For Quick Alerts
ALLOW NOTIFICATIONS  
For Daily Alerts

ಗೂಗಲ್ ಕಂಪೆನಿ ಸಿಬ್ಬಂದಿಗೆ 2021ರ ಸೆಪ್ಟೆಂಬರ್ ತನಕ ವರ್ಕ್ ಫ್ರಮ್ ಹೋಮ್

By ಅನಿಲ್ ಆಚಾರ್
|

ಗೂಗಲ್ ಕಂಪೆನಿಯ ಉದ್ಯೋಗಿಗಳು 2021ರ ಸೆಪ್ಟೆಂಬರ್ ತನಕ ವರ್ಕ್ ಫ್ರಮ್ ಹೋಮ್ (WFH) ಮುಂದುವರಿಸಬಹುದು. ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕಂಪೆನಿ ಸಿಬ್ಬಂದಿಗೆ ಇ ಮೇಲ್ ಕಳುಹಿಸಿದ್ದು, ಕಂಪೆನಿಯ ಅಂಗ ಸಂಸ್ಥೆಯಾದ ಗೂಗಲ್ ನಿಂದ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಇನ್ನಷ್ಟು ತಿಂಗಳು ವರ್ಕ್ ಫ್ರಮ್ ಹೋಮ್ ವಿಸ್ತರಿಸಲಾಗುವುದು ಎಂದಿದ್ದಾರೆ.

 

ವರ್ಕ್ ಫ್ರಮ್ ಹೋಮ್ ಗಾಗಿ ನಾನಾ ಭತ್ಯೆಗಳನ್ನು ನೀಡಿದ ಕಂಪೆನಿಗಳಿವು

ನ್ಯೂ ಯಾರ್ಕ್ ಟೈಮ್ಸ್ ವರದಿ ಪ್ರಕಾರ, ಒಂದು ಸಲ ಉದ್ಯೋಗಿಗಳು ಕಚೇರಿಗೆ ವಾಪಸಾದ ಮೇಲೆ "ಅನುಕೂಲಕರವಾದ ಕೆಲಸದ ಸಮಯ"ವನ್ನು ಪ್ರಯೋಗಿಸುವ ಉದ್ದೇಶ ಗೂಗಲ್ ಗೂ ಇದೆ. ಅದು ಹೇಗೆಂದರೆ, ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಹಾಗೂ ಉಳಿದ ದಿನ ಮನೆಯಿಂದ ಕೆಲಸ ಮಾಡುವ ಪ್ರಸ್ತಾವ ಅದು. ಹೀಗೆ ಮಾಡುವುದರಿಂದ ಸಿಬ್ಬಂದಿಯ ಉತ್ಪಾದಕತೆಯೂ ಹೆಚ್ಚಾಗಿ, ಆರೋಗ್ಯವೂ ಚೆನ್ನಾಗಿರುವುದಕ್ಕೆ ಸಹಾಯ ಆಗುತ್ತದೆ ಎಂದು ಪಿಚೈ ಹೇಳಿದ್ದಾರೆ.

ಗೂಗಲ್ ಕಂಪೆನಿ ಸಿಬ್ಬಂದಿಗೆ 2021 ಸೆಪ್ಟೆಂಬರ್ ತನಕ ವರ್ಕ್ ಫ್ರಮ್ ಹೋಮ್

ಈ ವರ್ಷದ ಜುಲೈನಲ್ಲಿ ವರ್ಕ್ ಫ್ರಮ್ ಹೋಮ್ ಅನ್ನು ಮುಂದಿನ ವರ್ಷದ ಬೇಸಿಗೆ ತನಕ, ಅಂದರೆ 2021ರ ಜೂನ್ ವರೆಗೆ ವಿಸ್ತರಿಸಿದ್ದ ಮೊದಲ ಕಂಪೆನಿ ಗೂಗಲ್. ಯಾವ ಕೆಲಸಗಳಿಗೆ ಫಿಸಿಕಲ್ ಆಗಿ ಕಚೇರಿ ಆವರಣಕ್ಕೆ ಬರುವ ಅಗತ್ಯ ಇಲ್ಲವೋ ಅಂಥವರು ವರ್ಕ್ ಫ್ರಮ್ ಹೋಮ್ ಮುಂದುವರಿಸಬಹುದು ಎಂದು ತಿಳಿಸಿತ್ತು.

English summary

Work From Home For Google Employees Extended Till 2021 September

Alphabet announces, it's subsidiary company Google extended work from home to employees till 2021 September.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X