For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ ಧಮಾಕಾ..! ಕೇವಲ 1 ರೂಪಾಯಿಗೆ ಚಿನ್ನ ಖರೀದಿಸಿ!!

By Siddu
|

ಭಾರತದಲ್ಲಿ ಚಿನ್ನವನ್ನು ಖರೀದಿಸಲು ಅಕ್ಷಯ ತೃತೀಯ ಅತ್ಯಂತ ಶ್ರೇಷ್ಠ ಮಂಗಳಕರ ದಿನಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಪವಿತ್ರ ದಿನದಂದು ಲಕ್ಷಾಂತರ ಜನರು ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಹೀಗಾಗಿ ಈ ಅವಧಿಯಲ್ಲಿ ಚಿನ್ನ, ಚಿನ್ನದ ನಾಣ್ಯಗಳು ಮತ್ತು ಆಭರಣಗಳ ಬೇಡಿಕೆ ಏರಿಕೆ ಕಾಣುತ್ತದೆ. (ಅಕ್ಷಯ ತೃತೀಯ)

ಚಿನ್ನಾಭರಣಗಳ ಬೆಲೆ ಎಷ್ಟು ದುಬಾರಿಯಾಗಿದ್ದರೂ ಪರವಾಗಿಲ್ಲ. ಜನರು ಖರೀದಿಸದೆ ಇರುವುದಿಲ್ಲ. ಹೀಗಿರುವಾಗ ಕೇವಲ ಒಂದು ರೂಪಾಯಿಯಲ್ಲಿ ಚಿನ್ನ ಖರೀದಿಸಬಹುದು ಎಂದರೆ ಯಾರೂ ಕೂಡ ನಂಬುವುದಿಲ್ಲ. ಆದರೆ ಇದು ಸಾಧ್ಯವಿದೆ..!! ಅಕ್ಷಯ ತೃತೀಯದ ಮಹತ್ವವೇನು? ಅಂದು ಚಿನ್ನಾಭರಣ ಖರೀದಿ ಏಕೆ ಶುಭಕರ?

ಏನಿದು ಯೋಜನೆ?
 

ಏನಿದು ಯೋಜನೆ?

ಪೇಟಿಎಂ ಪ್ರಾರಂಭಿಸಿರುವ ಈ ಯೋಜನೆ ಹೆಸರು ಡಿಜಿಟಲ್ ಗೋಲ್ಡ್. ನಿಮ್ಮ ಪೇಟಿಎಂ ವಾಲೆಟ್ ಮುಖಾಂತರ ನೀವು 24 ಕ್ಯಾರೆಟ್ ಚಿನ್ನ ಖರೀದಿಸಬಹುದು. ಈ ಯೋಜನೆ ವಿಶೇಷತೆ ಎಂದರೆ ಕೇವಲ 1 ರೂಪಾಯಿಯಲ್ಲಿ ಬಂಗಾರ ಖರೀದಿಸಬಹುದು. ಜತೆಗೆ ನಿಮ್ಮ ಪೇಟಿಎಂ ವಾಲೆಟ್ ನಲ್ಲಿ ಹಣ ಇಡುವಂತೆ ಚಿನ್ನ ಸ್ಟೋರ್ ಮಾಡಿಡಬಹುದು. ಒಂದು ವಿಧದಲ್ಲಿ ಗೋಲ್ಡ್ ಎಟಿಎಫ್ ಖರೀದಿಯಂತೆ.

ಪೇಟಿಎಂ ಜತೆ ವಿದೇಶಿ ಕಂಪನಿಗಳ ಸಹಭಾಗಿತ್ವ

ಪೇಟಿಎಂ ಜತೆ ವಿದೇಶಿ ಕಂಪನಿಗಳ ಸಹಭಾಗಿತ್ವ

ದೇಶದ ಪ್ರಸಿದ್ದ ಡಿಜಿಟಲ್ ವಾಲೆಟ್ ಸಂಸ್ಥೆ ಪೇಟಿಎಂ ಈ ನಂಬಲಾಗದ ಆಫರ್ ಪ್ರಸ್ತುತ ಪಡಿಸುತ್ತಿದೆ. ಅಲಿಬಾಬಾ ಬೆಂಬಲಿತ ಆನ್ಲೈನ್ ಮಾರುಕಟ್ಟೆ ಕಂಪನಿ, ಎಂಎಂಟಿಸಿMMTCs)ಸ್ವಿಸ್ ವೆಂಚರ್ ಪಿಎಎಂಪಿ ಎಸ್ಎ(PAMP SA) ಸಹಯೋಗದಲ್ಲಿ ಈ ಸಾಹಸಕ್ಕೆ ಮುಂದಾಗಿದೆ. ಹೀಗಾಗಿ ವಿಶ್ವದಾದ್ಯಂತ ಎಲ್ಲಿಯಾದರೂ ಈ ಆಫರ್ ನ್ನು ನಿಮ್ಮದಾಗಿಸಬಹುದು.

ಡಿಜಿಟಲ್ ಗೋಲ್ಡ್

ಡಿಜಿಟಲ್ ಗೋಲ್ಡ್

ಪೇಟಿಎಂ ಸಂಸ್ಥೆ ಡಿಜಿಟಲ್ ಗೋಲ್ಡ್ ಆಫರ್ ನ್ನು ಗುರುವಾರ ಘೋಷಣೆ ಮಾಡಿದ್ದು, ಸಿಇಒ ವಿಜಯ್ ಶೇಖರ್ ಶರ್ಮಾ ಇದನ್ನು ಸಂಪತ್ತು ನಿರ್ವಹಣಾ ಉತ್ಪನ್ನ ಎಂಬುದಾಗಿ ಉಲ್ಲೇಖಿಸಿದ್ದಾರೆ.

ಹೋಮ್ ಡೆಲಿವರಿ ಸೌಲಭ್ಯ
 

ಹೋಮ್ ಡೆಲಿವರಿ ಸೌಲಭ್ಯ

ಈ ಯೋಜನೆಯ ಇನ್ನೊಂದು ವಿಶೇಷತೆ ಎಂದರೆ ಹೋಮ್ ಡೆಲಿವರಿ. ನೀವು ಚಿನ್ನ ಖರೀದಿಸಿದ ನಂತರ ನಿಮ್ಮ ಮನೆಗೆ ತಲುಪಿಸಲಾಗುವುದು. ಹೋಮ್ ಡೆಲಿವರಿ ಬೇಡವೆಂದರೆ ಪೇಟಿಎಂ ವಾಲೆಟ್ ನಲ್ಲೇ ಶೇಖರಿಸಿಡಿ.

ಪೇಟಿಎಂ ಮೂಲಕ ಖರೀದಿ ಹೇಗೆ?

ಪೇಟಿಎಂ ಮೂಲಕ ಖರೀದಿ ಹೇಗೆ?

ಪೇಟಿಎಂ ಮೂಲಕ ಖರೀದಿಸುವುದು ಮೊಬೈಲ್ ರೀಚಾರ್ಜ್ ಇಲ್ಲವೇ ಮೂವಿ ಟಿಕೇಟ್ ಬುಕ್ ಮಾಡಿದಷ್ಟೇ ಸುಲಭ.

* ಮೊದಲು ನಿಮ್ಮ ಪೇಟಿಎಂ ಖಾತೆಗೆ ಲಾಗಿನ್ ಆಗಿ

* ಗೋಲ್ಡ್ ಪವರ್ಡ್ ಬೈ MMTC-PAMP ಗೆ ಹೋಗಿ

* ರೂಪಾಯಿ ಅಥವಾ ಗ್ರಾಂ ಗಳಲ್ಲಿ ಗೋಲ್ಡ್ ಖರೀದಿ ಆಫರ್ ಆಯ್ಕೆ ಮ ಆಡಬಹುದು.

* ಈ ಪ್ರಕ್ರಿಯೆ ನಂತರ ಈ ಕೆಳಗಿನ ಪುಟ ತೆರೆದುಕೊಳ್ಳುತ್ತದೆ.

1 ರೂಪಾಯಿಯಲ್ಲಿ ಚಿನ್ನ ಖರೀದಿ

1 ರೂಪಾಯಿಯಲ್ಲಿ ಚಿನ್ನ ಖರೀದಿ

ನಿಮ್ಮ ವಾಲೆಟ್ ನಲ್ಲಿರುವ ಮಿತಿಗೆ ಅನುಗುಣವಾಗಿ ಕನಿಷ್ಟವೆಂದರೆ ಕೇವಲ ಒಂದು ರೂಪಾಯಿಯಿಂದ ನಿಮ್ಮ ಚಿನ್ನ ಖರೀದಿ ಪ್ರಕ್ರಿಯೆ ಮುಂದುವರೆಸಬಹುದು. ಇಲ್ಲಿ ನೀವು ರೂಪಾಯಿ ಇಲ್ಲವೇ ಗ್ರಾಂ ಆಧಾರದಲ್ಲಿ ಆಯ್ಕೆ ಮಾಡಿ ಪ್ರಸ್ತುತ ದರಗಳಲ್ಲಿ ಖರೀದಿಸಬಹುದು.

50 ಸಾವಿರ ಖರೀದಿಗೆ ಕೆವೈಸಿ ಅಗತ್ಯ

50 ಸಾವಿರ ಖರೀದಿಗೆ ಕೆವೈಸಿ ಅಗತ್ಯ

ಗ್ರಾಹಕರು ಗಮನಿಸಬೇಕಾದ ಮುಖ್ಯ ಅಂಶವೆಂದರೆ ನಿಮ್ಮ ಖರೀದಿ ಪ್ರಮಾಣ 50 ಸಾವಿರಕ್ಕಿಉಂತ ಹೆಚ್ಚಿದಲ್ಲಿ ನಿಮ್ಮ ಗ್ರಾಹಕರನ್ನು ಗುರುತಿಸಿ(KYC) ಮಾಹಿತಿ ಒದಗಿಸಬೇಕಾಗುತ್ತದೆ.

ಪ್ಯಾನ್ ಕಾರ್ಡ್ ಕಡ್ಡಾಯ

ಪ್ಯಾನ್ ಕಾರ್ಡ್ ಕಡ್ಡಾಯ

ನೀವು 2 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಖರೀದಿಸಲು ಇಚ್ಛಿಸಿದ್ದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ನೀಡಬೇಕಾಗುತ್ತದೆ.

English summary

Buy gold for price as low as Re 1 this Akshaya Tritiya offer

Akshaya Tritiya is considered one of the most auspicious days in India to buy gold. On this today, lakhs of people will want to invest in gold and hence, the demand for gold, particularly in the form bars, coins and jewellery rises during this period.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more