For Quick Alerts
ALLOW NOTIFICATIONS  
For Daily Alerts

100 ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರಿದ 90 ವರ್ಷದ ವಾರೆನ್ ಬಫೆಟ್

|

ಜಗತ್ತಿನ ಟಾಪ್ ಶ್ರೀಮಂತರಲ್ಲಿ ಒಬ್ಬರಾದ , ಅಮೆರಿಕಾದ ಯಶಸ್ವಿ ಹೂಡಿಕೆದಾರ ವಾರೆನ್ ಬಫೆಟ್ ಜಾಗತಿಕ ಆರ್ಥಿಕ ಕುಸಿತ, ಅನೇಕ ಬಿಕ್ಕಟ್ಟಿನಲ್ಲೇ ದಿಟ್ಟತನ ಪ್ರದರ್ಶಿಸಿ ಯಶಸ್ವಿ ಹೂಡಿಕೆದಾರ ಎಂದು ಹೆಸರುವಾಸಿಯಾದವರು. ಹೀಗಾಗೆ ಯಾವುದೇ ವಿಷಯದ ಕುರಿತು ಅವರು ಮಾತನಾಡುವಾಗ ಅವರ ಮಾತುಗಳನ್ನು ಲಕ್ಷಾಂತರ ಜನರು ತಮ್ಮ ಬದುಕಿಗೆ ಅಳವಡಿಸಿಕೊಳ್ಳುತ್ತಾರೆ.

 

ಒಂದು ಕಾಲದ ನಂಬರ್ 1 ಶ್ರೀಮಂತ ವಾರೆನ್ ಬಫೆಟ್‌ ತಮ್ಮ 90ನೇ ವಯಸ್ಸಿನಲ್ಲಿ ಈಗಲೂ ಚಿರ ಯುವಕರಂತೆ ಕಾರ್ಯ ಪ್ರವೃತ್ತರಾಗಿದ್ದು, ಯಶಸ್ವಿಯಾಗಿ ಯೋಜಿಸಿ ಹೂಡಿಕೆ ಮಾಡುವ ಸಾಮರ್ಥ್ಯ ಉಳಿಸಿಕೊಂಡಿದ್ದಾರೆ. ಇದೀಗ ವಿಶೇಷ ಏನಂದ್ರೆ ವಾರೆನ್ ಬಫೆಟ್‌ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಮರಳಿದ್ದು, ಜಗತ್ತಿನ ನಂಬರ್ 5 ಶ್ರೀಮಂತರಾಗಿ ಕಾಣಿಸಿಕೊಂಡಿದ್ದಾರೆ.

100 ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರಿದ 90 ವರ್ಷದ ವಾರೆನ್ ಬಫೆಟ್

ವಾರೆನ್ ಬಫೆಟ್‌ರ ಸಂಪತ್ತು ಬುಧವಾರ $100 ಶತಕೋಟಿಗಿಂತ ಹೆಚ್ಚಾಗಿದೆ, ಅವರ ಕಂಪನಿಯ ಷೇರುಗಳು ದಾಖಲೆಯ ಗರಿಷ್ಠ $ 400,000 ಕ್ಕಿಂತ ಹೆಚ್ಚಾಗಿದೆ.

ಬರ್ಕ್‌ಷೈರ್ ಹ್ಯಾಥ್‌ವೇ ಅವರ ಎ ಷೇರುಗಳು ಬುಧವಾರ $ 407,750 ಕ್ಕೆ ಏರಿದ್ದು, ದಿನದ ವಹಿವಾಟು ಅಂತ್ಯಕ್ಕೆ $398,840 ಕ್ಕೆ ಕೊನೆಗೊಂಡಿತು. ಒಮಾಹಾ, ನೆಬ್ರಸ್ಕಾ, ಆಧಾರಿತ ಸಂಘಟನೆಯ ಕ್ಲಾಸ್ ಬಿ ಷೇರುಗಳು ಕೈಗೆಟುಕುವ ಬೆಲೆ $ 263.99 ಕ್ಕೆ ಮಾರಾಟವಾಗುತ್ತಿದ್ದವು.

ವಿಶ್ವದ ಟಾಪ್ 5 ಶ್ರೀಮಂತ ವಾರೆನ್ ಬಫೆಟ್‌ ಹಲವಾರು ವರ್ಷಗಳಲ್ಲಿ ಚಾರಿಟಿಗಳಿಗೆ ದಾನ ಮಾಡುತ್ತಾ ಬಂದಿದ್ದು, ಇದುವರೆಗೂ ಸುಮಾರು 37 ಶತಕೋಟಿಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ಬಫೆಟ್ ಅಂದಾಜಿಸಿದ್ದಾರೆ.

English summary

Warren Buffett Joins $100 Billion Club: Back To No 5

The 90-year-old investor was once the world’s richest man, but he has fallen back to No. 5 in Forbes magazine’s current list of the world’s richest people.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X