For Quick Alerts
ALLOW NOTIFICATIONS  
For Daily Alerts

ವಿಶ್ವದ ಮೊದಲ 24 ಕ್ಯಾರೆಟ್ ಚಿನ್ನದ ಪ್ಲೇಟ್ ಹೋಟೆಲ್ ವಿಯೆಟ್ನಾಂನಲ್ಲಿ

|

ವಿಯೆಟ್ನಾಂನಲ್ಲಿ ಆ ಹೋಟೆಲ್ ಶುರುವಾಗಿದೆ. ಕೊರೊನಾದ ಲಾಕ್ ಡೌನ್ ಮುಗಿಸಿ, ಶುರು ಮಾಡಿರುವ ಆ ಹೋಟೆಲ್ ಬಗ್ಗೆ ಹೇಳುವುದಕ್ಕೆ ಕಾರಣಗಳು ಸಹ ಇವೆ. ಅದೇನೆಂದರೆ, 24 ಕ್ಯಾರೆಟ್ ಚಿನ್ನ ಬಳಸಿ, ನಿರ್ಮಿಸಿರುವ ವಿಶ್ವದ ಮೊದಲ ಹೋಟೆಲ್ ಇದು. ಹೋಟೆಲ್ ಹೊರಭಾಗಕ್ಕೆ ಹಾಗೂ ಒಳಾಂಗಣದಲ್ಲಿ 24 ಕ್ಯಾರೆಟ್ ಚಿನ್ನದ ಪ್ಲೇಟ್ ಅಥವಾ ತಗಡುಗಳನ್ನು ಬಳಸಲಾಗಿದೆ. ಇದರ ನಿರ್ಮಾಣಕ್ಕೆ ಹನ್ನೊಂದು ವರ್ಷ ಸಮಯ ಹಿಡಿದಿದೆ.

 

ಪ್ರತಿ ವರ್ಷ 5 ತಿಂಗಳು ಮಾತ್ರ ಇರುವ ಈ ಹೋಟೆಲ್ ನಲ್ಲಿ ಒಂದು ರಾತ್ರಿಗೆ 1 ಲಕ್ಷ

ಹೋಟೆಲ್ ಹೆಸರು ಡಾಲ್ಸ್ ಹನೋಯಿ ಗೋಲ್ಡನ್ ಲೇಕ್. ವಿಯೆಟ್ನಾಂ ರಾಜಧಾನಿ ಕೇಂದ್ರ ಭಾಗದಲ್ಲಿ, ಜಿಯಾಂಗ್ ವೋ ಲೇಕ್ ಪ್ರದೇಶದಲ್ಲಿ ಈ ಹೋಟೆಲ್ ಇದೆ. 24 ಅಂತಸ್ತಿನ, 400 ಕೊಠಡಿಗಳಿವೆ. ಹೊವಾ ಬಿನಾ ಗ್ರೂಪ್ ನಿಂದ ಅಮೆರಿಕನ್ ವಿಂಧಮ್ ಹೋಟೆಲ್ ಬ್ರ್ಯಾಂಡ್ ನವರು ಇದನ್ನು ನಡೆಸುತ್ತಾರೆ.

ವಿಶ್ವದ ಮೊದಲ 24 ಕ್ಯಾರೆಟ್ ಚಿನ್ನದ ಪ್ಲೇಟ್ ಹೋಟೆಲ್ ವಿಯೆಟ್ನಾಂನಲ್ಲಿ

ಈ ಹೋಟೆಲ್ ನಲ್ಲಿ ಒಂದು ರಾತ್ರಿ ವಾಸ್ತವ್ಯಕ್ಕೆ 250 ಅಮೆರಿಕನ್ ಡಾಲರ್ ಆಗುತ್ತದೆ. ಭಾರತದ ರುಪಾಯಿಗಳಲ್ಲಿ 18 ಸಾವಿರಕ್ಕಿಂತ ಸ್ವಲ್ಪ ಜಾಸ್ತಿ. ಇಲ್ಲಿ ಬಾತ್ ಟಬ್, ಸಂಡಾಸು, ಛಾವಣಿ ಹೀಗೆ ಎಲ್ಲಿ ಕಣ್ಣು ಹಾಯಿಸಿದರೂ ಎಲ್ಲವೂ ಗೋಲ್ಡ್ ಪ್ಲೇಟೆಡ್. ಕೊನೆಗೆ ಇಲ್ಲಿನ ಈಜುಕೊಳ ನೋಡಿದರೆ ಅದು ಕೂಡ ಚಿನ್ನ ಚಿನ್ನ ಚಿನ್ನ.

ವಿಶ್ವದ ಮೊದಲ 24 ಕ್ಯಾರೆಟ್ ಚಿನ್ನದ ಪ್ಲೇಟ್ ಹೋಟೆಲ್ ವಿಯೆಟ್ನಾಂನಲ್ಲಿ

ಈ ಈಜುಕೊಳವನ್ನು ಬರೀ ಅಲಂಕಾರಕ್ಕೆ ಮಾಡಿರುವುದಿಲ್ಲ. ಅತಿಥಿಗಳು ಇದನ್ನು ಬಳಸಬಹುದು. ಇಡೀ ನಗರದ ದೃಶ್ಯ ಈ ಜಾಗದಿಂದ ಅದ್ಭುತವಾಗಿ ಕಾಣುತ್ತದೆ. ಈ ಕೊರೊನಾ ಇಲ್ಲದಿದ್ದಲ್ಲಿ ಅಂತರರಾಷ್ಟ್ರೀಯ ಅತಿಥಿಗಳಿಂದ ಈ ಹೋಟೆಲ್ ತುಂಬಿಹೋಗಿರುತ್ತಿತ್ತು ಎನ್ನುತ್ತಾರೆ ಈ ಹೋಟೆಲ್ ಅನ್ನು ನಡೆಸುತ್ತಿರುವ ಗ್ರೂಪ್ ನ ಅಧ್ಯಕ್ಷ.

English summary

World's First 24 Ct Gold Plated Hotel In Vietnam

Dolce Hanoi Golden Lake Hotel, world's first 24 carrot gold plated hotel opened in Vietnam.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X