For Quick Alerts
ALLOW NOTIFICATIONS  
For Daily Alerts

ಬೆಸ್ಟ್ 8 ಲೈಪ್ ಇನ್ಸೂರೆನ್ಸ್ ಪಾಲಿಸಿಗಳು

By Siddu
|

ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಸುಭದ್ರತೆ, ಸುರಕ್ಷತೆ ತುಂಬಾ ಪ್ರಮುಖವಾಗಿರುತ್ತದೆ. ಅನಾರೋಗ್ಯ, ಅಪಘಾತ, ಶಿಕ್ಷಣ, ಮನೆ ನಿರ್ಮಾಣ ಮತ್ತು ಮರಣದ ಸಂದರ್ಭಗಳಲ್ಲಿ ಪರಿಹಾರ, ಸುಭದ್ರತೆ ಕೊಡಬಲ್ಲ ವಿಮೆಗಳ ಅಗತ್ಯವಿದ್ದು, ಇದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಆದ್ಯತೆಯಾಗಿದೆ.

ಭಾರತದಲ್ಲಿ ಹಲವು ಬಗೆಯ ಇನ್ಸೂರೆನ್ಸ್ ಪಾಲಿಸಿಗಳಿವೆ. ಸಾಮಾನ್ಯ ಇನ್ಸೂರೆನ್ಸ್ ಮತ್ತು ಲೈಪ್ ಇನ್ಸೂರೆನ್ಸ್ಗಳು, ಇದನ್ನು ಹೊರತುಪಡಿಸಿ ಇನ್ನು ಅನೇಕ ಪಾಲಿಸಿಗಳು ಸಹ ಲಭ್ಯವಿವೆ. ಈ ಪಾಲಿಸಿಗಳು ಕಷ್ಟಕಾಲದಲ್ಲಿ ಕೈ ಹಿಡಿದು ಹಣಕಾಸು ಸುರಕ್ಷತೆ ನೀಡಬಲ್ಲವು. ಹಾಗಿದ್ದರೆ ಅಂತಹ ಪ್ರಮುಖ ಇನ್ಸೂರೆನ್ಸ್ ಪಾಲಿಸಿಗಳು ಯಾವವು? ತಿಳಿದುಕೊಳ್ಳಬೇಕೆ.... ಅಂತಹ ಪ್ರಮುಖ ಲೈಪ್ ಇನ್ಸೂರೆನ್ಸ್ ಪಾಲಿಸಿಗಳ ವಿವರ ಇಲ್ಲಿದೆ ನೋಡಿ. ಎಲ್ಐಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು

ಸಂಪೂರ್ಣ ಲೈಪ್ ಇನ್ಸೂರೆನ್ಸ್

ಸಂಪೂರ್ಣ ಲೈಪ್ ಇನ್ಸೂರೆನ್ಸ್

ಈ ವಿಮೆಯನ್ನು ಜೀವನದ ಸಂಪೂರ್ಣ ಅವಧಿಯವರೆಗೆ ತೆಗೆದುಕೊಳ್ಳಲಾಗುತ್ತದೆ. ಈ ಪಾಲಿಸಿ ಅಡಿಯಲ್ಲಿ ವಾರ್ಷಿಕ ಆಧಾರದಲ್ಲಿ ಪ್ರೀಮಿಯಂ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಇಲ್ಲಿ ಕೆಲ ಪ್ರಮುಖ ಸಂಸ್ಥೆ ಮತ್ತು ಪಾಲಿಸಿಗಳ ವಿವರ ಇದೆ.
* ಎಲ್ಐಸಿ - ಸಂಪೂರ್ಣ ಜೀವನ ವಿಮೆ, ಸಂಪೂರ್ಣ ಜೀವನ ವಿಮೆ-ಸಿಮಿತ ಪಾವತಿ, ಸಂಪೂರ್ಣ ಜೀವನ ವಿಮೆ-ಸಿಂಗಲ್ ಪ್ರೀಮಿಯಂ
* ಎಚ್ಡಿಎಫ್ಸಿ - ಎಚ್ಡಿಎಫ್ಸಿ ಸಿಂಗಲ್ ಪ್ರೀಮಿಯಂ ಸಂಪೂರ್ಣ ಜೀವನ ವಿಮೆ ಯೋಜನೆ
* ರಿಲಾಯನ್ಸ್ ಲೈಪ್ ಇನ್ಸೂರೆನ್ಸ್- ರಿಲಾಯನ್ಸ್ ಸಂಪೂರ್ಣ ಜೀವನ ವಿಮೆ
* ಕೊಟಕ್ ಲೈಪ್ ಇನ್ಸೂರೆನ್ಸ್ - ಕೊಟಕ್ ಎಟರ್ನಲ್ ಲೈಪ್ ಕ್ಲಾಸಿಕ್ ಶೀಲ್ಡ್, ಕೊಟಕ್ ಎಟರ್ನಲ್ ಲೈಪ್ ಪ್ರೀಮಿಯರ್ ಪ್ಲಾನ್

ಎಂಡೋಮೆಂಟ್ (ದತ್ತಿ) ಯೋಜನೆ

ಎಂಡೋಮೆಂಟ್ (ದತ್ತಿ) ಯೋಜನೆ

ಪಾಲಿಸಿದಾರ ಮರಣ ಹೊಂದಿದ್ದಾಗ ಅಥವಾ ವಿಮೆಯ ಮೆಚುರಿಟಿ ಅವಧಿ ಮುಗಿದ ನಂತರ ಎಂಡೋಮೆಂಟ್ ಯೋಜನೆಯಲ್ಲಿ ಭಾರೀ ಮೊತ್ತದ ಹಣ ಸಿಗುತ್ತದೆ.
ಕೆಲ ಎಂಡೋಮೆಂಟ್ ಪಾಲಿಸಿಗಳು ಗಂಭೀರ ಆನಾರೋಗ್ಯದ ಸಂದರ್ಭದಲ್ಲಿ ಪಾವತಿ ಮಾಡುತ್ತವೆ.
* ಎಲ್ಐಸಿ - ಎಂಡೋಮೆಂಟ್ ಫ್ಲಸ್
* ಪ್ಯೂಚರ್ ಜನರಲಿ - ಪ್ಯೂಚರ್ ಜನರಲಿ ಅಸ್ಯೂರ್- ವಿತ್ ಪ್ರಾಪಿಟ್ ಎಂಡೋಮೆಂಟ್ ಪ್ಲಾನ್

ಮನಿ ಬ್ಯಾಕ್ ಪ್ಲಾನ್

ಮನಿ ಬ್ಯಾಕ್ ಪ್ಲಾನ್

ಮನಿ ಬ್ಯಾಕ್ ಯೋಜನೆಯನ್ನು ಹೂಡಿಕೆಯ ರೂಪದಲ್ಲಿ ಬಳಸಲಾಗುತ್ತದೆ. ಇದು ಉತ್ತಮ ಹಣಕಾಸು ಆದಾಯವನ್ನು ಉತ್ಪಾದಿಸುತ್ತದೆ. ಜತೆಗೆ ಭವಿಷ್ಯದಲ್ಲಿ ವಿವಿಧ ಉದ್ದೇಶಗಳಿಗಾಗಿ, ಮನರಂಜನೆಗಾಗಿ ಸಹಕಾರಿಯಾಗುತ್ತದೆ. ಇಲ್ಲಿ ಕೆಲ ಪ್ರಮುಖ ಸಂಸ್ಥೆ ಮತ್ತು ಪಾಲಿಸಿಗಳ ವಿವರ ಇದೆ.
* ಎಸ್ಬಿಐ ಲೈಪ್ ಇನ್ಸೂರೆನ್ಸ್ - ಮನಿ ಬ್ಯಾಕ್ ಪಾಲಿಸಿ
* ಎಲ್ಐಸಿ - ಮನಿ ಬ್ಯಾಕ್ ವಿತ್ ಪ್ರಾಪಿಟ್
*ಎಚ್ಡಿಎಫ್ಸಿ - ಎಚ್ಡಿಎಫ್ಸಿ ಎಸ್ಎಲ್ ನ್ಯೂ ಮನಿ ಬ್ಯಾಕ್ ಪ್ಲಾನ್
*ಬಿರ್ಲಾ ಸನ್ ಲೈಪ್ ಇನ್ಸೂರೆನ್ಸ್ - ಬಿರ್ಲಾ ಸನ್ ಲೈಪ್ ಇನ್ಸೂರೆನ್ಸ್ ಬಚತ್ ಪ್ಲಾನ್
* ರಿಲಾಯನ್ಸ್ ಲೈಪ್ ಇನ್ಸೂರೆನ್ಸ್ - ರಿಲಾಯನ್ಸ್ ಲೈಪ್ ಇನ್ಸೂರೆನ್ಸ್ ಗ್ಯಾರೆಂಟಿ ಮನಿ ಬ್ಯಾಕ್ ಪಾಲಿಸಿ
* ಮಾಕ್ಸ್ ಲೈಪ್ ಇನ್ಸೂರೆನ್ಸ್ -ಲೈಪ್ ಪೇ ಮನಿ ಮನಿ ಬ್ಯಾಕ್

ಟರ್ಮ್ ಲೈಪ್ ಇನ್ಸೂರೆನ್ಸ್ ಪಾಲಿಸಿ

ಟರ್ಮ್ ಲೈಪ್ ಇನ್ಸೂರೆನ್ಸ್ ಪಾಲಿಸಿ

ಟರ್ಮ್ ಲೈಪ್ ಇನ್ಸೂರೆನ್ಸ್ ಪಾಲಿಸಿಗಳು ನಿರ್ಧಿಷ್ಟ ಅವಧಿಯ ವಿಮೆಗಳಾಗಿದ್ದು, ಸಿಮಿತ ಅವಧಿಯಲ್ಲಿ ಸ್ಥಿರ ಪಾವತಿ ದರಗಳನ್ನು ಪಡೆಯಬಹುದು. ಅವಧಿ ಮುಗಿಯಲು ಬಂದಾಗ ಪಾಲಿಸಿದಾರರು ನಿಲ್ಲಿಸಬಹುದು ಇಲ್ಲವೆ ವಿಸ್ತರಿಸಬಹುದು.
* ಐಸಿಐಸಿಐ ಪ್ರುಡೆನ್ಷಿಯಲ್ - ಐಸಿಐಸಿಐ ಪ್ರು ಐಕೇರ್
* ಕೊಟಕ್ ಲೈಪ್ - ಕೊಟಕ್ ಇ ಟರ್ಮ್/ಇ-ಪ್ರಿಪೇರ್ಡ್ ಪ್ಲಾನ್, ಕೊಟಕ್ ಟರ್ಮ್ ಪ್ಲಾನ್/ಕೊಟಕ್ ಪ್ರಿಪೇರ್ಡ್ ಟರ್ಮ್
* AEGON ರೆಲಿಗೆರ್ - AEGON ರೆಲಿಗೆರ್ ಲೆವೆಲ್ ಪ್ಲಾನ್

ULIPs

ULIPs

ULIPs ಅಥವಾ ಯುನೈಟೆಡ್ ಲಿಂಕ್ಡ್ ಇನ್ಸೂರೆನ್ಸ್ ಪ್ಲಾನ್ಸ್ ತುಂಬಾ ಸರಳ ಮತ್ತು ರಕ್ಷಣಾತ್ಮಕ ಪಾಲಿಸಿಯಾಗಿದ್ದು, ಅನನ್ಯ ಲಕ್ಷಣ ಹೊಂದಿದೆ.
* ಬಜಾಜ್ ಅಲಿಯನ್ಸ್ - ಐಗೇನ್ III ಹೂಡಿಕೆ ಯೋಜನೆ
* ಎಸ್ಬಿಐ ಲೈಪ್ ಇನ್ಸೂರೆನ್ಸ್ - ಎಸ್ಬಿಐ ಲೈಪ್ ಸ್ಮಾರ್ಟ್ ಪರ್ಪಾರ್ಮರ್, ಎಸ್ಬಿಐ ಲೈಪ್ ಯುನಿಟ್ ಫ್ಲಸ್ ಸೂಪರ್, ಎಸ್ಬಿಐ ಲೈಪ್ ಸರಳ ಮಹಾ ಆನಂದ, ಎಸ್ಬಿಐ ಲೈಪ್ ಸ್ಮಾರ್ಟ್ ಸ್ಕಾಲರ್, ಎಸ್ಬಿಐ ಲೈಪ್ ಸ್ಮಾರ್ಟ್ ವೇಲ್ತ್ ಅಸ್ಯೂರ್

ಚಿಲ್ಡ್ರನ್ ಪಾಲಿಸಿ

ಚಿಲ್ಡ್ರನ್ ಪಾಲಿಸಿ

ಚಿಲ್ಡ್ರನ್ ಪಾಲಿಸಿಯು ಮಗು ಬೇರೆ ಬೇರೆ ಹಂತದ ವಯಸ್ಸಿಗೆ ಬಂದಾಗ ಪೋಷಕರಿಗೆ ಸಹಾಯಕ್ಕೆ ಬರುತ್ತದೆ. ಈ ಪಾಲಿಸಿ ಅವಧಿಯಲ್ಲಿ ಪೋಷಕರು ದುರಾದೃಷ್ಟಕರವಾಗಿ ಮರಣ ಹೊಂದಿದಲ್ಲಿ ಕೆಲ ವಿಮೆಗಳ ಪ್ರೀಮಿಯಂ ಮನ್ನಾ ಮಾಡಲಾಗುತ್ತದೆ.

ಗೃಹ ವಿಮೆ

ಗೃಹ ವಿಮೆ

ಗೃಹ ವಿಮೆಯನ್ನು ಮಾಲೀಕನ ವಿಮೆ ಅಥವಾ ಅಪಾಯ ವಿಮೆ ಎಂದು ಕರೆಯಲಾಗುತ್ತದೆ. ಖಾಸಗಿ ಮನೆಗಳ ಪ್ರಾಥಮಿಕ ನಷ್ಟ ಮತ್ತು ಹೊಣೆಗಾರಿಕೆ ತಪ್ಪಿಸಲು ಇದನ್ನು ಬಳಸಲಾಗುತ್ತದೆ.
ಗೃಹ ವಿಮೆ ನೀಡುವ ಕೆಲ ಪ್ರಮುಖ ಸಂಸ್ಥೆ ಮತ್ತು ಪಾಲಿಸಿಗಳ ವಿವರ ಇದೆ.
* ಎಚ್ಡಿಎಫ್ಸಿ ಎರ್ಗೋ ಜನರಲ್ ಇನ್ಸೂರೆನ್ಸ್- ಹೋಮ್ ಇನ್ಸೂರೆನ್ಸ್
* ನ್ಯೂ ಐಡಿಯ ಅಸ್ಯೂರೆನ್ಸ್ - ಹೌಸ್ ಹೋಲ್ಡರ್ಸ್ ಇನ್ಸೂರೆನ್ಸ್
* ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ - ಹೋಮ್ ಇನ್ಸೂರೆನ್ಸ್
* ಎಸ್ಬಿಐ ಜನರಲ್ ಇನ್ಸೂರೆನ್ಸ್ - ಲಾಂಗ್ ಟರ್ಮ್ ಹೋಮ್ ಇನ್ಸೂರೆನ್ಸ್
* ಟಾಟಾ ಏಗ್ ಇನ್ಸೂರೆನ್ಸ್ - ಹೋಮ್ ಇನ್ಸೂರೆನ್ಸ್
* ಐಸಿಐಸಿಐ ಲೊಂಬಾರ್ಡ್ -ಹೋಮ್ ಇನ್ಸೂರೆನ್ಸ್

ಟ್ರಾವೆಲ್(ಪ್ರಯಾಣ) ಇನ್ಸೂರೆನ್ಸ್

ಟ್ರಾವೆಲ್(ಪ್ರಯಾಣ) ಇನ್ಸೂರೆನ್ಸ್

ದೇಶದೊಳಗೆ ಅಥವಾ ಹೊರಗೆ ಮಾಡುವ ದೀರ್ಘಾವಧಿ ಅಥವಾ ಅಲ್ಪಾವಧಿಯ ಪ್ರಯಾಣಗಳ ಮೇಲೆ ಟ್ರಾವೆಲ್ ಇನ್ಸೂರೆನ್ಸ್ ಮಾಡಬಹುದಾಗಿದೆ. ಈ ಯೋಜನೆ ವೈದ್ಯಕೀಯ ಮತ್ತು ವೈದ್ಯಕೀಯವಲ್ಲದ ವಚ್ಚಗಳನ್ನು ಭರಿಸುತ್ತದೆ.
* ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ - ಓವರ್ಸೀಸ್ ಟ್ರಾವೆಲ್ ಇನ್ಸೂರೆನ್ಸ್, ಸಿನೀಯರ್ ಸಿಟಿಜನ್ ಇನ್ಸೂರೆನ್ಸ್, ವಾರ್ಷಿಕ ಮಲ್ಟಿ ಟ್ರಿಪ್
* ಐಸಿಐಸಿಐ ಲೊಂಬಾರ್ಡ್ - ಓವರ್ಸೀಸ್ ಟ್ರಾವೆಲ್, ಸಿನಿಯರ್ ಸಿಟಿಜನ್, ವಾರ್ಷಿಕ ಮಲ್ಟಿ ಟ್ರಿಪ್
* ಎಚ್ಡಿಎಫ್ಸಿ ಎರ್ಗೋ ಜನರಲ್ ಇನ್ಸೂರೆನ್ಸ್- ಟ್ರಾವೆಲ್ ಇನ್ಸೂರೆನ್ಸ್
*ಬಜಾಜ್ ಅಲಿಯನ್ಸ್ - ವೈಯಕ್ತಿಕ ಟ್ರಾವೆಲ್ ಇನ್ಸೂರೆನ್ಸ್, ಕಾರ್ಪೋರೇಟ್ ಟ್ರಾವೆಲ್ ಇನ್ಸೂರೆನ್ಸ್, ಪ್ಯಾಮಿಲಿ ಟ್ರಾವೆಲ್ ಇನ್ಸೂರೆನ್ಸ್, ಟ್ರಾವೆಲ್ ಏಷಿಯಾ, ಸ್ವದೇಶ್ ಯಾತ್ರಾ, ಸಿನಿಯರ್ ಸಿಟಿಜನ್ ಟ್ರಾವೆಲ್, ಸ್ಟೂಡೆಂಟ್ ಟ್ರಾವೆಲ್ ಇನ್ಸೂರೆನ್ಸ್

ಲೈಪ್ ಇನ್ಸೂರೆನ್ಸ್ ಎಂದರೇನು?

ಲೈಪ್ ಇನ್ಸೂರೆನ್ಸ್ ಎಂದರೇನು?

ಲೈಪ್ ಇನ್ಸೂರೆನ್ಸ್ ಪ್ರಾಥಮಿಕವಾಗಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಭದ್ರತೆ ಒದಗಿಸುತ್ತದೆ. ವ್ಯಕ್ತಿ ಮರಣ ಹೊಂದಿದಲ್ಲಿ ಅಥವಾ ದುಡಿಯಲು ಸಾಧ್ಯವಾಗದಿದ್ದಾಗ ಈ ಪಾಲಿಸಿಗಳನ್ನು ಅವಲಂಬಿಸಬಹುದಾಗಿದೆ.

 ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

English summary

Best Insurance policies in India

In life lot of things are uncertain. So keeping one life insurance policy for everyone saves your family from financial risks in future. But in market different types of policies are there. In this context we are giving different types of insurance policies.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X