For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಹೂಡಿಕೆದಾರರ ಮೇಲೆ ತೆರಿಗೆ ಇಲಾಖೆಯ ಹದ್ದಿನ ಕಣ್ಣು! ತಿಳಿದುಕೊಳ್ಳಬೇಕಾದ ಸಂಗತಿಗಳೇನು?

ವ್ಯಕ್ತಿಗಳು ಬ್ಯಾಂಕ್ ಸ್ಥಿರ ಠೇವಣಿ (FD) ಮೂಲಕ ಹೆಚ್ಚಿನ ಬಡ್ಡಿ ಆದಾಯ ಪಡೆಯುತ್ತಿದ್ದಾರೆ. ಆದರೆ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡದೆ ಇರುವುದರಿಂದ ಇಂತಹ ವ್ಯಕ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.

By Siddu
|

ವ್ಯಕ್ತಿಗಳು ಬ್ಯಾಂಕ್ ಸ್ಥಿರ ಠೇವಣಿ (FD) ಮೂಲಕ ಹೆಚ್ಚಿನ ಬಡ್ಡಿ ಆದಾಯ ಪಡೆಯುತ್ತಿದ್ದಾರೆ. ಆದರೆ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡದೆ ಇರುವುದರಿಂದ ಇಂತಹ ವ್ಯಕ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

 

ಬ್ಯಾಂಕ್ ಸ್ಥಿರ ಠೇವಣಿಗಳು (ಎಫ್ಡಿ) ಜನಪ್ರಿಯ ಬಂಡವಾಳ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಸ್ಥಿರ ಠೇವಣಿಗಳಿಂದ ಪಡೆದ ಬಡ್ಡಿಯ ಮೇಲೆ ತೆರಿಗೆಯ ಪರಿಣಾಮಗಳೇನು? ಟಿಡಿಎಸ್ ಸಂಬಂಧಿಸಿದ ನಿಬಂಧನೆಗಳು ಯಾವುವು? ಬ್ಯಾಂಕಿನಲ್ಲಿ ಇರಿಸಿದ ಬ್ಯಾಂಕ್ ಸ್ಥಿರ ಠೇವಣಿಗಳಿಂದ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಗಾಗುವುದೇ ಎಂಬುದು ಗಮನ ಹರಿಸಬೇಕಾದ ವಿಷಯ. ಈ ಆದಾಯಗಳ ಮೇಲೆ ಟಿಡಿಎಸ್ ಕಡಿತವಾಗುತ್ತದೆ ಏಕೆ?

ಬ್ಯಾಂಕ್ ಎಫ್ಡಿ ಹೂಡಿಕೆದಾರರು ತಿಳಿಯಬೇಕಾದ ಪ್ರಮುಖ ತೆರಿಗೆ ನಿಯಮಗಳು ಇಲ್ಲಿವೆ ನೋಡಿ..

ತೆರಿಗೆ ವಿನಾಯಿತಿ ವ್ಯಾಪ್ತಿ

ತೆರಿಗೆ ವಿನಾಯಿತಿ ವ್ಯಾಪ್ತಿ

ಸ್ಥಿರ ಠೇವಣಿಗಳಿಂದ ಬರುವ ಬಡ್ಡಿ ಉಳಿತಾಯ ಖಾತೆಯಂತೆ ತೆರಿಗೆ ವಿನಾಯತಿ ಪಡೆದಿರುವುದಿಲ್ಲ. ಉಳಿತಾಯ ಖಾತೆಯಲ್ಲಿ ವರ್ಷಕ್ಕೆ ಹತ್ತು ಸಾವಿರ ರೂಪಾಯಿ ವರೆಗೆ ತೆರಿಗೆ ವಿನಾಯತಿ ಲಭಿಸುವುದು. ಸ್ಥಿರ ಠೇವಣಿಯಲ್ಲಿನ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಬ್ಯಾಂಕಿನ ವಿವಿಧ ಶಾಖೆಗಳ ಸ್ಥಿರ ಠೇವಣಿಗಳಿಂದ ಪಡೆದ ಬಡ್ಡಿಯ ಆದಾಯವು ಒಂದು ವರ್ಷಕ್ಕೆ ರು 10,000/- ಕ್ಕಿಂತ ಮೇಲ್ಪಟ್ಟಲ್ಲಿ ಶೇ. 10% ದರದಲ್ಲಿ ಬ್ಯಾಂಕುಗಳು ಮೂಲ ಆದಾಯದಲ್ಲಿ ತೆರಿಗೆಯನ್ನು (ಟಿಡಿಎಸ್) ಕಡಿತಗೊಳಿಸುತ್ತವೆ.

ಟಿಡಿಎಸ್ ವ್ಯಾಪ್ತಿ

ಟಿಡಿಎಸ್ ವ್ಯಾಪ್ತಿ

ರಿಕರಿಂಗ್ ಡಿಪಾಸಿಟ್ ಕೂಡ ಟಿಡಿಎಸ್ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ ಸ್ಥಿರ ಠೇವಣಿಯಿಂದ ಬರುವ ಬಡ್ಡಿ ಹಣ ಹಣಕಾಸು ವರ್ಷದಲ್ಲಿ ತೆರಿಗೆ ಮಿತಿಯಿಂದ ಹೆಚ್ಚಿದ್ದಲ್ಲಿ ಫಾರ್ಮ್ 15ಜಿ ಸಲ್ಲಿಸಿದರೂ ಅದು ಅಮಾನ್ಯವಾಗಿರುತ್ತದೆ. ಆದರೆ ಹೆಚ್ಚಿನ ಬ್ಯಾಂಕುಗಳು ಆನ್ಲೈನ್ ಮೂಲಕ 15G ಅಥವಾ 15H ಫಾರ್ಮ್ ಗಳನ್ನು ಸಲ್ಲಿಸಲು ಅವಕಾಶ ನೀಡುತ್ತವೆ.

5G/15H ಫಾರ್ಮ್ ಟಿಡಿಎಸ್ ಕಡಿತ
 

5G/15H ಫಾರ್ಮ್ ಟಿಡಿಎಸ್ ಕಡಿತ

ತೆರಿಗೆ ವ್ಯಾಪ್ತಿಗೆ ಬರದ ಬ್ಯಾಂಕಿನ ಸ್ಥಿರ ಠೇವಣಿ ಹೂಡಿಕೆದಾರರು (ಎಫ್ಡಿ) ಫಾರ್ಮ್ 5G ಅಥವಾ 15H ಸಲ್ಲಿಸುವ ಮೂಲಕ ಟಿಡಿಎಸ್ ಕಡಿತದಿಂದ ಮುಕ್ತವಾಗಬಹುದು. ಒಂದು ವೇಳೆ ಈ ಫಾರಂ ಸಲ್ಲಿಸಲು ಆಗದೇ ಇದ್ದ ಪಕ್ಷದಲ್ಲಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸುವ ಮೂಲಕ ತೆರಿಗೆ ಮರುಪಾವತಿಯನ್ನು ಪಡೆಯಬಹುದಾಗಿದೆ ಹಾಗೂ ನಿಶ್ಚಿತ ಠೇವಣಿಗಳ ಮೇಲೆ ಪಡೆದ ಬಡ್ಡಿಯನ್ನು ಇತರ ಆದಾಯದೊಂದಿಗೆ ಸೇರಿಸಲಾಗುತ್ತದೆ ಮತ್ತು ಆದಾಯದ ಮೇಲೆ ತೆರಿಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ತೆರಿಗೆ ಕಡಿತ(ಡಿಡಕ್ಷನ್)

ತೆರಿಗೆ ಕಡಿತ(ಡಿಡಕ್ಷನ್)

ತೆರಿಗೆ ಕಡಿತಗೊಳಿಸಿದ ಮೊತ್ತಕ್ಕೆ ಬ್ಯಾಂಕ್ ಟಿಡಿಎಸ್ ಕ್ರೆಡಿಟ್ ಪ್ರಮಾಣಪತ್ರ ನೀಡುತ್ತವೆ. ಠೇವಣಿದಾರ ತಾನು ತೆರಿಗೆ ಪಾವತಿ ಸಮಯದಲ್ಲಿ ಇದನ್ನು ತೆರಿಗೆ ಕಡಿತವೆಂದು (ಡಿಡಕ್ಷನ್) ತೋರಿಸಬಹುದಾಗಿದೆ.

ಫಾರ್ಮ್ 26AS ಪ್ರಯೋಜನ

ಫಾರ್ಮ್ 26AS ಪ್ರಯೋಜನ

ವೇತನ ಮತ್ತು ಬ್ಯಾಂಕ್ ಠೇವಣಿ ತೆರಿಗೆ ವಿನಾಯತಿ ಕಾಯಿದೆ ನಿರ್ಬಂಧನೆಗೆ ಒಳಪಟ್ಟಿದೆ. ಫಾರ್ಮ್ 26AS ಅನ್ನುವುದು ನಾವು ಪಾವತಿಸುವ ತೆರಿಗೆಯು ಆದಾಯ ತೆರಿಗೆ ಇಲಾಖೆಗೆ ಸೇರಿದಿಯೋ ಇಲ್ಲವೋ ಎನ್ನುವುದು. 26ಎಎಸ್ ಫಾರಂ ಅನ್ನು ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿಯೂ ಪಡೆಯಬಹುದಾಗಿದೆ. ತೆರಿಗೆ ಪಾವತಿದಾರರು ನೆಟ್ ಬ್ಯಾಂಕಿಂಗ್ ಮೂಲಕ ಕೂಡ 26ಎಎಸ್ ಫಾರಂ ಅನ್ನು ನೋಡಬಹುದಾಗಿದೆ. 26ಎಎಸ್ ಫಾರಂನಲ್ಲಿ "ವ್ಯಕ್ತಿಯ ಸಂಬಳ, ಎಫ್ಡಿ ಬಡ್ಡಿಯಿಂದ ಟಿಡಿಎಸ್ ಕಡಿತಗೊಳಿಸಲಾಗಿರುವ ಎಲ್ಲಾ ಇತರ ಮಾಹಿತಿಗಳು ಇರುವುದರಿಂದ ಇದನ್ನು ಪರಿಶೀಲಿಸುವುದು ಬಹಳ ಮುಖ್ಯವಾದುದಾಗಿದೆ.

ಮುಂಗಡ ತೆರಿಗೆ (ಅಡ್ವಾನ್ಸ್ ಟ್ಯಾಕ್ಸ್)

ಮುಂಗಡ ತೆರಿಗೆ (ಅಡ್ವಾನ್ಸ್ ಟ್ಯಾಕ್ಸ್)

ತೆರಿಗೆ ವ್ಯಾಪ್ತಿ ಅಡಿಯಲ್ಲಿ ಬರುವ ವ್ಯಕ್ತಿಗಳು ಮುಂಗಡ ತೆರಿಗೆ ಪಾವತಿಸುವ ಅವಕಾಶವಿದರುತ್ತದೆ ಎಂಬುದನ್ನು ಗಮನಿಸಬೇಕು.
ಮುಂಗಡ ತೆರಿಗೆ (ಅಡ್ವಾನ್ಸ್ ಟ್ಯಾಕ್ಸ್) ಇತರ ಆದಾಯ ಪಡೆಯುವ ವ್ಯಕ್ತಿಗಳಿಗೂ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿಯು ನಿಗದಿತ ಮುಂಗಡ ತೆರಿಗೆ ಪಾವತಿಸದಿದ್ದಲ್ಲಿ ಇತರ ತೆರಿಗೆಯ ಜೊತೆ ಬಡ್ಡಿ ಸಮೇತ ಕಟ್ಟಬೇಕಾಗುವುದು.

English summary

Bank investors under Income Tax scrutiny: Must know these things

Bank fixed deposits are one of the most popular investment options for many. What is the tax treatment of interest earned from the bank fixed deposit? What are the provisions related to TDS (tax deducted at source)? It should be noted that interest earned on bank fixed deposits is fully taxable.
Story first published: Saturday, September 16, 2017, 13:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X