ವಾಟ್ಸಾಪ್ ಗ್ರಾಹಕರಿಗೆ ₹51 ಕ್ಯಾಶ್ಬ್ಯಾಕ್ ನೀಡುತ್ತಿದೆ, ಏಕೆ?
ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ)ನಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಿಸುತ್ತದೆ. ಹೇಗೆ ಗೂಗಲ್ ಪೇ, ಫೋನ್ ಪೇ ಮತ್ತಿತರ ಅಪ್ಲಿಕೇಷನ್ ಗಳು ಕೆಲಸ ಮಾಡುವಂತೆಯೇ ಇದು ಕೂಡ ಕಾರ್ಯ ನಿರ್ವಹಿಸುತ್ತವೆ. ನೀವು ವಾಟ್ಸಾಪ್ 'ವ್ಯಾಲೆಟ್'ನಲ್ಲಿ ಹಣ ಇಟ್ಟುಕೊಂಡಿರಬೇಕು ಎಂದೇನಿಲ್ಲ. ಗೂಗಲ್ ಪೇ, ಫೋನ್ ಪೇ ವಿರುದ್ಧ ಪೈಪೋಟಿಗೆ ಇಳಿದಿರುವ ವಾಟ್ಸಾಪ್ ಬೀಟಾ ಆವೃತ್ತಿ ಬಳಸುವ ಗ್ರಾಹಕರಿಗೆ 51 ರು ಕ್ಯಾಶ್ ಬ್ಯಾಕ್ ನೀಡುತ್ತಿದೆ.
ವಾಟ್ಸಾಪ್ ಕಳೆದ ತಿಂಗಳು ತನ್ನ UPI ಆಧಾರಿತ ಪಾವತಿ ಸೇವೆ ಮೂಲಕ ಕ್ಯಾಶ್ಬ್ಯಾಕ್ ನೀಡುವ ಪ್ರಯೋಗಕ್ಕಿಳಿದಿದೆ. ಸದ್ಯಕ್ಕೆ ಬೀಟಾ ಆವೃತ್ತಿಯಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿರುವ ವಾಟ್ಸಾಪ್ ಬೀಟಾ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಹೊರತರಲು ಪ್ರಾರಂಭಿಸಿದೆ. ಭಾರತದಲ್ಲಿ ತನ್ನ ಪಾವತಿ ಸೇವೆಯನ್ನು ಅಧಿಕೃತವಾಗಿ ಆರಂಭಿಸಲು ವಾಟ್ಸಾಪ್ಗೆ ಕ್ಯಾಶ್ ಬ್ಯಾಕ್ ಆಫರ್ ಪ್ರಕ್ರಿಯೆ ಹೊಸ ಮಾರ್ಗದಂತೆ ತೋರುತ್ತಿದೆ.
ಆಂಡ್ರಾಯ್ಡ್ ನಲ್ಲಿನ WhatsApp ಬೀಟಾ ಅಪ್ಲಿಕೇಶನ್ ಚಾಟ್ ಪಟ್ಟಿಯ ಮೇಲ್ಭಾಗದಲ್ಲಿ "Give cash, get ₹51 back" ಎಂಬ ಸಂದೇಶದೊಂದಿಗೆ ಬ್ಯಾನರ್ ಹಾಕಿ ಗ್ರಾಹಕರಿಗೆ ತಿಳಿಸಲಾಗುತ್ತಿದೆ. ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ವಿವಿಧ ಸಂಪರ್ಕಗಳಿಗೆ ಹಣವನ್ನು ಕಳುಹಿಸುವ ಮೂಲಕ ನೀವು ಐದು ಬಾರಿ ₹51 ವರೆಗೆ ಖಾತರಿಯ ಕ್ಯಾಶ್ಬ್ಯಾಕ್ ಪಡೆಯಬಹುದು. ಈ ಕ್ಯಾಶ್ಬ್ಯಾಕ್ ಆಫರ್ನ ಮೊತ್ತದ ಮೇಲೆ ವಾಟ್ಸಾಪ್ ಮಿತಿಯನ್ನು ನಿಗದಿಪಡಿಸಿಲ್ಲ. ಇದು ಕಾರ್ಯನಿರ್ವಹಿಸುತ್ತದೆ ಎಂದು ನಾವು ಖಚಿತಪಡಿಸಲು ನೀವು ₹1 ಅನ್ನು ಕಳುಹಿಸಿ ಕೂಡಾ 51 ರು ಕ್ಯಾಶ್ ಬ್ಯಾಕ್ ಗಳಿಸಬಹುದು.
WhatsApp Pay ಭಾರತದಲ್ಲಿ ಶುರು; ನಿಮಗೆ ಗೊತ್ತಿರಬೇಕಾದ ಸಂಗತಿ
ಒಮ್ಮೆ ನೀವು ಪಾವತಿ ಮಾಡಿದರೆ, ವಾಟ್ಸಾಪ್ ನ ನೋಟಿಫಿಕೇಷನ್ ನೊಂದಿಗೆ ₹51 ತಕ್ಷಣವೇ ನಿಮ್ಮ ಖಾತೆಗೆ ಜಮೆಯಾಗುತ್ತದೆ.
ಕ್ಯಾಶ್ಬ್ಯಾಕ್ ಖಾತರಿಯಾಗಿದ್ದರೂ, ನೀವು ಅದನ್ನು ಐದು ಬಾರಿ ಮಾತ್ರ ಪಡೆಯಬಹುದು ಎಂದು ತೋರುತ್ತಿದೆ. ಈ ವೈಶಿಷ್ಟ್ಯವು ಬೀಟಾ ಬಳಕೆದಾರರಿಗೆ ಮತ್ತು ಆಂಡ್ರಾಯ್ಡ್ ನಲ್ಲಿ ಮಾತ್ರ ಲಭ್ಯವಿದೆ. ಬೀಟಾ ಬಳಕೆದಾರರ ಪ್ರತಿಕ್ರಿಯೆಯನ್ನು ಪರಿಗಣಿಸಿ ಭಾರತದ ಎಲ್ಲಾ ಬಳಕೆದಾರರಿಗೆ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವ ನಿರೀಕ್ಷೆಯಿದೆ.

ಗೂಗಲ್ ಪೇ ಆಫರ್ ಮಾರ್ಗ:
ಗೂಗಲ್ ಪೇ ಅನುಸರಿಸಿದ ಮಾರ್ಗವನ್ನೇ ಬಳಸುತ್ತಿರುವ ವಾಟ್ಸಾಪ್ ಪಾವತಿ ಸೇವೆಯನ್ನು ಬಳಸುವಂತೆ ಬಳಕೆದಾರರನ್ನು ಸೆಳೆಯಲು ಹೊಸ ವೈಶಿಷ್ಟ್ಯವನ್ನು ಉಪಯೋಗಿಸುತ್ತಿದೆ. ಗೂಗಲ್ ಪೇ ಕೂಡಾ ಭಾರತದಲ್ಲಿ ಮೊದಲ ಬಾರಿಗೆ ಪ್ರಾರಂಭವಾದಾಗ ಸ್ಕ್ರ್ಯಾಚ್ ಕಾರ್ಡ್ಗಳ ಮೂಲಕ ₹1,000 ವರೆಗೆ ಕ್ಯಾಶ್ಬ್ಯಾಕ್ ನೀಡಿತು. ಈ ಯೋಜನೆಯು ಇತರ ಸೇವೆಗಳಿಗೆ ಕೂಪನ್ಗಳೊಂದಿಗೆ ಇನ್ನೂ ನಡೆಯುತ್ತಿದೆ. ವಾಟ್ಸಾಪ್ ಕೂಡಾ ಗೂಗಲ್ ಪೇ ತರಹದ ಹಿನ್ನೆಲೆ ಕಾರ್ಡ್ಗಳನ್ನು ಸಹ ಪ್ರಾರಂಭಿಸಿತು, ಅದು ಪಾವತಿಗಳಿಗೆ ಸ್ವಲ್ಪ ಬಣ್ಣ ಮತ್ತು ವೈಯಕ್ತಿಕಗೊಳಿಸಿದ ಅನುಭವವನ್ನು ಸೇರಿಸುತ್ತದೆ.
ಇದು ಅಪ್ಲಿಕೇಶನ್ನ ಚಾಟ್ ಬಾರ್ನಲ್ಲಿಯೇ ಪಾವತಿ ಶಾರ್ಟ್ಕಟ್ ಬಟನ್ ಅನ್ನು ಕೂಡ ಸೇರಿಸಿದೆ. ವಾಟ್ಸಾಪ್ ಪೇ ಶಾರ್ಟ್ಕಟ್ ಒಂದು ರೂಪಾಯಿ ಚಿಹ್ನೆಯ ಬಟನ್ ಆಗಿದ್ದು ಅದು ಬಹಳ ಪ್ರಮುಖವಾಗಿದೆ ನಿಮ್ಮ ಕಣ್ಸೆಳೆಯುತ್ತದೆ.
ಭಾರತ ಬಿಟ್ಟು ಉಳಿದೆಡೆ ಸದ್ಯದಲ್ಲೇ ಶುರುವಾಗಲಿದೆ ವಾಟ್ಸ್ ಆಪ್ ಪೇ
ಹೇಗಿರಲಿದೆ ಹಣ ವರ್ಗಾವಣೆ:
ಬ್ಯಾಂಕ್ ಖಾತೆಯಲ್ಲಿ ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಇರುವ ಹಣವನ್ನು ವರ್ಗಾವಣೆ ಮಾಡಬಹುದು ಹಾಗೂ ಅದೇ ರೀತಿ ಸ್ವೀಕರಿಸಬಹುದು. ಪಾವತಿಗಾಗಿ ನೋಂದಣಿ ಮಾಡುತ್ತಿದ್ದಂತೆ ವಾಟ್ಸಾಪ್ ನಿಂದ ಹೊಸದಾಗಿ ಯುಪಿಐ ಐಡಿ ಸೃಷ್ಟಿ ಮಾಡುತ್ತದೆ. ಅಪ್ಲಿಕೇಷನ್ ನಲ್ಲಿ 'ಪೇಮೆಂಟ್ಸ್' ವಿಭಾಗಕ್ಕೆ ತೆರಳಿ ಈ ಐಡಿಯನ್ನು ಗುರುತಿಸಬಹುದು.
ವಾಟ್ಸಾಪ್ ಪೇ ಅನ್ನು ಭಾರತೀಯ ನಂಬರ್ ಗಳಿಗೆ ಹಾಗೂ ಭಾರತೀಯ ಬ್ಯಾಕ್ ಖಾತೆಗಳಿಗೆ ಜೋಡಣೆ ಆಗಿದ್ದಲ್ಲಿ ಮಾತ್ರ ಬಳಸುವುದಕ್ಕೆ ಸಾಧ್ಯ. ಯಾರು ಅಂತರರಾಷ್ಟ್ರೀಯ ಸಂಖ್ಯೆಗೆ ವಾಟ್ಸಾಪ್ ಹೊಂದಿರುತ್ತಾರೋ ಅವರು ಬಳಸುವುದು ಸಾಧ್ಯವಿಲ್ಲ.
ವಾಟ್ಸಾಪ್ ಪೇ ನಲ್ಲಿ ಕೂಡ ಯುಪಿಐನಲ್ಲಿ ಇರುವಂತೆ ಒಂದು ಲಕ್ಷ ರುಪಾಯಿ ವ್ಯವಹಾರದ ಮಿತಿ ಅನ್ವಯ ಆಗುತ್ತದೆ. ಯುಪಿಐ ಎಂಬುದು ಉಚಿತ ಸೇವೆ. ಅದರ ಮೂಲಕ ಮಾಡುವ ವ್ಯವಹಾರಗಳಿಗೆ ಶುಲ್ಕ ಹಾಕುವುದಿಲ್ಲ. ಕೆಲವು ಯುಪಿಐ ಅಪ್ಲಿಕೇಷನ್ ಗಳಲ್ಲಿ ಯಾರಿಗೆ ಹಣ ಕಳುಹಿಸಬೇಕೋ ಅವರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್ ಎಸ್ ಸಿ ಕೋಡ್ ನಮೂದಿಸಿದರೂ ಸಾಕು, ಹಣ ಕಳುಹಿಸಬಹುದು. ಈ ಫೀಚರ್ ವಾಟ್ಸಾಪ್ ನಲ್ಲಿ ಇನ್ನೂ ತಂದಿಲ್ಲ.