆಹಲಿಯಲ್ಲಿ ಹಿಂದೂಸ್ತಾನ್ ಟೈಮ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕುಮಾರ್ ಮಂಗಲಂ ಬಿರ್ಲಾ ಉತ್ತರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಮ್ಮ ಕಂಪನಿಯು ನೆರವು ಕೇಳಿದೆ. ಸರ್ಕಾರ ಪರಿಹಾರ ನೀಡದೇ ಹೋದರೆ ನಮ್ಮ ಕಂಪನಿ ಮುಚ್ಚಬೇಕಾದ ಸ್ಥಿತಿಗೆ ಬಂದಿದೆ ಎಂದು ಹೇಳಿದ್ದಾರೆ.

ಸರ್ಕಾರ ನೆರವು ಕೊಡದಿದ್ರೆ ವೊಡಾಫೋನ್-ಐಡಿಯಾ ಮುಚ್ಚಬೇಕು: ಬಿರ್ಲಾ

 

ಕುಮಾರ್ ಮಂಗಲಂ ಬಿರ್ಲಾರ ಈ ಹೇಳಿಕೆಯು ಮುಂದಿನ ದಿನಗಳಲ್ಲಿ ಕಂಪನಿಯು ಮತ್ತಷ್ಟು ಹೂಡಿಕೆ ಮಾಡುವುದಿಲ್ಲ ಎಂಬ ಸೂಚನೆ ನೀಡಿತ್ತು. ಈ ಹೇಳಿಕೆಯಿಂದಾಗಿ ವೊಡಾಫೋನ್-ಐಡಿಯಾ ಕಂಪನಿಯ ಷೇರುಗಳು ಶೇಕಡಾ 9ರಷ್ಟು ಕುಸಿತ ಕಂಡು ಚೇತರಿಸಿಕೊಂಡಿತು.

ಬಿರ್ಲಾ ಅವರ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟನ್ನಿನ ದೂರಸಂಪರ್ಕ ಸಂಸ್ಥೆ ವೊಡಾಫೋನ್ ಕಳೆದ ವರ್ಷ ಪರಸ್ಪರ ವಿಲೀನಗೊಂಡಿದ್ದವು. ಇದಕ್ಕೆ ಕಾರಣ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಉಚಿತ ಕರೆ ಹಾಗೂ ಅಗ್ಗದ ದರದ ಡೇಟಾ ಸೇವೆ ನೀಡಿದ ಪರಿಣಾಮ ಸ್ಪರ್ಧೆಗೆ ಎರಡು ಕಂಪನಿಗಳು ವಿಲೀನಗೊಂಡವು.

ವೊಡಾಫೋನ್-ಐಡಿಯಾ 2ನೇ ತ್ರೈಮಾಸಿಕದಲ್ಲಿ 50,921 ಕೋಟಿ ರುಪಾಯಿ ನಷ್ಟ ಅನುಭವಿಸಿದೆ.

English summary

Vodafone Idea Will Have To Shut Shop: KM Birla

Vodafone idea chairman km birla on friday said that vodafone idea will have to shut shop if the government does not provide relief from payment of AGR
Story first published: Saturday, December 7, 2019, 9:55 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more