For Quick Alerts
ALLOW NOTIFICATIONS  
For Daily Alerts

ಗೃಹ ಸಾಲ: ತಿಳಿದುಕೊಳ್ಳಬೇಕಾದ 5 ತೆರಿಗೆ ಪ್ರಯೋಜನ

ಗೃಹ ಸಾಲದ ಮೇಲೆ ಸಿಗುವ ತೆರಿಗೆ ಪ್ರಯೋಜನಗಳು ಯಾವವು ಎಂಬುದನ್ನು ಅರಿತುಕೊಳ್ಳುವುದು ಸಾಲ ಪಡೆಯುವವರ ಜವಾಬ್ಧಾರಿ ಆಗಿರುತ್ತದೆ. ಏಕೆಂದರೆ ಸಾಲದ ಮೇಲೆ ಸಿಗುವ ಲಾಭಗಳನ್ನು ತಪ್ಪಿಸಿಕೊಳ್ಳುವುದು ಸರಿಯಲ್ಲ.

By Siddu
|

ಗೃಹ ಸಾಲ ಪಡೆಯುವುದು ಕೆಲವರಿಗೆ ಸುಲಭ ಎನಿಸಿದರೆ ಮತ್ತೆ ಕೆಲವರಿಗೆ ಕಷ್ಟದ ಕೆಲಸ. ಗೃಹ ಸಾಲ ಪಡೆಯುವಾಗ ಅನೇಕ ಅಂಶಗಳ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ. ಸಾಲದ ಮೊತ್ತ, ಬಡ್ಡಿದರ, ಪ್ರತ್ಯೇಕ ಶುಲ್ಕ, ದಾಖಲಾತಿಗಳು ಮತ್ತು ಪ್ರಕ್ರಿಯೆ ಬಗ್ಗೆ ತಪ್ಪದೆ ಅರಿತುಕೊಳ್ಳಬೇಕಾಗುತ್ತದೆ. ಗೃಹ ಸಾಲ ಪಡೆಯುವ ಸಂದರ್ಭದಲ್ಲಿ ಆಗಬಹುದಾದ ತಪ್ಪುಗಳು ಮತ್ತು ತಿಳಿದುಕೊಳ್ಳಬೇಕಾದ ಕೆಲ ಪ್ರಮುಖ ಅಂಶಗಳ ತುಂಬಾ ಮುಖ್ಯವಾಗಿರುತ್ತವೆ. ಗೃಹ ಸಾಲ ಪಡೆಯುವ ಮುನ್ನ 11 ಸಂಗತಿ ತಪ್ಪದೆ ನೋಡಿ

 

ಅದರಲ್ಲೂ ಗೃಹ ಸಾಲದ ಮೇಲೆ ಸಿಗುವ ತೆರಿಗೆ ಪ್ರಯೋಜನಗಳು ಯಾವವು ಎಂಬುದನ್ನು ಅರಿತುಕೊಳ್ಳುವುದು ಸಾಲ ಪಡೆಯುವವರ ಜವಾಬ್ಧಾರಿ ಆಗಿರುತ್ತದೆ. ಏಕೆಂದರೆ ಸಾಲದ ಮೇಲೆ ಸಿಗುವ ಲಾಭಗಳನ್ನು ತಪ್ಪಿಸಿಕೊಳ್ಳುವುದು ಸರಿಯಲ್ಲ.
ಹಾಗಿದ್ದರೆ ಗೃಹ ಸಾಲದ ಮೇಲೆ ಸಿಗಬಹುದಾದ 5 ತೆರಿಗೆ ಪ್ರಯೋಜನಗಳು ಅಥವಾ ಕಡಿತಗಳು ಯಾವವು ಎಂಬುದನ್ನು ತಿಳಿದುಕೊಳ್ಳೋಣ...

1. ಬಡ್ಡಿದರದ ಮೇಲಿನ ಪ್ರಯೋಜನ

1. ಬಡ್ಡಿದರದ ಮೇಲಿನ ಪ್ರಯೋಜನ

ಗೃಹಸಾಲವನ್ನು ಇಎಂಐ(EMI) ಕಂತಿನಲ್ಲಿ ಪಾವತಿಸುತ್ತಿದ್ದರೆ ಭಾಗಶಹ ಪ್ರತಿ ಕಂತು ಪಾವತಿ ಮಾಡುವ ಸಂದರ್ಭದಲ್ಲಿ ಬಡ್ಡಿದರ ಕಡಿತವಾಗುತ್ತ ಹೋಗುತ್ತದೆ ಎಂಬುದನ್ನು ಗಮನಿಸಬೇಕು. ಮಾಲೀಕ ಇಲ್ಲವೆ ಸಹ ಸಾಲಗಾರ ತೆರಿಗೆ ಲಾಭಗಳನ್ನು ಪಡೆಯಬಹುದು. ಮನೆ ನಿರ್ಮಾಣ ಕಾರ್ಯ ಮುಗಿದ ವರ್ಷದಿಂದ ಕಡಿತಕ್ಕಾಗಿ ಕ್ಲೈಮ್ ಮಾಡಬಹುದು. ಉದಾ: ನಿಮ್ಮ ಮನೆ ನಿರ್ಮಾಣ ಕಾರ್ಯ ಅಗಸ್ಟ್ 30, 2015ಕ್ಕೆ ಮುಗಿದು ಹೋದಲ್ಲಿ ಹಣಕಾಸು ವರ್ಷ 2015-16ರ ಸಂಪೂರ್ಣ 12 ತಿಂಗಳ ಬಡ್ಡಿ ಕಡಿತಕ್ಕಾಗಿ ಕ್ಲೈಮ್ ಮಾಡಬಹುದಾಗಿರುತ್ತದೆ.

2. ಮೂಲ ಮರುಪಾವತಿ ಮೇಲೆ ಕಡಿತ

2. ಮೂಲ ಮರುಪಾವತಿ ಮೇಲೆ ಕಡಿತ

ಆದಾಯ ತೆರಿಗೆ ಇಲಾಖೆಯ 80C ಸೆಕ್ಷನ್ ಅಡಿಯಲ್ಲಿ ಇಎಂಐ ಮೂಲಕ ಮೂಲ ಮರುಪಾವತಿ ಮೇಲೆ ಕಡಿತ ಪಡೆಯಲು ಅರ್ಹರಾಗಿರುತ್ತಿರಿ. ಗರಿಷ್ಠ ರೂ. 1.5 ಲಕ್ಷದವರೆಗೆ 80C ಸೆಕ್ಷನ್ ಅಡಿಯಲ್ಲಿ ಬಡ್ಡಿ ಕಡಿತದ ಪ್ರಯೋಜನ ಪಡೆಯಬಹುದು.

3. ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕದ ಮೇಲೆ ಲಾಭ
 

3. ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕದ ಮೇಲೆ ಲಾಭ

ಸಾಮಾನ್ಯವಾಗಿ ಇದು ಪ್ರಕ್ರಿಯಾ ಶುಲ್ಕ, ವ್ಯವಸ್ಥಾಪಕ ಶುಲ್ಕ, ದಸ್ತಾವೇಜು ಶುಲ್ಕ, ತಡ ಪಾವತಿ ಶುಲ್ಕ(Late Payments), ಕಾನೂನು ಶುಲ್ಕ, ತಪಾಸಣಾ ಶುಲ್ಕಗಳನ್ನು ಒಳಗೊಂಡಿರುತ್ತದೆ.
ಆದರೆ ತೆರಿಗೆ ಇಲಾಖೆಯ 80C ಸೆಕ್ಷನ್ ಅಡಿಯಲ್ಲಿ ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕದ ಸಂದರ್ಭದಲ್ಲಿ ಮೂಲ ಮರುಪಾವತಿ, ಪಾವತಿ ಮೇಲೆ ಶುಲ್ಕ ಕಡಿತಕ್ಕೆ ಅವಕಾಶ ಇರುತ್ತದೆ.
ಆದಾಗ್ಯೂ, ಶುಲ್ಕಗಳನ್ನು ಪಾವತಿಸಿದ ನಂತರ ವರ್ಷದ ಕೊನೆಯಲ್ಲಿ ಈ ಪ್ರಯೋಜನ ಪಡೆಯಬಹುದು.

4. ನಿರ್ಮಾಣ ಪೂರ್ವ ಬಡ್ಡಿ ಮೇಲೆ ಕಡಿತ

4. ನಿರ್ಮಾಣ ಪೂರ್ವ ಬಡ್ಡಿ ಮೇಲೆ ಕಡಿತ

ಸಾಮಾನ್ಯವಾಗಿ ಗೃಹ ನಿರ್ಮಾಣ ಕಾರ್ಯ ಮುಗಿದ ಮೇಲೆ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿ ಮೇಲಿನ ಕಡಿತಕ್ಕಾಗಿ ಕ್ಲೈಮ್ ಮಾಡಬಹುದು. ಆದರೆ ಅದೇ ವರ್ಷದಲ್ಲಿ ಗೃಹ ನಿರ್ಮಾಣದ ಪೂರ್ವದಲ್ಲಿ ಕೂಡ ಬಡ್ಡಿ ಕಡಿತ ಸೌಲಭ್ಯಗಳನ್ನು ಪಡೆಯಲು ಪ್ರಾರಂಭಿಸಬಹುದು. ಐದು ಸಮಾನ ಕಂತುಗಳಲ್ಲಿ ಈ ಪ್ರಯೋಜನ ಪಡೆಯುವ ಅವಕಾಶ ಇದೆ.

5. 80EE ಸೆಕ್ಷನ್ ಅಡಿಯಲ್ಲಿ ಪ್ರಯೋಜನ

5. 80EE ಸೆಕ್ಷನ್ ಅಡಿಯಲ್ಲಿ ಪ್ರಯೋಜನ

ತೆರಿಗೆ ಪ್ರಯೋಜನ ಒದಗಿಸುವ ಸಲುವಾಗಿಯೇ 80EE ಸೆಕ್ಷನ್ ಸೇರಿಸಲಾಗಿದೆ. ಮೊದಲ ಬಾರಿ ರೂ. 40 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಮನೆ ಹೊಂದುವ ಮತ್ತು ರೂ. 25 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಗೃಹ ಸಾಲ ಪಡೆಯುವ ಮಾಲೀಕರಿಗೆ ಈ ಸೌಲಭ್ಯ ಸಿಗುತ್ತದೆ.
80EE ಸೆಕ್ಷನ್ ಅಡಿಯಲ್ಲಿ ಗರಿಷ್ಠ ರೂ. ಒಂದು ಲಕ್ಷದವರೆಗೆ ಕಡಿತದ ಲಾಭ ಸಿಗುತ್ತದೆ. ಅಂದರೆ ಒಟ್ಟು ಕಡಿತದ ಪ್ರಮಾಣ ಒಂದು ಲಕ್ಷ ಮೀರುವಂತಿಲ್ಲ.

ಸೂಚನೆ: ಗೃಹ ಸಾಲದ ಮೇಲೆ ಸಿಗುವ ತೆರಿಗೆ ಪ್ರಯೋಜನ ಅಥವಾ ಕಡಿತಗಳು ಹಣಕಾಸು ವರ್ಷಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ.

English summary

Home Loan: 5 Tax Benefits You Must Know

Buying your first house on a loan comes with multiple tax benefits. These deductions not only reduce your tax outgo but also help in managing your cash flows better. Here are all the deductions you can claim when you take a home loan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X