For Quick Alerts
ALLOW NOTIFICATIONS  
For Daily Alerts

ಅಗ್ಗದ ಬಡ್ಡಿ ದರದಲ್ಲಿ ದ್ವಿಚಕ್ರವಾಹನ ಸಾಲ: ವೀಲ್ಸ್‌ ಇಎಮ್‌ಐನೊಂದಿಗೆ ಕೈ ಜೋಡಿಸಿದ ಯೆಸ್‌ ಬ್ಯಾಂಕ್‌

|

ಕಡಿಮೆ ಬಡ್ಡಿದರದಲ್ಲಿ ದ್ವಿಚಕ್ರ ವಾಹನಕ್ಕೆ ಸಾಲ ಒದಗಿಸುವ ಉದ್ದೇಶದಿಂದಾಗಿ ಯೆಸ್ ಬ್ಯಾಂಕ್ ಮತ್ತು ವೀಲ್ಸ್‌ಇಎಂಐ ಪ್ರೈವೇಟ್ ಲಿಮಿಟೆಡ್ ಕೈ ಜೋಡಿಸಿದೆ. ಕಡಿಮೆ ಬಡ್ಡಿದರದಲ್ಲಿ ದ್ವಿಚಕ್ರ ವಾಹನಕ್ಕೆ ಸಾಲ ನೀಡುವ ದೃಷ್ಟಿಕೋನವನ್ನು ಹೊಂದಿರುವ ಯೆಸ್‌ ಬ್ಯಾಂಕ್‌ ಇನ್ನು ಮುಂದೆ ವೀಲ್ಸ್‌ಇಎಂಐ ಪ್ರೈವೇಟ್ ಲಿಮಿಟೆಡ್ ಜೊತೆ ಸೇರಿ ದ್ವಿ ಚಕ್ರ ವಾಹನಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಿದೆ. ಯೆಸ್‌ ಬ್ಯಾಂಕ್‌ ಹಾಗೆಯೇ ಭಾರತದಾದ್ಯಂತ ದ್ವಿಚಕ್ರ ವಾಹನ ಗ್ರಾಹಕರಿಗೆ ಪರಿಣಾಮಕಾರಿ ಮತ್ತು ಸುಗಮ ಸಾಲ ಸೇವೆಯನ್ನು ನೀಡುವ ಪ್ರಯತ್ನದ ಭಾಗವಾಗಿ ಈ ಕಾರ್ಯವನ್ನು ಮಾಡಿದೆ. ಈ ಬಗ್ಗೆ ಯೆಸ್‌ ಬ್ಯಾಂಕ್‌ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

 

"ಭಾರತೀಯ ರಿಸರ್ವ್ ಬ್ಯಾಂಕ್‌ ಹಾಕಿರುವ ಜೊತೆ ಸಾಲದ ಚೌಕಟ್ಟು ಒಂದು ಸಹಯೋಗದ ನಿಲುವನ್ನು ಬ್ಯಾಂಕ್‌ಗಳಿಗೆ ಒದಗಿಸುತ್ತದೆ. ಇದು ಬ್ಯಾಂಕಿನ ಕಡಿಮೆ-ವೆಚ್ಚದ ನಿಧಿಯಿಂದ ಮತ್ತು ಎನ್‌ಸಿಎಫ್‌ಸಿಯ ಸೋರ್ಸಿಂಗ್ ಮತ್ತು ಸೇವೆ ಪರಿಣತಿಯಿಂದ ಪ್ರಯೋಜನವನ್ನು ಪಡೆಯಲು ಸಹಕಾರಿಯಾಗಿದೆ. ಯೆಸ್‌ ಬ್ಯಾಂಕ್‌ ವೀಲ್ಸ್‌ಇಎಂಐ ಪ್ರೈವೇಟ್ ಲಿಮಿಟೆಡ್ ಜೊತೆ ಕೈ ಜೋಡಿಸುವುದರಿಂದ ಎರಡೂ ಕಡೆಯ ಸಾಲಗಾರರ ಸಾಮರ್ಥ್ಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತದೆ. ಇದರಿಂದಾಗಿ ಎಲ್ಲಾ ಪಾಲುದಾರರಿಗೂ ಲಾಭವಾಗಲಿದೆ. ಈ ಮೂಲಕ ನಾವು ಕಡಿಮೆ ಪ್ರಮಾಣದ ಮಾರುಕಟ್ಟೆಗಳಿಗೆ ವಿಸ್ತರಣೆ ಮಾಡಿಕೊಳ್ಳುತ್ತಿದ್ದೇವೆ," ಎಂದು ತಿಳಿಸಿದ್ದಾರೆ.

ಕೋವಿಡ್‌ ನಿರ್ಬಂಧ ಸಡಲಿಕೆ ಬೆನ್ನಲ್ಲೇ ಮೂಡಿದೆ ಆರ್ಥಿಕ ಚೇತರಿಕೆಯ ಚಿಗುರು

23 ನೇ ಆಗಸ್ಟ್ 2021 ರಂದು ಯೆಸ್‌ ಬ್ಯಾಂಕ್‌ ಪ್ರಕಟ ಮಾಡಿರುವ ಮಾಧ್ಯಮ ಪ್ರಕಟನೆಯ ಪ್ರಕಾರ, "ವೀಲ್ಸ್‌ಇಎಮ್‌ಐ ದ್ವಿಚಕ್ರ ವಾಹನ ಮಾಲೀಕತ್ವ-ರೈಡರ್‌ಶಿಪ್ ಕೈಗೆಟುಕುವ ದರದಲ್ಲಿ ವಾಹನ ಸಾಲವನ್ನು ಒದಗಿಸುತ್ತದೆ. ಇದು ದುಡಿಯುವ ವರ್ಗದ ಕುಟುಂಬಗಳಿಗೆ ಅಧಿಕ ಸಹಕಾರಿಯಾಗಿದೆ. ಇದು ಹೊಸ ಹಾಗೂ ಹಳೆಯ ದ್ವಿಚಕ್ರ ವಾಹನಗಳಿಗೆ ಸಾಲವನ್ನು ಒದಗಿಸುತ್ತದೆ. ಎಲೆಕ್ಟ್ರಿಕ್ ಬೈಕುಗಳು, ವಿಮೆ, ಸೇವೆ, ಬಿಡಿ ಭಾಗಗಳ ನಿರ್ವಹಣೆ ಮತ್ತು ಸೆಕೆಂಡ್‌ ಹ್ಯಾಂಡಲ್‌ ದ್ವಿಚಕ್ರ ವಾಹನಗಳಿಗೆ ಇದು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒಗಿಸುತ್ತದೆ," ಎಂದು ಹೇಳಿದೆ.

 
ಅಗ್ಗದ ಬಡ್ಡಿ ದರದಲ್ಲಿ ದ್ವಿಚಕ್ರವಾಹನ ಸಾಲ: ಯೆಸ್‌ ಬ್ಯಾಂಕ್‌

ಇನ್ನು "ವೀಲ್ಸ್‌ಇಎಮ್‌ಐ ತನ್ನ ವಿಶಿಷ್ಟ ಮಾದರಿಯ ಮೂಲಕ ಎಲ್ಲಾ ಪ್ರದೇಶದ ಗ್ರಾಹಕರಿಗೆ ಸಾಲ ಒದಗಿಸುವುದರಲ್ಲಿ ಪರಿಣತಿ ಹೊಂದಿದೆ. ಇದು ನಗರ ಮತ್ತು ಗ್ರಾಮೀಣ ಜನರ ನಡುವಿನ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಾಹಕರ ಕಡಿಮೆ ಇರುವ ವಿಭಾಗದಲ್ಲೂ ಗ್ರಾಹಕರ ಚಲನಶೀಲತೆ ಹೆಚ್ಚಳಕ್ಕೆ ಸಹಕಾರಿಯಾಗಿದೆ," ಎಂದು ಬ್ಯಾಂಕ್‌ ತನ್ನ ಪತ್ರಿಕಾ ಹೇಳಿಕೆಯಲ್ಲಿ ಸೇರಿಸಿಕೊಂಡಿದೆ.

"ಈ ನೂತನ ವ್ಯವಸ್ಥೆಯ ಮೂಲಕ, ಎರಡೂ ವಿಭಾಗದ ಸಾಲದಾತರು ಅಂದರೆ ಯೆಸ್‌ ಬ್ಯಾಂಕ್‌ ಹಾಗೂ ವೀಲ್ಸ್‌ಇಎಂಐ ಪ್ರೈವೇಟ್ ಲಿಮಿಟೆಡ್‌ ಮೊದಲ ಹಂತದಲ್ಲಿ 1 ಲಕ್ಷ ದ್ವಿಚಕ್ರ ವಾಹನಗಳಿಗೆ ಸಾಲ ಒದಗಿಸಲು ಯೋಜಿಸಿದ್ದಾರೆ," ಎಂದು ಖಾಸಗಿ ವಲಯದ ಬ್ಯಾಂಕ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.

ಯಾವ ಬ್ಯಾಂಕ್‌ನ ATMನಲ್ಲಿ ಎಷ್ಟು ಹಣ ವಿತ್‌ಡ್ರಾ ಮಾಡಬಹುದು?

ಹಾಗೆಯೇ "ವೀಲ್ಸ್‌ಇಎಂಐ ಪ್ರೈವೇಟ್ ಲಿಮಿಟೆಡ್ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ನಮಗೆ ಸಂತೋಷವಿದೆ. ಈ ಪಾಲುದಾರಿಕೆ ವ್ಯವಸ್ಥೆಯ ಮೂಲಕ ಹೊಸ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಮೂಡಿಸಿ ಮತ್ತು ತನ್ನ ಅಸ್ತಿತ್ವದ ಆಳವನ್ನು ಹೆಚ್ಚಿಸುವ ಮೂಲಕ ಬ್ಯಾಂಕ್ ತನ್ನ ವ್ಯಾಪ್ತಿಯನ್ನು ಹೆಚ್ಚಿಸಲು ಈ ವ್ಯವಸ್ಥೆಯು ಅವಕಾಶ ಒದಗಿಸಲಿದೆ. ಈ ಪಾಲುದಾರಿಕೆಯ ಮೂಲಕ ಸುಸ್ಥಿರ ದ್ವಿಚಕ್ರ ವಾಹನ ಸಾಲದ ಬಂಡವಾಳವನ್ನು ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ವೀಲ್ಸ್ ಇಎಂಐ ಸಾಮರ್ಥ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ನಾವು ಕಾತುರದಿಂದ ಕಾಯುತ್ತಿದ್ದೇವೆ," ಎಂದು ಯೆಸ್‌ ಬ್ಯಾಂಕ್‌ನ ಚಿಲ್ಲರೆ ಬ್ಯಾಂಕಿಂಗ್‌ನ ಜಾಗತಿಕ ಮುಖ್ಯಸ್ಥ ರಾಜನ್ ಪೆಂಟಲ್‌ ತಿಳಿಸಿದ್ದಾರೆ.

English summary

Yes Bank Join Hands With WheelsEMI To Offer Two Wheeler Loans At Cheaper Rates

Yes Bank Join Hands With WheelsEMI To Offer Two Wheeler Loans At Cheaper Rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X