For Quick Alerts
ALLOW NOTIFICATIONS  
For Daily Alerts

2.9 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ದೇಣಿಗೆ ನೀಡಿದ ವಾರೆನ್ ಬಫೆಟ್

|

ಜಗತ್ತಿನ ಆರನೇ ಅತಿದೊಡ್ಡ ಶ್ರೀಮಂತ, ಹೂಡಿಕೆ ದೈತ್ಯ ವಾರೆನ್ ಬಫೆಟ್ ತಮ್ಮ ವಾರ್ಷಿಕ ಯೋಜನೆಯ ಭಾಗವಾಗಿ ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸೇರಿದಂತೆ ಇತರ ದತ್ತಿ ಸಂಸ್ಥೆಗಳಿಗೆ ಸುಮಾರು 2.9 ಬಿಲಿಯನ್ ಡಾಲರ್ ಮೌಲ್ಯದ ಬರ್ಕ್‌ಷೈರ್ ಷೇರುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

 

ಸುಮಾರು 16 ಮಿಲಿಯನ್ ಬರ್ಕ್ಷೈರ್ ಕ್ಲಾಸ್ ಬಿ ಷೇರುಗಳನ್ನು ಒಟ್ಟು ಐದು ಫೌಂಡೇಶನ್‌ಗಳಿಗೆ ದಾನ ಮಾಡಲಾಗಿದೆ. ಬಫೆಟ್ 2006 ರಿಂದ 37 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಹಣವನ್ನು ದೇಣಿಗೆಗಳನ್ನಾಗಿ ನೀಡಿದ್ದಾರೆ.

ಹೂಡಿಕೆದಾರರ ಜಗದ್ಗುರು ವಾರೆನ್ ಬಫೆಟ್ ಹೇಳಿದ ಬದುಕಿನ 4 ಪಾಠ

ಬಫೆಟ್ ಮರಣದ ನಂತರ ಅವರು ಹೊಂದಿರುವ ಎಲ್ಲಾ ಬರ್ಕ್‌ಷೈರ್ ಷೇರುಗಳನ್ನು ಲೋಕಕಲ್ಯಾಣಕ್ಕಾಗಿ ದಾನ ಮಾಡುವುದಾಗಿ ಅವರು ವಾಗ್ದಾನ ಮಾಡಿದ್ದಾರೆ. ಫೆಬ್ರವರಿಯಲ್ಲಿ ಷೇರುದಾರರಿಗೆ ವಾರ್ಷಿಕ ಪತ್ರದಲ್ಲಿ ಆ ಯೋಜನೆಯನ್ನು ವಿವರಿಸಿದ್ದಾರೆ.

2.9ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ದೇಣಿಗೆ ನೀಡಿದ ವಾರೆನ್ ಬಫೆಟ್

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರೊಂದಿಗೆ ಬಫೆಟ್ ಹಲವಾರು ವರ್ಷಗಳಿಂದ ಹತ್ತಿರವಾಗಿದ್ದರು. ಈ ಹಿಂದೆ ಬರ್ಕ್ಷೈರ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಬಫೆಟ್ ದಿವಂಗತ ಪತ್ನಿ ಸುಸಾನ್ ಥಾಂಪ್ಸನ್ ಬಫೆಟ್ ಫೌಂಡೇಶನ್ ಮತ್ತು ಅವರ ಮಕ್ಕಳ ನೇತೃತ್ವದ ಚಾರಿಟಿ, ಶೆರ್ವುಡ್ ಫೌಂಡೇಶನ್, ಹೊವಾರ್ಡ್ ಜಿ. ಬಫೆಟ್ ಫೌಂಡೇಶನ್ ಮತ್ತು ನೊವೊ ಫೌಂಡೇಶನ್ ಗೆ ದೇಣಿಗೆ ನೀಡಲಾಗಿದೆ.

English summary

Warren Buffett Donated 2.9 Billion Dollar Worth Stocks to Charity

Warren Buffett Donated 2.9 Billion Dollar Worth Stocks
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X