For Quick Alerts
ALLOW NOTIFICATIONS  
For Daily Alerts

ಹಣ ಉಳಿತಾಯ ಮಾಡಬೇಕೆ? ಇಲ್ಲಿವೆ 10 ಕ್ವಿಕ್ ಟಿಪ್ಸ್

By Siddu
|

ದಿನದಿನ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಲೇ ಸಾಗುತ್ತಿರುವ ಸಂಗತಿ ನಮಗೆಲ್ಲ ಗೊತ್ತಿರುವಂತದ್ದು. ರಾಕೇಟ್ ವೇಗದಲ್ಲಿ ಏರುತ್ತಿರುವ ಬೆಲೆಗಳಿಂದಾಗಿ ಜನಸಾಮಾನ್ಯರು ಜೀವನ ನಿರ್ವಹಿಸುವುದು ಕಷ್ಟವಾಗುತ್ತಿದೆ.

10 ವರ್ಷದಲ್ಲಿ 17 ಲಕ್ಷ ಉಳಿತಾಯ ಮಾಡಬೇಕೆ?

ದಿನನಿತ್ಯದ ನಿಮ್ಮ ಜೀವನದಲ್ಲಿ ಕೆಲ ಸರಳ ವಿಚಾರಗಳನ್ನು ಅನುಸರಿಸಿದರೆ ಭವಿಷ್ಯತ್ತಿಗಾಗಿ ಹೆಚ್ಚಿನ ಹಣಕಾಸು ಉಳಿತಾಯ ಮಾಡಬಹುದು. ಪ್ರತಿಕ್ಷಣ, ಪ್ರತಿದಿನ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೆಂದೆನಿಲ್ಲ. ಬದಲಾಗಿ ಸಂದರ್ಭ, ಸಮಯಕ್ಕೆ ಅನುಗುಣವಾಗಿ ಜಾಗೃತ ಮನಸ್ಸಿನಿಂದ ಕೆಲ ಅಂಶಗಳನ್ನು ಪಾಲಿಸಿದರೆ ಸಾಕು.

ಭಾರತದಲ್ಲಿ ಜೀವನ ನಿರ್ವಹಣೆ ಮಾಡಲು ಆರ್ಥಿಕ ಸುಭದ್ರತೆ ಹಾಗೂ ಸುಸ್ಥಿರತೆ ತುಂಬಾ ಮುಖ್ಯವಾಗಿದ್ದು, ಹಣಕಾಸು ಉಳಿತಾಯಕ್ಕಾಗಿ ಇಲ್ಲಿ ತುಂಬಾ ಸರಳವಾಗಿರುವ ಕ್ವಿಕ್ ಟಿಪ್ಸ್ ಗಳನ್ನು ನೀಡಲಾಗಿದೆ.

1. ಬಜೆಟ್ ಪ್ಲಾನ್
 

1. ಬಜೆಟ್ ಪ್ಲಾನ್

ಹಣ ಉಳಿತಾಯ ಮಾಡಲು ಅನುಸರಿಸಬೇಕಾದ ಮೊದಲ ಮಾರ್ಗ ಯೋಜನೆ ರೂಪಿಸುವುದು. ಪ್ರತಿನಿತ್ಯ, ವಾರ, ತಿಂಗಳಿಗೆ ಅನುಸಾರವಾಗಿ ಖರ್ಚುವೆಚ್ಚದ ಯಾದಿಯನ್ನು ತಯಾರಿಸಬೇಕು.

ದಿನಸಿ ಹಾಗೂ ಇತರ ಸಾಮಾಗ್ರಿಗಳಿಗಾಗಿ ಎಷ್ಟು ಖರ್ಚು ಮಾಡಬೇಕು ಎಂಬುದನ್ನು ಮುಂಚಿತವಾಗಿಯೇ ನಿರ್ಧರಿಸಬೇಕು. ಇದರಿಂದಾಗಿ ನೀವು ಎಚ್ಚರಿಕೆಯಿಂದ ಹಣ ವ್ಯಯಿಸಬಹುದಲ್ಲದೇ ದೈನಂದಿನ ಬಜೆಟ್ ಸ್ಥಿರವಾಗಿರುವಂತೆ ನೋಡಿಕೊಳ್ಳಬಹುದು.

ಪ್ರತಿದಿನ ಬಜೆಟ್ ಪ್ಲಾನ್ ತಯಾರಿಸುವುದು ಉತ್ತಮ ಹವ್ಯಾಸ. ದೈನಂದಿನ ಯೋಜನೆಗಾಗಿ ಕಾಗದ, ಎಕ್ಸೆಲ್ ಸೀಟ್ ಅಥವಾ ಗೂಗಲ್ ಡಾಕ್ಸ್ ಬಳಸಬಹುದು.

2. ಕ್ರೆಡಿಟ್ ಕಾರ್ಡ್ ಬಳಸಬೇಡಿ

ಶಾಪಿಂಗ್ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವ ಹವ್ಯಾಸ ಇದ್ದರೆ ಅದನ್ನು ನಿಲ್ಲಿಸುವುದು ಒಳಿತು. ಕೈಯಲ್ಲಿ ಕ್ರೆಡಿಟ್ ಕಾರ್ಡ್ ಇದ್ದರೆ ಶಾಪಿಂಗ್ ಮಾಡುವಾಗ ಮನಸ್ಸಿನ ಮೇಲೆ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಮನೆಯಲ್ಲಿ ಬಿಟ್ಟು ಹೋಗುವುದು ಉತ್ತಮ. ಕ್ರೆಡಿಟ್ ಕಾರ್ಡ್ ಮೂಲಕ ಅನವಶ್ಯಕ ವಸ್ತುಗಳನ್ನು ಖರೀದಿಸುವುದನ್ನು ನಿಯಂತ್ರಿಸಿದಲ್ಲಿ ಹಣದ ಉಳಿತಾಯ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

3. ವಿದ್ಯುತ್ ಬಿಲ್

ನಿಮಗೆ ಇಷ್ಟ ಇದ್ದರೂ ಇಲ್ಲದಿದ್ದರೂ ವಿದ್ಯುತ್ ಬಿಲ್ ಗಳನ್ನು ಪಾವತಿಸಲೇಬೇಕು. ಆದರೆ ವಿದ್ಯುತ್ ಬಿಲ್ ಪಾವತಿಸುವಾಗ ಹಣ ಉಳಿತಾಯ ಮಾಡಬಹುದು ಎಂಬುದನ್ನು ಗಮನಿಸಬೇಕು. ಬಿಲ್ ಗಳನ್ನು ಪಾವತಿಸುವುದರಿಂದ ತಪ್ಪಿಸಿಕೊಳ್ಳಿ ಎಂದು ಹೇಳುತ್ತಿಲ್ಲ. ಬದಲಾಗಿ ಬುದ್ದಿವಂತಿಕೆಯಿಂದಾಗಿ ಹೆಚ್ಚು ಬರುವ ಬಿಲ್ ಮೊತ್ತವನ್ನು ಕಡಿಮೆ ಮಾಡಬಹುದು. ಉದಾ: ಬೇರೆ ಕೋಣೆಯಲ್ಲಿ ನೀವು ಇದ್ದರೆ ಎಸಿ ಸ್ವಿಚ್ ಆಫ್ ಮಾಡಿ. ಅನಗತ್ಯ ವಾಷಿಂಗ್ ಮಷಿನ್ ಬಳಸುವುದನ್ನು ನಿಲ್ಲಿಸಿ. ಸೂರ್ಯನ ಕೆಳಗೆ ನಿಮ್ಮ ಬಟ್ಟೆಗಳನ್ನು ಒಣಗಿಸಲು ಆದ್ಯತೆ ಕೋಡಿ.

4. ದಿನಕ್ಕೆರಡು ಬಾರಿ ಅಡುಗೆ ಮಾಡಿ
 

4. ದಿನಕ್ಕೆರಡು ಬಾರಿ ಅಡುಗೆ ಮಾಡಿ

ದಿನಕ್ಕೆ ಮೂರ್ನಾಲ್ಕು ಬಾರಿ ಅಡುಗೆ ಮಾಡುವುದಕ್ಕಿಂತಲೂ ಎರಡು ಬಾರಿ ಅಡುಗೆ ಮಾಡಿ. ದೈನಂದಿನ ಆಧಾರದ ಮೇಲೆ ಇದನ್ನು ಅನುಸರಿಸಿ. ಸಂಜೆ ಸಮಯದಲ್ಲಿ ಒಮ್ಮೆ ಚಹಾ ಅಥವಾ ಕಾಪಿ ಸೇವಿಸಿ. ಕೊನೆಯದಾಗಿ ರಾತ್ರಿ ಸಮಯದಲ್ಲಿ ಡಿನ್ನರ್ ಮಾಡಿ. ದಿನಕ್ಕೆ ಎರಡು ಬಾರಿ ಅಡುಗೆ ಮಾಡುವುದರಿಂದ ಹೆಚ್ಚು ತರಕಾರಿಗಳ ಖರೀದಿ ನಿಯಂತ್ರಿಸಬಹುದು. ಅಲ್ಲದೆ ಗ್ಯಾಸ್/ವಿದ್ಯುತ್ ಉಳಿಸಬಹುದು.

5. ಲಂಚ್ ಬಾಕ್ಸ್ ಮನೆಯಿಂದ ಒಯ್ಯಿರಿ

ಇದು ತುಂಬಾ ಮುಖ್ಯವಾಗಿರುವ ಅಂಶ. ನೀವು ಎಲ್ಲಾದರೂ ಕೆಲಸ ಮಾಡುತ್ತಿದ್ದರೆ ಮನೆಯಿಂದ ಲಂಚ್ ಬಾಕ್ಸ್ ಒಯ್ಯುವುದನ್ನು ಮರೆಯಬೇಡಿ. ಮಧ್ಯಾಹ್ನದ ಹೊತ್ತಿಗೆ ಹೊರಗಡೆ ಊಟ ಮಾಡುವುದರಿಂದ ಅನವಶ್ಯಕವಾಗಿ ಹಣ ಖರ್ಚಾಗುತ್ತದೆ. ಏಕೆಂದರೆ ಹೋಟೆಲ್, ಕ್ಯಾಂಟಿನ್ ಅಥವಾ ರೆಸ್ಟೋರೆಂಟ್ ಗಳಲ್ಲಿ ಊಟದ ಬೆಲೆ ತುಂಬಾ ಹೆಚ್ಚಾಗಿರುತ್ತದೆ.

6. ನೀರಿನ ಬಾಟಲಿ ಖರೀದಿಸಬೇಡಿ

ಹಣ ಉಳಿತಾಯ ಮಾಡಲು ಇನ್ನೊಂದು ಸರಳವಾಗಿರುವ ಹಾಗೂ ಪರಿಣಾಮಕಾರಿ ಟಿಪ್ಸ್. ನೀವು ಉತ್ತಮವಾದ ಹಾಗೂ ಆರೋಗ್ಯಕರ ನೀರು ಸೇವಿಸ ಬಯಸಿದಲ್ಲಿ ಮನೆಯಲ್ಲಿ ಅಕ್ವಾ ಗಾರ್ಡ್ ಬಳಸಿ.

ಪ್ರತಿ ಬಾರಿ ಒಂದು ಲೀಟರ್ ಅಥವಾ 20 ಲೀಟರ್ ಬಾಟಲಿಗೆ ಹಣ ಖರ್ಚು ಮಾಡುವುದಕ್ಕಿಂತಲೂ ಒಂದು ಸಲ ಅಕ್ವಾ ಗಾರ್ಡ್ ಅಳವಡಿಸುವುದು ಉತ್ತಮ.

7. ಕೇಬಲ್ ಬದಲಿಗೆ ಡಿಟಿಎಚ್

ಈಗ ದೇಶದಾದ್ಯಂತ ಎಲ್ಲ ನಗರಗಳಲ್ಲಿ ಕೇಬಲ್ ಕನೆಕ್ಸನ್ ಬದಲಿಗೆ ಸೆಟ್ ಟಾಪ್ ಬಾಕ್ಸ್ ಬಳಸಲಾಗುತ್ತಿದೆ. ಕೇಬಲ್ ಬಳಸುತ್ತಿದ್ದರೆ ಅದರ ಬದಲಿಗೆ ಡಿಟಿಎಚ್, ಡಿಶ್ ಅಥವಾ ನಿಮಗಿಷ್ಟವಾದ ಟಿವಿ ಸಂಪರ್ಕಕ್ಕೆ ವರ್ಗಾಯಿಸಿಕೊಳ್ಳಿ.

ಇದರಿಂದಾಗಿ ನೀವು ವಿಕ್ಷೀಸುವ ಚಾನೆಲ್ ಗಳಿಗೆ ಮಾತ್ರ ಹಣವನ್ನು ಪಾವತಿಸಬಹುದು. ನಿಮಗೆ ಇಷ್ಟವಿರದ ಚಾನೆಲ್ ಗಳಿಂದ ತಪ್ಪಿಸಿಕೊಳ್ಳಬಹುದು. ಆದರೆ ಕೇಬಲ್ ಕನೆಕ್ಸನ್ ಇದ್ದಲ್ಲಿ ಇದು ಸಾಧ್ಯವಿಲ್ಲ.

8. ಆನ್ಲೈನ್ ಗಾಗಿ ಖರ್ಚು ಮಾಡಬೇಡಿ

ನಿಮಗೆ ಆನ್ಲೈನ್ ಶಾಪಿಂಗ್ ಇಷ್ಟವಿದ್ದಲ್ಲಿ ಡಿಜಿಟಲ್ ಉತ್ಪನ್ನಗಳಿಗಾಗಿ ಹಣ ಪಾವತಿಸಬೇಡಿ. ಈ ಉತ್ಪನ್ನಗಳು ಮುಖ್ಯವಾಗಿ ಸಾಪ್ಟವೇರ್ ಮತ್ತು ಡೌನ್ಲೋಡ್ ಮಾಡಬಹುದಾದ ಸಾಮಾಗ್ರಿಗಳನ್ನು ಹೊಂದಿರುತ್ತವೆ.

ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಇಂತಹ ಉತ್ಪನ್ನಗಳನ್ನು ಖರೀದಿಸುವುದು ಅಪಾಯಕಾರಿ. ಇದರ ಬಗ್ಗೆ ಎಚ್ಚರಿಕೆಯಿಂದ ಇರುವುದು ಮುಖ್ಯವಾಗಿರುತ್ತದೆ.

9. ಮೊಬೈಲ್ ಪ್ಲಾನ್

ಇಂದಿನ ದಿನಗಳಲ್ಲಿ ಮೊಬೈಲ್ ಬಳಸದೆ ಇರಲು ಸಾಧ್ಯವೆ ಇಲ್ಲ. ಇದು ದಿನನಿತ್ಯದ ಮೂಲಭೂತ ಅಗತ್ಯವಾಗಿದೆ. ಮೊಬೈಲ್ ಬಳಸದೆ ಹಣ ಉಳಿತಾಯ ಮಾಡಲು ಸಾಧ್ಯವಿಲ್ಲ ಎಂಬಂತಾಗಿದೆ.

ಹೀಗಾಗಿ ಕಂಪನಿಗಳು ಒದಗಿಸುವ ಆಫರ್ ಬಳಸಬೇಕು. 'ಹೆಚ್ಚು ಮಾತನಾಡಿ ಆದರೆ ಕಡಿಮೆ ಪಾವತಿಸಿ' ಎಂಬಂತಹ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ ಬಳಕೆಯ ಯೋಜನೆ ಸರಿಯಾಗಿದ್ದಲ್ಲಿ ಪ್ರತಿ ತಿಂಗಳು ನೂರಾರು ರೂಪಾಯಿಗಳನ್ನು ಉಳಿತಾಯ ಮಾಡಬಹುದು.

10. ಸಾರ್ವಜನಿಕ ಸಾರಿಗೆ ಬಳಸಿ

ದಿನದಿನ ತೈಲ ದರ ಏರುತ್ತಲೇ ಸಾಗಿದ್ದು, ಒಂದು ಲೀಟರ್ ಗೆ ರೂ. 100 ಪಾವತಿಸುವಂತಾಗಿದೆ. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು. ಸ್ವಂತ ಬೈಕ್ ಅಥವಾ ಕಾರು ದಿನನಿತ್ಯದ ಓಡಾಟಕ್ಕಾಗಿ ಉಪಯೋಗಿಸಿದರೆ ಖರ್ಚು ನಿಯಂತ್ರಿಸುವುದು ಕಷ್ಟ.

English summary

10 Quick and Simple Tips to Save Money

As you know, day by day cost of every commodity is sky rocketing. It has become difficult for a common man to survive unless he or she takes certain measures.
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more