For Quick Alerts
ALLOW NOTIFICATIONS  
For Daily Alerts

ಸಗಟು ದರ ಹಣದುಬ್ಬರ 9 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ

|

ಸಗಟು ದರ ಸೂಚ್ಯಂಕ (WPI) ಆಧಾರಿತ ಹಣದುಬ್ಬರವು ನವೆಂಬರ್ ನಲ್ಲಿ 1.55% ಇದ್ದು, ಅಕ್ಟೋಬರ್ ನಲ್ಲಿ 1.48% ಇತ್ತು ಎಂದು ಸೋಮವಾರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಕಳೆದ ಒಂಬತ್ತು ತಿಂಗಳಲ್ಲೇ ಸಗಟು ದರ ಸೂಚ್ಯಂಕವು ಗರಿಷ್ಠ ಮಟ್ಟವನ್ನು ತಲುಪಿದೆ.

 

ಹಬ್ಬದ ಋತುವಿನಲ್ಲಿ ಉತ್ಪಾದನಾ ವಸ್ತುಗಳ ದರದಲ್ಲಿನ ಏರಿಕೆ ಕಾರಣಕ್ಕೆ ಸಗಟು ದರ ಸೂಚ್ಯಂಕ ಕೂಡ ಹೆಚ್ಚಳವಾಗಿದೆ. ಕಳೆದ ವರ್ಷ, 2019ರ ನವೆಂಬರ್ ನಲ್ಲಿ ಸಗಟು ಹಣದುಬ್ಬರ ಸೂಚ್ಯಂಕವು 0.58% ಇತ್ತು. 2020ರ ನವೆಂಬರ್ ನಲ್ಲಿ ಆಹಾರ ಹಣದುಬ್ಬರ ದರವು 4.27% ಇದ್ದರೆ, ಅಕ್ಟೋಬರ್ ನಲ್ಲಿ ಈ ಪ್ರಮಾಣ 5.78% ಇತ್ತು.

ಟಾಪ್ ಎಂಟು ಬ್ಯಾಂಕ್ ಗಳಿಗೆ ಬರಬೇಕಾದ ಸಾಲದ ಮೊತ್ತದಲ್ಲಿ ಭಾರೀ ಏರಿಕೆ

ಪ್ರಾಥಮಿಕ ವಸ್ತುಗಳ ಹಣದುಬ್ಬರವು 2.72% ಇತ್ತು. ತಿಂಗಳಿಂದ ತಿಂಗಳಿಗೆ 0.8% ಇಳಿಕೆ ಆಗಿದೆ. 2020ರ ಅಕ್ಟೋಬರ್ ನಲ್ಲಿ 4.74% ಇತ್ತು. ಉತ್ಪಾದನಾ ವಸ್ತುಗಳ ಹಣದುಬ್ಬರವು 2.97% ಇದ್ದು, 2020ರ ಅಕ್ಟೋಬರ್ ನಲ್ಲಿನ 2.12%ಗೆ ಹೋಲಿಸಿದರೆ 0.8% ಏರಿಕೆ ಆಗಿದೆ. ಎಲ್ಲ ವಸ್ತುಗಳ ಸೂಚ್ಯಂಕವು ಕಳೆದ ತಿಂಗಳಿಗೆ ಹೋಲಿಸಿದಲ್ಲಿ 0.3% ಏರಿಕೆ ಆಗಿದೆ.

ಸಗಟು ದರ ಹಣದುಬ್ಬರ 9 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ

ಇಂಧನ ಹಾಗೂ ವಿದ್ಯುತ್ ಹಣದುಬ್ಬರ -9.87% ಇದ್ದು, ತಿಂಗಳಿಂದ ತಿಂಗಳಿಗೆ ಹೋಲಿಸಿದರೆ 0.2% ಏರಿಕೆ ಆಗಿದೆ. 2020ರ ಅಕ್ಟೋಬರ್ ನಲ್ಲಿ -10.95% ಇತ್ತು.

English summary

Wholesale Price Index Inflation At 9 Month High In November

Wholesale price index based inflation at 9 month high in November, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X