For Quick Alerts
ALLOW NOTIFICATIONS  
For Daily Alerts

PAN ಅಥವಾ ಆಧಾರ್ ಸಂಖ್ಯೆಯನ್ನು ನೀಡದಿದ್ದಲ್ಲಿ 20% ಟಿಡಿಎಸ್ ಕಡಿತ

|

ಒಂದು ವೇಳೆ ಉದ್ಯೋಗಿಯು ಪರ್ಮನೆಂಟ್ ಅಕೌಂಟ್ ನಂಬರ್ (PAN) ಅಥವಾ ಆಧಾರ್ ಸಂಖ್ಯೆಯನ್ನು ನೀಡದಿದ್ದಲ್ಲಿ ಉದ್ಯೋಗದಾತರು 20% ಮತ್ತು ಅದಕ್ಕಿಂತ ಹೆಚ್ಚಿನ ದರದಲ್ಲಿ ಕಡ್ಡಾಯವಾಗಿ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟ್ ಅಟ್ ಸೋರ್ಸ್) ಕಡಿತ ಮಾಡುವಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಸೂಚಿಸಿದೆ.

ಈಚೆಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ವೇತನದ ಮಾಹಿತಿಯ ಟಿಡಿಎಸ್ ಸ್ಟೇಟ್ ಮೆಂಟ್ ನಲ್ಲಿ ಸಿಬ್ಬಂದಿಯ ಪಾನ್ ಅಥವಾ ಆಧಾರ್ ನಂಬರ್ ಅನ್ನು ನಮೂದಿಸಬೇಕು ಎನ್ನಲಾಗಿದೆ. ಆದಾಯ ತೆರಿಗೆ ಕಾಯ್ದೆ ಪ್ರಕಾರ, ಆದಾಯ ಗಳಿಸುವ ಯಾರೇ ಆಗಲಿ, ತಮ್ಮ ಉದ್ಯೋಗದಾತರಿಗೆ ಪಾನ್ ಮಾಹಿತಿ ನೀಡಬೇಕು. ಒಂದು ವೇಳೆ ನೀಡದಿದ್ದಲ್ಲಿ ಕಾಯ್ದೆ ಪ್ರಕಾರ ಅಥವಾ ಸದ್ಯಕ್ಕೆ ಜಾರಿ ಇರುವುದು ಅಥವಾ ಇಪ್ಪತ್ತು ಪರ್ಸೆಂಟ್ ಈ ಪೈಕಿ ಯಾವುದು ಹೆಚ್ಚೋ ಅಷ್ಟು ಕಡಿತ ಮಾಡಬೇಕು.

 

ಇಪ್ಪತ್ತು ವರ್ಷದಲ್ಲೇ ಮೊದಲ ಬಾರಿಗೆ ನೇರ ತೆರಿಗೆ ಸಂಗ್ರಹದಲ್ಲಿ ಕುಸಿತ

ಒಂದು ವೇಳೆ TDS ಅನ್ನು 20% ಕಡಿತಗೊಳಿಸಿದಲ್ಲಿ ನಾಲ್ಕು ಪರ್ಸೆಂಟ್ ಆರೋಗ್ಯ ಮತ್ತು ಶಿಕ್ಷಣ ಸೆಸ್ ಕಡಿತ ಮಾಡುವ ಅಗತ್ಯ ಇಲ್ಲ ಎನ್ನಲಾಗಿದೆ. ಒಂದು ವೇಳೆ ಉದ್ಯೋಗಿಯ ಆದಾಯವು ಎರಡೂವರೆ ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ಟಿಡಿಎಸ್ ಕಡಿತ ಮಾಡುವ ಅಗತ್ಯ ಇಲ್ಲ.

PAN ಅಥವಾ ಆಧಾರ್ ಸಂಖ್ಯೆಯನ್ನು ನೀಡದಿದ್ದಲ್ಲಿ 20% ಟಿಡಿಎಸ್ ಕಡಿತ

ನೇರ ತೆರಿಗೆ ಸಂಗ್ರಹದ ಗುರಿ ತಲುಪಲು ಬಹಳ ಶ್ರಮಿಸುತ್ತಿರುವ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಈ ಸೂಚನೆ ಬಂದಿದೆ. ಒಂದು ವೇಳೆ TDS ಕಡಿತ ಮಾಡದಿದ್ದಲ್ಲಿ ಉದ್ಯೋಗದಾತರಿಗೆ ದಂಡ ಬೀಳುತ್ತದೆ. ಅದರ ಜತೆಗೆ ಚಲನ್ ನಲ್ಲಿ ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ (TAN) ನಮೂದಿಸಬೇಕು. TDS ಪ್ರಮಾಣಪತ್ರ ಇತರ ದಾಖಲೆಗಳನ್ನು ಲಗತ್ತಿಸಬೇಕು. ಒಂದು ವೇಳೆ ತಪ್ಪಿದಲ್ಲಿ 10,000 ರುಪಾಯಿ ದಂಡ ಹಾಕಲಾಗುತ್ತದೆ ಎಂದು ತಿಳಿಸಲಾಗಿದೆ.

English summary

20 Percent TDS For Who Not Providing PAN Or Aadhaar Details To Employer

The Income Tax Department has directed that employers must deduct tax at source at 20% or a higher rate if employees fail to disclose their PAN or Aadhaar number.
Story first published: Friday, January 24, 2020, 20:10 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more