For Quick Alerts
ALLOW NOTIFICATIONS  
For Daily Alerts

ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

|

ಹೊಸದಾಗಿ ಉದ್ಯಮ ಪ್ರಾರಂಭಿಸಬೇಕೆಂದರೆ ಹೆಚ್ಚು ಬಂಡವಾಳ ಬೇಕಾಗುತ್ತದೆ ಎಂಬುದು ತುಂಬಾ ಜನರ ಅಭಿಪ್ರಾಯವಾಗಿದೆ. ಆದರೆ ಅನೇಕ ಉದ್ಯಮಗಳನ್ನು ತುಂಬಾ ಕಡಿಮೆ ಬಂಡವಾಳ ಅಥವಾ ಬಂಡವಾಳ ಇಲ್ಲದೆ ಮಾಡಬಹುದಾಗಿದೆ ಎಂಬುದನ್ನು ಮರಿಬೇಡಿ.

(ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮ)

ಅದಕ್ಕೆ ನಮ್ಮಲ್ಲಿ ಸಾಧಿಸಬೇಕೆಂಬ ಛಲ ಇದ್ದಲ್ಲಿ ಯಾವುದು ಅಸಾಧ್ಯವಲ್ಲ. ಕೆಲ ಉದ್ಯಮಗಳನ್ನು ಶೂನ್ಯ ಬಂಡವಾಳದಲ್ಲಿ ನಡೆಸಬಹುದಾಗಿದೆ. ಮತ್ತೆ ಕೆಲವನ್ನು ತುಂಬಾ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾಗಿದೆ.

ಹಾಗೇ ಶೂನ್ಯ ಅಥವಾ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮಗಳ ಮಾಹಿತಿ ಇಲ್ಲಿದೆ ನೋಡಿ.

ನೇಮಕಾತಿ (ರಿಕ್ರ್ಯುಟ್ಮೆಂಟ್) ಉದ್ಯಮ
 

ನೇಮಕಾತಿ (ರಿಕ್ರ್ಯುಟ್ಮೆಂಟ್) ಉದ್ಯಮ

ಇತ್ತೀಚಿನ ದಿನಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನೇಮಕಾತಿ (ರಿಕ್ರ್ಯುಟ್ಮೆಂಟ್) ಉದ್ಯಮಕ್ಕೆ ತುಂಬಾ ಬೆಡಿಕೆ ಇದೆ. ಇದನ್ನು ಪ್ರಾರಂಭಿಸಲು ಹೆಚ್ಚಿನ ಬಂಡವಾಳ ಬೇಕಿಲ್ಲ. ಇದಕ್ಕೆ ಸಣ್ಣ ಕಚೇರಿ, ಸಣ್ಣ ಮತ್ತು ದೊಡ್ಡ ಕಂಪನಿಗಳ ಸಂಪರ್ಕ ಇದ್ದರೆ ಸಾಕು. ಭಾರತ ಮತ್ತು ಪ್ರಪಂಚದಲ್ಲಿ ಅನೇಕ ಕಂಪನಿಗಳು ಆರ್ಥಿಕ ಬಿಕ್ಕಟ್ಟಿನ ಪ್ರಭಾವಕ್ಕೆ ಒಳಗಾಗುವುದರಿಂದ ಶಾಶ್ವತ ಸಿಬ್ಬಂದಿಗಳನ್ನು ಬಯಸುತ್ತವೆ. ಹೀಗಾಗಿ ಕಾಂಟ್ರ್ಯಾಕ್ಟ್ ಆಧಾರದ ಮೆಲೆ ಸಿಬ್ಬಂದಿಗಳ ನೇಮಕಾತಿ ಮಾಡಲು ಬಯಸುತ್ತವೆ. ಅದಕ್ಕಾಗಿ ನೇಮಕಾತಿ ಸಂಸ್ಥೆಗಳನ್ನು ಅವು ಹುಡುಕುತ್ತಿರುತ್ತವೆ. ಹೀಗಾಗಿ ನೇಮಕಾತಿ ಸಂಸ್ಥೆಗಳಿಗೆ ಅಪಾರವಾದ ಅವಕಾಶವಿರುತ್ತದೆ.

SEO ಕನ್ಸಲ್ಟೆನ್ಸಿ (Search Engine Optimization)

ಇಂಟರ್ನೆಟ್ ಮಾರುಕಟ್ಟೆದಾರ ಆಗಬಯಸುವರು SEO ಕನ್ಸಲ್ಟೆನ್ಸಿಯನ್ನು ಪ್ರಾರಂಭಿಸಬಹುದು. ಇದಕ್ಕೆ ಹೆಚ್ಚು ಬಂಡವಾಳದ ಅಗತ್ಯತೆ ಇರುವುದಿಲ್ಲ.

ವೇಗವಾದ ಇಂಟರ್ನೆಟ್ ಮಾರುಕಟ್ಟೆ ತಂತ್ರಾಂಶಗಳನ್ನು ಹೊಂದಿರುವ ತಂತ್ರಜ್ಞರು SEO ಸಲಹೆಗಾರರು ಎನ್ನುವರು.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ತುಂಬಾ ಇದೆ. ಪ್ರತಿನಿತ್ಯ ಸಾವಿರಾರು ವೆಬ್ಸೈಟ್ ಮತ್ತು ಬ್ಲಾಗ್ ಖಾತೆಗಳನ್ನು ತೆರೆಯಲಾಗುತ್ತದೆ.

ಆದರೆ ಅದರಲ್ಲಿ ಕೆಲವು ಮಾತ್ರ ಉಳಿಯುತ್ತವೆ. ಹೆಚ್ಚಿನವು ಹೆಚ್ಚಿನ ರೇಟಿಂಗ್ ಹಾಗೂ ಬ್ಲಾಗ್ ಮಾರುಕಟ್ಟೆ ಜ್ಞಾನದ ಕೊರತೆಯಿಂದ ವೈಫಲ್ಯ ಅನುಭವಿಸುತ್ತವೆ.

ನಿಮಗೆ ಇದರ ಬಗ್ಗೆ ಜ್ಞಾನ ಇದ್ದರೆ SEO ಕನ್ಸಲ್ಟೆನ್ಸಿ ಪ್ರಾರಂಭಿಸಬಹುದು. ಇದನ್ನು ಬಹಳ ಹಾಗೂ ತ್ವರಿತವಾಗಿ ಸ್ಥಾಪಿಸಬಹುದು. SEO ಕನ್ಸಲ್ಟೆನ್ಸಿ ಹೆಗೆ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ಜ್ಞಾನ ಇಲ್ಲದಿದ್ದಲ್ಲಿ ಮೂರು ತಿಂಗಳ ತರಬೇತಿ ಪಡೆಯಬಹುದು.

ಬ್ಲಾಗಿಂಗ್

ಬ್ಲಾಗಿಂಗ್ ಕೂಡ ಉತ್ತಮ ಆದಾಯ ತಂದುಕೊಡಬಲ್ಲ ವ್ಯವಹಾರ ಆಗಿದೆ. ಒಂದು ರೂಪಾಯಿಯ ಖರ್ಚು ಇಲ್ಲದೆ ನೀವು ಬ್ಲಾಗ್ ಖಾತೆಯನ್ನು ತೆರೆಯಬಹುದು. ಬ್ಲಾಗಿಂಗ್ ಮೂಲಕ ಹೆಚ್ಚು ಹಣ ಸಂಪಾದಿಸಬೇಕೆಂದರೆ ಹೆಚ್ಚು ತಾಳ್ಮೆ, ಕಠಿಣ ಪರಿಶ್ರಮ ಬೇಕಾಗುತ್ತದೆ.

ಯಾವ ವಿಷಯದಲ್ಲಿ ನೀವು ಪರಿಣಿತಿ ಪಡೆದಿರುತ್ತಿರಿ ಅದರಲ್ಲಿ ನೀವು ಬ್ಲಾಗಿಂಗ್ ಮಾಡಬಹುದು. ಈಗಾಗಲೇ ನೂರಾರು ಜನ ಬ್ಲಾಗರ್ಸ್ ಇದ್ದರೂ ಸಹ ನೀವು ನಿಮ್ಮದೆ ಆದ ಛಾಪನ್ನು ಮೂಡಿಸಬಹುದು. ಸಿಎಂಎಸ್, ಡೊಮೈನ್, ಎಸ್ ಇಒ ನಂತಹ ಕೆಲ ಪ್ರಮುಖ ಅಂಶಗಳನ್ನು ನೀವು ಬ್ಲಾಗಿಂಗ್ ಸಮಯದಲ್ಲಿ ಕಲಿಯಬಹುದು. ಇದು ಶೂನ್ಯ ಬಂಡವಾಳದ ಉದ್ಯಮವಾಗಿದೆ.

ಇಬೇ ವ್ಯಾಪಾರ
 

ಇಬೇ ವ್ಯಾಪಾರ

eBay ಬಗ್ಗೆ ನೀವು ಕೇಳಿರಬಹುದು. ಜನರು ವ್ಯಾಪಕವಾಗಿ ಆನ್ಲೈನ್ ಮೂಲಕ ವಸ್ತುಗಳನ್ನು ಖರೀದಿಸಲು ಬಳಸುವ ಅಂತರ್ಜಾಲ ಸೈಟ್ ಆಗಿದೆ. ನಿಮ್ಮ ವಸ್ತುಗಳನ್ನು ಇಂಟರ್ನೆಟ್ ನಲ್ಲಿ ಮಾರಾಟ ಮಾಡುವ ವ್ಯವಹಾರದ ಆರಂಭಿಸಬಹುದು. ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಿ ಅದಕ್ಕೆ ಲಾಭ ಮತ್ತು ಇನ್ನಿತರ ಶುಲ್ಕವನ್ನು ಸೇರಿಸಿ ಇಬೇ ನಲ್ಲಿ ನೀವು ವ್ಯಾಪಾರ ಮಾಡಬಹುದು.

ಆಭರಣ ತಯಾರು

ಭಾರತೀಯರಿಗೆ ಆಭರಣಗಳೆಂದರೆ ಪಂಚಪ್ರಾಣ. ಚಿನ್ನಾಭರಣಗಳ ಬಗ್ಗೆ ಅಪಾರ ಹುಚ್ಚು ಇದೆ. ನಿಮಗೆ ಆಭರಣಗಳ ಮೇಲೆ ಮೋಹ, ಒಲವು ಇದ್ದಲ್ಲಿ ನೀವು ವೃತ್ತಿಪರರಾಗಿ ಅದರಲ್ಲಿ ತೊಡಗಿಸಿಕೊಳ್ಳಬಹುದು.

ನೀವು ಕೆಲ ಆಭರಣ ತರಗತಿಗಳಿಗೆ ಹೋಗಿ ತರಬೇತಿ ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಆಭರಣಗಳನ್ನು ಮಾರಾಟ ಮಾಡಬಹುದು.

ಈ ವ್ಯವಹಾರದಲ್ಲಿ ಅನೇಕ ಅವಕಾಶಗಳಿವೆ. ಬಂಗಾರ, ಡೈಮಂಡ್ ಮತ್ತು ಪ್ಲಾಟಿನಮ್ ಮುಂತಾದವುಗಳನ್ನು ವಿನ್ಯಾಸ ಮಾಡಬಹುದು. ನಿಮ್ಮ ಡೀಲರ್ ಬಯಸುವ ವಿನ್ಯಾಸಗಳನ್ನು ಮಾಡಿಕೊಟ್ಟರೆ ಸಾಕು. ಅದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಅವರೇ ಒದಗಿಸುತ್ತಾರೆ.

ಮದುವೆ ಯೋಜನೆ

ಭಾರತದಲ್ಲಿ ವಿವಾಹ ಸಮಾರಂಭಗಳಿಗೆ ತುಂಬಾ ಮಹತ್ವ ನೀಡಲಾಗುತ್ತದೆ. ಪ್ರತಿಯೊಬ್ಬ ಭಾರತೀಯನು ತಮ್ಮ ಮದುವೆ ಜೀವಮಾನದ ಅವಿಸ್ಮರಣೀಯ ದಿನವನ್ನಾಗಿ ಮಾಡಲು ಇಷ್ಟ ಪಡುತ್ತಾರೆ.

ನೀವು ಸ್ವಭಾವತಹ ಸೃಜನಾತ್ಮಕರಾಗಿದ್ದರೆ ಹಾಗೂ ಬಹು ಕಾರ್ಯಗಳನ್ನು ಮಾಡುವ ಜಾಣ್ಮೆ ಇದ್ದರೆ ಈ ವ್ಯಾಪಾರ ಖಂಡಿತ ಮಾಡಬಹುದು. ಇದಕ್ಕಾಗಿ ನಿಮಗೆ ಒಂದು ಆಫಿಸ್ ಬಾಡಿಗೆಗ ಪಡೆದು ಗ್ರಾಹಕರೊಂದಿಗೆ ನೆಟ್ವರ್ಕ್ ಬೆಳೆಸಬೇಕಾಗುತ್ತದೆ. ಈ ಉದ್ಯಮ ಒಂದು ಬಾರಿ ಹೂಡಿಕೆಯನ್ನು ಮಾತ್ರ ಬಯಸುತ್ತದೆ. ತದನಂತರ ನೀವು ಕೈತುಂಬಾ ಹಣ ಸಂಪಾದಿಸಬಹುದು.

ರೆಸ್ಟೋರೆಂಟ್ ಸೇವೆಗಳು

ರೆಸ್ಟೋರೆಂಟ್ ಪ್ರಾರಂಭಿಸಲು ಹೆಚ್ಚು ಬಂಡವಾಳ ಬೇಕಾಗುತ್ತದೆ. ಆದರೆ ಚಂದಾದಾರರಾಗಲು ಬಂಡವಾಳ ಬೇಕಾಗಿಲ್ಲ. ಸಣ್ಣ ಸ್ಥಳ ಇದ್ದರೆ ಸಾಕು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಸರಿಯಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರೆ ಈ ಉದ್ಯಮದಲ್ಲಿ ಯಶಸ್ಸನ್ನು ಗಳಿಸುವುದರಲ್ಲಿ ಸಂಶಯವಿಲ್ಲ. ಈ ವ್ಯವಹಾರ ಸ್ಥಾಪಿಸಲು ಸೃಜನಶೀಲತೆ ಮತ್ತು ಯುನಿಕ್ ಈ ಎರಡು ವಿಶೇಷ ಗುಣಗಳಿರಬೇಕು.

ಇವೆಂಟ್ ಮ್ಯಾನೇಜ್‍ಮೆಂಟ್ ಉದ್ಯಮ

ಭಾರತದಲ್ಲಿ ತುಂಬಾ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಇದು ಒಂದಾಗಿದೆ. ಪ್ರತಿ ವರ್ಷವು ಸಾವಿರಾರು ಇವೆಂಟ್ ಗಳನ್ನು ನೋಡಬಹುದು.

ಕಾರ್ಪೊರೇಟ್ ಇವೆಂಟ್ಸ್, ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪಕ್ಷ, ಸಂಘಟನೆಗಳು ಆಯೋಜಿಸುವ ಇವೆಂಟ್ಸ್ ಗಳು ಇರುತ್ತವೆ. ಇದನ್ನು ಪ್ರಾರಂಭಿಸಲು ಸಲ್ಪ ಮಟ್ಟಿಗೆ ಬಂಡವಾಳ ಬೇಕಾಗುತ್ತದೆ. ಜತೆಗೆ ಹಣವನ್ನು ಹೆಚ್ಚು ಗಳಿಸಬಹುದು. ಪ್ರಾರಂಭದಲ್ಲಿ ಉತ್ತಮ ಸಂಪರ್ಕ ಸಾಮರ್ಥ್ಯ ಹೊಂದಿರಬೇಕು.

ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ

ಭಾರತದಲ್ಲಿ ದಿನದಿಂದ ದಿನಕ್ಕೆ ಆಸ್ತಿ ಖರೀದಿಯ ಪ್ರಮಾಣ ಹೆಚ್ಚುತ್ತಲೇ ಇದೆ. ನೀವು ರಿಯಲ್ ಎಸ್ಟೇಟ್ ಸಲಹೆಗಾರರಾಗಿ ಹಣ ಸಂಪಾದಿಸಬಹುದು. ಇದು ಭಾರತದಲ್ಲಿ ಪ್ರವರ್ಧಮಾನದಲ್ಲಿರುವ ವ್ಯವಹಾರವಾಗಿದ್ದು, ಉತ್ತಮ ಆದಾಯ ಗಳಿಸಬಹುದು. ಬಹಳ ಕಡಿಮೆ ಬಂಡವಾಳದಲ್ಲಿ ಈ ಉದ್ಯಮ ಪ್ರಾರಂಭಿಸಬಹುದು.

ಇದರಲ್ಲಿ ಮುಖ್ಯವಾಗಿ ನಿವು ರಿಯಲ್ ಎಸ್ಟೇಟ್ ಸಲಹೆಗಾರರಾಗಿ ಇರುವುದರಿಂದ ನಿಮಗೆ ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಉತ್ತಮ ತಿಳುವಳಿಕೆ ಇರಬೇಕಾಗುತ್ತದೆ. ಇದರಲ್ಲಿ ಪ್ರತಿ ಒಪ್ಪಂದ ಮತ್ತು ವ್ಯವಹಾರದ ಮೆಲೆ ಶೇ.1 ಅಥವಾ 2ರಷ್ಟು ಶುಲ್ಕವನ್ನು ಪಡೆಯಬಹುದು.

ಕಚೇರಿ ವಸ್ತು ಸರಬರಾಜು

ನಮ್ಮ ದೇಶದಲ್ಲಿ ಅನೇಕ ಕಚೇರಿ ಮತ್ತು ಶಾಲೆಗಳಿಗೆ ವರ್ಷಪೂರ್ತಿ ಅನೇಕ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ಉದ್ಯಮ ಪ್ರಾರಂಭಕ್ಕೆ ಸಲ್ಪ ಬಂಡವಾಳದ ಅಗತ್ಯವಿದೆ. ಈ ಉದ್ಯಮ ಯಶಸ್ವಿಯಾಗಿ ಮುನ್ನಡೆಸಲು ಮೊದಲು ಉಚಿತ ಪ್ರವೇಶವಿರುವ ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ ಬೇಟಿ ಕೊಟ್ಟು ವ್ಯಾಪಾರ ಮಾಡಬೇಕು. ತದನಂತರ ನಿಧಾನವಾಗಿ ಸಂಪರ್ಕವನ್ನು ಹೆಚ್ಚಿಸುತ್ತಾ ಉದ್ಯಮದ ವ್ಯಾಪ್ತಿಯನ್ನು ವಿಸ್ತರಿಸುತ್ತ ಹೋಗಬೇಕು.

ಭಾರತದಲ್ಲಿ ಚಿನ್ನದ ದರ

English summary

10 Best Business Ideas with Low or No Investment

Do you still believe in notion that you need huge money to start a new business? You will be surprised to know that there are several businesses that need very little or no money at all and still you can make it a profitable venture if managed properly.Below listed are few business ideas that can be started.
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more