For Quick Alerts
ALLOW NOTIFICATIONS  
For Daily Alerts

ವೈಯಕ್ತಿಕ ಸಾಲ ಪಡೆಯಲು ಅರ್ಹತೆ ಮತ್ತು ಮಾನದಂಡ

By Prasad
|

ದೇಶದಾದ್ಯಂತ ಇರುವ ಸಾಲ ನೀಡುವ ಕಂಪೆನಿಗಳು ಹಲವಾರು ಸಾಲದ ಯೋಜನೆಗಳನ್ನು ರೂಪಿಸಿವೆ. ನಿಮ್ಮ ಆರ್ಥಿಕ ಅಗತ್ಯ ಅಷ್ಟೇ ಗಮನದಲ್ಲಿ ಇಟ್ಟುಕೊಳ್ಳದೆ ನಿಮ್ಮ ಆದಾಯ ಅಥವಾ ವೇತನವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡಿರುತ್ತಾರೆ. ಆದರೆ ವೈಯಕ್ತಿಕ ಸಾಲಕ್ಕೆ ಇರುವ ಅರ್ಹತೆ ಮಾನದಂಡದ ವಿಚಾರವು ಕಂಪೆನಿಯಿಂದ ಕಂಪೆನಿಗೆ ಬೇರೆಯಾಗಿರುತ್ತದೆ.

 

ನೀವು ಎಷ್ಟು ಸಾಲ ಪಡೆಯಲು ಅರ್ಹರಿದ್ದೀರಿ ಎಂದು ತಿಳಿದುಕೊಳ್ಳುವುದು ವೈಯಕ್ತಿಕ ಸಾಲ ಪಡೆಯುವುದರಲ್ಲಿನ ಮೊದಲ ಹೆಜ್ಜೆ. ಈ ರೀತಿ ಪರ್ಸನಲ್ ಲೋನ್ ನ ಪಡೆಯಲು ಅರ್ಹತೆ ಅಂದರೆ, ಸಾಲ ನೀಡುವವರು ಕೆಲವು ಮಾನದಂಡ ಇಟ್ಟುಕೊಂಡಿರುತ್ತಾರೆ. ಆ ಪ್ರಕಾರ ನಿಮಗೆ ಸಾಲವನ್ನು ನೀಡಬಹುದಾ ಎಂದು ನಿರ್ಧರಿಸುತ್ತಾರೆ.

 
ವೈಯಕ್ತಿಕ ಸಾಲ ಪಡೆಯಲು ಅರ್ಹತೆ ಮತ್ತು ಮಾನದಂಡ

ಸಾಲ ಪಡೆದವರಿಗೆ ಆ ಹಣವನ್ನು ವಾಪಸ್ ಮಾಡುವುದಕ್ಕೆ ಆಗುತ್ತದಾ ಎಂದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಪರ್ಸನಲ್ ಲೋನ್ ಅರ್ಜಿಯನ್ನು ಕೈಗೆತ್ತಿಕೊಳ್ಳುವುದಕ್ಕೆ ಭದ್ರ ಅಡಿಪಾಯ ಹಾಕಿಕೊಡುವುದು ಅಲ್ಲೇ.

ಇನ್ನೊಂದು ರೀತಿಯಲ್ಲಿ ಹೇಳಬೇಕು ಅಂದರೆ, ಪರ್ಸನಲ್ ಲೋನ್ ನ ಅರ್ಹತಾ ಮಾನದಂಡಗಳು ಸಾಲಕ್ಕೆ ಅರ್ಜಿ ಹಾಕಿದವರು ಅದಕ್ಕೆ ಅರ್ಹರೋ ಅಲ್ಲವೋ ಎಂದು ತಿಳಿಯಲು ಸಹಾಯ ಮಾಡುತ್ತವೆ.

ಸಾಲ ನೀಡುವವರಿಗೆ ಒಂದು ಮಟ್ಟದ ಸುರಕ್ಷತಾ ಭಾವವನ್ನು ಮತ್ತು ನಂಬಿಕೆಯನ್ನು ನೀಡುತ್ತದೆ. ಅದರಲ್ಲೂ ಯಾವುದೇ ಆಧಾರ ಇಲ್ಲದೆ ಸಾಲ ನೀಡುವ ಸಂದರ್ಭದಲ್ಲಿ ಇದು ತುಂಬ ಮುಖ್ಯ. ಇವತ್ತಿನ ಬಹುತೇಕ ವೈಯಕ್ತಿಕ ಸಾಲಗಳಿಗೆ ಆಧಾರ ಏನನ್ನೂ ಪಡೆಯುವುದಿಲ್ಲ. ಈ ಪರ್ಸನಲ್ ಲೋನ್ ಗಳು ವಾಪಸ್ ಮಾಡಲಿಲ್ಲ ಅಂದರೂ ಯಾವುದೇ ಸೆಕ್ಯುರಿಟಿ ಅಥವಾ ಜಾಮೀನು ಇರುವುದಿಲ್ಲ. ಆದ್ದರಿಂದ ಪರ್ಸನಲ್ ಲೋನ್ ವಿತರಣೆ ವೇಳೆ ಅರ್ಹತಾ ಮಾನದಂಡಗಳು ಬಹಳ ಮುಖ್ಯವಾಗುತ್ತವೆ.

ಸಾಲ ನೀಡುವವರು ಮತ್ತು ಹಣಕಾಸು ಸಂಸ್ಥೆಗಳಿಗೆ ಅರ್ಹತೆಯು ಹೇಗೆ ಸಹಾಯ ಮಾಡುತ್ತದೆ?

ಭಾರತದಲ್ಲಿ ವೈಯಕ್ತಿಕ ಸಾಲವನ್ನು ನಾನಾ ಬಗೆಯ ಅರ್ಜಿದಾರರಿಗೆ ಕೊಡಲಾಗುತ್ತದೆ. ಆ ಪೈಕಿ ಹಲವರು ಸಮಯಕ್ಕೆ ಸರಿಯಾಗಿ ವಾಪಸ್ ಮಾಡುತ್ತಾರೆ, ಕೆಲವರು ಕಟ್ಟದಿರುವ ಸಾಧ್ಯತೆಯೂ ಇದೆ. ಸಮಯಕ್ಕೆ ಸರಿಯಾಗಿ ಕಂತು ಕಟ್ಟದಿದ್ದರೆ, ಅದ್ಯಾಕೆ ಸಾಲವೇ ಕಟ್ಟದಿದ್ದರೆ ಬ್ಯಾಂಕ್ ಗಳು ಮತ್ತು ಆರ್ಥಿಕ ಸಂಸ್ಥೆಗಳಿಗೆ ಹೊರೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಅರ್ಹತಾ ಮಾನದಂಡಗಳು ಮುನ್ನೆಲೆಗೆ ಬರುತ್ತದೆ.

ಅರ್ಹತಾ ಮಾನದಂಡಗಳು ಸಾಲ ನೀಡುವವರಿಗೆ ಎಲ್ಲೆಲ್ಲಿ ಸಹಾಯಕ್ಕೆ ಬರುತ್ತವೆ

1 ಸುರಕ್ಷೆ, ನಂಬಿಕೆ ಹಾಗೂ ಭದ್ರತೆ: ಯಾವುದೇ ಸಾಲ ನೀಡಿದವರಿಗೆ ಅದು ವಾಪಸ್ ಬರುತ್ತದಾ ಎಂಬ ಬಗ್ಗೆ ಆತಂಕ ಇರುತ್ತದೆ. ಯಾವಾಗ ಅರ್ಹತೆ ಎಂದು ನಿಗದಿಯಾಗುತ್ತದೋ ಆಗ ಆರ್ಥಿಕ ಚೈತನ್ಯ ಇರುವ ಗ್ರಾಹಕರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೊಟ್ಟ ಹಣದ ಬಗ್ಗೆ ಆತಂಕ ಇರುವುದಿಲ್ಲ.

2 ಪ್ರಕ್ರಿಯೆಯಲ್ಲಿ ವೇಗ: ನೀವು ಯಾವುದೇ ಸಮಯದಲ್ಲಿ ಗಮನಿಸಿ, ಪರ್ಸನಲ್ ಲೋನ್ ಗೆ ಅರ್ಜಿ ಹಾಕಿಕೊಂಡವರು ಸಾವಿರಾರು ಮಂದಿ ಇದ್ದೇ ಇರ್ತಾರೆ. ಈ ಪೈಕಿ ಯಾರು ಸರಿಯಾಗಿ ವಾಪಸ್ ಕೊಡ್ತಾರೆ, ಅಥವಾ ಈಗ ಸಾಲ ತಗೊಂಡು ಯಾರಿಗೆ ಹಣ ವಾಪಸ್ ನೀಡುವಷ್ಟು ಆದಾಯ ಮೂಲ ಇಲ್ಲ ಎಂದು ತಿಳಿದುಕೊಳ್ಳೋದು ಮುಖ್ಯ.

ಆಗ ಬಂದ ಅರ್ಜಿಗಳಲ್ಲಿ ಯಾರು ಸಾಲ ಪಡೆಯಲು ಅರ್ಹರಲ್ಲ ಎಂಬುದನ್ನು ಬೇಗ ತಿಳಿಯಬಹುದು. ಇದರಿಂದ ಅರ್ಹರಿಗೆ ಬೇಗ ಸಾಲ ಸಿಗುತ್ತದೆ.

3 ಸಾಚಾತನ ತಿಳಿಯಬಹುದು: ಪೇ ಸ್ಲಿಪ್, ಕೆಲಸದ ನೇಮಕಾತಿ ಪತ್ರ ಅಥವಾ ಗುರುತಿನ ಚೀಟಿ ಇವೆಲ್ಲವೂ ಸಾಲ ನೀಡುವಾಗ ಅರ್ಜಿದಾರರ ಸಾಚಾತನವನ್ನು ಖಾತ್ರಿ ಪಡಿಸುತ್ತವೆ. ಮತ್ತು ಸಾಲಕ್ಕೆ ಅರ್ಜಿ ಹಾಕಿದ ವ್ಯಕ್ತಿಯಲ್ಲಿ ಮೋಸವಿಲ್ಲ ಎಂಬುದನ್ನು ಸಾಬೀತು ಪಡಿಸುತ್ತವೆ. ಎಲ್ಲ ಸುಳ್ಳು ದಾಖಲೆ ಅಥವಾ ಹಗರಣದಿಂದ ತುಂಬಿರುವ ವ್ಯವಸ್ಥೆ ಮಧ್ಯೆಯೂ ಸರಿಯಾದ ಅರ್ಜಿದಾರರಿಗೆ ವೈಯಕ್ತಿಕ ಸಾಲವು ವೇಗವಾಗಿ ಹಾಗೂ ಸುಲಭವಾಗಿ ದೊರೆಯುತ್ತದೆ.

4 ಸಾಲ ಯೋಜನೆಗಳನ್ನು ರೂಪಿಸಲು ಅನುಕೂಲ: ಅರ್ಹತಾ ಮಾನದಂಡಗಳು ಸಾಲ ಪಡೆಯುವವರ ಬಗ್ಗೆ ಹಲವಾರು ಮಾಹಿತಿ ನೀಡುತ್ತವೆ. ಈ ಮಾಹಿತಿಯಿಂದ ಆಯಾ ವ್ಯಕ್ತಿಯ ಆದಾಯಕ್ಕೆ ಹೊಂದುವ ಸಾಲದ ಯೋಜನೆ ಒದಗಿಸಲು ನೆರವಾಗುತ್ತದೆ.

ಒಂದು ವೇಳೆ ಅರ್ಹತಾ ಮಾನದಂಡ ಇಲ್ಲದಿದ್ದರೆ ಏನಾಗುತ್ತದೆ?

1 ಅರ್ಜಿದಾರರ ಆಯ್ಕೆ ಹಾಗೂ ಅವರ ಅರ್ಹತೆಯನ್ನು ನಿರ್ಧರಿಸುವುದೇ ಸಾಲ ನೀಡುವವರಿಗೆ ಕಷ್ಟವಾಗುತ್ತದೆ. ಸಾಲ ವಿತರಣೆ ಹಾಗೂ ಹಣ ನೀಡುವುದರಲ್ಲೂ ತಡವಾಗುತ್ತದೆ. ಯಾರಿಗೆ ವೈಯಕ್ತಿಕ ಸಾಲ ಬೇಗ ಸಿಗಲಿ ಎಂದಿರುತ್ತಾರೋ, ಹಣದ ಅಗತ್ಯ ತೀರಾ ಇರುತ್ತದೋ ಅಂತಹವರಿಗೆ ನಿರ್ಣಾಯಕವಾಗುತ್ತದೆ.

2 ಅರ್ಹತಾ ಮಾನದಂಡವೇ ಇಲ್ಲದಿದ್ದರೆ ಸಾಲ ನೀಡುವವರಿಗೆ ಯಾರು ಅರ್ಹರು ಅಂತ ನಿರ್ಧರಿಸುವುದೇ ಸಾಧ್ಯವಾಗುವುದಿಲ್ಲ. ಇದರಿಂದ ಅರ್ಜಿ ತಿರಸ್ಕಾರ ಮಾಡುವುದರಲ್ಲಿ ನ್ಯಾಯಬದ್ಧತೆಯೇ ಇರುವುದಿಲ್ಲ. ಒಟ್ಟಾರೆ ಸಾಲಕ್ಕೆ ಒಪ್ಪಿಗೆ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯೇ ಇರುವುದಿಲ್ಲ.

ವೈಯಕ್ತಿಕ ಸಾಲದ ಅರ್ಜಿ ಒಪ್ಪಿಗೆ ಹಿಂದಿನ ಅರ್ಹತಾ ಮಾನದಂಡಗಳೇನು?

ಪರ್ಸನಲ್ ಲೋನ್ ಅರ್ಜಿಯನ್ನು ಒಂದೊಂದು ಸಾಲ ನೀಡುವ ಕಂಪೆನಿಗಳು ಒಂದೊಂದು ರೀತಿ ನೋಡುತ್ತವೆ. ಆದರೆ ಬಹುತೇಕರು ಗಮನಿಸುವುದು ಈ ಅಂಶಗಳನ್ನೇ: ತಿಂಗಳ ಆದಾಯ, ವಯಸ್ಸು, ಕ್ರೆಡಿಟ್ ಸ್ಕೋರ್, ಉದ್ಯೋಗದಾತ ಮತ್ತು ವ್ಯವಹಾರ ಹೇಗಿದೆ ಅಥವಾ ಬ್ಯಾಲನ್ಸ್ ಶೀಟ್ (ಒಂದು ವೇಳೆ ನೀವು ಸ್ವಂತ ಉದ್ಯೋಗಸ್ಥರಾಗಿದ್ದರೆ).

ಈ ಮಾಹಿತಿಗಳಿಂದ ಕೇವಲ ಅರ್ಜಿದಾರರಿಗೆ ಸಾಲ ಕೊಡಬೇಕೋ ಬೇಡವೋ ಅನ್ನೋದು ಮಾತ್ರವಲ್ಲ, ಬಡ್ಡಿ ದರ, ಸಾಲದ ಮೊತ್ತ ಅರ್ಹತೆ ನಿರ್ಧರಿಸುವುದಕ್ಕೂ ಅನುಕೂಲ ಆಗುತ್ತದೆ. ಒಂದು ಉದಾಹರಣೆ ಕೇಳಿ. ನಿಮಗೆ ತಿಂಗಳಿಗೆ ಇಪ್ಪತ್ತು ಸಾವಿರ ಸಂಬಳ ಬರ್ತಿದೆ ಅಂದುಕೊಳ್ಳೋಣ. ನೀವು ಎರಡು ಲಕ್ಷ ಸಾಲ ಪಡೆಯಲು ಅರ್ಹರು.

ಈ ಲೆಕ್ಕಾಚಾರವನ್ನು ಆನ್ ಲೈನ್ ಪರ್ಸನಲ್ ಲೋನ್ ಎಲಿಜಿಬಿಲಿಟಿ ಕ್ಯಾಲ್ಕುಲೇಟರ್ ಮೂಲಕ ತಿಳಿದುಕೊಳ್ಳಬಹುದು.

ವೈಯಕ್ತಿಕ ಸಾಲ ನೀಡುವ ಮುನ್ನ ಗಮನಿಸುವ ಅಂಶಗಳು

ನೀವು ಎಷ್ಟು ಮೊತ್ತದ ಪರ್ಸನಲ್ ಲೋನ್ ಗೆ ಅರ್ಹರು ಎಂಬುದನ್ನು ತಿಳಿಯುವುದಕ್ಕೆ ನಾನಾ ಸಂಗತಿಗಳನ್ನು ಗಮನಿಸಲಾಗುತ್ತದೆ. ಈ ವಿಚಾರಗಳಿಂದ ಸಾಲ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಾರೆ. ಇಲ್ಲಿ ಕೆಲವು ಸಾಮಾನ್ಯ ಅಂಶಗಳನ್ನು ಕೊಡಲಾಗಿದೆ. ಇವುಗಳನ್ನೇ ಸಾಲ ನೀಡುವಾಗ ಗಮನಿಸಲಾಗುತ್ತದೆ.

1 ಆದಾಯ: ಇದು ಮೊದಲು ಹಾಗೂ ತುಂಬ ಮುಖ್ಯವಾದ ವಿಚಾರ. ವೈಯಕ್ತಿಕ ಸಾಲದ ಅರ್ಜಿಯಲ್ಲಿ ಮೊದಲು ಇದನ್ನೇ ಗಮನಿಸುತ್ತಾರೆ. ಉದ್ಯೋಗದ ಮೂಲಕ ಆದಾಯ ಬರುತ್ತಿದೆಯಾ ಅಥವಾ ಬಾಡಿಗೆ, ಹೂಡಿಕೆ ಅಥವಾ ಬೇರೆ ಯಾವುದಾದರೂ ಮೂಲದಿಂದ ಹಣ ಬರುತ್ತಿದೆಯಾ ಎನ್ನುವುದನ್ನು ತಿಳಿಯುತ್ತಾರೆ. ನಿಮ್ಮ ಆದಾಯದಿಂದ ಎರಡು ವಿಚಾರ ನಿರ್ಧರಿಸುತ್ತಾರೆ: ನಿಮ್ಮ ಮರುಪಾವತಿ ಸಾಮರ್ಥ್ಯ ಹಾಗೂ ಎಷ್ಟು ಸಾಲ ಪಡೆಯಲು ನೀವು ಅರ್ಹರು ಎಂಬುದು ಗೊತ್ತಾಗುತತ್ದೆ. ಅದನ್ನು ತಿಳಿಯುವುದಕ್ಕೆ ಅಂತಲೇ ನಿಮ್ಮ ಪೇ ಸ್ಲಿಪ್, ಬ್ಯಾಂಕ್ ಸ್ಟೇಟ್ ಮೆಂಟ್ ಮತ್ತು ಇತರ ಹಣಕಾಸಿನ ಮಾಹಿತಿ ಕೇಳಬಹುದು.

2 ಉದ್ಯೋಗದ ಸ್ಥಿತಿಗತಿ: ಈ ವಿಚಾರಕ್ಕೂ ನಿಮ್ಮ ಆದಾಯಕ್ಕೂ ನೇರ ಸಂಬಂಧ ಇದೆ. ಇದರಿಂದ ಅರ್ಜಿದಾರರ ಆದಾಯದಲ್ಲಿ ಸ್ಥಿರತೆ ಇದೆಯೆ ಎಂಬುದು ತಿಳಿಯುತ್ತದೆ. ನಿರುದ್ಯೋಗಿಗಳ ಸಾಲದ ಅರ್ಜಿಗಳು ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ಸ್ಥಿರವಾದ ಉದ್ಯೋಗ ಇರುವವರಿಗೆ ಸಾಲ ಸಿಗುವ ಸಾಧ್ಯತೆ ಹೆಚ್ಚು. ಈ ಅಗತ್ಯವನ್ನು ಪೂರೈಸುವುದಕ್ಕೆ ನಿಮ್ಮ ಉದ್ಯೋಗದಾತರು ಅಥವಾ ಕಂಪೆನಿಯಿಂದ ಪತ್ರವನ್ನು ಪಡೆದು, ಸಾಕ್ಷಿಯಾಗಿ ನೀಡಬೇಕು. ಇದರಿಂದ ನಿಮ್ಮ ಸಾಚಾತನವನ್ನು ಸಾಬೀತು ಮಾಡಿದಂತೆಯೂ ಆಗುತ್ತದೆ ಮತ್ತು ನಂಬಲು ಅರ್ಹವಾದ ಮೂಲವೊಂದರಿಂದಲೇ ನಿಮಗೆ ಆದಾಯ ಬರುತ್ತಿದೆ ಎಂಬುದು ಖಾತ್ರಿಯಾಗುತ್ತದೆ

3 ವಯಸ್ಸು: ನಿಮ್ಮ ವಯಸ್ಸು ಸಾಲವನ್ನು ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಪರಿಗಣಿಸುವ ಕೊನೆ ಅಂಶ. ಇದು ನಿಮ್ಮ ಉದ್ಯೋಗ ಹಾಗೂ ಆದಾಯಕ್ಕೆ ಸಂಬಂಧಪಟ್ಟಿರುತ್ತದೆ. ವಯಸ್ಸಿನಲ್ಲಿ ಚಿಕ್ಕವರು, ಉದ್ಯೋಗದಲ್ಲಿರುವವರು ಸುಲಭ ಹಾಗೂ ವೇಗವಾಗಿ ಸಾಲ ಪಡೆಯುತ್ತಾರೆ. ಏಕೆಂದರೆ ಸಣ್ಣ ವಯಸ್ಸಿನವರ ಆದಾಯ ಭವಿಷ್ಯದಲ್ಲಿ ಏರಿಕೆ ಆಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಈ ಸಾಮರ್ಥ್ಯ ಹಾಗೂ ಅರ್ಹತೆ ಸಾಲದ ಕಂತನ್ನು ಪಾವತಿಸುತ್ತಾರೆ ಎಂಬುದನ್ನು ಖಾತ್ರಿಪಡಿಸುತ್ತದೆ. ಮತ್ತು ಅವರಿಗೆ ಹೆಚ್ಚಿನ ಆರ್ಥಿಕ ಹೊರೆಗಳಿರುವುದಿಲ್ಲ. ಆದ್ದರಿಂದ ಸಾಲ ವಾಪಸ್ ಕಟ್ಟುವುದು ಅವರಿಗೆ ಸುಲಭ

4 ಕ್ರೆಡಿಟ್ ಸ್ಕೋರ್: ಇಂತಿಷ್ಟು ಅಂತ ಸಿಬಿಲ್ ಸ್ಕೋರ್ (CIBIL) ಪರ್ಸನಲ್ ಲೋನ್ ಗೆ ಬಹಳ ಮುಖ್ಯ. ಈ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ನಿಂದ ಸಾಲ ಪಡೆಯುವವರ ಈ ಹಿಂದಿನ ಇತಿಹಾಸ ಹಾಗೂ ಮರುಪಾವತಿ ಬಗ್ಗೆ ಗೊತ್ತಾಗುತ್ತದೆ. ಇದರಿಂದ ಅವರ ಸಾಲ ಪಡೆಯುವ ಸಾಮರ್ಥ್ಯ ಎಷ್ಟು ಅಂತ ಗೊತ್ತಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಅಂದರೆ 750. ಇಷ್ಟು ಅಂಕವಿದ್ದರೆ ಸಾಲ ನೀಡುವವರನ್ನು ಆಕರ್ಷಿಸುತ್ತದೆ. ಏಕೆಂದರೆ ಅದು ನೀವು ಸಮಯಕ್ಕೆ ಸರಿಯಾಗಿ ಸಾಲ ಹಿಂತಿರುಗಿಸುತ್ತೀರಿ ಅನ್ನೋದನ್ನೇ ಸಾಬೀತು ಪಡಿಸುತ್ತದೆ.

ಅದೇ ಕಡಿಮೆ ಕ್ರೆಡಿಟ್ ಸ್ಕೋರ್ (700 ಅಥವಾ 650) ನಿಮಗೆ ಸಾಲ ಸಿಗುವ ಸಾಧ್ಯತೆಯನ್ನು ಕಡಿಎ ಮಾಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ನಿಂದಲೇ ಬಡ್ಡಿದರ ಕೂಡ ನಿರ್ಧಾರವಾಗುತ್ತದೆ. ಕ್ರೆಡಿಟ್ ಕಾರ್ಡ್ ಗಳ ಬಿಲ್ ತಡವಾಗಿ ಕಟ್ಟಿರುವುದು, ಸಿಕ್ಕಾಪಟ್ಟೆ ಕ್ರೆಡಿಟ್ ಕಾರ್ಡ್ ಗಳು ಇರುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವ ಹಾಗೂ ಆ ಮೂಲಕ ಹೆಚ್ಚಿನ ಬಡ್ಡಿ ಹಾಕುವ ಸಾಧ್ಯತೆ ಇರುತ್ತದೆ.

ನಿಮಗೆ ಮೂವತ್ತೈದು ಸಾವಿರ ಸಂಬಳ ಬರ್ತಿದ್ದರೆ ಗರಿಷ್ಠ ಎಷ್ಟು ಪರ್ಸನಲ್ ಲೋನ್ ಸಿಗಬಹುದು?

ಸಂಬಳದ ಆಧಾರದ ಮೇಲೆ ಎಷ್ಟು ಪರ್ಸನಲ್ ಲೋನ್ ಸಿಗುತ್ತದೆ ಎಂಬುದು ಹೇಗೆ ಗೊತ್ತಾಗತ್ತದೆ ಎಂದು ನಿಮಗೆ ಆಶ್ಚರ್ಯ ಆಗ್ತಿದೆಯಾ? ನೀವು ಸುಲಭವಾಘಿ ಪರ್ಸನಲ್ ಲೋನ್ ಅರ್ಹತೆಯನ್ನು ತಿಳಿಯಬಹುದು. ಪರ್ಸನಲ್ ಲೋನ್ ಎಲಿಜಿಬಿಲಿಟಿ ಕ್ಯಾಲ್ಕುಲೇಟರ್ ಬಳಸಿದರೆ ಗೊತ್ತಾಗುತ್ತದೆ. ಆದರೆ ನೀವು ಈ ಮಾಹಿತಿಯನ್ನು ನೀಡಬೇಕು.

* ನಿಮ್ಮ ಜನ್ಮ ದಿನಾಂಕ

* ನೀವು ವಾಸವಿರುವ ನಗರ

* ನಿಮ್ಮ ಉದ್ಯೋಗದಾತರು ಹಾಗೂ ಕೆಲಸ ಮಾಡುವ ಕಂಪೆನಿ ಹೆಸರು

* ನಿಮ್ಮ ತಿಂಗಳ ಆದಾಯ

* ನೀವು ಈಗಾಗಲೇ ಯಾವುದಾದರೂ ಸಾಲ ಅಥವಾ ಗೃಹ ಸಾಲದ ಮರುಪಾವತಿ ಮಾಡುತ್ತಿದ್ದೀರಾ ಎಂಬುದಕ್ಕೆ ಉತ್ತರಿಸಬೇಕು.

ಒಂದು ಸಲ ಈ ಎಲ್ಲ ಮಾಹಿತಿಯನ್ನು ತುಂಬಿದ ಮೇಲೆ ಪರ್ಸನಲ್ ಲೋನ್ ಎಲಿಜಿಬಿಲಿಟಿ ಕ್ಯಾಲ್ಕುಲೇಟರ್ ನೀವೆಷ್ಟು ಸಾಲ ಪಡೆಯಲು ಅರ್ಹರು ಎಂಬುದನ್ನು ಕೆಲವೇ ಸೆಕೆಂಡುಗಳಲ್ಲಿ ನೀಡುತ್ತದೆ.

ಉದಾಹರಣೆಗೆ ನಿಮ್ಮ ಸಂಬಳ ತಿಂಗಳಿಗೆ ಮೂವತ್ತೈದು ಸಾವಿರ ಇದ್ದರೆ, ನೀವು ಮೂರೂವರೆ ಲಕ್ಷದವರೆಗೆ ಸಾಲ ಪಡೆಯುವುದಕ್ಕೆ ಅರ್ಹರು.

ನೀವೇ ಪರೀಕ್ಷೆ ಮಾಡಿಕೊಳ್ಳಿ, ನೀವೆಷ್ಟು ಮೊತ್ತದ ಪರ್ಸನಲ್ ಲೋನ್ ಪಡೆಯುವುದಕ್ಕೆ ಅರ್ಹರು ಎಂದು ಗೊತ್ತಾಗುತ್ತದೆ.

ಪರ್ಸನಲ್ ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರುವ ವಿಚಾರಗಳು ಯಾವುವು?

ನೀವು ಸಾಲ ಪಡೆಯಲು ಅರ್ಹರಲ್ಲವೆ? ಯೋಚನೆ ಮಾಡಬೇಡಿ. ವೈಯಕ್ತಿಕ ಸಾಲದ ಅರ್ಹತೆ ಮೇಲೆ ಹಲವು ಅಂಶಗಳು ಪರಿಣಾಮ ಬೀರುತ್ತವೆ. ನಿಮ್ಮ ಅರ್ಹತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೂ ಹಲವು ದಾರಿಗಳಿವೆ ಮತ್ತು ನಿಮ್ಮ ಸಾಲದ ಮೇಲಿನ ಬಡ್ಡಿ ದರವನ್ನೂ ಕಡಿಮೆ ಮಾಡಿಸಿಕೊಳ್ಳಬಹುದು. ಆ ದಾರಿಗಳ ವಿವರಣೆ ಇಲ್ಲಿದೆ.

1 ಸ್ಥಿರವಾದ ಉದ್ಯೋಗ ಪಡೆಯಿರಿ : ಸಾಲ ಮಂಜೂರಿಗೆ ಉದ್ಯೋಗ ಬಹಳ ಮುಖ್ಯವಾದ ಅಂಶ. ಇದು ನೇರವಾಗಿ ಆದಾಯಕ್ಕೆ ಸಂಬಂಧಿಸಿದ್ದು. ಆದ್ದರಿಂದ ಒಳ್ಳೆ ಸಂಬಳ ಬರುವ ಹಾಗೂ ಸ್ಥಿರವಾದ ಉದ್ಯೋಗ ಬಹಳ ಮುಖ್ಯ. ದಿನದಿಂದ ದಿನಕ್ಕೆ ಉದ್ಯೋಗ ಮಾರುಕಟ್ಟೆ ವಿಸ್ತರಣೆ ಆಗುತ್ತಿದೆ. ನಿಮ್ಮ ಕನಸಿನ ಉದ್ಯೋಗ ಪಡೆಯುವುದರಲ್ಲಿ ಯಾವ ಕಷ್ಟವೂ ಇಲ್ಲ.

ನಿಮ್ಮ ಶೈಕ್ಷಣಿಕ ಹಿನ್ನೆಲೆ, ಸಾಮರ್ಥ್ಯದ ಆಧಾರದ ಮೇಲೆ ಹಲವಾರು ವಲಯಗಳಲ್ಲಿ ಉದ್ಯೋಗ ಗಿಟ್ಟಿಸಬಹುದು. ಒಂದು ಪ್ರತಿಷ್ಠಿತ ಕಂಪೆನಿಯ ಕೆಲಸವು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡಬಲ್ಲದು. ಇದರಿಂದ ಸಾಲವೂ ಬೇಗ ಸಿಗುತ್ತದೆ, ಜತೆಗೆ ಬಡ್ಡಿದರದಲ್ಲೂ ಕಡಿಮೆ ಆಗುತ್ತದೆ.

2 ಶ್ರಮಪಟ್ಟು ಕೆಲಸ ಮಾಡಿ, ಬಡ್ತಿ ಪಡೆಯಿರಿ: ಒಂದು ವರ್ಷದಲ್ಲಿ ಸಂಬಳಕ್ಕಾಗಿ ಕೆಲಸ ಬಿಟ್ಟು ಮತ್ತೊಂದು ಕಡೆ ಹೋಗುವ ಬದಲು ನೀವು ಇಷ್ಟ ಪಡುವ ಸಂಸ್ಥೆಯಲ್ಲಿ ಕೆಲಸ ಮಾಡಿ ಮತ್ತು ಬಡ್ತಿ ಪಡೆಯಲು ಪ್ರಯತ್ನಿಸಿ. ಹೀಗೆ ಬಡ್ತಿ ಪಡೆಯುವುದರಿಂದ ಸಂಬಳ ಮತ್ತು ಸವಲತ್ತು ಹೆಚ್ಚಾಗುವುದಷ್ಟೇ ಅಲ್ಲ, ಬೋನಸ್ ಮತ್ತಿತರವು ಕೂಡ ಹೆಚ್ಚಿಗೆ ಸಿಗುತ್ತವೆ.

ಆದರೆ, ಇದರಿಂದ ಸಾಲ ನೀಡುವವರ ಪಾಲಿಗೆ ಕೆಲಸದ ವಿಚಾರದಲ್ಲಿ ಗಂಭೀರವಾಗಿದ್ದೀರಿ ಎಂದೆನಿಸುತ್ತದೆ. ಇದರಿಂದ ನಿಮ್ಮ ಸಾಲದ ಅರ್ಜಿಗೆ ಬೇಗ ಒಪ್ಪಿಗೆ ಸಿಗುತ್ತದೆ.

3 ಪರ್ಯಾಯ ಮೂಲಗಳಿಂದ ನಿಮ್ಮ ಆದಾಯ ಹೆಚ್ಚಿಸಿಕೊಳ್ಳಿ: ಉದ್ಯೋಗ ಅನ್ನೋದು ಒಂದು ಆದಾಯದ ಮೂಲ. ಆದರೆ ನಿಮ್ಮ ಬಿಡುವಿನ ವೇಳೆಯಲ್ಲಿ ಮತ್ತೊಂದು ಕೆಲಸ ಮಾಡಿ, ಒಳ್ಳೆ ಆದಾಯ ಗಳಿಸಬಹುದು. ಅದನ್ನೇ ಬುದ್ಧಿವಂತಿಕೆಯಿಂದ ಎಫ್ ಡಿ, ಮ್ಯೂಚ್ಯುವಲ್ ಫಂಡ್ ಮುಂತಾದ ಕಡೆ ಹೂಡಿಕೆ ಮಾಡಬಹುದು.

ಅಷ್ಟೇ ಏಕೆ, ಚಿನ್ನದ ಬಾಂಡ್ ಗಳ ಮೇಲೆ ಸಹ ಹೂಡಬಹುದು. ಆಸ್ತಿ ಖರೀದಿ ಮಾಡಿ ಬಾಡಿಗೆ ಬಿಡಬಹುದು.ಹೀಗೆ ತಿಂಗಳ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ನಾನಾ ಮಾರ್ಗಗಳಿವೆ. ಇದರಿಂದ ನಿಮಗೆ ಪರ್ಸನಲ್ ಲೋನ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

4 ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ: ಸಾಲವನ್ನು ಮಂಜೂರು ಮಾಡುವುದಕ್ಕೆ ಮುಂಚೆ ತುಂಬ ಪ್ರಮುಖವಾಗಿ ಗಮನಿಸುವುದು ಕ್ರೆಡಿಟ್ ಸ್ಕೋರ್. ಇದು ನಿಮ್ಮ ಸಾಲ ತೀರಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಆ ಮೂಲಕ ನೀವು ಸಾಲ ಮರುಪಾವತಿಸುವಷ್ಟು ಚೈತನ್ಯ ಹೊಂದಿದ್ದೀರೋ ಇಲ್ಲವೋ ಎಂಬುದನ್ನು ಸಾಲ ನೀಡುವವರು ನಿರ್ಧರಿಸುತ್ತಾರೆ.

ಹಲವು ಸಂಗತಿಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. ನಿಮ್ಮ ಹಿಂದಿನ ಸಾಲಗಳನ್ನು ಹೇಗೆ ಪಾವತಿಸಿದ್ದೀರಿ, ಇಎಂಐಗಳನ್ನು ಸರಿಯಾದ ಸಮಯಕ್ಕೆ ಕಟ್ಟಿದ್ದೀರಾ, ಕ್ರೆಡಿಟ್ ಕಾರ್ಡ್ ಗಳು ಕಡಿಮೆ ಇವೆಯಾ, ಅವುಗಳ ಬಿಲ್ ಗಳನ್ನು ನಿಗದಿತ ಸಮಯಕ್ಕೆ ಪಾವತಿಸಿದ್ದೀರಾ..ಮುಂತಾದವುಗಳನ್ನು ಗಮನಿಸುತ್ತಾರೆ.

ಈ ಎಲ್ಲವೂ ನಿಮ್ಮ ಕ್ರೆಡಿಟ್ ರೇಟಿಂಗ್ ನ ಹೆಚ್ಚಿಸುತ್ತವೆ ಮತ್ತು ಪರ್ಸನಲ್ ಲೋನ್ ಸಿಗುವ ಸಾಧ್ಯತೆಗಳನ್ನು ಸಹ ಹೆಚ್ಚು ಮಾಡುತ್ತವೆ. ಜತೆಗೆ ಸಾಲದ ಮೇಲಿನ ಬಡ್ಡಿ ದರ ಕೂಡ ಕಡಿಮೆಯಾಗುತ್ತದೆ.

5 ನಿಮಗೆ ಇತರ ಆರ್ಥಿಕ ಜವಾಬ್ದಾರಿಗಳಿಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳಿ: ಜೀವನದಲ್ಲಿ ಹಣಕಾಸಿನ ಜವಾಬ್ದಾರಿಗಳು ಹಾಗೂ ಹೊಣೆಗಾರಿಕೆ ಹೆಚ್ಚಾಗುವುದು ತುಂಬ ಸಹಜವಾದದ್ದು. ನೀವು ಸಾಲಕ್ಕೆ ಅರ್ಜಿ ಹಾಕಿಕೊಂಡಾಗ ಬೇರೆ ಆರ್ಥಿಕ ಜವಾಬ್ದಾರಿಗಳಿಲ್ಲ, ಅದರಿಂದ ಮರುಪಾವತಿ ಮಾಡುವುದಕ್ಕೆ ತಡವಾಗುವುದಿಲ್ಲ ಅಥವಾ ನಿಮ್ಮ ಹೂಡಿಕೆ ಮತ್ತು ಆದಾಯದಿಂದ ಎಲ್ಲವೂ ಸಂಭಾಳಿಸಬಲ್ಲೆ ಎಂಬುದನ್ನು ಸಾಬೀತು ಪಡಿಸಬೇಕು.

ಒಂದು ವೇಳೆ ನಿಮಗೆ ಬೇರೆ ಸಾಲಗಳಿದ್ದಲ್ಲಿ ಪರ್ಸನಲ್ ಲೋನ್ ಗಾಗಿ ಅರ್ಜಿ ಹಾಕಿಕೊಳ್ಳುವ ಮುಂಚೆಯೇ ತೀರಿಸಿಬಿಡಿ. ಇದರಿಂದ ಸಾಲ ಸಿಗುವ ಸಾಧ್ಯತೆಗಳು ಜಾಸ್ತಿಯಾಗುತ್ತವೆ.

ನಿಮ್ಮ ವೈಯಕ್ತಿಕ ಸಾಲದ ಅರ್ಹತೆಯನ್ನು ತಿಳಿಯುವುದಕ್ಕೆ ಆನ್ ಲೈನ್ ಎಲಿಜಿಬಿಲಿಟಿ ಕ್ಯಾಲ್ಕುಲೇಟರ್ ಹೇಗೆ ಬಳಸಬಹುದು?

ಇಲ್ಲಿ ಕೆಲವು ಸುಲಭ ಮಾರ್ಗಗಳಿವೆ. ಆ ಮೂಲಕ ನಿಮ್ಮ ವೈಯಕ್ತಿಕ ಸಾಲದ ಅರ್ಹತೆಯನ್ನು ಆನ್ ಲೈನ್ ನಲ್ಲೇ ತಿಳಿಯಬಹುದು. ಈ ಕ್ರಮವನ್ನು ಅನುಸರಿಸಿ.

1 ನಿಮ್ಮ ಜನ್ಮ ದಿನಾಂಕ ಭರ್ತಿ ಮಾಡಿ. ನೀವು ಕೆಲಸ ಮಾಡುತ್ತಿರುವ ಕಂಪೆನಿ ಹೆಸರು, ತಿಂಗಳಿಗೆ ನಿಮ್ಮ ಕೈಗೆ ಬರುವ ಸಂಬಳ, ನೀವು ಹಿಂದೆ ಪಡೆದ ಸಾಲಗಳಿಗೆಲ್ಲ ಸೇರಿ ಒಟ್ಟು ಪಾವತಿಸುತ್ತಿರುವ ಕಂತು, ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಪಾವತಿ ಬಾಕಿ ಇರುವ ಮೊತ್ತ, ಗೃಹಸಾಲವೇನಾದರೂ ಇದ್ದರೆ ಆ ಮಾಹಿತಿ ತುಂಬಿ.

2 'Check Your Eligibillity' ಎಂದಿರುವ ಬಟನ್ ಒತ್ತಿ.

3 ನೀವೀಗ ಗರಿಷ್ಠ ಎಷ್ಟು ಸಾಲ ಪಡೆಯಲು ಅರ್ಹರು ಎಂಬುದು ಗೊತ್ತಾಗುತ್ತದೆ. ಇದು ಬಹಳ ಸುಲಭ.

ಮದುವೆ ಖರ್ಚು, ನಿಮ್ಮದು ಅಥವಾ ಮಕ್ಕಳ ವಿದ್ಯಾಭ್ಯಾಸ, ಪ್ರವಾಸಕ್ಕಾಗಿ ಹಣ, ಮನೆ ದುರಸ್ತಿ, ಮೆಡಿಕಲ್ ಬಿಲ್ ಕೊಡುವುದಕ್ಕೆ ಅಥವಾ ಒಟ್ಟಾರೆ ಎಲ್ಲ ಕ್ರೆಡಿಟ್ ಕಾರ್ಡ್ ಗಳ ಬಾಕಿ ತೀರಿಸುವುದಕ್ಕೆ... ಹೀಗೆ ಯಾವುದೇ ಅಗತ್ಯಗಳಿಗೆ ಪರ್ಸನಲ್ ಲೋನ್ ಬಳಸಬಹುದು. ಬಜಾಜ್ ಫೈನಾನ್ಸ್ ಸರ್ವೀಸ್ ನಿಂದ ಕಡಿಮೆ ಬಡ್ಡಿದರಲ್ಲಿ ಪರ್ಸನಲ್ ಲೋನ್ ನೀಡಲಾಗುತ್ತದೆ.

ಅದೂ ಕಡಿಮೆ ಬಡ್ಡಿ ದರ, ತಕ್ಷಣದ ಆನ್ ಲೈನ್ ಮಂಜೂರಾತಿ ಮತ್ತು ಶೀಘ್ರ ಹಣ ವರ್ಗಾವಣೆ ಅಂದರೆ ಎಪ್ಪತ್ತೆರಡು ಗಂಟೆಗಿಂತ ಕಡಿಮೆ ಅವಧಿಯಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುತ್ತದೆ!

English summary

Understanding the Eligibility Criteria Required for Personal Loans

Lenders across the country have numerous loan schemes keeping in mind not only your financial needs, but also your income and salary. The Personal Loan eligibility criteria vary from lender to lender, but knowing how much you are eligible for is the first step in getting a Personal Loan to fulfill your needs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X