For Quick Alerts
ALLOW NOTIFICATIONS  
For Daily Alerts

ನೀವು ಸಾಲವನ್ನು ಮರುಪಾವತಿ ಮಾಡದಿದ್ದರೆ ಏನಾಗುತ್ತದೆ?

ಕಾರು, ಮನೆ ಅಥವಾ ನಿಮ್ಮ ಅವಶ್ಯಕತೆಗಳಿಗಾಗಿ ಪಡೆದ ಸಾಲವನ್ನು ನೀವು ಮರುಪಾವತಿಸಲು ವಿಫಲವಾದರೆ ಏನಾಗುತ್ತದೆ, ಬ್ಯಾಂಕ್ ಏನು ಕ್ರಮ ತೆಗೆದುಕೊಳ್ಳುತ್ತದೆ, ಸಾಲ ಪಡೆಯುವವರಿಗೆ ಬಿಟ್ಟು ಕೊಡುವ ಆಯ್ಕೆಗಳು ಯಾವುವು?

By Siddu
|

ಕಾರು, ಮನೆ ಅಥವಾ ನಿಮ್ಮ ಅವಶ್ಯಕತೆಗಳಿಗಾಗಿ ಪಡೆದ ಸಾಲವನ್ನು ನೀವು ಮರುಪಾವತಿಸಲು ವಿಫಲವಾದರೆ ಏನಾಗುತ್ತದೆ, ಬ್ಯಾಂಕ್ ಏನು ಕ್ರಮ ತೆಗೆದುಕೊಳ್ಳುತ್ತದೆ, ಸಾಲ ಪಡೆಯುವವರಿಗೆ ಬಿಟ್ಟು ಕೊಡುವ ಆಯ್ಕೆಗಳು ಯಾವುವು ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರಾ?

 

ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬರ ಕನಸು. ಗೃಹ ಸಾಲಗಳ ಯೋಜನೆಗಳಿಂದಾಗಿ ಸುಲಭ ಸಾಧ್ಯವಾಗಿದೆ. ಸಾಮಾನ್ಯವಾಗಿ, ಎಲ್ಲಾ ಉಳಿತಾಯ ಮತ್ತು ಗರಿಷ್ಠ ಪ್ರಮಾಣದ ಸಾಲವನ್ನು ಹೂಡುವ ಮೂಲಕ ಮೊದಲ ಮನೆಯನ್ನು ಖರೀದಿಸಲಾಗುತ್ತದೆ. ಈ ಎಲ್ಲದರ ನಂತರ EMI ಯನ್ನು ಭರಿಸುವುದೇ ಒಂದು ದೊಡ್ಡ ಹೊರೆಯಾದರೆ ಎಂತಹ ಪರಿಸ್ಥಿತಿಯಾಗಬಹುದು? ಈ ಸಮಯದಲ್ಲಿ ನಿಮ್ಮ ಉದ್ಯೋಗ ಕಳೆದು ಹೋದರೆ ಅಥವಾ ಬರುವ ಆದಾಯವು ನಿಂತು ಹೋದರೆ, ಒಮ್ಮೆ ಆ ಸಂದರ್ಭವನ್ನು ಯೋಚಿಸಿ. ನಿಮ್ಮ ಎಲ್ಲಾ ಹಣಕಾಸಿನ ಸನ್ನಿವೇಶಗಳು ಏರುಪೇರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಏನಾಗಬಹುದು ಎಂಬುದನ್ನು ನೋಡೋಣ ಬನ್ನಿ.. 2030ರಲ್ಲಿ ಪ್ರಪಂಚವನ್ನು ಆಳುವ ದೇಶಗಳು

ಡಿಫಾಲ್ಟ್ ಸಾಲ

ಡಿಫಾಲ್ಟ್ ಸಾಲ

RBI ನಿಯಮಗಳ ಪ್ರಕಾರ, ಗೃಹ ಸಾಲವನ್ನು ಸತತವಾಗಿ 90 ದಿನಗಳವರೆಗೆ ಪಾವತಿಸದಿದ್ದಲ್ಲಿ, ಇದು ಡೀಫಾಲ್ಟ್ ಸಾಲ ಮತ್ತು NPA (ವಸೂಲಾಗದ ಸಾಲದ ಪ್ರಮಾಣ ) ಎಂದು ಪರಿಗಣಿಸಲಾಗುತ್ತದೆ. ನಂತರ, ಸಾಲವನ್ನು ಏಕಕಾಲದಲ್ಲಿ ಪಾವತಿಸಲು ಗ್ರಾಹಕನಿಗೆ ಬ್ಯಾಂಕ್ ನೋಟಿಸ್ ನೀಡುತ್ತದೆ. ಗ್ರಾಹಕ ಹಾಗೆ ಮಾಡಲು ಸಹ ವಿಫಲವಾದಲ್ಲಿ, ನ್ಯಾಯಾಲಯದ ಮುಖಾಂತರ ತೀರ್ಮಾನಿಸಲು ನಿರ್ಧರಿಸಲಾಗುತ್ತದೆ.
ಮೊದಲ ನೋಟಿಸ್ ಸಲ್ಲಿಸಿದ 2 ತಿಂಗಳ (EMI ವಿಫಲವಾದ 5 ತಿಂಗಳ ಎಂದರ್ಥ) ನಂತರ, ನಿಮ್ಮ ಮನೆಯನ್ನು ಜಪ್ತಿ ಮಾಡಿ ಹರಾಜು ಮಾಡಲಾಗುವುದು ಎಂದು ಮತ್ತೊಂದು ನೋಟಿಸ್ ಕಳುಹಿಸುತ್ತಾರೆ. ನೋಟಿಸ್ ಕಳಿಸಿದ 1 ತಿಂಗಳೊಳಗೆ ಒಂದು ಹರಾಜು ದಿನಾಂಕ ತಿಳಿಸುತ್ತಾರೆ. ಸಾಮಾನ್ಯವಾಗಿ, ಮನೆ ಸಾಲಗಳಲ್ಲಿ ಕೆಲವೇ ಡಿಫಾಲ್ಟ್ ಗಳು ಇವೆ. ಆದ್ದರಿಂದ ಬ್ಯಾಂಕುಗಳು ಸಾಲ ಪಡೆದವರ ಮೇಲೆ ಹಿಂತಿರುಗಿಸಲು ಒತ್ತಡ ಹೇರುತ್ತದೆ. ಆದರೆ ಇನ್ನು ಸಹ ಸಾಲ ಮರು ಪಾವತಿಸುವಲ್ಲಿ ವಿಫಲವಾದರೆ, ಬ್ಯಾಂಕುಗಳು ಕಾನೂನು ಬದ್ಧವಾಗಿ ಮುಂದುವರಿಯುತ್ತವೆ.

ಬ್ಯಾಂಕು ಏನು ಮಾಡಬಹುದು ಮತ್ತು ಏನು ಮಾಡಲು ಸಾಧ್ಯವಿಲ್ಲ?
 

ಬ್ಯಾಂಕು ಏನು ಮಾಡಬಹುದು ಮತ್ತು ಏನು ಮಾಡಲು ಸಾಧ್ಯವಿಲ್ಲ?

ಸಾಲದಾತರ ಹಕ್ಕುಗಳನ್ನು ಸಂರಕ್ಷಿಸಲು 2002 ರಲ್ಲಿ ಸರ್ಫೇಸಿ ಕಾಯಿದೆ ಎಂಬ ಮಸೂದೆಯನ್ನು ಸಂಸತ್ತು ಜಾರಿಗೊಳಿಸಿತು. ಇದರ ಪ್ರಕಾರ, ಒಂದು ಸಾಲವನ್ನು ಮರುಪಾವತಿಸಲು ವಿಫಲವಾದಲ್ಲಿ, ಸಾಲದಾತನು ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಅದನ್ನು ಹರಾಜು ಮಾಡಲು ಮತ್ತು ಬಾಕಿಗಳನ್ನು ಸಂಗ್ರಹಿಸುವ ಹಕ್ಕನ್ನು ಹೊಂದಿದ್ದಾನೆ. ಆದರೆ ಸಾಮಾನ್ಯವಾಗಿ ಬ್ಯಾಂಕುಗಳು ತಮ್ಮ ಬಾಕಿಗಳನ್ನು ಪಡೆಯಲು ಇತರ ಪರ್ಯಾಯಗಳ ಮೂಲಕ ಪ್ರಯತ್ನಿಸುತ್ತವೆ ಮತ್ತು ಹರಾಜಿನಲ್ಲಿಯೇ ಅಂತ್ಯಗೊಳ್ಳುತ್ತದೆ
ಆದರೂ ಸಹ ಸಮಸ್ಯೆಗಳನ್ನು ಹರಾಜಿನ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಬ್ಯಾಂಕ್ ಬಾಕಿಗಿಂತ ಹೆಚ್ಚು ಹಣವನ್ನು ಪಡೆದರೆ, ಅದು ಗ್ರಾಹಕನಿಗೆ ಉಳಿದ ಮೊತ್ತವನ್ನು ಪಾವತಿಸುತ್ತದೆ. ಆದಾಗ್ಯೂ, ಹರಾಜು ಮೊತ್ತವು ಬಾಕಿ ಇರುವ ಮೊತ್ತಕ್ಕಿಂತ ಕಡಿಮೆಯಿದ್ದರೆ, ಸಾಲಗಾರನು ಬ್ಯಾಲೆನ್ಸ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಕೆಲವೊಮ್ಮೆ, 36 ತಿಂಗಳೊಳಗೆ ಮಾರಾಟವಾದರೆ ಮತ್ತು ಲಾಭವನ್ನು ಪಡೆದಿದ್ದರೆ ಅದರ ಮೇಲೆ ಬಂಡವಾಳ ತೆರಿಗೆಯನ್ನು ಪಾವತಿಸಲೇಬೇಕು. ಈ ಆದಾಯವನ್ನು ಅವರ ಐಟಿ ರಿಟರ್ನ್ಸ್ ತೋರಿಸಲೇಬೇಕು ಮತ್ತು ಅಗತ್ಯವಿದ್ದರೆ ಸರಿಯಾದ ತೆರಿಗೆಯನ್ನು ಸಹ ಪಾವತಿಸಬೇಕು.

ಖರೀದಿ ಮಾಡಿದ 5 ವರ್ಷಗಳೊಳಗೆ ಮಾರಾಟವಾದರೆ?

ಖರೀದಿ ಮಾಡಿದ 5 ವರ್ಷಗಳೊಳಗೆ ಮಾರಾಟವಾದರೆ?

ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ಮನೆ ಖರೀದಿಸಿದ 5 ವರ್ಷಗಳಲ್ಲಿ ಮಾರಾಟವಾಗಿದ್ದರೆ, 80C ಯ ಎಲ್ಲ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಮರುಪಾವತಿಸುವಲ್ಲಿ ವಿಫಲವಾದರೆ ಬ್ಯಾಂಕುಗಳು ಹೇಗಾದರೂ ಹರಾಜು ಮಾಡುತ್ತವೆ.

ಬ್ಯಾಂಕ್ ಇಲ್ಲ ಎಂದು ಹೇಳಿದರೆ ಮುಂದೇನು?

ಬ್ಯಾಂಕ್ ಇಲ್ಲ ಎಂದು ಹೇಳಿದರೆ ಮುಂದೇನು?

ಬ್ಯಾಂಕ್ ನಿಮಗೆ ಸಹಾಯ ಮಾಡಲು ಒಪ್ಪಿಗೆಯನ್ನು ನೀಡದಿದ್ದರೆ, ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡಲು ಸಿದ್ಧವಿರುವ ಮತ್ತೊಂದು ಬ್ಯಾಂಕ್ ಗೆ ನಿಮ್ಮ ಸಾಲವನ್ನು ವರ್ಗಾಯಿಸಿ.

ಹೂಡಿಕೆಯನ್ನು ಬದಲಾಯಿಸಿ

ಹೂಡಿಕೆಯನ್ನು ಬದಲಾಯಿಸಿ

ಕಷ್ಟದ ಸಮಯದಲ್ಲಿ ನಿಶ್ಚಿತ ಠೇವಣಿ, ಮ್ಯೂಚುವಲ್ ಫಂಡ್, ಇತ್ಯಾದಿಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ. ಇದು ಸಾಲದಿಂದ ಮುಕ್ತರಾಗಲು ಸಹಕರಿಸಬಹುದು.

ಅಂತಿಮವಾಗಿ ಮನೆ ಕಳೆದುಕೊಳ್ಳಬೇಕಾಗುತ್ತದೆ

ಅಂತಿಮವಾಗಿ ಮನೆ ಕಳೆದುಕೊಳ್ಳಬೇಕಾಗುತ್ತದೆ

ಒಂದು ವೇಳೆ ಯಾವುದೇ ಪರಿಹಾರ ದೊರೆಯದಿದ್ದಲ್ಲಿ, ಮನೆಯನ್ನು ಮಾರಾಟ ಮಾಡುವುದೇ ಉಳಿದಿರುವ ಕೊನೆಯ ಆಯ್ಕೆಯಾಗಿದೆ. ನಿಮ್ಮ ಮನೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ಆಯ್ಕೆಯನ್ನು ಬ್ಯಾಂಕುಗಳಿಗೆ ನೀಡಬೇಡಿ. ಸಾಲ ಮರುಪಾವತಿಯ ನಂತರ ಯಾವುದೇ ಲಾಭವುಂಟಾದರೆ ಅದರಲ್ಲಿ ನೀವು ಕೆಲವು ಆಸ್ತಿಗಳನ್ನು ಖರೀದಿಸಲು ಬಳಸಬಹುದು.

ಸಾಲ ಪಡೆಯುವವರ ಕೆಲವು ಹಕ್ಕುಗಳು

ಸಾಲ ಪಡೆಯುವವರ ಕೆಲವು ಹಕ್ಕುಗಳು

ಯಾವುದೇ ಹಕ್ಕುಗಳನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ಕಾನೂನು ಕ್ರಮ ತೆಗೆದುಕೊಳ್ಳುವ ಮೊದಲು ಸಾಲ ಪಡೆಯುವವರಿಗೆ ಬ್ಯಾಂಕುಗಳು ಸರಿಯಾದ ಸಮಯವನ್ನು ಒದಗಿಸಬೇಕು. ಬ್ಯಾಂಕುಗಳು ಡೀಫಾಲ್ಟ್ ಗಳನ್ನು ಗಮನಿಸಿ ಮತ್ತು ಅವುಗಳ ಸಾಲ ಇತಿಹಾಸದ ಆಧಾರದ ಮೇಲೆ ಅವುಗಳನ್ನು NPA ಎಂದು ನಿರ್ಧರಿಸುತ್ತಾರೆ. ನಂತರ, ಬ್ಯಾಂಕ್ ಗಳು ಸಾಲವನ್ನು ಪಾವತಿಸಲು 60 ದಿನಗಳು ಅಂದರೆ ಕನಿಷ್ಠ 2 ತಿಂಗಳುಗಳ ನೋಟಿಸ್ ನೀಡಬೇಕು. ಈ ಸಮಯದಲ್ಲಿಯೂ ಸಹ ಸಾಲವನ್ನು ಮರುಪಾವತಿಸದಿದ್ದರೆ, ಹರಾಜು ಕಾರ್ಯ ವಿಧಾನವನ್ನು ತಿಳಿಸುವ 30 ದಿನಗಳ ನೋಟೀಸ್ ನೀಡಬೇಕು.
ಆಸ್ತಿಯನ್ನು ಹರಾಜು ಮಾಡಲು ಬ್ಯಾಂಕಿಂಗ್ ಸಂಸ್ಥೆಯು ನಿರ್ಧರಿಸಿದರೆ, ಅದು ಅದರ ಕಾರ್ಯವಿಧಾನದ ಆಧಾರದ ಮೇಲೆ ಆಸ್ತಿಯ ಮೌಲ್ಯಮಾಪನ ಮಾಡುತ್ತದೆ. ನೋಟಿಸ್ ದಿನಾಂಕ, ಮೀಸಲಾದ ಬೆಲೆ ಮತ್ತು ಹರಾಜಿನ ಸ್ಥಳದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಹೊಂದಿರಬೇಕು. ಗ್ರಾಹಕರು ಹರಾಜು ಬೆಲೆಯು ನ್ಯಾಯೋಚಿತವಲ್ಲ ಎಂದು ಭಾವಿಸಿದರೆ, ಅವರು ಆಕ್ಷೇಪಣೆಯನ್ನು ಮಾಡಬಹುದು ಮತ್ತು ಬ್ಯಾಂಕ್ ಇದಕ್ಕೆ 7 ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು.

ಇದನ್ನು ಹೇಗೆ ಎದುರಿಸಲು ಸಾಧ್ಯ?

ಇದನ್ನು ಹೇಗೆ ಎದುರಿಸಲು ಸಾಧ್ಯ?

ನೀವು ಒಮ್ಮೆ ಸಾಲವನ್ನು ಸರಿಯಾಗಿ ಪಾವತಿಸಲು ವಿಫಲವಾದರೆ, ಬ್ಯಾಂಕ್ ಹರಾಜಿನ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಆದ್ದರಿಂದ, ಈ ಸಮಯದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸುವುದು ಸಮಂಜಸವಲ್ಲ. ಅವರೊಂದಿಗಿನ ಸರಿಯಾದ ಸಂಭಾಷಣೆ ಸೌಹಾರ್ದ ಪರಿಹಾರಕ್ಕೆ ಕಾರಣವಾಗಬಹುದು.

ಸಾಲವನ್ನು ನವೀಕರಿಸಿ

ಸಾಲವನ್ನು ನವೀಕರಿಸಿ

ಸಾಧಾರಣವಾಗಿ, ಮನೆ ಸಾಲಗಳಲ್ಲಿ ಅನಾರೋಗ್ಯ, ಕೆಲಸದ ನಷ್ಟ ಇತ್ಯಾದಿ ಅಥವಾ ಆದಾಯದಲ್ಲಿ ಹಠಾತ್ ನಷ್ಟವಿಲ್ಲದಿದ್ದರೆ ಡೀಫಾಲ್ಟ್ ಪರಿಸ್ಥಿತಿ ಉಂಟಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಸರಿಯಾದ ಚರ್ಚೆ ಮತ್ತು ವಿವರಣೆಯನ್ನು ಪಡೆಯುವುದರ ಮೂಲಕ ನೀವು ಸರಿಯಾದ EMI ಅನ್ನು ಶೀಘ್ರದಲ್ಲಿಯೇ ಪುನಃ ಪ್ರಾರಂಭಿಸಬಹುದು, ಇದು ಬ್ಯಾಂಕುಗಳಿಗೆ ಸುಲಭವಾಗಿ ನವೀಕರಣಗೊಳಿಸಲು ಸಾಧ್ಯವಾಗುತ್ತದೆ.

ಸರಿಯಾದ ಕಾಲಮಿತಿಯನ್ನು ಆಯ್ಕೆ ಮಾಡಿ

ಸರಿಯಾದ ಕಾಲಮಿತಿಯನ್ನು ಆಯ್ಕೆ ಮಾಡಿ

ನಿಮ್ಮ ಆದಾಯದಲ್ಲಿ ಯಾವುದೇ ರೀತಿಯಲ್ಲಿ ಹೆಚ್ಚಳವಿಲ್ಲದಿದ್ದರೂ ಸಹ ಬಡ್ಡಿದರದಲ್ಲಿ ಆಗುವ ಹೆಚ್ಚಳ EMI ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ಬ್ಯಾಂಕ್ ಗಳಿಗೆ ಸಾಲದ ಅವಧಿಯನ್ನು ಹೆಚ್ಚಿಸಿ EMI ಕಡಿಮೆ ಮಾಡುವಂತೆ ವಿನಂತಿಸಬಹುದು. ಅದಾಗ್ಯೂ, ಅವಧಿ ಈಗಾಗಲೇ ಹೆಚ್ಚಾಗಿದ್ದರೆ ಮತ್ತು ನಿವೃತ್ತಿ ವಯಸ್ಸು ತಲುಪಿದ್ದರೆ, ಮತ್ತಷ್ಟು ಹೆಚ್ಚಳ ಸಾಧ್ಯವಿಲ್ಲ.

ವೈಯಕ್ತಿಕ ಸಾಲ

ವೈಯಕ್ತಿಕ ಸಾಲ

ಒಂದು ವೇಳೆ ವೈಯಕ್ತಿಕ ಸಾಲದ EMI ಪಾವತಿಸದಿದ್ದರೆ, 1 ತಿಂಗಳೊಳಗೆ ಸೂಚನೆ ನೀಡಲು ಪ್ರಾರಂಭಿಸಲಾಗುತ್ತದೆ. ಖಾಸಗಿ ಬ್ಯಾಂಕ್ ಉದ್ಯೋಗಿ ಪ್ರೀತಿ ಗಾರ್ಗ್ ಈ ರೀತಿಯಾಗಿ ವಿವರಿಸುತ್ತಾರೆ,
ಸರಿಯಾದ ಸಮಯದಲ್ಲಿ EMI ಪಾವತಿಸದಿದ್ದಲ್ಲಿ ಆ ದಿನಾಂಕದಿಂದ ಸಂಗ್ರಹ ತಂಡದಿಂದ ಗ್ರಾಹಕರು ಕರೆಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ. ಕಚೇರಿ ಮತ್ತು ಮನೆಗಳಿಗೆ ಸಹ ಅವರು ಭೇಟಿ ನೀಡುತ್ತಾರೆ. ಚರ್ಚೆಗಳು ಮತ್ತು ಮುಂದೂಡಿಕೆಗಳೊಂದಿಗೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಅದೇ ಸನ್ನಿವೇಶಗಳು ಪುನರಾವರ್ತಿವಾಗುತ್ತದೆ. 30 ದಿನಗಳು ಸಹ ಪಾವತಿ ಮಾಡದಿದ್ದರೆ ಇದು ಒಂದು ಸಮಸ್ಯೆಯಾಗಬಹುದು.
60 ದಿನಗಳು ಕಳೆದು ಹೋದರೆ, ಈ ಸಮಸ್ಯೆ ದ್ವಿಗುಣಗೊಳ್ಳುತ್ತದೆ .ಏಕೆಂದರೆ 90 ದಿನಗಳು ಕಳೆದು ಹೋದರೆ, ಇದು NPA ಎಂದು ನಿರ್ಧರಿಸಲಾಗುತ್ತದೆ ಮತ್ತು ಬ್ಯಾಂಕು ಇದನ್ನು NPI ಎಂದು RBI ಗೆ ತಿಳಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ಕೂಡ ಕರೆಗಳು ಬರಲಾರಂಭಿಸುತ್ತವೆ.
ನೀವು ಸಾಲವನ್ನು ಬ್ಯಾಂಕುಗಳ ಬದಲಾಗಿ NBFC ಯಿಂದ ಪಡೆದಿದ್ದರೆ, ಇನ್ನೂ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಸಂಗ್ರಹಣೆ ಮಾಡಲು ಬರುವ ಜನರು ನಿಮ್ಮ ಕಚೇರಿ ಮತ್ತು ಮನೆಗೆ ಸಮೇತ ಭೇಟಿ ನೀಡುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮನ್ನು ಅವಮಾನಿಸಲು ಅವರು ನಿಮ್ಮ ಪೋಸ್ಟರ್ ಗಳನ್ನು ಹಾಕುತ್ತಾರೆ. 90 ದಿನಗಳು ಸರಿದು ಹೋದರೆ ಸಂಗ್ರಹಣೆಯ ಜವಾಬ್ದಾರಿಯನ್ನು ವಿಶೇಷ ಸಂಸ್ಥೆಗೆ ನೀಡಲಾಗುತ್ತದೆ. ಈ ಸಂಸ್ಥೆಗಳು ದೈಹಿಕ, ಮಾನಸಿಕ ಒತ್ತಡವನ್ನು ತರುತ್ತವೆ.

English summary

What happens if you don’t repay the loan?

What happens if you fail to repay the loan taken for car, house or for persona needs. Did you ever think of it. What action does the bank take. What are the options left for loan takers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X