For Quick Alerts
ALLOW NOTIFICATIONS  
For Daily Alerts

ತೆರಿಗೆ ಉಳಿಸಲು ಎಚ್‌ಡಿಎಫ್‌ಸಿ ಯುಲಿಪ್‌ನಲ್ಲಿ ಹೂಡಿಕೆ ಮಾಡಿ

By Prasad
|

ಪ್ರತಿವರ್ಷ ಈ ಸಮಯ ಆದಾಯ ತೆರಿಗೆ ಕಟ್ಟುವ ಎಲ್ಲರಿಗೂ ಒಂದು ರೀತಿಯ ಚಟಪಡಿಕೆ, ದುಗುಡ ಮನೆಮಾಡಿರುತ್ತದೆ. ಯಾವ ಹಣಕಾಸು ಯೋಜನೆಯಲ್ಲಿ ಹಣ ಹೂಡಿದರೆ ತೆರಿಗೆ ಉಳಿಸಬಹುದು, ಯಾವ ಪ್ಲಾನ್ ಹೆಚ್ಚು ಲಾಭ ತರಬಹುದು ಎಂದು. ತೆರಿಗೆ ಉಳಿಸಲು ಹಲವಾರು ಯೋಜನೆಗಳಿವೆ. ಆದರೆ, ಈ ಎಲ್ಲ ಯೋಜನೆಗಳಲ್ಲಿ ಅತ್ಯುತ್ತಮವಾದದ್ದೆಂದರೆ ಯುಲಿಪ್ (ULIP - Unit Linked Insurance Plan).

 
ತೆರಿಗೆ ಉಳಿಸಲು ಎಚ್‌ಡಿಎಫ್‌ಸಿ ಯುಲಿಪ್‌ನಲ್ಲಿ ಹೂಡಿಕೆ ಮಾಡಿ

ಯುಲಿಪ್‌ನಿಂದ ಸಿಗುವ ಲಾಭಗಳೇನು?

1) ಸೆಕ್ಷನ್ 80ಸಿ ತೆರಿಗೆ ಲಾಭ

ಯಾರಾದರೂ ತೆರಿಗೆ ಉಳಿಸಲು ಯೋಚಿಸುತ್ತಿದ್ದರೆ ಯುಲಿಪ್ ಅತ್ಯುತ್ತಮವಾದದ್ದು. ಉಳಿದ ಪಿಪಿಎಫ್ ನಂಥ ಸಾಂಪ್ರದಾಯಿಕ ಯೋಜನೆಗಳಿಗೆ ಹೋಲಿಸಿದರೆ ಯುಲಿಪ್ ನಲ್ಲಿ ವಿಮೆ ಕವರೇಜ್ ಇರುತ್ತದೆ.

ವಾರ್ಷಿಕ ಪ್ರೀಮಿಯಂ ಕಟ್ಟಿದ್ದಕ್ಕಿಂತ 10 ಪಟ್ಟು ಹೆಚ್ಚು ಯುಲಿಪ್‌ನ ಮಿನಿಮಮ್ ಕವರೇಜ್ ನಿಂದ ಸಿಗುತ್ತದೆ. ಒಂದು ವೇಳೆ ನೀವು ವರ್ಷಕ್ಕೆ 50 ಸಾವಿರ ರು. ಹೂಡಿಕೆ ಮಾಡುತ್ತಿದ್ದರೆ, ಏನಾದರೂ ಹೆಚ್ಚುಕಡಿಮೆಯಾದರೆ ನಾಮನಿರ್ದೇಶಿತ ವ್ಯಕ್ತಿಗೆ ತಕ್ಷಣ 5 ಲಕ್ಷ ರು. ಸಿಗುತ್ತದೆ. ಅಲ್ಲದೆ, ಸ್ಕೀಂ ಇರುವವರೆಗೆ ಈಗಾಗಲೆ ಹೂಡಿಲಾಗಿರುವ ಮೊತ್ತ ಕೂಡ ಮುಂದುವರಿಯುತ್ತದೆ. ಟರ್ಮ್ ಪಾಲಿಸಿಯಷ್ಟು ವಿಮೆ ಕವರೇಜ್ ಇಲ್ಲದಿದ್ದರೂ ಇದು ಕಡಿಮೆಯೇನೂ ಇಲ್ಲ. ಹಾಗಾಗಿ, ನೀವು ಹೂಡಿದಷ್ಟು ಹಣ ಮತ್ತು ವಾರ್ಷಿಕ ಪ್ರೀಮಿಯಂನ ಹತ್ತರಷ್ಟು ಮೊತ್ತ ಪಾಲಿಸಿದಾರರಿಗೆ ಸಿಗುತ್ತದೆ. ಈ ಆದಾಯ ತೆರಿಗೆ ರಹಿತವಾಗಿರುತ್ತದೆ.

ಆದಾಯ ತೆರಿಗೆ ಕಾಯ್ದೆ 1961ರ 10(10ಡಿ) ಅಡಿಯಲ್ಲಿ ಅವಧಿ ಮುಕ್ತಾಯವಾದ ನಂತರ ದೊರೆಯುವ ಒಟ್ಟು ಹಣ ತೆರಿಗೆರಹಿತವಾಗಿರುತ್ತದೆ. ಆದರೆ, ಪ್ರತಿವರ್ಷದ ಪ್ರೀಮಿಯಂ, ನಿಗದಿಪಡಿಸಲಾದ ಮೂಲ ಮೊತ್ತದ ಶೇ.10ಕ್ಕಿಂತ ಹೆಚ್ಚಿರಬಾರದು.

2) ತೆರಿಗೆ ಉಳಿತಾಯ

ಇದರ ಮತ್ತೊಂದು ಲಾಭವೇನೆಂದರೆ, ಯುಲಿಪ್ ನಿಂದ ಬರುವ ಆದಾಯವೂ ತೆರಿಗೆರಹಿತವಾಗಿರುತ್ತದೆ. ಇದನ್ನು ಪಿಪಿಎಫ್ ಜೊತೆ ಹೋಲಿಸಲಾಗುತ್ತದೆ. ಪಿಪಿಎಫ್ ನಿಂದ ಸಿಗುವ ಬಡ್ಡಿ ಕೂಡ ತೆರಿಗೆರಹಿತವಾಗಿರುತ್ತದೆ. ಒಂದು ವಿಷಯ ನೆನಪಿನಲ್ಲಿಡಿ, ತೆರಿಗೆ ಉಳಿತಾಯದ ಯೋಜನೆಗಳಾದ ಬ್ಯಾಂಕ್ ಠೇವಣಿ, ಎನ್ಎಸ್‌ಸಿ ಮುಂತಾದವುಗಳಿಂದ ದಕ್ಕಿದ ಬಡ್ಡಿಗೆ ತೆರಿಗೆ ಹೇರಲಾಗುತ್ತದೆ.

3) ಆದಾಯವೂ ಜಾಸ್ತಿಯಿರುತ್ತದೆ

ಯುಲಿಪ್‌ನಲ್ಲಿ ನಿಗದಿತ ಆದಾಯವಿರುವುದಿಲ್ಲ. ಸಾಂಪ್ರದಾಯಿಕ ತೆರಿಗೆ ಉಳಿತಾಯದ ಯೋಜನೆಗಳಿಗಿಂತ ಆದಾಯ ಯುಲಿಪ್ ನಲ್ಲಿ ಜಾಸ್ತಿಯಿರುತ್ತದೆ. ಹೂಡಿಕೆ ಆಯ್ಕೆಯ ಆಧಾರದ ಮೇಲೆ ಆದಾಯವೂ ಬದಲಾಗುತ್ತಿರುತ್ತದೆ. ನೀವು ಈಕ್ವಿಟ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಆದಾಯ ಸಾಕಷ್ಟು ಜಾಸ್ತಿಯಿರುತ್ತದೆ ಅಥವಾ ಸ್ಟಾಕ್ ಮಾರುಕಟ್ಟೆ ವರ್ತಿಸಿದಂತೆ ಕಡಿಮೆಯೂ ಆಗಿರುತ್ತದೆ.

ಇನ್ಶೂರನ್ಸ್ ಪ್ರೀಮಿಯಂ ಶುಲ್ಕ, ಫಂಡ್ ಮ್ಯಾನೇಜ್ಮೆಂಟ್ ಶುಲ್ಕ ಮತ್ತು ಪಾಲಿಸಿ ಅಡ್ಮಿನಿಸ್ಟ್ರೇಷನ್ ಶುಲ್ಕಗಳಂಥ ಕೆಲ ಶುಲ್ಕಗಳು ಇರುತ್ತವೆ ಎಂಬುದನ್ನು ಪಾಲಿಸಿದಾರರು ಮನಗಾಣಬೇಕು.

4) ಲಿಕ್ವಿಡಿಟಿ

ಲಿಕ್ವಿಡಿಟಿಗೆ ಸಂಬಂಧಿಸಿದಂತೆ ಪಿಪಿಎಫ್‌ಗೆ ಹೋಲಿಸಿದರೆ ಯುನಿಟ್ ಲಿಂಕ್ಡ್ ಇನ್ಶೂರನ್ಸ್ ಪ್ಲಾನ್‌ನಲ್ಲಿ ಹೆಚ್ಚಿನ ಲಾಭವಿದೆ. ಯುಲಿಪ್ ನಲ್ಲಿ ಹೂಡಿದ ಹಣವನ್ನು 5 ವರ್ಷಗಳಾದ ನಂತರ ಹಿಂದಕ್ಕೆ ಪಡೆಯಬಹುದು. ಆದರೆ, ಪಿಪಿಎಫ್‌ನಲ್ಲಿ ಹೂಡಿದ ಹಣವನ್ನು 7 ವರ್ಷಗಳಾದ ನಂತರ ಭಾಗಶಃ ಹಣವನ್ನು ಮಾತ್ರ ಹಿಂಪಡೆಯಬಹುದು. ಪೂರ್ತಿ ಹಣವನ್ನು 15 ವರ್ಷಗಳಾದ ನಂತರವಷ್ಟೇ ಹಿಂದಕ್ಕೆ ಪಡೆಯಲು ಸಾಧ್ಯವಿದೆ.

ಅಂತಿಮವಾಗಿ...

ಸೆಕ್ಷನ್ 80ಸಿನಲ್ಲಿ ತೆರಿಗೆ ಉಳಿಸಬೇಕಿದ್ದರೆ ಯಾವ ಪ್ಲಾನಿನಲ್ಲಿ ಹೂಡಿಕೆ ಮಾಡಬೇಕು ಎಂಬುದು ಅವರವರ ಆಯ್ಕೆ. ಮನಿ ಮಾರ್ಕೆಟ್ ಸ್ಕೀಂನಲ್ಲಿ ಹೂಡಿಕೆ ಮಾಡಿದರೆ ಆದಾಯ ಕಡಿಮೆ. ಏಕೆಂದರೆ, ಹಲವಾರು ಶುಲ್ಕಗಳಿರುತ್ತದೆ. ಆದರೆ, ಇನ್ಶೂರನ್ಸ್ ಕವರೇಜ್ ಮಾತ್ರ ಚೆನ್ನಾಗಿರುತ್ತದೆ. ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದಾದ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಆದಾಯವೂ ಹೆಚ್ಚು. ಉಳಿದೆಲ್ಲ ತೆರಿಗೆ ಉಳಿತಾಯದ ಯೋಜನೆಗಳಂತೆ ಯುಲಿಪ್ ಲಿಕ್ವಿಡಿಟಿ ಕೂಡ ಇರುತ್ತದೆ. ಲಾಕಿನ್ ಅವಧಿ 5 ವರ್ಷವಿರುತ್ತದೆ.

ಒಟ್ಟಾರೆಯಾಗಿ, ಎಚ್‌ಡಿಎಫ್‌ಸಿಯ 'Click2Invest-ULIPs' ಯೋಜನೆಯಲ್ಲಿ ಹೂಡಿಕೆ ಮಾಡುವುದು ಸೂಕ್ತ. ಇನ್ಶೂರನ್ಸ್ ಕವರೇಜ್ ಚೆನ್ನಾಗಿರುತ್ತದೆ ಮತ್ತು ಬರುವ ಲಾಭ ತೆರಿಗೆರಹಿತವಾಗಿರುತ್ತದೆಯಷ್ಟೇ ಅಲ್ಲ, ಇದರಿಂದ ಬರುವ ಆದಾಯವೂ ಹೆಚ್ಚಾಗಿರುತ್ತದೆ. ಇನ್ನೇಕೆ ತಡ ಈ ಯುಲಿಪ್ ನಲ್ಲಿ ಹೂಡಿಕೆ ಮಾಡಿ.

Read in English: Why HDFC Life
English summary

Why HDFC Life Click2Invest-ULIPs Makes Tax Savings Sense?

It's the time of the year, when individuals are deciding on various tax planning instruments. Among the many instruments, that provide you tax benefits is the Unit Linked Insurance Plans (ULIP). It is recommended to invest in HDFC 'Click2Invest-ULIPs', as it has good insurance coverage, the returns are high and tax free.
Read in English: Why HDFC Life
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X