For Quick Alerts
ALLOW NOTIFICATIONS  
For Daily Alerts

ವರ್ಕ್‌ ಫ್ರಮ್‌ ಹೋಮ್ ಹಿನ್ನೆಲೆ: ಗೂಗಲ್‌ಗೆ 7,418 ಕೋಟಿ ರೂ. ಉಳಿತಾಯ

|

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆ ವಿಶ್ವದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಅದರಲ್ಲೂ ಕೋವಿಡ್-19 ಎರಡನೇ ಅಲೆಯು ವರ್ಕ್ ಫ್ರಮ್ ಹೋಮ್ ಅವಧಿಯನ್ನು ಮುಂದೂಡುವಂತೆ ಮಾಡಿದೆ. ಇದರಿಂದ ಅನೇಕ ಕಂಪನಿಗಳಿಗೆ ಸಾಕಷ್ಟು ಉಳಿತಾಯವಾಗಿದ್ದು, ಸರ್ಚ್‌ ಎಂಜಿನ್ ದೈತ್ಯ ಗೂಗಲ್‌ಗೆ ಬರೋಬ್ಬರಿ 1 ಬಿಲಿಯನ್ ಡಾಲರ್ ಉಳಿತಾಯವಾಗಿದೆ.

 

ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಏಪ್ರಿಲ್ 28ರ ಬೆಲೆ ಹೀಗಿದೆ

ಕೊರೊನಾ ಹಿನ್ನೆಲೆ ನಿರ್ಬಂಧಗಳು ಹೆಚ್ಚಿರುವ ಕಾರಣ ಜನರು ಆನ್‌ಲೈನ್‌ನಲ್ಲೇ ಪ್ರವಾಸಗಳು ಮತ್ತು ಹೋಟೆಲ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ. ಇದು ಗೂಗಲ್‌ಗೆ ಉತ್ತಮ ಜಾಹೀರಾತು ಆದಾಯ ತಂದುಕೊಡುತ್ತಿದೆ. ಜೊತೆಗೆ ಗೂಗಲ್‌ನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಪ್ರಯಾಣಕ್ಕೂ ಕಂಪನಿಯಿಂದ ಹಣ ಖರ್ಚಾಗುತ್ತಿಲ್ಲ, ಹೀಗಾಗಿ ಉಳಿತಾಯ ಹೆಚ್ಚಾಗಿದೆ.

ವರ್ಕ್‌ ಫ್ರಮ್‌ ಹೋಮ್ ಹಿನ್ನೆಲೆ: ಗೂಗಲ್‌ಗೆ 7,418 ಕೋಟಿ ರೂ. ಉಳಿತಾಯ

ಕಂಪನಿಯ ಫೈಲಿಂಗ್ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಇಂಕ್ ಕಂಪನಿಯು ಹಿಂದಿನ ಒಂದು ವರ್ಷದ ಅವಧಿಗೆ ಹೋಲಿಸಿದರೆ ಪ್ರಚಾರ, ಪ್ರಯಾಣ ಮತ್ತು ಮನರಂಜನೆಯಿಂದ $268 ಮಿಲಿಯನ್ ವೆಚ್ಚವನ್ನು ಉಳಿಸಿದೆ.

ವಾರ್ಷಿಕ ಆಧಾರದ ಮೇಲೆ ಅದು $1 ಬಿಲಿಯನ್‌ಗೂ ಹೆಚ್ಚು (ಸುಮಾರು 7,418 ಕೋಟಿ ರೂ.). ವಾಸ್ತವವಾಗಿ, ಈ ವರ್ಷದ ಆರಂಭದಲ್ಲಿ ಆಲ್ಫಾಬೆಟ್ ತನ್ನ ವಾರ್ಷಿಕ ವರದಿಯಲ್ಲಿ ಜಾಹೀರಾತು ಮತ್ತು ಪ್ರಚಾರದ ವೆಚ್ಚಗಳು 1.4 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಇದರಿಂದ ಕಂಪನಿಯ ಖರ್ಚು ಕಡಿಮೆಯಾಗಿದ್ದು, ಪ್ರಯಾಣ ಮತ್ತು ಮನರಂಜನಾ ವೆಚ್ಚವು $371 ಮಿಲಿಯನ್‌ನಷ್ಟು ಇಳಿದಿದೆ. ಉಳಿತಾಯದ ಜೊತೆಗೆ ಕಂಪನಿಯ ಆದಾಯವು ಶೇಕಡಾ 34ರಷ್ಟು ಹೆಚ್ಚಿದೆ.

English summary

Work From Home Impact: Google Is Saving Over $1 Billion

Search engine giant Google is saving more than $ 1 billion after work from home for employees
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X