For Quick Alerts
ALLOW NOTIFICATIONS  
For Daily Alerts

ಮೊಬೈಲ್ ವಾಲೆಟ್/ಅಪ್ಲಿಕೇಶನ್ ಸುರಕ್ಷತೆಗಾಗಿ ಹೀಗೆ ಮಾಡಿ...

ಮೊಬೈಲ್ ವಾಲೆಟ್/ಅಪ್ಲಿಕೇಶನ್ ಗಳನ್ನು ಬಳಕೆ ಮಾಡಿಕೊಂಡು ವ್ಯವಹಾರ ನಡೆಸುವುದು ಈಗ ಸರ್ವೆಸಾಮಾನ್ಯವಾಗುತ್ತಿದೆ. ವಾಲೆಟ್ ಮೂಲಕ ಹಣ ರವಾನೆ ಅಥವಾ ರೀಚಾರ್ಜ್ ಮಾಡುವುದನ್ನು ರೂಢಿಮಾಡಿಕೊಂಡಿದ್ದೇವೆ.

By Siddu
|

ಮೊಬೈಲ್ ವಾಲೆಟ್/ಅಪ್ಲಿಕೇಶನ್ ಗಳನ್ನು ಬಳಕೆ ಮಾಡಿಕೊಂಡು ವ್ಯವಹಾರ ನಡೆಸುವುದು ಈಗ ಸರ್ವೆಸಾಮಾನ್ಯವಾಗುತ್ತಿದೆ. ವಾಲೆಟ್ ಮೂಲಕ ಹಣ ರವಾನೆ ಅಥವಾ ರೀಚಾರ್ಜ್ ಮಾಡುವುದನ್ನು ರೂಢಿಮಾಡಿಕೊಂಡಿದ್ದೇವೆ. ಸುಲಭವಾಗಿ ಮತ್ತು ವೇಗವಾಗಿ ಹಣ ರವಾನೆ ಮಾಡಲು ಸಾಧ್ಯ. ಅಲ್ಲದೇ ಸಮಯದ ಉಳಿತಾಯ ಕೂಡ ಸಾಧ್ಯ.

 

ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕುಗಳು ಸಹ ಮೊಬೈಲ್ ಅಪ್ಲಿಕೇಶನ್ ಕೊಡಮಾಡಿದ್ದು ಹಣ ರವಾನೆಯನ್ನು ಸುಲಭ ಮಾಡಿವೆ.
ಯುಪಿಐ, ಭೀಮ್, ಪೆಟಿಎಮ್, ಆಕ್ಸಿಜನ್, ಮೊಬಿಕ್ವಿಕ್, ಪೆಯು ಮನಿ, ಫ್ರೀ ಚಾರ್ಜ್ ಗಳು ಸಹ ಜನಪ್ರಿಯವಾಗಿವೆ. ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

ನಗದು ವ್ಯವಹಾರಕ್ಕಿಂತ ಈ ಅಪ್ಲಿಕೇಶನ್ ಗಳ ಮೂಲಕ ಹಣ ರವಾನೆ ಮಾಡುವುದು ಉತ್ತಮ ಮತ್ತು ಸುರಕ್ಷಿತ ಎಂದು ನಂಬಲಾಗಿದೆ.
ಆದರೂ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅವು ಏನು ಎಂಬುದನ್ನು ಮುಂದೆ ನೋಡೋಣ...

ಡೌನ್ಲೋಡ್ ಮಾಡುವಾಗ ಎಚ್ಚರಿಕೆ

ಡೌನ್ಲೋಡ್ ಮಾಡುವಾಗ ಎಚ್ಚರಿಕೆ

ಮೊಬೈಲ್ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ಎಚ್ಚರಿಕೆಯ ನಡೆ ಅತ್ಯಗತ್ಯ. ನಂಬಿಕೆಗೆ ಅರ್ಹ ಎಂದು ಗುರುತಿಸಲ್ಪಟ್ಟಿರುವ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ. ಡೌನ್ ಲೋಡ್ ಗೂ ಮುನ್ನ ರೇಟಿಂಗ್ ಮತ್ತು ವಿಮರ್ಶೆಗಳನ್ನು ಓದಿ.

ಪಾಸ್ ವರ್ಡ್

ಪಾಸ್ ವರ್ಡ್

ಮೊಬೈಲ್ ಗೂ, ಅಪ್ಲಿಕೇಶನ್ ಗೂ ಒಂದೇ ಪಾಸ್ ವರ್ಡ್ ಬಳಕೆ ಮಾಡುವುದು ಸೂಕ್ತ ಅಲ್ಲ. ವಾಲೆಟ್/ಅಪ್ಲಿಕೇಷನ್ ಬಳಸುವಾಗ ಬೇರೆ ಬೇರೆ ಪಾಸ್ ವರ್ಡ್ ಬಳಕೆ ಮಾಡಿಕೊಂಡು ಒಳ ಪ್ರವೇಶ ಮಾಡಿ.

ಸೆಕ್ಯೂರಿಟಿ ಅಪ್ಲಿಕೇಶನ್
 

ಸೆಕ್ಯೂರಿಟಿ ಅಪ್ಲಿಕೇಶನ್

ಪ್ರತಿಯೊಬ್ಬ ಬಳಕೆದಾರರು ಸೆಕ್ಯೂರಿಟಿಗೆ ಮೊದಲ ಆದ್ಯತೆ ನೀಡಬೇಕು. ಮೊಬೈಲ್ ಅಪ್ಲಿಕೇಶನ್ ಗಳ ಕುರಿತಾದ ಸೆಕ್ಯೂರಿಟಿ ಅಪ್ಲಿಕೇಶನ್ ಗಳು ನಿಮ್ಮ ಬಳಿ ಇದ್ದರೆ ಹಣ ರವಾನೆಯ ಅಪ್ಲಿಕೇಶನ್ ಗಳನ್ನು ಅದಕ್ಕೆ ಅಳವಡಿಸಿಕೊಳ್ಳುವುದು ಒಳಿತು.

ದೊಡ್ಡ ಮೊತ್ತ

ದೊಡ್ಡ ಮೊತ್ತ

ದೊಡ್ಡ ಮೊತ್ತದ ಹಣವನ್ನು ನಿಮ್ಮ ವಾಲೆಟ್ ಗೆ ಯಾವ ಕಾರಣಕ್ಕೂ ಹಾಕಿಕೊಳ್ಳಲು ಹೋಗಬೇಡಿ. ಕೆಲ ಸಂದರ್ಭಗಳಲ್ಲಿ ದುರ್ಬಳಕೆ ಅಥವಾ ಹ್ಯಾಕ್ ಆಗುವ ಸಾಧ್ಯತೆ ಇರುವುದರಿಂದ ದೊಡ್ಡ ಮೊತ್ತ ಇಡುವುದು ಬೇಡ. ಹೆಚ್ಚು ಮೊತ್ತದ ಹಣ ಹಾಕಿಕೊಳ್ಳಬೇಕಾದರೆ ಆರ್ಬಿಐ ನ ಕೆಲ ನಿಯಮಾವಳಿಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂಬುದು ನೆನಪಿನಲ್ಲಿರಲಿ.

ಬೋನಸ್

ಬೋನಸ್

ಬೇರೆ ಬೇರೆ ವಾಲೆಟ್ ಕಂಪನಿಗಳು ನೀಡುವ ಬೋನಸ್, ಆಫರ್ ಮತ್ತು ಕ್ಯಾಶ್ ಬ್ಯಾಕ್ ಗಳ ಬಗ್ಗೆ ತಿಳಿದುಕೊಳ್ಳುತ್ತಾ ಇರಿ. ಪ್ರೋಮೋ ಕೋಡ್ ಗಳನ್ನು ಸಹ ಪಡೆದುಕೊಂಡು ರೀಚಾರ್ಜ್ ಸಂದರ್ಭ ಬಳಸಿಕೊಳ್ಳಿ.

English summary

Best tips to keep your mobile wallet safe

Mobile wallets which are increasingly becoming popular as it works on no cash basis and payments can be made easily without disclosing much of your financial details. There are many companies who have come up with such mobile apps along with some banks.
Story first published: Saturday, June 10, 2017, 9:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X