For Quick Alerts
ALLOW NOTIFICATIONS  
For Daily Alerts

ಫ್ಯೂಚರ್ ಗ್ರೂಪಿನಿಂದ 'ಕಡಿಮೆ ಕಂತಿನ ಹೆಚ್ಚು ಹೂಡಿಕೆ ವಿಮೆ'

By Mahesh
|

ಮುಂಬೈ, ಡಿ. 08: ಜಾಗತಿಕ ಇನ್ಶೂರೆನ್ಸ್‌ ಗ್ರೂಪ್‌ ಎನಿಸಿರುವ ಫ್ಯೂಚರ್ ಗ್ರೂಪ್‌ (ಎಫ್ ಜಿಐಎಲ್ ಐ) ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ ಮೊಟ್ಟ ಮೊದಲ ಫ್ಲೆಕ್ಸಿ ಆನ್ ಲೈನ್ ಟರ್ಮ್ ವಿಮೆ ಯೋಜನೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

 

ಒಂದು ಮತ್ತು ಐಐಟಿಎಲ್‌ - ಒಂದು ಬ್ಯಾಂಕೇತರ ಹಣಕಾಸು ಕಂಪೆನಿ (ಎನ್‌ಬಿಎಫ್‌ಸಿ)ಗಳ ನಡುವಿನ ಒಂದು ಜಂಟಿ ಸಾಹಸೋದ್ಯಮವಾಗಿರುವ ಫ್ಯೂಚರ್ ಜೆನೆರಾಲಿ ಇಂಡಿಯಾ ಲೈಫ್‌ ಇನ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ (ಎಫ್‌ಜಿಐಎಲ್‌ಐ) ತನ್ನ ಪ್ರಥಮ ಫ್ಲೆಕ್ಸಿ ಆನ್‌ಲೈನ್‌ ಟರ್ಮ್‌ ಇನ್ಶೂರೆನ್ಸ್‌ ಪ್ಲಾನ್‌ ಘೋಷಿಸಿತ್ತು. ಅದು '1 ಕೋಟಿ ವಿಮಾರಕ್ಷಣೆಗಾಗಿ '4,೦00/-ದಷ್ಟು ಕಡಿಮೆ ಪ್ರಿಮಿಯಮ್‌ನಲ್ಲಿ ಲಭ್ಯವಿರುವ ಒಂದು ಶುದ್ಧ ಅವಧಿ ವಿಮಾ ಯೋಜನೆಯಾಗಿದೆ.[ಯಾವುದೆ ವಿಮೆ ಮಾಡಿಸುವ ಮುನ್ನ ಇದನ್ನೊಮ್ಮೆ ಓದಿ]

 

ಪ್ಲಾನ್‌ ಏಕಮಾತ್ರವಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ ಮತ್ತು ಸರಳ ಹಾಗೂ ಖಾತರಿ ಹೊಂದಿರುವ ವಿಮಾ ಸಮಾಧಾನಗಳನ್ನು ಕೋರುವ ವ್ಯಕ್ತಿಗಳ ಮೇಲೆ ವಿಶೇಷವಾಗಿ ಲಕ್ಷ್ಯ ಇರಿಸಿದೆ. ಈ ಯೋಜನೆಯು ಅಪಾಯವನ್ನು ಕನಿಷ್ಠಗೊಳಿಸುತ್ತಿರುವಾಗಲೇ, ಮಧ್ಯಮ ಕಾಲಾವಧಿಯಲ್ಲಿ ಒಂದು ಸ್ಥಿರವಾದ ಒದಗಿಸುತ್ತದೆ ಮತ್ತು ಕುಟುಂಬದ ಮಾಸಿಕ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲು ಹೆಚ್ಚು ದೀರ್ಘ ಅವಧಿಯ ಕಾಲ ಹಣವನ್ನು ಒದಗಿಸುತ್ತದೆ. [ಆನ್ ಲೈನ್ ನಲ್ಲಿ ಎಲ್ ಐಸಿ ಪಾಲಿಸಿ ಚೆಕ್ ಅಪ್]

ಫ್ಯೂಚರ್ ಜೆನೆರಾಲಿ ಫ್ಲೆಕ್ಸಿ ಆನ್‌ಲೈನ್‌ ಟರ್ಮ್‌ ಪ್ಲಾನ್‌ ಒಂದು "Monthly Income Protection' ಆಯ್ಕೆಯನ್ನು ತನ್ನ ವಿಮಾದಾರರಿಗೆ ನೀಡುತ್ತಿದೆ. ಇದರಿಂದ ನಿವೃತ್ತಿಯ ವಯಸ್ಸಿನ (60 ವರ್ಷಗಳು) ತನಕ ಒಂದು ನಿಶ್ಚಿತ ಮೊತ್ತದ ಹಣವನ್ನು ಪಡೆಯಬಹುದು ಮತ್ತು ಪ್ರತಿ ತಿಂಗಳು ಪಡೆಯುವ ವೇತನಕ್ಕೆ ಒಂದು ಪರ್ಯಾಯ ರೂಪದಲ್ಲಿ ಕಾರ್ಯ ಮಾಡುತ್ತದೆ.

ಫ್ಯೂಚರ್ ಗ್ರೂಪಿನಿಂದ 'ಕಡಿಮೆ ಕಂತಿನ ಹೆಚ್ಚು ಹೂಡಿಕೆ ವಿಮೆ'

ಹಣದುಬ್ಬರ ರಕ್ಷಣೆಯೊಂದಿಗಿನ 'ಇನ್‌ಕ್ರೀಸಿಂಗ್‌ ಮಂತ್‌ಲೀ ಇನ್‌ಕಮ್‌ ಪ್ರೊಟೆಕ್ಷನ್‌' ಎಂದು ಕರೆಯಲ್ಪಡುವ ಇನ್ನೊಂದು ಆಯ್ಕೆಯನ್ನು ನೀಡಲಾಗುತ್ತಿದೆ, ಅಲ್ಲಿ ವಿಮಾರಕ್ಷೆಯು ವಿಮಾಯಿತ ವ್ಯಕ್ತಿಯ ಮರಣದ ನಂತರವೂ ಕೂಡ ವಾರ್ಷಿಕ 10% ದರದಲ್ಲಿ ಬೆಳೆಯುತ್ತದೆ.[ಯುಲಿಪ್ ನಲ್ಲಿ ಹೂಡಿಕೆಯಿಂದ ಲಾಭ ಹಲವಾರು]

ಜೆನೆರಾಲಿಯ ಕುರಿತು: €66 ಬಿಲಿಯನ್‌ನ ಜೆನೆರಾಲಿ ಸಮೂಹವು 2013ರ ಒಟ್ಟು ಪ್ರಿಮಿಯಮ್‌ ಆದಾಯದೊಂದಿಗೆ ವಿಶ್ವದ ಅತ್ಯಂತ ದೊಡ್ಡ ವಿಮಾ ಒದಗಣೆಕಾರರಲ್ಲಿ ಒಂದಾಗಿದೆ.

ವಿಶ್ವದಾದ್ಯಂತ 60ಕ್ಕೂ ಹೆಚ್ಚಿನ ದೇಶಗಳಲ್ಲಿ 65 ಮಿಲಿಯ ಗ್ರಾಹಕರಿಗೆ ಸೇವೆ ಸಲ್ಲಿಸುವ 77,000 ಉದ್ಯೋಗಿಗಳೊಂದಿಗೆ ಸಮೂಹವು ಪಶ್ಚಿಮ ಯುರೋಪಿನ ಮಾರುಕಟ್ಟೆಗಳಲ್ಲಿ ಮುಂದಾಳುತ್ವದ ಸ್ಥಾನವನ್ನು ಪಡೆದಿದೆ ಮತ್ತು ಕೇಂದ್ರಿಯ ಪೂರ್ವ ಯುರೋಪ್‌ ಮತ್ತು ಏಷ್ಯಾದಲ್ಲಿನ ಮಾರುಕಟ್ಟೆಗಳಲ್ಲಿ ಹೆಚ್ಚು ಹೆಚ್ಚು ಪ್ರಮುಖ ಸ್ಥಾನವನ್ನು ಹೊಂದಿದೆ.

ಫ್ಯೂಚರ್ ಗ್ರೂಪಿನಿಂದ 'ಕಡಿಮೆ ಕಂತಿನ ಹೆಚ್ಚು ಹೂಡಿಕೆ ವಿಮೆ'

ಫ್ಯೂಚರ್ ಸಮೂಹದ ಕುರಿತು: ಫ್ಯೂಚರ್ ಸಮೂಹವು ಸೆಂಟ್ರಲ್‌, ಬಿಗ್‌ಬಜಾರ್ ಫುಡ್‌ಬಜಾರ್ ಹೋಮ್‌ಟೌನ್‌ ಮತ್ತು ಇಝೋನ್‌ಗಳನ್ನು ಒಳಗೊಂಡು ಭಾರತದ ಅತ್ಯಂತ ಜನಪ್ರಿಯ ರೀಟೈಲ್ ಸರಣಿಗಳನ್ನು ನಡೆಸುತ್ತದೆ. [ಅಂಚೆ ಇಲಾಖೆ ನೀಡುವ ಪ್ರಮುಖ 7 ವಿಮಾ ಯೋಜನೆಗಳು]

ಜೀವ ವಿಮೆ ಮತ್ತು ಸಾಮಾನ್ಯ ವಿಮೆಯಲ್ಲಿ ಅದರ ಸಂಬಂಧಪಟ್ಟ ವ್ಯವಹಾರವಲ್ಲದೆ ಸಮೂಹವು ಜಾರಿವ್ಯವಸ್ಥೆಯ ಆಧಾರ ರಚನೆ ಮತ್ತು ಪೂರೈಕೆ ಸರಣಿಯ ಕಾರ್ಯಕ್ಷೇತ್ರದಲ್ಲಿ ಮತ್ತು ಬ್ರಾಂಡ್‌ ವಿಕಾಸ ಪಡಿಸುವಿಕೆಯಲ್ಲಿ ಕೂಡ ಉಪಸ್ಥಿತಿಯನ್ನು ಹೊಂದಿದೆ. ಸಮೂಹವು ಭಾರತಾದ್ಯಂತ 90ಕ್ಕೂ ಹೆಚ್ಚಿನ ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಮತ್ತು 60 ಗ್ರಾಮೀಣ ಸ್ಥಾನಗಳಲ್ಲಿ 17 ಮಿಲಿಯಕ್ಕೂ ಹೆಚ್ಚಿನ ರಿಟೇಲ್‌ ಸ್ಥಳಾವಕಾಶದಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಸಮೂಹದ ರಿಟೇಲ್‌ ವಿನ್ಯಾಸಗಳು 300 ಮಿಲಿಯಕ್ಕೂ ಹೆಚ್ಚಿನ ಗ್ರಾಹಕರನ್ನು ಉತ್ಪನ್ನಗಳು ಮತ್ತು ಸೇವೆಗಳನ್ನು ಅದರ ರಿಟೇಲ್‌ ಸರಣಿಗಳಿಗೆ ಪೂರೈಸುವ 30,000ಕ್ಕೂ ಹೆಚ್ಚಿನ ಸಣ್ಣ ಮಾಧ್ಯಮ ಮತ್ತು ದೊಡ್ಡ ಉದ್ಯಮಗಳಿಗೆ ಜೋಡಿಸುತ್ತವೆ.

ಹೆಚ್ಚಿನ ಮಾಹಿತಿಗೆ ವಿಮೆ ಪರಿಮಿತಿಗಳನ್ನು ತಿಳಿಯಲು ಕಂಪನಿಯ ವೆಬ್ ಸೈಟ್ ಗೆ ಭೇಟಿ ನೀಡಿ (ಗುಡ್ ರಿಟರ್ನ್ಸ್.ಇನ್)

English summary

Know about Future Generali flexi online term plan

Future Generali India Life Insurance Company Ltd (FGILI) today announced the launch of its first Flexi Online Term Insurance Plan. The Future Generali Flexi Online Term Plan offers an option of a ‘Monthly Income Protection’ which provides a fixed sum of money until the retirement age (60 years) and acts as a substitute for the salary received every month.
Story first published: Tuesday, December 8, 2015, 17:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X