For Quick Alerts
ALLOW NOTIFICATIONS  
For Daily Alerts

ಇಪಿಎಫ್‌ಒ ಸೇರ್ಪಡೆ ಚುರುಕು: ಸೆ. 15.41 ಲಕ್ಷಕ್ಕೂ ಅಧಿಕ ಚಂದಾದಾರಿಕೆ!

|

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒನಲ್ಲಿ ಚಂದಾದಾರಿಕೆ ಸೇರ್ಪಡೆ ಅಧಿಕ ಆಗಿದೆ. 2021 ರ ಸೆಪ್ಟೆಂಬರ್‌ನಲ್ಲಿ 15.41 ಲಕ್ಷ ಮಂದಿ ಚಂದಾದಾರರನ್ನು ಇಪಿಎಫ್‌ಒಗೆ ಸೇರ್ಪಡೆ ಮಾಡಲಾಗಿದೆ. ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ನಂತರ ವೇತನದಾರರ ಸೇರ್ಪಡೆಯು ಅಧಿಕವಾಗುತ್ತಿದೆ ಎಂಬುವುದು ಇಲ್ಲಿ ಬಿಂಬಿತವಾಗಿದೆ.

 

ಶನಿವಾರ ನೌಕರರ ಭವಿಷ್ಯ ನಿಧಿ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯು, "ಸೆಪ್ಟೆಂಬರ್ 2021 ರಲ್ಲಿ ಇಪಿಎಫ್‌ಒ ಸುಮಾರು 15.41 ಲಕ್ಷ ನಿವ್ವಳ ಚಂದಾದಾರರನ್ನು ಸೇರಿಸಿದೆ ಎಂದು ಇಂದು ಬಿಡುಗಡೆ ಮಾಡಲಾದ ಇಪಿಎಫ್‌ಒನ ತಾತ್ಕಾಲಿಕ ವೇತನದಾರರ ದತ್ತಾಂಶವು ತೋರಿಸುತ್ತದೆ," ಎಂದು ತಿಳಿಸಿದೆ.

ಉಡುಪು, ಪಾದರಕ್ಷೆಗಳು ಇನ್ನು ದುಬಾರಿ: ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!

ಸೆಪ್ಟೆಂಬರ್ ತಿಂಗಳಿಗೆ, ನಿವ್ವಳ ಚಂದಾದಾರರ ಸೇರ್ಪಡೆಯು 1.81 ಲಕ್ಷ ಆಗಿದೆ. ಅಂದರೆ ಸುಮಾರು 13 ಪ್ರತಿಶತಕ್ಕಿಂತ ಹೆಚ್ಚು ಆಗಿದೆ. ಹಿಂದಿನ ತಿಂಗಳಿಗೆನಾವು ಹೋಲಿಕೆ ಮಾಡಿದಾಗ ಅಂದರೆ 2021 ರ ಆಗಸ್ಟ್‌ನಲ್ಲಿ 13.60 ಲಕ್ಷದಷ್ಟು ಚಂದಾದಾರಿಕೆ ಇದೆ. ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯಿಂದ ದೇಶವು ತತ್ತರಿಸಿರುವಾಗ ಮೇ ತಿಂಗಳನ್ನು ಹೊರತುಪಡಿಸಿ ಈ ವರ್ಷದ ಮೊದಲ ಆರು ತಿಂಗಳಲ್ಲಿ ನಿವ್ವಳ ವೇತನದಾರರ ಬೆಳವಣಿಗೆ ಕಂಡು ಬಂದಿದೆ ಎಂಬುವುದನ್ನು ಡೇಟಾ ತೋರಿಸುತ್ತದೆ. ಇನ್ನು ಈ ಸಂದರ್ಭದಲ್ಲೇ ಕೊರೊನಾ ವೈರಸ್‌ನ ಎರಡನೇ ಅಲೆಯ ಹಿನ್ನೆಲೆಯಿಂದಾಗಿ ರಾಜ್ಯಗಳಲ್ಲಿ ಸ್ಥಳೀಯವಾಗಿ ಲಾಕ್‌ಡೌನ್‌ ಮಾಡಲಾಗಿತ್ತು.

 ಇಪಿಎಫ್‌ಒ ಸೇರ್ಪಡೆ ಚುರುಕು: ಸೆ. 15.41 ಲಕ್ಷಕ್ಕೂ ಅಧಿಕ ಚಂದಾದಾರಿಕೆ

ಎಪ್ರಿಲ್‌ನಲ್ಲಿ ಒಟ್ಟು 8,06,765 ಚಂದಾದಾರರನ್ನು ಸೇರಿಸಲಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ 5,62,216 ಕ್ಕೆ ಇದು ಇಳಿಕೆ ಕಂಡಿದೆ. ಆದರೆ ಜೂನ್‌ ತಿಂಗಳಿನಲ್ಲಿ 9,71,244 ಮಂದಿಯು ಇಪಿಎಫ್‌ಒಗೆ ಸೇರ್ಪಡೆ ಆಗಿದ್ದಾರೆ. ಜುಲೈನಲ್ಲಿ 12,30,696 ಕ್ಕೆ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದ ಮೊದಲ ಅರ್ಧದಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್ 2021) ಇಪಿಎಫ್‌ಒನಲ್ಲಿ ಒಟ್ಟು ನಿವ್ವಳ ದಾಖಲಾತಿಗಳು 64.72 ಲಕ್ಷದಷ್ಟಿದೆ. 2020-21ರ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಹೊಸ ದಾಖಲಾತಿಗಳು 77.08 ಲಕ್ಷ ಮತ್ತು 2019-20 ರಲ್ಲಿ 78.58 ಲಕ್ಷ ಆಗಿದೆ.

 

18-21 ವರ್ಷದವರು 47.39 ಪ್ರತಿಶತದಷ್ಟು ಸೇರ್ಪಡೆ!

ಒಟ್ಟು 15.41 ಲಕ್ಷ ನಿವ್ವಳ ಚಂದಾದಾರರ ಪೈಕಿ ಸೆಪ್ಟೆಂಬರ್‌ನಲ್ಲಿ ಸುಮಾರು 8.95 ಲಕ್ಷ ಹೊಸ ಸದಸ್ಯರು ಮೊದಲ ಬಾರಿಗೆ 1952 ರ ಇಪಿಎಫ್ ಮತ್ತು ಎಂಪಿ ಆಕ್ಟ್‌ನ ನಿಬಂಧನೆಗಳ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಇಪಿಎಫ್‌ಒ ಹೇಳಿದೆ. ಇನ್ನು ಸುಮಾರು 6.46 ಮಂದಿ ಇಪಿಎಫ್‌ಒನಿಂದ ಚಂದಾದಾರಿಕೆಯನ್ನು ಕೊನೆ ಮಾಡಿದ್ದಾರೆ. ಆದರೆ ಬಳಿಕ ಕೆಲಸ ಬದಲಾವಣೆ ಮಾಡಿಕೊಂಡು ಮತ್ತೆ ಇಪಿಎಫ್‌ಒ ಚಂದಾದಾರಿಕೆ ಆರಂಭ ಮಾಡಿದ್ದಾರೆ. ಈ ಚಂದಾದಾರರು ತಮ್ಮ ಹಣವನ್ನು ವಾಪಾಸ್‌ ಪಡೆದು ಪಿಎಫ್‌ ಖಾತೆಯನ್ನು ಕೊನೆ ಮಾಡುವ ಬದಲಾಗಿ ಈ ಖಾತೆಯನ್ನು ವರ್ಗಾವಣೆ ಮಾಡಿದ್ದಾರೆ. ಇನ್ನು 22-25 ವರ್ಷದ ಅಧಿಕ ಮಂದಿ ಹೊಸದಾಗಿ ಸೇರ್ಪಡೆ ಆಗಿದ್ದಾರೆ ಹಾಗೂ ಈ ವಯಸ್ಸಿನವರು ಸೆಪ್ಟೆಂಬರ್ 2021 ರಲ್ಲಿ 4.12 ಲಕ್ಷ ದಾಖಲಾತಿಯನ್ನು ಹೊಂದಿದ್ದಾರೆ ಎಂದು ಡೇಟಾವು ತೋರಿಸುತ್ತದೆ. ಇನ್ನು 18-21 ವರ್ಷಗಳ ಸುಮಾರು 3.18 ಲಕ್ಷ ನಿವ್ವಳ ದಾಖಲಾತಿ ಆಗಿದೆ. ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತ ವಲಯದ ಉದ್ಯೋಗಿಗಳಾಗಿ ಸೇರ್ಪಡೆ ಆಗುತ್ತಿದ್ದಾರೆ ಎಂದು ಇದು ಸೂಚಿಸುತ್ತಿದೆ. ಇನ್ನು ಸೆಪ್ಟೆಂಬರ್‌ನಲ್ಲಿ ಒಟ್ಟು ನಿವ್ವಳ ಚಂದಾದಾರರ ಸೇರ್ಪಡೆಯಲ್ಲಿ ಸುಮಾರು 47.39 ಪ್ರತಿಶತದಷ್ಟು ಕೊಡುಗೆ ನೀಡಿದ್ದಾರೆ.

ಮಹಾರಾಷ್ಟ್ರ, ಹರಿಯಾಣ, ಗುಜರಾತ್, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಸ್ಥೆಗಳು ತಿಂಗಳ ಅವಧಿಯಲ್ಲಿ ಸರಿಸುಮಾರು 9.41 ಲಕ್ಷ ಚಂದಾದಾರರನ್ನು ಸೇರಿಸುವ ಮೂಲಕ ಈ ರಾಜ್ಯಗಳು ಮುಂಚೂಣಿಯಲ್ಲಿದೆ. ಅಂದರೆ ಇನ್ನು ಸೆಪ್ಟೆಂಬರ್‌ನಲ್ಲಿ 3.27 ಲಕ್ಷ ಮಹಿಳೆಯರು ದಾಖಲು ಆಗಿದ್ದಾರೆ. ಇನ್ನು ಆಗಸ್ಟ್‌ಗೆ ಹೋಲಿಕೆ ಮಾಡಿದಾಗ ಸೆಪ್ಟೆಂಬರ್‌ ತಿಂಗಳಿನ ಸೇರ್ಪಡೆಯು ಶೇಕಡ 0.60 ಲಕ್ಷ ಅಧಿಕ ಆಗಿದೆ.

English summary

With 15.41 lakh more subscribers in September, EPFO shows a spurt in payroll additions

With 15.41 lakh more subscribers in September, EPFO shows a spurt in payroll additions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X