For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಹಣಕಾಸು ವಂಚನೆ: ಹ್ಯಾಕರ್ಸ್ ಜಾಲಕ್ಕೆ ಬಿಳುವ ಮುನ್ನ ಎಚ್ಚರವಹಿಸಿ.

By Siddu Thorat
|

ಒಟ್ಟು ಶೇ. 65ರಷ್ಟು ಆನ್ಲೈನ್ ಹಣಕಾಸು ವಂಚನೆ/ಮೋಸ ಸಂಭವಿಸುತ್ತಿದ್ದು, ಇವೇಲ್ಲವೂ ತಂತ್ರಜ್ಞಾನ ಸಂಬಂಧಿತ ವಂಚನೆಗಳು ಎಂಬುದಾಗಿ ಬ್ಯಾಂಕುಗಳು ಹೇಳಿವೆ ಎಂದು ಅಸ್ಸೋಚಾಮ್ ವರದಿ ಮಾಡಿದೆ. ಇಂಟರ್‌ನೆಟ್ ಬ್ಯಾಂಕಿಂಗ್ ಚಾನೆಲ್, ಎಟಿಎಂ ಮತ್ತು ಕ್ರೆಡಿಟ್/ಡೆಬಿಟ್/ಪ್ರಿಪೇಡ್ ಕಾರ್ಡುಗಳ ಮೂಲಕ ಈ ವಂಚನೆಗಳು ಸಂಭವಿಸುತ್ತಿವೆ ಎಂಬುದು ಸಾಬಿತಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನ ಹೆಚ್ಚುತ್ತಿದ್ದು ಎಲ್ಲ ವ್ಯವಹಾರಗಳು ಆನ್ಲೈನ್ ಹಣಕಾಸು ತಂತ್ರಜ್ಞಾನದ ಮೂಲಕ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಂಚಕರು(ಹ್ಯಾಕರ್ಸ್) ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಹಣಕಾಸು ವ್ಯವಹಾರ ಭದ್ರತೆ ಕಳಂಕಿತವಾಗಿದೆ ಎಂದು ಭಾವಿಸಲಾಗುತ್ತದೆ.
ವಂಚಕರ ಮೋಸದ ಜಾಲಕ್ಕೆ ಅನೇಕ ಅಮಾಯಕ ಗ್ರಾಹಕರು, ಹೂಡಿಕೆದಾರರು ಸಿಲುಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಹಕರು, ಹೂಡಿಕೆದಾರರು ಒಟ್ಟಿನಲ್ಲಿ ಹಣಕಾಸು ವ್ಯವಹಾರ ಮಾಡುವ ಪ್ರತಿಯೊಬ್ಬರೂ ಇತ್ತಿಚಿನ ದಿನಗಳಲ್ಲಿ ಯಾವ ವಿಧದ ಹಣಕಾಸು ವಂಚನೆಗಳು ಸಂಭವಿಸುತ್ತಿವೆ ಎಂಬುದನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅವುಗಳ ವಿವರ ಇಲ್ಲಿದೆ ನೋಡಿ.

ಫಿಶಿಂಗ್

ಫಿಶಿಂಗ್

ಫಿಶಿಂಗ್ ಎನ್ನುವುದು ಒಂದು ವಿಧದ ವಂಚನೆಯಾಗಿದೆ. ಬಳಕೆದಾರರ/ಗ್ರಾಹಕರ ಹೆಸರು, ಪಾಸ್ವರ್ಡ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಮುಂತಾದ ಬ್ಯಾಂಕು ಸಂಬಂಧಿ ಸೂಕ್ಷ್ಮವಾದ ಮಾಹಿತಿಯನ್ನು ವಂಚಕರು ಪಡೆಯುತ್ತಾರೆ.
ಫಿಶಿಂಗ್ ನ್ನು ಇ-ಮೇಲ್ ಸಂದೇಶ, ವೆಬ್ಸೈಟ್ ಮತ್ತು ಮೊಬೈಲ್ ಕರೆಗಳ ಮುಖಾಂತರ ಮಾಹಿತಿಯನ್ನು ಪಡೆದು ಗ್ರಾಹಕರಿಂದ ಹಣವನ್ನು ದೋಚುತ್ತಾರೆ.

ಕಾರ್ಡ್ ಸ್ಕಿಮ್ಮಿಂಗ್ (ಕಾರ್ಡುಗಳ ಆಯಸ್ಕಾಂತೀಯ ಸಾರ ತೆಗೆಯುವ)

ಕಾರ್ಡ್ ಸ್ಕಿಮ್ಮಿಂಗ್ (ಕಾರ್ಡುಗಳ ಆಯಸ್ಕಾಂತೀಯ ಸಾರ ತೆಗೆಯುವ)

ಕಾರ್ಡ್ ಸ್ಕಿಮ್ಮಿಂಗ್ (ಕಾರ್ಡುಗಳ ಆಯಸ್ಕಾಂತೀಯ ಸಾರ ತೆಗೆಯುವ) ಇದೊಂದು ವಿಧದ ವಂಚನಾ ಕ್ರಿಯೆ.
ಎಟಿಎಂ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಮೇಲಿನ ಆಯಸ್ಕಾಂತ ತುದಿಯ ಸಾರವನ್ನು ತೆಗೆಯುವ ಮೂಲಕ ಈ ಅಕ್ರಮ ಚಟುವಟಿಕೆಯನ್ನು ಎಸಗುತ್ತಾರೆ.
ನಕಲಿ ಕಾರ್ಡುಗಳ ಮುಖಾಂತರ ಅಸಲಿ ಕಾರ್ಡ್ ರೀಡರ್ ಬದಲಾಯಿಸಿ ಕಾರ್ಡ್ ಸ್ಕಿಮ್ಮಿಂಗ್ ನಡೆಸಲಾಗುತ್ತದೆ. ಮೂಲ ಮಾಹಿತಿ ಮತ್ತು ದಾಖಲೆಗಳನ್ನು ವಿಭಿನ್ನ ಪ್ಲಾಸ್ಟಿಕ್ ಕಾರ್ಡುಗಳಿಗೆ ವರ್ಗಾಯಿಸಿ ಸ್ಕಿಮ್ಮಿಂಗ್ ಮಾಡುವ ಮೂಲಕ ವಂಚಕರು ಗ್ರಾಹಕರನ್ನು ಮೋಸಗೊಳಿಸುತ್ತಾರೆ.

ಸ್ಮಿಶಿಂಗ್

ಸ್ಮಿಶಿಂಗ್

ಸ್ಮಿಶಿಂಗ್ ಎನ್ನುವುದು ಇನ್ನೊಂದು ಬಗೆಯ ಹಣಕಾಸು ವಂಚನೆಯಾಗಿದ್ದು, ಮೊಬೈಲ್ ಬ್ಯಾಂಕಿಂಗ್ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸುತ್ತಾರೆ.
ವಂಚಕರು ಬ್ಯಾಂಕು ಖಾತೆಗಳ ಮಾಹಿತಿಯನ್ನು ಪಡೆಯಲು ಮೊಬೈಲ್ ಬ್ಯಾಂಕಿಂಗ್ ಬಳಕೆದಾರಿಗೆ ಅನೇಕ ನಕಲಿ ಸಂದೇಶಗಳನ್ನು ಕಳುಹಿಸುತ್ತಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಹಾಗೂ ಅಂತಹ ಸಂದೇಶಗಳು ಬರದಂತೆ ಬ್ಲಾಕ್ ಮಾಡಿ.

ವಿಶಿಂಗ್

ವಿಶಿಂಗ್

ಇದು ಸಹ ವಂಚನಾ ವಿಧವಾಗಿದ್ದು, ವಂಚಕರು ಮೊಬೈಲ್ ಕರೆ ಮಾಡಿ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಬಹಿರಂಗ ಪಡಿಸುವಂತೆ ಮಾಡುತ್ತಾರೆ. ಗ್ರಾಹಕರಿಂದ ಪ್ರಮುಖವಾದ ಸೂಕ್ಷ್ಮ ಅಂಕಿಅಂಶಗಳನ್ನು ಕದ್ದು ಹಣಕಾಸಿನ ವಂಚನೆ ಎಸಲಾಗುವ ವಿಭಿನ್ನ ವಿಧಾನವಾಗಿದೆ.

ಸಿಮ್ ಸ್ವ್ಯಾಪ್ ವಂಚನೆ

ಸಿಮ್ ಸ್ವ್ಯಾಪ್ ವಂಚನೆ

ವಂಚನೆಗಾರರು ನಿಮ್ಮ ಸಿಮ್ ಕಾರ್ಡಿನ ಹೆಸರು ಮತ್ತು ಮೊಬೈಲ್ ನಂಬರ್ ನ್ನು ಹೊಸ ಸಿಮ್ ಗೆ ಬದಲಾಯಿಸಿ ಮೋಸ ಮಾಡುವ ವಿಧಾನವಾಗಿದೆ.
ಒಂದು ಸಲ ನಿಮ್ಮ ಮೊಬೈಲ್ ಸಂಖ್ಯೆ ವಂಚಕರ ಕೈಗೆ ಸೇರಿದರೆ ಅವರು ಸಂಪೂರ್ಣವಾಗಿ ಬ್ಯಾಂಕ್ ವ್ಯವಹಾರ ನಡೆಸಲು ಸಮರ್ಥರಾಗುತ್ತಾರೆ. ಅಲ್ಲದೆ ಬ್ಯಾಂಕು ಖಾತೆಯಿಂದ ನಡೆಸುವ ಎಲ್ಲ ಹಣಕಾಸು ವ್ಯವಹಾರಗಳ ಒಟಿಪಿ ಮತ್ತು ಸಂದೇಶಗಳ ಮಾಹಿತಿ ಅವರಿಗೆ ಹೋಗುತ್ತದೆ.

ಗುರುತಿನ ಮಾಹಿತಿ ಕದಿಯುವಿಕೆ

ಗುರುತಿನ ಮಾಹಿತಿ ಕದಿಯುವಿಕೆ

ಇಂತಹ ವಿಧದ ವಂಚನೆಗಳಲ್ಲಿ ಕ್ರಿಮಿನಲ್ ಗಳು ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತಾರೆ. ಅಂದರೆ ಜನ್ಮದಿನಾಂಕ, ಫೋನ್ ನಂಬರ್, ವಿಳಾಸ, ಖಾತೆ ಮತ್ತು ಕಾರ್ಡ್ ಸಂಖ್ಯೆಗಳನ್ನು ಕದಿಯುತ್ತಾರೆ.
ಆ ಮೂಲಕ ಹಣಕಾಸು ವಂಚನೆಗಳಲ್ಲಿ ಭಾಗಿಯಾಗುತ್ತಾರೆ.

English summary

6 Type Of Online Financial Frauds Investors Need To Be Aware

According to a Assocham report, around 65% of the total fraud cases reported by banks are technology-related frauds which are committed through an internet banking channel, ATMs and other payment channels like credit/debit/prepaid cards.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X