For Quick Alerts
ALLOW NOTIFICATIONS  
For Daily Alerts

ಕೊರೊನಾ ಲಸಿಕೆ ಯಾವಾಗ: ಬಿಲ್ ಗೇಟ್ಸ್ ಹೇಳುತ್ತಿರುವ ಡೆಡ್ ಲೈನ್ ಯಾವುದು?

|

ಇಡೀ ಜಗತ್ತು ಕೊರೊನಾ ಲಸಿಕೆಗಾಗಿ ಎದುರು ನೋಡುತ್ತಿದೆ. ಇಂಥ ಸನ್ನಿವೇಶದಲ್ಲಿ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಸಂಚಲನ ಸೃಷ್ಟಿಸುವಂಥ ಹೇಳಿಕೆ ನೀಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಕೊರೊನಾಗೆ ಲಸಿಕೆ ಬರಬಹುದು. ಆದರೆ ಅದೊಂದು ತಾತ್ಕಾಲಿಕ ಪರಿಹಾರದಂತೆ, ಅಷ್ಟೇ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

 

ಆರಂಭದ ಹಂತದಲ್ಲಿನ ಲಸಿಕೆ ಕೊರೊನಾ ಕಾಯಿಲೆಗೆ ಹಾಗೂ ಹಬ್ಬದಿರುವಂತೆ ತಡೆಯಲು ಪರಿಣಾಮಕಾರಿ ಆಗಲಿಕ್ಕಿಲ್ಲ. ಹೆಚ್ಚು ಪರಿಣಾಮಕಾರಿಯಾದ ಲಸಿಕೆ ಅಭಿವೃದ್ಧಿಗೆ ದೀರ್ಘಾವಧಿ ಬೇಕಾಗಬಹುದು ಎಂದು ಗೇಟ್ಸ್ ಹೇಳಿದ್ದಾರೆ. "vaccine nationalism" ಎಂಬ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಕೊರೊನಾ ಬಿಕ್ಕಟ್ಟಿನ ಜತೆಗೆ ಹೋರಾಡಲು ಜಾಗತಿಕ ಮಟ್ಟದ ಪ್ರಯತ್ನ ಮಾಡಬೇಕಿದೆ ಎಂದಿದ್ದಾರೆ.

800 ಕೋಟಿ ಅಮೆರಿಕನ್ ಡಾಲರ್ ಹಣ ಪೂರೈಸಲು ಸಲಹೆ

800 ಕೋಟಿ ಅಮೆರಿಕನ್ ಡಾಲರ್ ಹಣ ಪೂರೈಸಲು ಸಲಹೆ

ಕಡಿಮೆ ಹಾಗೂ ಮಧ್ಯಮ ಪ್ರಮಾಣದ ಆದಾಯ ಇರುವ ರಾಷ್ಟ್ರಗಳಿಗೆ 800 ಕೋಟಿ ಅಮೆರಿಕನ್ ಡಾಲರ್ ಹಣವನ್ನು ಪೂರೈಸಿ, ಕೊರೊನಾ ಲಸಿಕೆ ಕಂಡು ಹಿಡಿಯುವುದಕ್ಕೆ ನೆರವು ನೀಡಬೇಕು ಎಂದು ಅಮೆರಿಕದ ಜನಪ್ರತಿನಿಧಿಗಳನ್ನು ಉತ್ತೇಜಿಸಿದ್ದಾಗಿ ಹಾಗೂ ಶ್ರೀಮಂತ ದೇಶಗಳಲ್ಲಿ ಮಾತ್ರ ಕೊರೊನಾ ಕೊನೆಯಾಗುವುದಕ್ಕೆ ನಾವು ಪ್ರಯತ್ನಿಸುವುದಲ್ಲ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

ಗೇಟ್ಸ್ ಫೌಂಡೇಷನ್ ನಿಂದ 25 ಕೋಟಿ ಮೀಸಲು

ಗೇಟ್ಸ್ ಫೌಂಡೇಷನ್ ನಿಂದ 25 ಕೋಟಿ ಮೀಸಲು

ಕೊರೊನಾ ಸಂಶೋಧನೆಗಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ನಿಂದ 25 ಕೋಟಿ ಅಮೆರಿಕನ್ ಡಾಲರ್ ಮೀಸಲಿಡಲಾಗಿದೆ. ಇದರ ಜತೆಗೆ ಆಸ್ಟ್ರಾಜೆನೆಕಾ ಪಿಎಲ್ ಸಿ, ಜಾನ್ಸನ್ ಅಂಡ್ ಜಾನ್ಸನ್ ಮತ್ತು ನೊವಾವ್ಯಾಕ್ಸ್ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗೂ ಹಣಕಾಸು ಅನುದಾನವನ್ನು ಬಿಲ್ ಗೇಟ್ಸ್ ಫೌಂಡೇಷನ್ ಒದಗಿಸುತ್ತಿದೆ.

ಲಸಿಕೆ ಕಂಡುಹಿಡಿಯಲು 150ಕ್ಕೂ ಹೆಚ್ಚು ಪ್ರಯತ್ನಗಳು
 

ಲಸಿಕೆ ಕಂಡುಹಿಡಿಯಲು 150ಕ್ಕೂ ಹೆಚ್ಚು ಪ್ರಯತ್ನಗಳು

ಕೊರೊನಾ ಚಿಕಿತ್ಸೆಗಾಗಿ ಅಭಿವೃದ್ಧಿ ಮಾಡುತ್ತಿರುವ ಹಲವು ಥೆರಪಿಗಳಿಂದ ಈ ವೈರಸ್ ನಿಂದ ಉಂಟಾಗುವ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು ಎಂದಿದ್ದಾರೆ ಗೇಟ್ಸ್. ರೋಗ ಕಂಡುಹಿಡಿಯುವ ವಿಧಾನದಲ್ಲಿನ ಆವಿಷ್ಕಾರ, ಲಸಿಕೆ ಮುಂತಾದವುಗಳ ಸಹಾಯದಿಂದ 2021ರ ಕೊನೆ ಹೊತ್ತಿಗೆ ಇದರಿಂದ ಹೊರಬರಲು ಸಾಧ್ಯ ಆಗಬಹುದು. ಯಾವಾಗ ನೈಜ ಸೋಂಕಿನಿಂದ ತಡೆಯೊಡ್ಡಲು ಲಸಿಕೆ ಸಮರ್ಥ ಆಗುತ್ತದೋ ಆಗ ಕೊರೊನಾದಿಂದ ನಿಜವಾದ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ. 150ಕ್ಕೂ ಹೆಚ್ಚು ಪ್ರಯತ್ನಗಳು ಲಸಿಕೆ ಕಂಡು ಹಿಡಿಯುವ ಸಲುವಾಗಿ ವಿಶ್ವದಾದ್ಯಂತ ನಡೆಯುತ್ತಿದೆ. 24ಕ್ಕೂ ಹೆಚ್ಚು ಲಸಿಕೆಗಳು ಅಂತಿಮ ಹಂತದಲ್ಲಿದ್ದು, ಮನುಷ್ಯರ ಮೇಲೆ ಪ್ರಯೋಗ ನಡೆಯುತ್ತಿದೆ.

English summary

What Bill Gates Said About When Coronavirus Will End?

When will Corona virus end? One of the richest and Microsoft founder Bill Gates has an answer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X