For Quick Alerts
ALLOW NOTIFICATIONS  
For Daily Alerts

ATM ನೊಳಗೆ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್‌ ಸಿಕ್ಕೊಂಡ್ರೆ? ಏನು ಮಾಡಬಹುದು...

By Siddu
|

ATM ಗಳು (Automated Teller Machine) ಬಂದ ನಂತರ ಬ್ಯಾಂಕುಗಳಿಗೆ ಹೋಗಿಯೇ ಹಣವನ್ನು ಪಡೆಯಬೇಕು ಎಂಬ ತಲೆನೋವು ಕಡಿಮೆಯಾಗಿದೆ. ಹೀಗಾಗಿ ಯಾವಾಗ ಬೇಕಾದರು ATM ಗಳಿಗೆ ಹೋಗಿ ಹಣವನ್ನು ಪಡೆಯಬಹುದಾಗಿದೆ.

ನಾವು Automated Teller Machine (ATM) ನಲ್ಲಿ ಹಣ ತೆಗೆಯಬೇಕಾದರೆ ಮೊದಲು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್‌ ನ್ನು ಸ್ವೈಪ್ ಮಾಡಿ ಆಮೇಲೆ ಅದನ್ನು ಹಿಂತೆಗೆಯಬೇಕು. ಇನ್ನೂ ಕೆಲ ಮೆಶಿನ್ ಗಳು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್‌ ನ್ನು ಒಳಗಡೆ ತೆಗೆದು ವ್ಯವಹಾರ ಪ್ರಕ್ರಿಯೆ ಮುಗಿದ ನಂತರ ಹೊರಕ್ಕೆ ತಳ್ಳುತ್ತವೆ. [ಹಣ ಬಾರದಿದ್ದರೆ, ಕಾರ್ಡ್ ಸಿಕ್ಕಿಕೊಂಡರೆ ಯಾರು ಹೊಣೆ?]

ATM ನೊಳಗೆ ಕಾರ್ಡ್‌ ಸಿಕ್ಕೊಂಡ್ರೆ? ಏನು ಮಾಡಬಹುದು...

ಕೆಲವು ಮೆಶಿನ್ ಗಳ ಸಮಸ್ಯೆಯಿಂದಾಗಿ ನಿಮ್ಮ ಕಾರ್ಡ್ ಒಳಗಡೆ ಹೋದ ನಂತರ ಸಿಕ್ಕಿಕೊಳ್ಳಬಹುದು ಅಥವಾ ಹೊರಗೆ ಬರದೆ ಇರಬಹುದು. ವಿದ್ಯುತ್ ಏರುಪೇರಿನಿಂದಾಗಿ ಇಂತಹ ಸಮಸ್ಯೆಗಳು ಉದ್ಬವವಾಗುವ ಸಾಧ್ಯತೆಗಳು ಇರುತ್ತವೆ. ಅಲ್ಲದೆ ಗ್ರಾಹಕರು ಪಿನ್ ನಂಬರ್ ಅಥವಾ ಅಂಕಿಅಂಶ ಟೈಪ್ ಮಾಡುವಾಗ ತಪ್ಪು ಮಾಡಬಹುದು. ಇಲ್ಲವೆ ಯಂತ್ರ ಕೇಳಿದ ಮಾಹಿತಿ ದಾಖಲಿಸಲು ತುಂಬಾ ಸಮಯ ತೆಗೆದುಕೊಳ್ಳಬಹುದು. ಕೆಲವರಿಗೆ ATM ಉಪಯೋಗಿಸಲು ಗೊತ್ತಾಗದೆ ಗೊಂದಲಕ್ಕೆ ಒಳಗಾಗಬಹುದು.

ಕಾರಣಗಳು ಏನೇ ಇರಬಹುದು, ಆದರೆ ನಾವು ATM ನಿಂದ ಹಣವನ್ನು ತೆಗೆಯುವಾಗ ಅಥವಾ ಕಾರ್ಡ್ ಬಳಸುವಾಗ ಇದೇ ವಿಧಾನವನ್ನು ಅನುಸರಿಸಬೇಕಾಗುತ್ತದೆ.

ಆದರೂ ಸಹ ಕೆಲವೊಮ್ಮೆ ATM ಗಳಲ್ಲಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಹೀಗೆ ಹಲವಾರು ಕಾರಣಗಳಿಂದ ಕಾರ್ಡ್ ಒಳಕ್ಕೆ ಸಿಕ್ಕಿಹಾಕಿಕೊಳ್ಳಬಹುದು. ಇಂಥ ಸಂದರ್ಭ ಎದುರಾದರೆ ನಾವು ಏನು ಮಾಡಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ.

Also read in english: What to do if you have a failed ATM transaction and your account is debited?

ATMನಲ್ಲಿ ಕಾರ್ಡ್ ಸಿಕ್ಕಿಕೊಂಡರೆ ಏನು ಮಾಡುವುದು?

ಕಾರ್ಡ್ ಸಿಕ್ಕಿಹಾಕಿಕೊಂಡರೆ ಮೊದಲಿಗೆ ನಿಮ್ಮ ಕಸ್ಟಮರ್ ಕೇರ್ ಗೆ ಕರೆ ಮಾಡಿ ಮಾಹಿತಿ ತಿಳಿಸಿ. ಅದು ಸಾಧ್ಯವಾಗದಿದ್ದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವಿಚಾರ ತಿಳಿಸಿ. ನಿಮ್ಮ ಕಾರ್ಡ್ ನ್ನು ಯಾರಾದರೂ ದುರುಪಯೋಗ ಪಡೆಯುವ ಸಾಧ್ಯತೆ ಇರುವುದರಿಂದ ತಕ್ಷಣ ಬ್ಲಾಕ್ ಮಾಡುವಂತೆ ಬ್ಯಾಂಕ್ ನವರು ಸಲಹೆ ನೀಡುತ್ತಾರೆ. ಅದನ್ನು ಪಾಲಿಸವುದು ಒಳಿತು. [ಏನಿದು ಆಡ್ ಆನ್ ಕ್ರೆಡಿಟ್ ಕಾರ್ಡ್? ಬಳಕೆ ಮಾಡೋದು ಹೇಗೆ?]

ಒಂದು ಸಲ ನಿಮ್ಮ ಕಾರ್ಡ್ ಬ್ಲಾಕ್ ಆದರೆ ಪೋನ್ ಬ್ಯಾಂಕಿಂಗ್ ಮೂಲಕ ಅಥವಾ ಬ್ಯಾಂಕಿಗೆ ಖುದ್ದು ಭೇಟಿ ನೀಡಿ ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬೇಕು. ವಿಳಾಸ ದೃಢೀಕರಣ ಸೇರಿದಂತೆ ವಿವಿಧ ದಾಖಲಾತಿಗಳನ್ನು ನೀಡಬೇಕಾಗುತ್ತದೆ.

ಯಂತ್ರ ಮತ್ತು ಕಾರ್ಡ್ ಒಂದೇ ಬ್ಯಾಂಕಿನದ್ದಾಗಿದ್ದರೆ ಸಿಕ್ಕಿಹಾಕಿಕೊಂಡ ಕಾರ್ಡ್ ನ್ನು ಹಿಂದಕ್ಕೆ ಪಡೆಯಬಹುದಾದ ಅವಕಾಶಗಳಿರುತ್ತವೆ.

ಅಂದರೆ ನಿಮ್ಮ HDFC ಬ್ಯಾಂಕಿನ ಕಾರ್ಡ್ HDFC ಮೆಶಿನ್ ನಲ್ಲಿ ಸಿಕ್ಕಿಹಾಕಿಕೊಂಡರೆ ನಿಮ್ಮ ಕಾರ್ಡ್ ನ್ನು ಹಿಂದಕ್ಕೆ ಪಡೆದುಕೊಳ್ಳಬಹುದಾಗಿದೆ. ಅಂದರೆ ಕಾರ್ಡ್ ಮತ್ತು ಯಂತ್ರ ಅದೇ ಬ್ಯಾಂಕಿನದ್ದಾಗಿರಬೇಕೆಂಬುದನ್ನು ಗಮನಿಸಬೇಕು.

ಇಲ್ಲದಿದ್ದರೆ ನಿಮ್ಮ ಹೊಸ ಕಾರ್ಡ್ ಹಾಗೂ ಪಿನ್ ನಂಬರ್ ಬರುವವರೆಗೆ ಕಾಯಬೇಕಾಗುತ್ತದೆ. ಹೊಸ ಕಾರ್ಡ್ ಹಾಗೂ ಪಿನ್ ಮಾಹಿತಿ ನಿಮ್ಮ ಇ-ಮೇಲ್ ಗೆ ಅಥವಾ ಪತ್ರದ ಮೂಲಕ ಮನೆಗೆ ಬರುತ್ತದೆ. ಅಲ್ಲಿಯವರೆಗೆ ನೀವು ಹಣದ ವ್ಯವಹಾರಕ್ಕಾಗಿ ಬೇರೆ ಮಾರ್ಗವನ್ನು ಅನುಸರಿಸಬೇಕಾಗುತ್ತದೆ.

ಬ್ಯಾಂಕುಗಳಿಗೆ ಅನುಗುಣವಾಗಿ ಕೆಲ ಬ್ಯಾಂಕುಗಳು ಹೊಸ ಕಾರ್ಡುಗಳಿಗಾಗಿ ನಿರ್ದಿಷ್ಟ ಶುಲ್ಕ ವಿಧಿಸುತ್ತವೆ. ಮತ್ತೆ ಕೆಲವು ವಿಧಿಸುವುದಿಲ್ಲ. ಇದು ಆಯಾ ಆಯಾ ಬ್ಯಾಂಕುಗಳಿಗೆ ಸಂಬಂಧಿಸಿದ ವಿಚಾರವಾಗಿದೆ.

ಒಟ್ಟಿನಲ್ಲಿ ಯಂತ್ರದಲ್ಲಿ ಕಾರ್ಡ್ ಸಿಕ್ಕಿಹಾಕಿಕೊಂಡಾಗ ಹೀಗೆ ಅನೇಕ ವಿಚಾರಗಳು ತಿಳಿದುಕೊಳ್ಳಬೇಕಾಗುತ್ತವೆ ಹಾಗೂ ಪಾಲಿಸಬೇಕಾಗುತ್ತವೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಬ್ಯಾಂಕಿನವರು ಜವಾಬ್ಧಾರಿಯನ್ನು ಹೊತ್ತಿಕೊಳ್ಳುವುದಿಲ್ಲ. ಇಂತ ಸಂದರ್ಭಗಳಲ್ಲಿ ನೀವು ಬ್ಯಾಂಕಿನಿಂದ ಹೊಸ ಕಾರ್ಡ್ ನ್ನು ಪಡೆದು ವ್ಯವಹರಿಸುವುದು ಉತ್ತಮ.

English summary

Debit Card or Credit Card Stuck in Machine (ATM)?

When we want to do any transaction in Automated Teller Machine (ATM), we firstly swipe our debit or credit card in the machine and keep it back.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X