For Quick Alerts
ALLOW NOTIFICATIONS  
For Daily Alerts

ವರ್ಕ್ ಫ್ರಮ್ ಹೋಮ್ ಕೆಲಸಕ್ಕಾಗಿ ಹುಡುಕಾಟ: 2020ರಲ್ಲಿ ಶೇ. 140ರಷ್ಟು ಹೆಚ್ಚಳ!

|

ಕಳೆದ ವರ್ಷ (2020)ರಲ್ಲಿ ಕೊರೊನಾವೈರಸ್ ಪ್ರೇರಿತ ಲಾಕ್‌ಡೌನ್ ಮತ್ತು ನಂತರದ ಬೆಳವಣಿಗೆಗಳು ಜನರನ್ನು ಸಾಕಷ್ಟು ತೊಂದರೆಗೆ ಸಿಲುಕಿಸಿದೆ. ಕೊರೊನಾವೈರಸ್ ಕಾಟ ಇನ್ನೂ ಕೂಡ ಮುಗಿಯದೇ ಎರಡನೇ ಅಲೆ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಮನೆಯಿಂದ ಹೊರಹೋಗಿ ಕೆಲಸ ಮಾಡಲು ಮತ್ತೆ ಯೋಚಿಸುವಂತಾಗಿದೆ.

 

ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬೇಕೆ? ಹಾಗಿದ್ದರೆ ಸಾಲ ಪಡೆಯಲು ಏನೆಲ್ಲಾ ಅರ್ಹತೆ ಇರಬೇಕು?

ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಗಳನ್ನು ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಗೂಗಲ್ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ 2019 ಕ್ಕೆ ಹೋಲಿಸಿದರೆ 2020 ರಲ್ಲಿ ಭಾರತದಾದ್ಯಂತದ "ವರ್ಕ್ ಫ್ರಮ್ ಹೋಮ್" ಹುಡುಕಾಟಗಳಲ್ಲಿ 140% ಬೆಳವಣಿಗೆ ಕಂಡುಬಂದಿದೆ ಎಂದು ತೋರಿಸುತ್ತದೆ.

ವರ್ಕ್ ಫ್ರಮ್ ಹೋಮ್ ಕೆಲಸಕ್ಕಾಗಿ ಹುಡುಕಾಟ: 140% ಹೆಚ್ಚಳ!

ವೈರಸ್‌ನಿಂದಾಗಿ, ಭಾರತೀಯರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇದೆ. ಹೀಗಾಗಿ ಅನೇಕರು ವೈದ್ಯರನ್ನು ಸಂಪರ್ಕಿಸಲು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಹೀಗೆ ನಾನಾ ರೀತಿಯ ವಿಚಾರಗಳಿಗೆ ಆನ್‌ಲೈನ್‌ನಲ್ಲಿ ಪ್ರಯತ್ನಿಸಲು ಮುಂದಾಗಿದ್ದಾರೆ.

ಆನ್‌ಲೈನ್‌ ಮೂಲಕ ವೈದ್ಯರ ಸಮಾಲೋಚನೆಯ ಹುಡುಕಾಟಗಳು 300% ರಷ್ಟು ಬೆಳೆಯುತ್ತಿವೆ. ವರದಿ ಪ್ರಕಾರ ಈ ಹುಡುಕಾಟದಲ್ಲಿ ಮಣಿಪುರ, ಬಿಹಾರ ಮತ್ತು ಕರ್ನಾಟಕವು ಮುಂದಿದೆ.

ಇದು ಗ್ರಾಹಕರ ನಡವಳಿಕೆಯಲ್ಲಿ ಭಾರಿ ಬದಲಾವಣೆಗಳಿಗೆ ಕಾರಣವಾಗಿದೆ ಮತ್ತು ವ್ಯವಹಾರಗಳಿಗೆ ಡಿಜಿಟಲ್ ಹೇಗೆ ಕೇಂದ್ರವಾಗುತ್ತಿದೆ ಎಂದು ಗೂಗಲ್ ಇಂಡಿಯಾದ ಕಂಟ್ರಿ ಹೆಡ್ ಮತ್ತು ವಿ.ಪಿ. ಸಂಜಯ್ ಗುಪ್ತಾ ಹೇಳಿದ್ದಾರೆ.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಬಳಕೆದಾರರು ತಮ್ಮ ವ್ಯವಹಾರ, ಶಾಪಿಂಗ್, ಕಲಿಕೆ ಎಲ್ಲದಕ್ಕೂ ಡಿಜಿಟಲ್ ಮೊರೆ ಹೋಗುತ್ತಿದ್ದಾರೆ.

English summary

Work from home job searches in India surge 140% in 2020; Google Report

According to new data from a Google report which was revealed on Thursday, shows that as compared to 2019 there was 140 % growth in “work from home jobs” searches from across India in 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X