For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

ಆದಾಯ ತೆರಿಗೆಯಿಂದ ವಿನಾಯಿತಿ ಇರುವ ಕೆಲ ಪ್ರಮುಖ ಆದಾಯಗಳು ಇವೆ. ನಿಮ್ಮ ಆದಾಯ ಈ ಕೆಳಗಿನ ಮೂಲಗಳಿಂದ ಬರುತ್ತಿದ್ದರೆ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

By Siddu
|

ಪ್ರತಿಯೊಬ್ಬರೂ ತೆರಿಗೆಯನ್ನು ಕಡ್ಡಾಯವಾಗಿ ಕಟ್ಟಬೇಕಾಗಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಆದರೆ ಕೆಲವರೂ ತೆರಿಗೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಲೇ ಇರುತ್ತಾರೆ.

 

ಆದಾಗ್ಯೂ, ಆದಾಯ ತೆರಿಗೆಯಿಂದ ವಿನಾಯಿತಿ ಇರುವ ಕೆಲ ಪ್ರಮುಖ ಆದಾಯಗಳು ಇವೆ. ನಿಮ್ಮ ಆದಾಯ ಈ ಕೆಳಗಿನ ಮೂಲಗಳಿಂದ ಬರುತ್ತಿದ್ದರೆ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಹಾಗಿದ್ದರೆ ತೆರಿಗೆ ಇಲ್ಲದ ಆದಾಯದ ಮೂಲಗಳು ಯಾವವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

1. ಷೇರು ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್ ಗಳಿಂದ ಡಿವಿಡೆಂಟ್

1. ಷೇರು ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್ ಗಳಿಂದ ಡಿವಿಡೆಂಟ್

ಭಾರತೀಯ ಕಂಪನಿಗಳಲ್ಲಿ ಷೇರುಗಳ ಮೇಲೆ ಹೂಡಿಕೆ ಮಾಡಿದ ನಂತರ ಪಡೆಯುವ ಡಿವಿಡೆಂಟ್(ಲಾಭಾಂಶ) ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(34) ಅಡಿಯಲ್ಲಿ ತೆರಿಗೆ ಕಟ್ಟಬೆಕಾಗಿಲ್ಲ.
ಕಾರಣ ಕಂಪನಿಯೇ ಬರುವ ಲಾಭದಲ್ಲಿ ತೆರಿಗೆಯನ್ನು ಪಾವತಿಸಿರುತ್ತದೆ. ಇದೇ ರೀತಿ ಇಕ್ವಿಟಿ ಮ್ಯೂಚುವಲ್ ಫಂಡ್ ಗಳಿಂದ ಸಿಗುವ ಲಾಭಾಂಶವು ತೆರಿಗೆ ಮುಕ್ತವಾಗಿರುತ್ತದೆ. ಅದಾಗ್ಯೂ, ನೀವು ಭಾರತೀಯ ವಾಸಿಯಾಗಿದ್ದು ವಿದೇಶಿ ಮೂಲದ ಕಂಪನಿಯಿಂದ ಲಾಭಾಂಶ ಪಡೆದಿದ್ದರೆ ತೆರಿಗೆ ಕಟ್ಟಬೇಕಾಗುತ್ತದೆ.

2. ಜೀವ ವಿಮೆ ಮೆಚುರಿಟಿ ಮೇಲಿನ ಆದಾಯ

2. ಜೀವ ವಿಮೆ ಮೆಚುರಿಟಿ ಮೇಲಿನ ಆದಾಯ

ಲೈಪ್ ಇನ್ಸೂರೆನ್ಸ್ ಪಾಲಿಸಿ ಅಡಿಯಲ್ಲಿ ಪಡೆದ ಯಾವುದೇ ಮೊತ್ತ(ಬೋನಸ್ ಒಳಗೊಂಡಂತೆ) ತೆರಿಗೆಯಿಂದ ಮುಕ್ತವಾಗಿರುತ್ತದೆ.
ಆದರೆ ಎಂಡೋಮೆಂಟ್(ದತ್ತಿ ವಿಮಾ) ಪಾಲಿಸಿಗಳಿಗೆ ತೆರಿಗೆ ಅನ್ವಯವಾಗುತ್ತದೆ ಎಂಬುದನ್ನು ಗಮನಿಸಬೇಕು.
ಒಂದು ಹಣಕಾಸು ವರ್ಷದ ಅವಧಿಯಲ್ಲಿ ಶೇ. 2ರ ದರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಪಡೆದಲ್ಲಿ ಟಿಡಿಎಸ್ ಪಾವತಿಸಬೇಕಾಗುತ್ತದೆ.

3. ಸ್ಕಾಲರ್‌ಶಿಪ್ ಅಥವಾ ಅನುದಾನ
 

3. ಸ್ಕಾಲರ್‌ಶಿಪ್ ಅಥವಾ ಅನುದಾನ

ವಿದ್ಯಾರ್ಥಿಯಾಗಿ ನಿಮ್ಮ ಶಿಕ್ಷಣ ವೆಚ್ಚ ಭರಿಸಲು ಯಾವುದೇ ವಿದ್ಯಾರ್ಥಿವೇತನ ಅಥವಾ ಅನುದಾನ ಸ್ವೀಕರಿಸಿದ್ದರೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಇರುತ್ತದೆ.

4. ಸರ್ಕಾರದ ನೋಟಿಫೈಡ್ ಬಾಂಡ್ ಗಳ ಮೇಲೆ ಸಿಗುವ ಬಡ್ಡಿ

4. ಸರ್ಕಾರದ ನೋಟಿಫೈಡ್ ಬಾಂಡ್ ಗಳ ಮೇಲೆ ಸಿಗುವ ಬಡ್ಡಿ

ಸರ್ಕಾರದಿಂದ ನೋಟಿಫೈಡ್ ಆಗಿರುವ ಕೆಲ ಬಾಂಡ್ ಗಳ ಮೇಲೆ ಬಡ್ಡಿ ಆದಾಯವನ್ನು ಪಡೆದಿದ್ದರೆ ಅವು ತೆರಿಗೆ ಮುಕ್ತವಾಗಿರುತ್ತವೆ.
ಇತ್ತೀಚಿಗೆ, ಸರ್ಕಾರ ಕೆಲ ಸಾರ್ವಜನಿಕ ವಲಯದ ಕಂಪನಿಗಳು ಮೂಲಸೌಕರ್ಯ ಯೋಜನೆಗಳಿಗಾಗಿ ಹಣ ಸಂಗ್ರಹಿಸಲು ಇಂತಹ ತೆರಿಗೆ ಮುಕ್ತ ಬಾಂಡ್ ಗಳನ್ನು ಬಿಡುಗಡೆ ಮಾಡಿದೆ.
ಈ ಬಾಂಡ್ ಗಳ ಮೇಲೆ ಸ್ವೀಕರಿಸುವ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ಮೆಚುರಿಟಿ ಮುನ್ನ ಈ ಬಾಂಡುಗಳನ್ನು ಮಾರಾಟ ಮಾಡಿ ಆದಾಯ ಗಳಿಸಿದ್ದರೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

5. ಕೃಷಿ ಆದಾಯ

5. ಕೃಷಿ ಆದಾಯ

ಆದಾಯ ತೆರಿಗೆ ಕಾಯಿದೆ ಸೆಕ್ಷನ್ 10(1) ಪ್ರಕಾರ ಗೇಣಿ ಆಧಾರದ ಕೃಷಿ ಆದಾಯ ಅಥವಾ ಯಾವುದೇ ಕೃಷಿ ಉತ್ಪನ್ನಗಳು ತೆರಿಗೆ ಮುಕ್ತವಾಗಿವೆ.
ಅದಾಗ್ಯೂ, ತೆರಿಗೆಯನ್ನು ನಿರ್ಧರಿಸಲು ಒಬ್ಬ ವ್ಯಕ್ತಿಯ ಒಟ್ಟು ಆದಾಯ ನಿರ್ಧರಿಸುವುದಕ್ಕಾಗಿ ಕೃಷಿ ಆದಾಯವನ್ನು ಸೇರಿಸಬೇಕಾಗುತ್ತದೆ ಎಂದು ತೆರಿಗೆ ಸಲಹೆಗಾರರಾದ ನೇಹಾ ಮಲ್ಹೋತ್ರಾ ಅಭಿಪ್ರಾಯಿಸಿದ್ದಾರೆ.

6. ಸಹಬಾಗಿ ಸಂಸ್ಥೆಯಿಂದ(partnership firm) ಬರುವ ಲಾಭ

6. ಸಹಬಾಗಿ ಸಂಸ್ಥೆಯಿಂದ(partnership firm) ಬರುವ ಲಾಭ

ನೀವು ಸಹಬಾಗಿ ಸಂಸ್ಥೆಯಲ್ಲಿ ಪಾಲುದಾರ ಆಗಿದಲ್ಲಿ ನಿಮಗೆ ಬರುವ ಲಾಭದ ಪಾಲಿನ ಮೇಲೆ ಯಾವುದೇ ತರಹದ ತೆರಿಗೆಯನ್ನು ಕಟ್ಟಬೇಕಾಗಿಲ್ಲ. ಪಾಲುದಾರರಿಗೆ ಲಾಭದ ಹಂಚಿಕೆಯಲ್ಲಿ ಪ್ರತ್ಯೇಕ ವಿನಾಯಿತಿ ನೀಡಲಾಗಿದೆ.

7. ಅನಿವಾಸಿ ಬಾಹ್ಯ(NRE)ಖಾತೆ ಮೇಲಿನ ಬಡ್ಡಿ

7. ಅನಿವಾಸಿ ಬಾಹ್ಯ(NRE)ಖಾತೆ ಮೇಲಿನ ಬಡ್ಡಿ

ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ 1999(FEMA) ಪ್ರಕಾರ ವ್ಯಕ್ತಿ ಭಾರತದಿಂದ ಹೊರಗೆ ವಾಸವಾಗಿದ್ದಲ್ಲಿ(person resident outside India)ಆತ ಪಡೆಯುವ ಬಡ್ಡಿ ತೆರಿಗೆ ಮುಕ್ತವಾಗಿರುತ್ತದೆ.

8. ಪ್ರಯಾಣ ರಿಯಾಯಿತಿ

8. ಪ್ರಯಾಣ ರಿಯಾಯಿತಿ

ಸಂಬಳದ ಅಂಗವಾಗಿ ನೀವು LTA(Leave Trave Allowance) ಪಡೆದಲ್ಲಿ ತೆರಿಗೆ ಇಲಾಖೆಯಿಂದ ತೆರಿಗೆ ಮುಕ್ತವಾಗಿರುತ್ತದೆ. ಮನೆ ಬಾಡಿಗೆ ಭತ್ಯೆ(HRA) ರೂಪದಲ್ಲಿ ಇದರ ಲಾಭ ಪಡೆಯಬಹುದು.
ತೆರಿಗೆ ಇಲಾಖೆ ಕಾಯಿದೆಯ ಸೆಕ್ಷನ್ 10(5) ಅಡಿಯಲ್ಲಿ ದೇಶಿಯ ಪ್ರಯಾಣದ ಮೇಲೆ ದಾಖಲೆಗಳನ್ನು ಒದಗಿಸುವುದರ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

9. ಸುಕನ್ಯಾ ಸಮೃದ್ಧಿ ಯೋಜನೆ

9. ಸುಕನ್ಯಾ ಸಮೃದ್ಧಿ ಯೋಜನೆ

ಕೇಂದ್ರ ಸರ್ಕಾರದ ಈ ಯೋಜನೆ ಹೆಣ್ಣು ಮಕ್ಕಳ ಸಬಲಿಕರಣಕ್ಕೆ ಸಂಬಂಧಿಸಿದ್ದಾಗಿದೆ.
ಸುಕನ್ಯಾ ಖಾತೆಯ ಮೇಲೆ ಸಿಗುವ ಬಡ್ಡಿ ಆದಾಯ ತೆರಿಗೆ ರಹಿತವಾಗಿದ್ದು, 1.5 ಲಕ್ಷದವರೆಗಿನ ಮೊತ್ತದ ಮೇಲೆ 80C ಸೆಕ್ಷನ್ ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಲಭ್ಯ ಇವೆ. ಈ ಖಾತೆ ಮೇಲೆ 8.7ರಷ್ಟು ಬಡ್ಡಿದರ ನೀಡಲಾಗುತ್ತಿದೆ.

10. ಎಸ್ಬಿಐ ಲೈಫ್- ಸರಳ ಮಹಾ ಆನಂದ

10. ಎಸ್ಬಿಐ ಲೈಫ್- ಸರಳ ಮಹಾ ಆನಂದ

ಎಸ್ಬಿಐ ಲೈಫ್ ಸರಳ ಮಹಾ ಆನಂದ ಮೇಲೆ ಸಿಗುವ ಪ್ರತಿಫಲ ಮತ್ತು ಮೊತ್ತ ತೆರಿಗೆ ಮುಕ್ತವಾಗಿರುತ್ತದೆ. ಏಕೆಂದರೆ ಇದು ಯುನಿಟ್ ಲಿಂಕ್ಡ್ ಇನ್ಸೂರೆನ್ಸ್‌ ಪ್ಲಾನ್ ಆಗಿದೆ. ಈ ವಿಮೆ ಜತೆಯಲ್ಲಿ ನಿಮಗೆ ಎರಡು ಪಟ್ಟು ತೆರಿಗೆ ರಹಿತ ಲಾಭ ಮತ್ತು ಪ್ರತಿಫಲ ಸಿಗುತ್ತದೆ. ಇದನ್ನು ಹೊರತು ಪಡಿಸಿ 80C ಸೆಕ್ಷನ್ ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಸಹ ಲಭ್ಯ ಇವೆ.

11. ಪಿಪಿಎಫ್

11. ಪಿಪಿಎಫ್

ತೆರಿಗೆ ರಹಿತ ಬರುವ ಆದಾಯಗಳಲ್ಲಿ ಪಿಪಿಎಫ್ ತುಂಬಾ ಮುಖ್ಯವಾಗಿದೆ. ಪಿಪಿಎಫ್ ಮೇಲೆ ತೆರಿಗೆ ಇಲ್ಲದ ಆದಾಯ ಪಡೆಯಬಹುದಾಗಿದೆ. ಜತೆಗೆ ಶೇ. 8.1ರಷ್ಟು ಬಡ್ಡಿದರ ಪಡೆಯಬಹುದಾಗಿದೆ. ಇದು ಕೇವಲ ತೆರಿಗೆ ರಹಿತ ಅಷ್ಟೇ ಎಲ್ಲ ಬದಲಿಗೆ ಆದಾಯ ಇಲಾಖೆಯ 80C ಸೆಕ್ಷನ್ ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಲಭ್ಯ ಇವೆ.

12. ಉಳಿತಾಯ ಬ್ಯಾಂಕಿನ ಬಡ್ಡಿ ಆದಾಯ

12. ಉಳಿತಾಯ ಬ್ಯಾಂಕಿನ ಬಡ್ಡಿ ಆದಾಯ

ಉಳಿತಾಯ ಖಾತೆಗಳ ಮೇಲೆ ರೂ. 10,000ವರೆಗೆ ಗಳಿಸುವ ಬಡ್ಡಿ ಆದಾಯ ತೆರಿಗೆ ರಹಿತವಾಗಿರುತ್ತದೆ. ತೆರಿಗೆ ವಿಧಿಸುವ ಸಂದರ್ಭದಲ್ಲಿ ಒಟ್ಟು ಆದಾಯದಲ್ಲಿ ಈ ಬಡ್ಡಿ ಗಳಿಕೆಯ ಆದಾಯವನ್ನು ಸೇರಿಸಲಾಗುವುದಿಲ್ಲ.

English summary

Which Incomes You Don't Have to Pay Taxes

There are certain incomes that are exempt from income tax. If you get your income from these sources, your tax liability will be zero.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X