For Quick Alerts
ALLOW NOTIFICATIONS  
For Daily Alerts

ಜೊಮ್ಯಾಟೊ ಐಪಿಒ: ಹೂಡಿಕೆದಾರರಿಗೆ ಶೇಕಡಾ 62ರಷ್ಟು ಲಾಭ

|

ಜೊಮ್ಯಾಟೊ ಲಿಮಿಟೆಡ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಅನ್ನು 76 ರೂಪಾಯಿಗೆ ಚಂದಾದಾರಿಕೆ ಮುಗಿಸಿದ ಬಳಿಕ ಇಂದು ಎನ್‌ಎಸ್‌ಇಯಲ್ಲಿ 120 ರೂ.ಗಳ ದರದಲ್ಲಿ ಪಟ್ಟಿ ಮಾಡಲಾಗಿದೆ. ಈ ಮೂಲಕ ಸುಮಾರು 60 ಪ್ರತಿಶತದಷ್ಟು ಅಧಿಕ ಲಾಭವಿದೆ.

 

ಜೊಮ್ಯಾಟೊ ಷೇರು ಬೆಳಿಗ್ಗೆ 11.40ರ ಸುಮಾರಿಗೆ ಶೇಕಡಾ 62 ಅಥವಾ 48.10 ರೂಪಾಯಿ ಏರಿಕೆಗೊಂಡು 124.20 ರೂಪಾಯಿ ತಲುಪಿದೆ. ಈ ಮೂಲಕ ಹೂಡಿಕೆದಾರರು ಭರ್ಜರಿ ಲಾಭಗಳಿಸಿದ್ದಾರೆ.

ಜೊಮ್ಯಾಟೊ ಮಾರುಕಟ್ಟೆ ಕ್ಯಾಪ್ 1 ಲಕ್ಷ ಕೋಟಿ ರೂ.

ಜೊಮ್ಯಾಟೊ ಮಾರುಕಟ್ಟೆ ಕ್ಯಾಪ್ 1 ಲಕ್ಷ ಕೋಟಿ ರೂ.

ಪಟ್ಟಿ ಮಾಡಿದ ಸ್ವಲ್ಪ ಸಮಯದ ನಂತರ, ಜೊಮ್ಯಾಟೊ ಷೇರುಗಳು ಏರುತ್ತಲೇ ಇದ್ದವು. ಬೆಳಿಗ್ಗೆ 10.30 ರ ಹೊತ್ತಿಗೆ ಕಂಪನಿಯ ಷೇರು ಎನ್‌ಎಸ್‌ಇಯಲ್ಲಿ 138.50 ರೂ.ಗೆ ತಲುಪಿದೆ. ಕಂಪನಿಯ ಷೇರುಗಳು ಈ ದರದಲ್ಲಿ ಬಂದ ನಂತರ, ಅದರ ಮಾರುಕಟ್ಟೆ ಕ್ಯಾಪ್ 1 ಲಕ್ಷ ಕೋಟಿ ರೂ. ತಲುಪಿದೆ. ಈಗ ಇದು ಮಾರುಕಟ್ಟೆ ಕ್ಯಾಪ್ ವಿಷಯದಲ್ಲಿ ದೇಶದ 45 ನೇ ಅತಿದೊಡ್ಡ ಕಂಪನಿಯಾಗಿದೆ. ಇಂದು ಜೊಮಾಟೊ ಷೇರುಗಳ ಮೇಲಿನ ಸರ್ಕ್ಯೂಟ್ ಅನ್ನು 139.20 ರೂ. ಎಂದು ನಿಗದಿಪಡಿಸಲಾಗಿದೆ.

ಜೊಮ್ಯಾಟೊ ಷೇರುಗಳನ್ನು ಯಾವ ಬೆಲೆಯಲ್ಲಿ ಬಿಡುಗಡೆ ಮಾಡಿದೆ

ಜೊಮ್ಯಾಟೊ ಷೇರುಗಳನ್ನು ಯಾವ ಬೆಲೆಯಲ್ಲಿ ಬಿಡುಗಡೆ ಮಾಡಿದೆ

ಜೊಮ್ಯಾಟೊ ತನ್ನ ಐಪಿಒ ಬೆಲೆ ಪಟ್ಟಿಯನ್ನು 72 ರೂ.ನಿಂದ 76 ರೂಗಳಿಗೆ ನಿಗದಿಪಡಿಸಿತ್ತು. ಆದರೆ ಇದರ ನಂತರ ಈ ಐಪಿಒ 38 ಬಾರಿ ಚಂದಾದಾರರಾಗಿದ್ದಾರೆ. ಇದು ಕ್ಯೂಐಬಿ ವಿಭಾಗದಲ್ಲಿ ಶೇ 54.71, ಎನ್‌ಐಐ ವಿಭಾಗದಲ್ಲಿ ಶೇ 34.80 ಮತ್ತು ಚಿಲ್ಲರೆ ವಿಭಾಗದಲ್ಲಿ ಶೇ 7.87 ರಷ್ಟಿದೆ.

5 ವರ್ಷದ ಅವಧಿಗೆ 10 ಅತ್ಯುತ್ತಮ ಬಡ್ಡಿ ಸಿಗುವ ಎಫ್‌ಡಿ ಯೋಜನೆಗಳು

ಜೊಮ್ಯಾಟೊ ಐಪಿಒನ ಗಾತ್ರ
 

ಜೊಮ್ಯಾಟೊ ಐಪಿಒನ ಗಾತ್ರ

ಜೊಮ್ಯಾಟೊ ತನ್ನ ಐಪಿಒನಲ್ಲಿ 195 ಷೇರುಗಳ ಗಾತ್ರವನ್ನು ನಿಗದಿಪಡಿಸಿದೆ. ಚಿಲ್ಲರೆ ಹೂಡಿಕೆದಾರರು ಈ ಐಪಿಒದಲ್ಲಿ ಗರಿಷ್ಠ 13 ಲಾಟ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಜೊಮ್ಯಾಟೊ ಐಪಿಒ ಜುಲೈ 16 ರವರೆಗೆ ಹೂಡಿಕೆಗೆ ಮುಕ್ತವಾಗಿತ್ತು.

ಚಿಲ್ಲರೆ ಹೂಡಿಕೆದಾರರಿಗೆ ಜೊಮ್ಯಾಟೊ 10 ಪ್ರತಿಶತ ಷೇರುಗಳನ್ನು ಕಾಯ್ದಿರಿಸಿದೆ

ಚಿಲ್ಲರೆ ಹೂಡಿಕೆದಾರರಿಗೆ ಜೊಮ್ಯಾಟೊ 10 ಪ್ರತಿಶತ ಷೇರುಗಳನ್ನು ಕಾಯ್ದಿರಿಸಿದೆ

ಜೊಮ್ಯಾಟೊ ತನ್ನ ಐಪಿಒದಲ್ಲಿ ಚಿಲ್ಲರೆ ಹೂಡಿಕೆದಾರರಿಗೆ ಶೇ 10 ರಷ್ಟು ಷೇರುಗಳನ್ನು ಕಾಯ್ದಿರಿಸಿದೆ. ಈ ಪಾಲು ಸುಮಾರು 900 ಕೋಟಿ ರೂ. ಆಗಿದೆ. ಅಂದರೆ, ಈ ಐಪಿಒದಲ್ಲಿ ಚಿಲ್ಲರೆ ಹೂಡಿಕೆದಾರರಿಗೆ 900 ಕೋಟಿ ರೂ.ಗಳ ಷೇರುಗಳನ್ನು ನೀಡಲಾಗಿದೆ. ಅದೇ ಸಮಯದಲ್ಲಿ, ಜೊಮ್ಯಾಟೊ ತನ್ನ ಐಪಿಒನಲ್ಲಿ, ಕಂಪನಿಯ ಉದ್ಯೋಗಿಗಳಿಗೆ ಷೇರು ಕೋಟಾವನ್ನು ನಿಗದಿಪಡಿಸಿದೆ. ಈ ಕೋಟಾ 65 ಲಕ್ಷ ಷೇರುಗಳಿಗೆ ಇತ್ತು.

English summary

Zomato IPO Listing: Share Price Holding Above Rs 120 At 62 percent Premium To IPO

Zomato shares made a strong stock market debut on Friday, listing at Rs 115 apiece on BSE. Zomato shares surged 51.32 per cent or Rs 39 from IPO price of Rs 76
Story first published: Friday, July 23, 2021, 12:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X