For Quick Alerts
ALLOW NOTIFICATIONS  
For Daily Alerts

ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ದಾಖಲೆಯ ಶೇಕಡಾ 4.17ಕ್ಕೆ ಏರಿಕೆ

|

ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ತೀವ್ರ ಏರಿಕೆ ಕಂಡಿದೆ. ಫೆಬ್ರವರಿ 2021 ರಲ್ಲಿ ಸಗಟು ಹಣದುಬ್ಬರ ದರ (ಡಬ್ಲ್ಯೂಪಿಐ) ಶೇಕಡಾ 4.17 ರಷ್ಟಿತ್ತು. ಇದು ಕಳೆದ ಎರಡೂವರೆ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 27 ತಿಂಗಳುಗಳಲ್ಲಿ ಗರಿಷ್ಠ ಪ್ರಮಾಣವಾಗಿದೆ.

 

ಜನವರಿ 2021 ರಲ್ಲಿ, ಸಗಟು ಹಣದುಬ್ಬರ ದರವು ಶೇಕಡಾ 2.03 ರಷ್ಟಿತ್ತು. ಇದು ಫೆಬ್ರವರಿಯಲ್ಲಿ ಶೇ 4.17 ಕ್ಕೆ ದ್ವಿಗುಣಗೊಂಡಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಮತ್ತು ಆಹಾರ ಪದಾರ್ಥಗಳ ಹೆಚ್ಚಳವೇ ಹಣದುಬ್ಬರ ಏರಿಕೆಗೆ ಕಾರಣವಾಗಿದೆ.

ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ದಾಖಲೆಯ ಶೇಕಡಾ 4.17ಕ್ಕೆ ಏರಿಕೆ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಶೇ. 4.17ರಷ್ಟಿದೆ. ಒಂದು ತಿಂಗಳ ಹಿಂದೆ ಸಗಟು ಹಣದುಬ್ಬರ ಶೇ. 2.03 ರಷ್ಟಿದ್ದರೆ, ಕಳೆದ ವರ್ಷ ಫೆಬ್ರವರಿಯಲ್ಲಿ ಇದು 2.26 ರಷ್ಟಿತ್ತು. ಡಬ್ಲ್ಯೂಪಿಐ ಆಹಾರ ಸೂಚ್ಯಂಕ ಫೆಬ್ರವರಿಯಲ್ಲಿ ಶೇಕಡಾ 3.31 ಕ್ಕೆ ಏರಿತು. ಅದೇ ಸಮಯದಲ್ಲಿ, ತರಕಾರಿಗಳ ಸಗಟು ಹಣದುಬ್ಬರವು -20.82 ರಿಂದ -2.90 ಕ್ಕೆ ಏರಿದೆ.

ಫೆಬ್ರವರಿಯಲ್ಲಿ, ಇಂಧನ ಮತ್ತು ವಿದ್ಯುತ್, ತಯಾರಿಸಿದ ಉತ್ಪನ್ನಗಳ ಬೆಲೆಗಳು ತೀವ್ರ ಏರಿಕೆ ಕಂಡಿದೆ. ಇಂಧನ ಮತ್ತು ವಿದ್ಯುತ್ ಡಬ್ಲ್ಯುಪಿಐ ಈ ತಿಂಗಳ ಜನವರಿಯಲ್ಲಿ ಶೇ 0.58 ಕ್ಕೆ ಏರಿಕೆಯಾಗಿದೆ -4.78 ಕ್ಕೆ ತಲುಪಿದೆ. ಅದೇ ಸಮಯದಲ್ಲಿ, ತಯಾರಿಸಿದ ಉತ್ಪನ್ನಗಳ ಸಗಟು ಬೆಲೆ ಫೆಬ್ರವರಿಯಲ್ಲಿ 5.81 ಪ್ರತಿಶತವನ್ನು ತಲುಪಿದೆ, ಅದು ಜನವರಿಯಲ್ಲಿ 5.13 ರಷ್ಟಿತ್ತು.

ಚಿಲ್ಲರೆ ಹಣದುಬ್ಬರ ದರವು 2020 ರ ಫೆಬ್ರವರಿಯಲ್ಲಿ 5.03 ಕ್ಕೆ ಏರಿದೆ. ಕೇಂದ್ರ ಸರ್ಕಾರ ಕಳೆದ ವಾರ ಶುಕ್ರವಾರ ಚಿಲ್ಲರೆ ಹಣದುಬ್ಬರದ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು.

English summary

WPI Inflation Rises To 4.17% In February: Food, Fuel And Power Prices Spiked

The wholesale price index (WPI)-based inflation rate rose to a 27-month high in February due to a broad-based hardening of prices of fuels, food items, and manufactured goods.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X