For Quick Alerts
ALLOW NOTIFICATIONS  
For Daily Alerts

ಭಾರತದ ವಿದೇಶಿ ವಿನಿಮಯ ಸಂಗ್ರಹ ದಾಖಲೆಯ ಮಟ್ಟದಲ್ಲಿದ್ರೂ, RBI ಸಂತೋಷಗೊಂಡಿಲ್ಲ!

|

ಭಾರತದ ವಿದೇಶಿ ವಿನಿಮಯ ಸಂಗ್ರಹ ಇತ್ತೀಚೆಗಷ್ಟೇ ದಾಖಲೆಯ 600 ಬಿಲಿಯನ್ ಡಾಲರ್‌ ತಲುಪಿತು. ಇದು ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆಗಿದೆ. ಇಷ್ಟಾದರೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾತ್ರ ಸಂತೋಷಗೊಂಡಿಲ್ಲ. ಇದನ್ನ ಕೇಳಿದ್ರೆ ನಿಮಗೆ ಆಶ್ಚರ್ಯವಾದ್ರೂ ನಿಜವಾಗಿದೆ.

 

ಭಾರತದ ವಿದೇಶಿ ವಿನಿಮಯ ಸಂಗ್ರಹವನ್ನು ವಿಶ್ವದ ಅಗ್ರ 5 ದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರಸ್ತುತ, ವಿಶ್ವದ 4 ದೇಶಗಳು, ಅಂದರೆ ಚೀನಾ, ಜಪಾನ್, ಸ್ವಿಟ್ಜರ್ಲೆಂಡ್ ಮತ್ತು ರಷ್ಯಾ ಭಾರತಕ್ಕಿಂತ ಹೆಚ್ಚಿನ ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿವೆ ಮತ್ತು ಭಾರತವು ಐದನೇ ಸ್ಥಾನದಲ್ಲಿದೆ. ಆದರೆ ಇದರ ನಂತರವೂ ಆರ್‌ಬಿಐ ತುಂಬಾ ಸಂತೋಷವಾದಂತೆ ಕಾಣುತ್ತಿಲ್ಲ.

ಕೇವಲ 15 ತಿಂಗಳು ಮಾತ್ರ ಆಮದು ಮಾಡಿಕೊಳ್ಳಬಹುದು!

ಕೇವಲ 15 ತಿಂಗಳು ಮಾತ್ರ ಆಮದು ಮಾಡಿಕೊಳ್ಳಬಹುದು!

ಭಾರತದ ವಿದೇಶಿ ವಿನಿಮಯ ಸಂಗ್ರಹ ಏನೋ ದಾಖಲೆಯ 600 ಬಿಲಿಯನ್ ಡಾಲರ್ ಮೊತ್ತವನ್ನ ತಲುಪಿದೆ. ಇಷ್ಟಾದರೂ ಆರ್‌ಬಿಐ ತೃಪ್ತಿಯಾಗದಿರುವುದಕ್ಕೆ ಕಾರಣವಿದೆ. ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಮೈಕೆಲ್ ಡೆಬಬ್ರತಾ ಪತ್ರ ನೇತೃತ್ವದ ಸಂಶೋಧನಾ ತಂಡದ ಪ್ರಬಂಧವೊಂದರ ಪ್ರಕಾರ, ಈ ವಿದೇಶೀ ವಿನಿಮಯ ಸಾಮರ್ಥ್ಯದಿಂದ ಕೇವಲ 15 ತಿಂಗಳಿಗಿಂತ ಕಡಿಮೆ ಆಮದು ಮಾಡಿಕೊಳ್ಳಲು ಸಾಧ್ಯವಿದೆ.

ವಿದೇಶಿ ವಿನಿಮಯ ಸಂಗ್ರಹದಲ್ಲಿ ಚೀನಾಕ್ಕೆ ಅಗ್ರಸ್ಥಾನ!

ವಿದೇಶಿ ವಿನಿಮಯ ಸಂಗ್ರಹದಲ್ಲಿ ಚೀನಾಕ್ಕೆ ಅಗ್ರಸ್ಥಾನ!

ಚೀನಾದ ವಿದೇಶಿ ವಿನಿಮಯ ಸಂಗ್ರಹವು ಬರೋಬ್ಬರಿ 3.22 ಟ್ರಿಲಿಯನ್ ಡಾಲರ್ ಆಗಿದ್ದು, ಇದು ವಿಶ್ವದ ಅತಿದೊಡ್ಡ ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿರುವ ದೇಶವಾಗಿದೆ. ಇದು 16 ತಿಂಗಳ ಆಮದನ್ನು ಸರಿದೂಗಿಸಲು ಸಾಧ್ಯವಾಗಿದೆ. ಸ್ವಿಟ್ಜರ್ಲೆಂಡ್ ವಿದೇಶಿ ವಿನಿಮಯ ಸಂಗ್ರಹವು 1.07 ಟ್ರಿಲಿಯನ್ ಡಾಲರ್ (39 ತಿಂಗಳ ಆಮದು) , ಜಪಾನ್‌ನ ವಿದೇಶಿ ವಿನಿಮಯ ಸಂಗ್ರಹವು 1.38 ಟ್ರಿಲಿಯನ್ (22 ತಿಂಗಳ ಆಮದು), ರಷ್ಯಾದ ವಿದೇಶಿ ವಿನಿಮಯ ಸಂಗ್ರಹವು 604.8 ಬಿಲಿಯನ್ ಡಾಲರ್ (20 ತಿಂಗಳ ಆಮದು) ಆಗಿದೆ. ಇದರ ನಂತರದಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ.

ಹೆಚ್ಚಿನ ಬಾಹ್ಯ ಸಾಲ ಹೊಂದಿರುವ ಭಾರತ
 

ಹೆಚ್ಚಿನ ಬಾಹ್ಯ ಸಾಲ ಹೊಂದಿರುವ ಭಾರತ

ಆರ್‌ಬಿಐ ಪತ್ರಿಕೆಯ ಪ್ರಕಾರ, ವಿಶೇಷವಾಗಿ ಆತಂಕಕಾರಿಯಾದ ಸಂಗತಿಯೆಂದರೆ, ಭಾರತದ ಹೊಣೆಗಾರಿಕೆಗಳು ಅದರ ಆಸ್ತಿಗಳನ್ನು ಮೀರಿಸುತ್ತವೆ. ಭಾರತವು ಹೆಚ್ಚಿನ ಬಾಹ್ಯ ಸಾಲವನ್ನು ಹೊಂದಿದೆ. ಡಿಸೆಂಬರ್ 2020 ರ ಹೊತ್ತಿಗೆ, ಭಾರತವು 563.5 ಬಿಲಿಯನ್ ಡಾಲರ್ ಸಾಲವನ್ನು ಹೊಂದಿದ್ದರೆ, ಆ ಸಮಯದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 585.8 ಬಿಲಿಯನ್ ಡಾಲರ್ ಆಗಿತ್ತು.

ಭಾರತೀಯರು 2020ರಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ಇರಿಸಿರುವ ಹಣ 20,700 ಕೋಟಿ

ರೂಪಾಯಿ ಮೌಲ್ಯ ಹೆಚ್ಚಾದರೆ ವಿದೇಶಿ ವಿನಿಮಯವೂ ಹೆಚ್ಚಾಗಲಿದೆ

ರೂಪಾಯಿ ಮೌಲ್ಯ ಹೆಚ್ಚಾದರೆ ವಿದೇಶಿ ವಿನಿಮಯವೂ ಹೆಚ್ಚಾಗಲಿದೆ

ಭಾರತದ ವಿದೇಶೀ ವಿನಿಮಯ ಸಂಗ್ರಹವು ರೂಪಾಯಿ ಮೌಲ್ಯದ ಹೆಚ್ಚಳದಿಂದ ಕೂಡಿದೆ. ಆರ್‌ಬಿಐ ಪ್ರಕಾರ, 40 ವಿವಿಧ ಕರೆನ್ಸಿಗಳ ನೈಜ ಪರಿಣಾಮಕಾರಿ ವಿನಿಮಯ ದರ ಸೂಚ್ಯಂಕದಲ್ಲಿ ಭಾರತೀಯ ಕರೆನ್ಸಿ ಈ ವರ್ಷ ಮೇ ತಿಂಗಳಲ್ಲಿ 2% ನಷ್ಟು ಮೆಚ್ಚುಗೆ ಗಳಿಸಿದೆ. ರೂಪಾಯಿ ವಾಸ್ತವವಾಗಿ ಮೇ ತಿಂಗಳಲ್ಲಿ ಏಷ್ಯಾದ ಅತ್ಯುತ್ತಮ ಪ್ರದರ್ಶನ ಕರೆನ್ಸಿಯಾಗಿದೆ.

English summary

Why the Reserve Bank of India isn’t happy with India’s forex reserves; Explained in Kannada

India's foreign exchange reserves may have crossed $600 billion to reach an all-time high of $605.008 billion but the country's central bank, the Reserve Bank of India (RBI) isn't celebrating.
Story first published: Friday, June 18, 2021, 14:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X