For Quick Alerts
ALLOW NOTIFICATIONS  
For Daily Alerts

ಇನ್ನು 20 ದಿನದೊಳಗಾಗಿ ವಿಸ್ಟ್ರಾನ್ ಕಾರ್ಪೊರೇಷನ್ ಕಾರ್ಖಾನೆ ಮತ್ತೆ ಕಾರ್ಯ ನಿರ್ವಹಣೆ

|

ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಐಫೋನ್ ತಯಾರಿಸುವ ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಷನ್ ಕಾರ್ಖಾನೆಯು ಇನ್ನು 20 ದಿನದೊಳಗಾಗಿ ಮತ್ತೆ ಕಾರ್ಯ ನಿರ್ವಹಣೆಗೆ ಪೂರ್ಣವಾಗಿ ಸಿದ್ಧವಾಗುತ್ತದೆ ಎಂಬ ವಿಶ್ವಾಸವನ್ನು ಕರ್ನಾಟಕದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಭಾನುವಾರ ವ್ಯಕ್ತಪಡಿಸಿದ್ದಾರೆ.

 

ವಿಸ್ಟ್ರಾನ್ ಕಾರ್ಪೊರೇಷನ್ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, "ಕಂಪೆನಿ ಅಧಿಕಾರಿಗಳ ಜತೆಗೆ ನಾನು ಚರ್ಚಿಸಿದ್ದೇನೆ ಮತ್ತು ಮುಂದಿನ ಇಪ್ಪತ್ತು ದಿನದೊಳಗೆ ಕಾರ್ಖಾನೆ ಕಾರ್ಯ ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು" ಅವರು ಹೇಳಿದ್ದಾರೆ.

2030ಕ್ಕೆ ಭಾರತವು ವಿಶ್ವದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ!

ಹೆಚ್ಚುವರಿ ಸಮಯ ಮಾಡಿದ ಕೆಲಸಕ್ಕೆ ಸಂಬಳ ನೀಡುವುದು ತಡವಾಗಿದೆ ಎಂದು ಆರೋಪಿಸಿ, ಕೋಲಾರದ ನರಸಾಪುರದಲ್ಲಿ ಕಾರ್ಮಿಕರಿಂದ ಆಕ್ರೋಶ ವ್ಯಕ್ತವಾಗಿ, ಹಾನಿಯಾಗಿತ್ತು. ಈ ಘಟನೆಯಿಂದ ಅಂದಾಜು 437.7 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು. ಆ ನಂತರ 50 ಕೋಟಿ ರುಪಾಯಿಯಷ್ಟು ಹಾನಿ ಆಗಿದೆ ಎಂದು ತಿಳಿಸಲಾಯಿತು.

20  ದಿನದೊಳಗಾಗಿ ವಿಸ್ಟ್ರಾನ್ ಕಾರ್ಖಾನೆ  ಮತ್ತೆ ಕಾರ್ಯ ನಿರ್ವಹಣೆ

ಮುಂದಿನ ವಾರ ವಿಕಾಸ ಸೌಧದಲ್ಲಿ ನಾವು ಸಭೆ ನಡೆಸಲಿದ್ದೇವೆ. ಕಾರ್ಖಾನೆಯಲ್ಲಿ ನಡೆದ ಹಾನಿಗೆ ನಿಖರವಾದ ಕಾರಣವನ್ನು ತಿಳಿಯಲಾಗುವುದು ಎಂದು ಸಚಿವರು ಹೇಳಿದ್ದಾರೆ.

English summary

Wistron's iPhone Factory Will Operational Within 20 Days: Minister Hebbar

Karnataka labour minister Shivaram Hebbar Sunday said, Wistron's iPhone factory will operational within 20 days.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X