For Quick Alerts
ALLOW NOTIFICATIONS  
For Daily Alerts

ನಿಮಗಾಗಿ 7 ಅತ್ಯುತ್ತಮ ಆರೋಗ್ಯ ಪಾಲಿಸಿಗಳು

By Siddu Thorvat
|

ಜೀವನದಲ್ಲಿ ಕಷ್ಟಗಳಾಗಲಿ, ಆನಾರೋಗ್ಯವಾಗಲಿ ಹೇಳಿ ಕೇಳಿ ಬರುವಂತದಲ್ಲ. ಇಂದಿನ ಕಾಲದಲ್ಲಿ ಆರೋಗ್ಯವಂತರಾಗಿ ಬಾಳುವುದು ತುಂಬ ಮುಖ್ಯವಾಗಿದೆ. ಕೆಲ ಸಂದರ್ಭಗಳಲ್ಲಿ ಕ್ಯಾನ್ಸರ್ ನಂತಹ ಕೆಟ್ಟ ಕಾಯಿಲೆಗಳು ಎದುರಾದಾಗ ಕಂಗಾಲಾಗಿ ಬಿಡುತ್ತೇವೆ. ಅಲ್ಲದೆ ತುಂಬಾ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಆರೋಗ್ಯ ಪಾಲಿಸಿಗಳನ್ನು ಮಾಡಿಸುವ ಮುಂದಾಲೋಚನೆ ನಮಗಿರಬೇಕಾಗುತ್ತದೆ. ಆರೋಗ್ಯ ಪಾಲಿಸಿಗಳನ್ನು ಕಾಯಿಲೆ ಬಂದಾಗಲೇ ಮಾಡಬೇಕೆಂದೆನಿಲ್ಲ. ಮುಂಚಿತವಾಗಿ ಮಾಡುವುದರಿಂದ ಆಪತ್ ಕಾಲದಲ್ಲಿ ಆಪತ್ಬಾಂಧವನಾಗಿ ಅವು ಕೈಹಿಡಿಯುತ್ತವೆ.

ನಮ್ಮ ದೇಶದಲ್ಲಿ ನೂರಾರು ಆರೋಗ್ಯ ಪಾಲಿಸಿ/ವಿಮೆಗಳಿದ್ದು, ಅವುಗಳಲ್ಲಿ ಕೆಲ ಮುಖ್ಯ ಆರೋಗ್ಯ ಪಾಲಿಸಿಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ. ಭವಿಷತ್ತಿನಲ್ಲಿ ಇವು ಉತ್ತಮ ಪರಿಹಾರಗಳನ್ನು ಕೊಡಬಲ್ಲವು.

1. ಅಫೋಲೊ ಮ್ಯುನಿಚ್
 

1. ಅಫೋಲೊ ಮ್ಯುನಿಚ್

ಈ ಪ್ರಮಖವಾದ ವಿಮೆಯ ಅಡಿಯಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ಗಂಭೀರ ರೋಗಗಳು, ವೈದ್ಯಕೀಯ ಪರಿಣಾಮ ಅಥವಾ ಶಸ್ತ್ರಚಿಕಿತ್ಸೆಗಳ ಮೇಲೆ ನಗದು ಹಣವನ್ನು ನೀಡಲಾಗುತ್ತದೆ.

ಗಂಭೀರ ಅನಾರೋಗ್ಯವನ್ನು ಸರಿಪಡಿಸಲು ಇದು ಅತ್ಯುತ್ತಮ ಪಾಲಿಸಿಯಾಗಿದೆ. 10 ಲಕ್ಷದ ಪಾಲಿಸಿ ಮೇಲೆ 10,000 ರೂ. ವಿಮೆ ಸಿಗುತ್ತದೆ.

2. ರೆಲಿಗೆರ್ ಆರೋಗ್ಯ ವಿಮೆ

20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳಿಗೆ ರೆಲಿಗೆರ್ ಆರೋಗ್ಯ ವಿಮೆ ಅನ್ವಯಿಸುತ್ತದೆ. ವೈಯಕ್ತಿಕವಾಗಿ ಅಪಘಾತವಾದರೆ 100% ಮೊತ್ತವನ್ನು ನೀಡಲಾಗುತ್ತದೆ.

ಈ ಪಾಲಿಸಿಯ ಅಡಿಯಲ್ಲಿ ಆರೋಗ್ಯವನ್ನು ಮೇಲಿಂದ ಮೇಲೆ ಪರಿಶೀಲಿಸುತ್ತಿರಬೇಕು. ಈ ವಿಮೆ 14,000 ರೂ.ಗಳಿಗಿಂತಲೂ ಕಡಿಮೆ ಇರುತ್ತದೆ.

3. ಭಾರ್ತಿ ಆಕ್ಷಾ ಹೆಲ್ತ್ ಕ್ರಿಟಿಕಲ್ ಇಲ್ನೆಸ್

20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಬರುತ್ತವೆ ಹಾಗೂ ಶೇ. 5 ಬೋನಸ್ ಪಡೆಯಲು ಸಾಧ್ಯವಿಲ್ಲ. ಎಲ್ಲ ಆರೋಗ್ಯ ವಿಮೆಗಳಿಗೆ 80D ಅಡಿಯಲ್ಲಿ ತೆರಿಗೆ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

4. ಏಗೊನ್(Aegon) ಲೈಫ್ ಐ ಕ್ಯಾನ್ಸರ್
 

4. ಏಗೊನ್(Aegon) ಲೈಫ್ ಐ ಕ್ಯಾನ್ಸರ್

ಏಗೊನ್(Aegon) ಲೈಫ್ ಐ ಕ್ಯಾನ್ಸರ್ ಯಾವುದೇ ನಿರ್ಬಂಧಗಳಿಲ್ಲದೆ ಇಲ್ಲಾ ಪ್ರಕಾರದ ಕ್ಯಾನ್ಸರ್ ನಿಗ್ರಹಿಸಲು ಸಹಕಾರಿಯಾಗಿದೆ. ವಿಮೆಯ ಮೊತ್ತವನ್ನು ಕ್ಯಾನ್ಸರಿನ ವಿವಿಧ ಹಂತಗಳಲ್ಲಿ ಪಾವತಿಸಲಾಗುತ್ತದೆ.

ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾಗ 150% ಮೊತ್ತದ ಸೌಲಭ್ಯ ಒದಗಿಸಲಾಗುತ್ತದೆ. 10 ಲಕ್ಷದ ಪಾಲಿಸಿ ಮೇಲೆ 4036 ರೂ. ಪ್ರಿಮಿಯಂ ಮೊತ್ತ ಇರುತ್ತದೆ.

5. ಎಡೆಲ್ವಿಯೆಸ್ ಟೊಕಿಯೊ ದಿಂದ ಇಟಿ ಸರ್ಟಿಫಿಕೇಟ್

ಈ ಪಾಲಿಸಿಯ ಅಡಿಯಲ್ಲಿ ಮೂರಕ್ಕಿಂತಲು ಹೆಚ್ಚಿನ ಸಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದು 17 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳನ್ನು ಒಳಗೊಂಡಿರುತ್ತದೆ.

1 ಕೋಟಿಯಷ್ಟು ಭಾರಿ ಮೊತ್ತವನ್ನು ಪಡೆಯಬಹುದಾಗಿದೆ. 10 ಲಕ್ಷ ರೂ. ಕವರ್ ಮಾಡಲು ೫೯೯೦ ರೂ.ಗಳನ್ನು ನೀವು ಭರಿಸಬೇಕಾಗುತ್ತದೆ.

6. HDFC ಲೈಫ್ ಕ್ಯಾನ್ಸರ್ ಕೇರ್ ಸಿಲ್ವರ್

ಒಂದು ಸಲ ಕ್ಯಾನ್ಸರ್ ಇದೆಯೆಂದು ಪತ್ತೆಯಾದಲ್ಲಿ ನಿಮಗೆ ಭಾರಿ ಮೊತ್ತ ಸಿಗುತ್ತದೆ. ಒಂದು ವೇಳೆ ನೀವು 10 ಲ್ಷಕ ಗಳ ಕವರೆಜ್ ಪಡೆಯಬೇಕೆಂದು ಬಯಸಿದ್ದಲ್ಲಿ ಪ್ರಿಮಿಯಂ ಮೊತ್ತ 2048 ರೂ. ಆಗಿರುತ್ತದೆ. ಈ ಪಾಲಿಸಿಯ ಅಡಿಯಲ್ಲಿ ಪ್ರಿಮಿಯಂ 3 ವರ್ಷ ಬಿಟ್ಟು ಕೊಡುವಿಕೆಗೆ ಅವಕಾಶ ಇರುತ್ತದೆ.

7. ಮ್ಯಾಕ್ಸ್ ಬ್ಯುಪಾ ಆರೋಗ್ಯ ಅಶ್ಯೂರೆನ್ಸ್ ಕ್ರಿಟಿಕಲ್ ಇಲ್ನೆಸ್ (MAX Bupa Health Assurance Critical Illness )

20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಗುಣಪಡಿಸಲಾಗುತ್ತವೆ. ಈ ಪಾಲಿಸಿ ಅಡಿಯಲ್ಲಿ ಯಾವುದೇ ವೈದ್ಯಕೀಯ ಅವಶ್ಯಕತೆ ಇರುವುದಿಲ್ಲ. ಹೆಚ್ಚು ಕಡಿಮೆ 8300 ರೂ. ಪ್ರಿಮಿಯಂ ಮೊತ್ತವಾಗಿರುತ್ತದೆ.

English summary

7 Best Critical Illness Policies That You Should Take

Critical illness coverage through health policies are always good, as they avoid a financial strain on you and your family members. The treatment of some diseases like cancer can be horribly expensive. Here are 7 critical illness policies that offer good coverage.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more