For Quick Alerts
ALLOW NOTIFICATIONS  
For Daily Alerts

ಎಫ್‌ಡಿ(FD)ಗಿಂತ ಹೆಚ್ಚು ಗಳಿಕೆ ಬೇಕೆ? ಇಲ್ಲಿ ಹೂಡಿಕೆ ಮಾಡಿ

By Siddu
|

ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ಸಾಮಾನ್ಯವಾಗಿ ಕಡಿಮೆಯಾಗುತ್ತಿರುವುದರಿಂದ ಹೆಚ್ಚುವರಿ ಆದಾಯ ಪಡೆಯಲು ಪರ್ಯಾಯ ಮಾರ್ಗಗಳನ್ನು ಹುಡುಕುವುದು ಸಹಜ. ಬ್ಯಾಂಕ್ ಡಿಪಾಸಿಟ್ ಗಳಿಗಿಂತ ಹೆಚ್ಚಿಗೆ ರಿಟರ್ನ್ಸ್ ಪಡೆಯಲು ಬಯಸುವವರು ರಿಸ್ಕ್ ಗಳನ್ನು ಎದುರಿಸಲು ಕೂಡ ಸಿದ್ದರಿರಬೇಕಾಗುತ್ತದೆ.

ನಿಶ್ಚಿತ ಠೇವಣಿಗಳ ಬದಲಾಗಿ ಹೆಚ್ಚು ಗಳಿಕೆಗಾಗಿ ಹೂಡಿಕೆ ಮಾಡಬಹುದಾದ ಕೆಲ ಪರ್ಯಾಯ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ಫಿಕ್ಸೆಡ್ ಡಿಪಾಸಿಟ್ ಹೂಡಿಕೆಗೆ ಮುನ್ನ ಇಲ್ಲೊಮ್ಮೆ ನೋಡಿ

ಡೆಬ್ಟ್ ಫಂಡ್ಸ್
 

ಡೆಬ್ಟ್ ಫಂಡ್ಸ್

ಡೆಬ್ಟ್ ಫಂಡ್ ಗಳನ್ನು ಬಾಂಡ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಬಾಂಡುಗಳನ್ನು ಸರ್ಕಾರ ಅಥವಾ ಕಾರ್ಪೋರೇಟ್ ಸಂಸ್ಥೆಗಳು ನೀಡುತ್ತವೆ. ಸರ್ಕಾರ ಮತ್ತು ಕಾರ್ಪೋರೇಟ್ ಸಂಸ್ಥೆಗಳು ನೀಡುವ ಈ ಬಾಂಡುಗಳಿಂದ ಉತ್ತಮ ರಿಟರ್ನ್ಸ್ ಪಡೆಯಬಹುದಾಗಿದೆ. ಹೂಡಿಕೆದಾರರು ಸ್ಥಿರ ಠೇವಣಿಗಳಿಗೆ ಪರ್ಯಾಯವಾಗಿ ಡೆಬ್ಟ್ ಫಂಡ್ಸ್ ಗಳಲ್ಲಿ ಹೂಡಿಕೆ ಮಾಡಬಹುದು.

ಮೂರು ವರ್ಷಗಳ ನಂತರದ ದೀರ್ಘಾವಧಿಯಲ್ಲಿ ಯುನಿಟ್ ಗಳನ್ನು ಮಾರಾಟ ಮಾಡಿದಾಗ ತೆರಿಗೆ ಅನ್ವಯವಾಗುತ್ತದೆ. ಸೂಚ್ಯಂಕದ ಲಾಭದೊಂದಿಗೆ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಶೇ. 3 ಸೆಸ್ ಜತೆ ಶೇ. 20 ತೆರಿಗೆ ದರ ಅನ್ವಯವಾಗುತ್ತದೆ. ಡೆಬ್ಟ್ ಫಂಡ್ಸ್ ಮೂಲಕ ಹೂಡಿಕೆದಾರರು ಶೇ. 7-10ರಷ್ಟು ರಿಟರ್ನ್ ನಿರೀಕ್ಷಿಸಬಹುದು.

ಕಾರ್ಪೋರೇಟ್ ಬಾಂಡ್ಸ್

ಕಾರ್ಪೋರೇಟ್ ಬಾಂಡ್ಸ್

ಸರ್ಕಾರಿ ಬಾಂಡ್ಸ್ ಗಳಿಗಿಂತ ಕಾರ್ಪೋರೇಟ್ ಬಾಂಡ್ಸ್ ಗಳು ಸಲ್ಪ ಅಪಾಯಕಾರಿ ಅಂತೆನಿಸಿದರೂ, ಲಾಭ ಮಾತ್ರ ಹೆಚ್ಚು. ದೊಡ್ಡ ಕಂಪನಿಗಳು ನೀಡುವ ಬಾಂಡುಗಳಲ್ಲಿ ಹೂಡಿಕೆದಾರರು ನೇರವಾಗಿ ಹೂಡಿಕೆ ಮಾಡಬಹುದು. ಕಂಪನಿಗಳು ವ್ಯವಹಾರದ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹೂಡಿಕೆದಾರರಿಗೆ ಹಣ ಪಾವತಿಸುತ್ತವೆ ಇಲ್ಲವೆ ಎಂಬುದು ಪ್ರಶ್ನೆಯಾಗಿರುತ್ತದೆ. ಕಾರ್ಪೋರೇಟ್ ಬಾಂಡುಗಳಿಂದ ವ್ಯಾಪಕವಾಗಿ ಆದಾಯ ಗಳಿಸಬಹುದಾಗಿದ್ದು, ಶೇ. 7-15 ರವರೆಗೆ ಬಡ್ಡಿದರ ಸಿಗುತ್ತದೆ.

ಇಕ್ವಿಟಿ ಲಿಂಕಿಂಗ್ ಉಳಿತಾಯ ಯೋಜನೆಗಳು

ಇಕ್ವಿಟಿ ಲಿಂಕಿಂಗ್ ಉಳಿತಾಯ ಯೋಜನೆಗಳು

ಇಕ್ವಿಟಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ 80C ಸೆಕ್ಷನ್ ಅಡಿಯಲ್ಲಿ ರೂ. 1.5 ಲಕ್ಷದವರೆಗೆ ಆದಾಯ ತೆರಿಗೆ ಪ್ರಯೋಜನ ಪಡೆಯಬಹುದು. ELSS ಫಂಡ್ಸ್ ಮೂರು ವರ್ಷಗಳ ಲಾಕ್ ಇನ್ ಅವಧಿ ಹೊಂದಿರುತ್ತದೆ. ಒಂದು ಬಾರಿ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ಸಿಕ್ಕ ನಂತರ ಆದಾಯ ಗಮನಾರ್ಹವಾಗಿರುತ್ತದೆ. ಇದರ ಮುಖ್ಯ ಆಕರ್ಷಣೆಯೇ ತೆರಿಗೆ ವಿನಾಯಿತಿ. ಹೀಗಾಗಿ ಇದೊಂದು ಉತ್ತಮ ಠೇವಣಿ ವಿಧಾನ ಎನ್ನಬಹುದು.

English summary

As fixed deposits interest rates plunge, here are 3 top alternatives you can play safely with

As interest rates on fixed deposits are trending down, here are a few alternatives to get extra returns. However, whenever an asset gives or claims to give higher returns than bank deposits or government securities, it comes with associated risks.
Story first published: Monday, May 29, 2017, 14:08 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more