For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ಹಗರಣದಲ್ಲಿ ಸಿಬಿಐ ವಶಕ್ಕೆ ಡಿಎಚ್ ಎಫ್ ಎಲ್ ಪ್ರವರ್ತಕರು

|

ಯೆಸ್ ಬ್ಯಾಂಕ್- ಡಿಎಚ್ ಎಫ್ ಎಲ್ ವಂಚನೆ ಪ್ರಕರಣದಲ್ಲಿ ಆರೋಪಿಗಳಾದ ಡಿಎಚ್ ಎಫ್ ಎಲ್ ಪ್ರವರ್ತಕರಾದ ಕಪಿಲ್ ಹಾಗೂ ಧೀರಜ್ ವಾಧ್ವಾನ್ ಅವರನ್ನು ಸಿಬಿಐ ವಶಕ್ಕೆ ಪಡೆಯಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಭಾನುವಾರ ಹೇಳಿದ್ದಾರೆ.

 

"ಸಿಬಿಐ ತಂಡವು ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರನ್ನು ಕಸ್ಟಡಿಗೆ ಪಡೆದುಕೊಂಡಿದೆ. ಸತಾರಾ ಪೊಲೀಸರು ಅವರಿಗೆ ಎಲ್ಲ ಅಗತ್ಯ ನೆರವು ನೀಡಿದ್ದಾರೆ. ಲಿಖಿತವಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಬೆಂಗಾವಲು ವಾಹನ ಮತ್ತು ಹದಿಮೂರು ಮಂದಿ ಭದ್ರತಾ ಸಿಬ್ಬಂದಿ ಜತೆಗೆ ಮುಂಬೈನ ತನಕ ಬಿಡಲಾಗಿದೆ. ಬಂಧನದ ಪ್ರಕ್ರಿಯೆಗಳು ನಡೆಯುತ್ತಿವೆ. ಕಾನೂನು ಎಲ್ಲರಿಗೂ ಒಂದೇ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಯೆಸ್ ಬ್ಯಾಂಕ್ ನಿಂದ ಡಿಎಚ್ ಎಫ್ ಎಲ್ ಗ್ರೂಪ್ 3700 ಕೋಟಿ ರುಪಾಯಿ ಸಾಲ ಪಡೆದಿತ್ತು. ಆ ಸಾಲವು "ಒತ್ತಡ"ದಲ್ಲಿತ್ತು. ಎರಡು ಸಂಸ್ಥೆಗಳ ಮಧ್ಯದ ಈ ವ್ಯವಹಾರ ಮತ್ತು ಅದರ ಪ್ರವರ್ತಕರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಇ.ಡಿ.ಯನ್ನು ಹೊರತುಪಡಿಸಿ, ಯೆಸ್ ಬ್ಯಾಂಕ್ ಹಗರಣದಲ್ಲಿ ಸಿಬಿಐ ಎಫ್ ಐಆರ್ ನಲ್ಲೂ ವಾಧ್ವಾನ್ ಸೋದರರ ಹೆಸರಿದೆ.

ಯೆಸ್ ಬ್ಯಾಂಕ್ ಹಗರಣದಲ್ಲಿ ಸಿಬಿಐ ವಶಕ್ಕೆ ಡಿಎಚ್ ಎಫ್ ಎಲ್ ಪ್ರವರ್ತಕರು

ಭೂಗತ ಪಾತಕಿ ಇಕ್ಬಾಲ್ ಮಿರ್ಚಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾನೂನು ಅಡಿಯಲ್ಲಿ ಇವರ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದ್ದು, ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುತ್ತಿದೆ.

English summary

Yes Bank Scam: DHFL Promoters In To CBI Custody

DHFL promoters took in to custody by CBI on Sunday in yes bank scam. Here is the complete details of the story.
Story first published: Sunday, April 26, 2020, 15:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X