For Quick Alerts
ALLOW NOTIFICATIONS  
For Daily Alerts

ಸೌದಿ ಅರೇಬಿಯಾದಿಂದ ಜಪಾನ್ ಗೆ ವಿಶ್ವದಲ್ಲೇ ಮೊದಲ ಬಾರಿಗೆ ಅಮೋನಿಯಾ ರವಾನೆ

By ಅನಿಲ್ ಆಚಾರ್
|

ಬ್ಲ್ಯೂ ಅಮೋನಿಯಾವನ್ನು ಸೌದಿ ಅರೇಬಿಯಾದಿಂದ ಜಪಾನ್ ಗೆ ರವಾನಿಸಲಾಗುತ್ತಿದೆ. ಇದು ವಿಶ್ವದಲ್ಲೇ ಮೊದಲು. ಇದನ್ನು ಜಪಾನ್ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಗಾಗಿ ಬಳಸಲಾಗುತ್ತಿದೆ. ಇದರಿಂದ ಇಂಗಾಲದ ಹೊರಸೂಸುವಿಕೆ ಇರುವುದಿಲ್ಲ. ಭಾನುವಾರದಂದು ಈ ಬಗ್ಗೆ ಸೌದಿ ಅರಾಮ್ಕೋ ಘೋಷಣೆ ಮಾಡಿದೆ.

ಮೊದಲಿಗೆ ಹೈಡ್ರೋಕಾರ್ಬನ್ ಅನ್ನು ಹೈಡ್ರೋಜನ್ (ಜಲಜನಕ) ಆಗಿ ಪರಿವರ್ತಿಸಿ, ಆ ನಂತರ ಅಮೋನಿಯಾವಾಗಿ ಮಾಡಲಾಗಿದೆ ಮತ್ತು ಕಾರ್ಬನ್ ಡೈ ಆಕ್ಸೈಡ್ ಉಪ ಉತ್ಪನ್ನಗಳನ್ನು ಹಿಡಿದಿಟ್ಟು, ಇಂಧನವನ್ನು ಉತ್ಪಾದಿಸಿದೆ. ಮೊದಲಿಗೆ 40 ಟನ್ ಬ್ಲ್ಯೂ ಅಮೋನಿಯಾವನ್ನು ಜಪಾನ್ ಸ್ವೀಕರಿಸಲಿದೆ ಎಂದು ಅರಾಮ್ಕೋ ಹೇಳಿದೆ.

ಕೊರೊನಾ ಆರ್ಥಿಕ ಹೊಡೆತಕ್ಕೆ ಸರ್ಕಾರದ ಆಸ್ತಿ ಮಾರುವ ಯೋಚನೆಯಲ್ಲಿದೆ ಸೌದಿ ಅರೇಬಿಯಾ

 

ಕಾರ್ಬನ್ ಹೊರಸೂಸುವಿಕೆ ಇಲ್ಲದೆ ಅಮೋನಿಯಾವನ್ನು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಳಸಬಹುದು. ಇದರರ್ಥ ಏನೆಂದರೆ, ಕೈಗೆಟುಕುವ ದರದಲ್ಲಿ ಹಾಗೂ ನಂಬಿಕೆ ಇಡಬಹುದಾದ ಭವಿಷ್ಯದ ಕಡಿಮೆ ಕಾರ್ಬನ್ ಇಂಧನ ಇದು ಎಂದು ಸೌದಿ ಅರೇಬಿಯಾದ ಸರ್ಕಾರಿ ಕಂಪೆನಿ ಅರಾಮ್ಕೋ ತಿಳಿಸಿದೆ.

ಸೌದಿ ಅರೇಬಿಯಾದಿಂದ ಜಪಾನ್ ಗೆ ವಿಶ್ವದಲ್ಲೇ ಮೊದಲ ಬಾರಿ ಅಮೋನಿಯಾ ರವಾನೆ

ಹೈಡ್ರೋಜನ್ ಬಳಕೆಯಲ್ಲಿ ವಿಶ್ವದ ಮುಂಚೂಣಿ ಸ್ಥಾನದಲ್ಲಿ ನಿಲ್ಲಬೇಕು ಎಂಬುದು ಜಪಾನ್ ಗುರಿ. ಇದು ಅಮೋನಿಯಾದಲ್ಲಿ ಇರುತ್ತದೆ. ಪ್ಯಾರಿಸ್ ಒಪ್ಪಂದದಂತೆ 2030ರ ಹೊತ್ತಿಗೆ ಗ್ರೀನ್ ಹೌಸ್ ಅನಿಲ ಹೊರಸೂಸುವಿಕೆ 26% ಕಡಿಮೆ ಮಾಡುವ ಗುರಿಯನ್ನು ಜಪಾನ್ ಹಾಕಿಕೊಂಡಿದೆ.

ಬ್ಲ್ಯೂ ಅಮೋನಿಯಾವನ್ನು ಹಸಿರು ಜಲಜನಕ (ಹೈಡ್ರೋಜನ್) ಎನ್ನಲಾಗುತ್ತದೆ. ವಿಶ್ವದಲ್ಲೇ ಅತಿ ದೊಡ್ಡ ತೈಲ ಉತ್ಪಾದಕ ಸೌದಿ ಅರೇಬಿಯಾಗೆ ಈಗ ತನ್ನ ಹಣೆಪಟ್ಟಿಯಾದ 'ಡರ್ಟಿ ಎನರ್ಜಿ ಎಕ್ಸ್ ಪೋರ್ಟರ್' ಎಂಬುದನ್ನು ಕಳಚಿಕೊಳ್ಳಬೇಕಿದೆ. ಯುಎಸ್ ನ ಏರ್ ಪ್ರಾಡಕ್ಟ್ಸ್ ಅಂಡ್ ಕೆಮಿಕಲ್ಸ್ ಜತೆಗೆ ಸೌದಿ ಮೂಲಕದ ಎಸಿಡಬ್ಲ್ಯುಎ ಪವರ್ ಇಂಟರ್ ನ್ಯಾಷನಲ್ ಕಳೆದ ಜುಲೈನಲ್ಲಿ ಒಪ್ಪಂದ ಮಾಡಿಕೊಂಡಿದೆ.

ಅದರ ಪ್ರಕಾರ ಭವಿಷ್ಯದಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಹೈಡ್ರೋಜನ್ ಆಧಾರಿತ ಅಮೋನಿಯಾ ಘಟಕವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿವೆ.

English summary

World’s first shipment of blue ammonia fuel is on its way to Japan from Saudi Arabia

Saudi Aramco announced that, the world’s first shipment of blue ammonia is on its way from Saudi Arabia to Japan on Sunday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X