For Quick Alerts
ALLOW NOTIFICATIONS  
For Daily Alerts

ಆರಂಕಿಯ (ಕನಿಷ್ಟ ಲಕ್ಷ) ವೇತನ ಪಡೆಯಬೇಕೆ? ಇಲ್ಲಿ ನೋಡಿ...

ಮುಂದಿನ ವರ್ಷಗಳಲ್ಲಿ ನಿಮ್ಮ ವೇತನವನ್ನು ಆರಂಕಿಯ (ಕನಿಷ್ಟ 1 ಲಕ್ಷ) ವೇತನಕ್ಕೆ ಬದಲಿಸಿಕೊಳ್ಳುವುದು ನಿಮ್ಮ ಆದ್ಯತೆಯಾಗಿದ್ದರೆ ಅಥವಾ ಈ ವೇತನವನ್ನು ನೀಡಬಹುದಾದ ಉದ್ಯೋಗಗಳನ್ನು ಹುಡುಕುತ್ತಿದ್ದಿರಾ?

By Siddu
|

ಮುಂದಿನ ವರ್ಷಗಳಲ್ಲಿ ನಿಮ್ಮ ವೇತನವನ್ನು ಆರಂಕಿಯ (ಕನಿಷ್ಟ 1 ಲಕ್ಷ) ವೇತನಕ್ಕೆ ಬದಲಿಸಿಕೊಳ್ಳುವುದು ನಿಮ್ಮ ಆದ್ಯತೆಯಾಗಿದ್ದರೆ ಅಥವಾ ಈ ವೇತನವನ್ನು ನೀಡಬಹುದಾದ ಉದ್ಯೋಗಗಳನ್ನು ಹುಡುಕುತ್ತಿದ್ದಿರಾ? ಇದಕ್ಕಾಗಿ ನಿಮ್ಮ ಕೆಲವು ಅರ್ಹತೆಗಳನ್ನು ಹಾಗೂ ಉದ್ಯೋಗದ ಕ್ಷಮತೆ ಹೆಚ್ಚಿಸುವ ಕೌಶಲ್ಯವನ್ನು ಪಡೆಯುವ ಮೂಲಕ ನಿಮ್ಮ ಬಯಕೆಯನ್ನು ಸಾಧಿಸಬಹುದು.

 

ಮೇಧಾವಿಗಳಿಗೆ ಆರಂಕಿಯ ಸಂಬಳ ನೀಡಲು ಕೆಲವು ಸಂಸ್ಥೆಗಳು ಹಿಂದೆ ಮುಂದೆ ನೋಡುವುದಿಲ್ಲ. ಅದರಲ್ಲೂ ಕೆಲವು ವಿಷಯದಲ್ಲಿ ಪರಿಣಿತಿ ಪಡೆದ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಂದು ವೇಳೆ ಈ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯವನ್ನು ನೀವು ಪದವಿ ಪಡೆಯುವಾಗಲೇ ಪಡೆದಿದ್ದರೆ ಪದವಿ ಪಡೆದ ಬಳಿಕ ಈ ಉದ್ಯೋಗ ನಿಮಗೆ ದೊರಕುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ನಿಮ್ಮ ವೃತ್ತಿಜೀವನ ಸುಖಕರವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಹಾಗೂ ಜೀವನದುದ್ದಕ್ಕೂ ಏಳ್ಗೆ ಪಡೆಯುತ್ತಾ ಸಾಗಲು ನೆರವಾಗುತ್ತದೆ.

ಬನ್ನಿ, ಆರಂಕಿಯ ವೇತನವನ್ನು ಪಡೆಯಲು ಯಾವ ವೃತ್ತಿ ಕೌಶಲಗಳು ನೆರವಾಗುತ್ತವೆ ಎಂದು ನೋಡೋಣ..

1. ಸಾಫ್ಟ್ವೇರ್ ಅಭಿವೃದ್ಧಿ

1. ಸಾಫ್ಟ್ವೇರ್ ಅಭಿವೃದ್ಧಿ

ಒಂದು ವೇಳೆ ನೀವು ಈಗಾಗಲೇ ಮಾಹಿತಿ ತಂತ್ರಜ್ಞಾನ ಅಥವಾ ಅಂತರ್ಜಾಲ ತಾಣ ಅಭಿವೃದ್ದಿ ಕ್ಷೇತ್ರದಲ್ಲಿ ಪ್ರೋಗ್ರಾಮರ್, ಕೋಡರ್ ಅಥವಾ ಡಿಸೈನರ್ ಮೊದಲಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ನಿಮ್ಮ ಈಗಿರುವ ಕೌಶಲ್ಯವನ್ನು ಒಂದು ಹಂತ ಮೇಲಕ್ಕೇರಿಸಲು ಸಾಫ್ಟ್ವೇರ್ ಅಭಿವೃದ್ಧಿಯ ಪ್ರೋಗ್ರಾಂ ಹಾಗೂ ಅಪ್ಲಿಕೇಶನ್ ಗಳನ್ನು ಕಲಿಯುವುದು ಉತ್ತಮ ನಿರ್ಧಾರವಾಗಿದೆ. ಈ ಕೌಶಲ್ಯ ಪಡೆದ ವೃತ್ತಿನಿರತರು ಹೊಸ ಸಾಫ್ಟ್ವೇರ್ ಗಳನ್ನು ನಿರ್ಮಿಸುವುದು, ಈಗಿರುವ ಸಾಫ್ಟ್ವೇರ್ ಗಳನ್ನು ಇನ್ನೂ ಉತ್ತಮಗೊಳಿಸುವುದು ಹಾಗೂ ಅಂಕಿಅಂಶಗಳನ್ನು ಕಲೆಹಾಕುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸುವುದು ಮೊದಲಾದ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಕಾರ್ಮಿಕ ಅಂಕಿ-ಅಂಶಗಳ ಕಛೇರಿ ನೀಡಿರುವ ಮಾಹಿತಿಯ ಪ್ರಕಾರ ಈ ಕೆಲಸದ ಹೊಣೆ ಹೊತ್ತವರಿಗೆ ಸುಮಾರು 100,080 ಡಾಲರುಗಳಷ್ಟು (ರೂ. 6406901.42) ವಾರ್ಷಿಕ ವೇತನ ದೊರಕುತ್ತದೆ (ಮೇ 2016ರಂತೆ). ಈ ವೃತ್ತಿನಿರತರನ್ನು ಹೆಚ್ಚಾಗಿ ಸಾಫ್ಟ್ವೇರ್ ಪ್ರಕಾಶಕರು ಹಾಗೂ ಇತರ ಮಾಹಿತಿ ತಂತ್ರಜ್ಞಾನದ ಸೇವೆಯನ್ನು ಒದಗಿಸುವ ಸಂಸ್ಥೆಗಳು ಉದ್ಯೋಗಿಗಳನ್ನಾಗಿ ಸ್ವೀಕರಿಸುತ್ತವೆ.

2. ಇಂಟರ್ನೆಟ್ ಮಾರ್ಕೆಟಿಂಗ್ ಅಥವಾ ಇ-ವ್ಯಾಪಾರ
 

2. ಇಂಟರ್ನೆಟ್ ಮಾರ್ಕೆಟಿಂಗ್ ಅಥವಾ ಇ-ವ್ಯಾಪಾರ

ಒಂದು ವೇಳೆ ವ್ಯಾಪಾರ ನಿಮ್ಮ ರಕ್ತದಲ್ಲಿದ್ದು ನಿಮ್ಮ ವ್ಯಾಪಾರಕ್ಕಾಗಿ ವಿಶ್ವಮಟ್ಟದಲ್ಲಿ ಗ್ರಾಹಕರನ್ನು ಪಡೆಯಬಯಸುವಿರಾದರೆ ಅಥವಾ ಈಗಾಗಲೇ ಹೊಸ ಮಾಧ್ಯಮ ಅಥವಾ ಡಿಜಿಟಲ್ ವ್ಯಾಪಾರ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದರೆ ಈ ನಿಟ್ಟಿನಲ್ಲಿ ಹೊಸ ಕೌಶಲಗಳನ್ನು ಕಲಿಯುವ ಮೂಲಕ ಆರಂಕಿಯ ವೇತನವನ್ನು ಪಡೆಯಲು ಸಾಧ್ಯವಾಗುತ್ತದೆ.
ವ್ಯಾಪಾರ ವಿಭಾಗದ ಮುಖ್ಯ ಅಧಿಕಾರಿಗಳು ಈಗ ಹೆಚ್ಚಿನ ಎಲ್ಲಾ ಸಂಸ್ಥೆಗಳ ಡಿಜಿಟಲ್ ವ್ಯಾಪಾರವನ್ನು ನೋಡಿಕೊಳ್ಳಲು ಅಗತ್ಯವಾಗಿದ್ದು, ವಾರ್ಷಿಕ $245,000 (ರೂ. 15687080.50) ರಷ್ಟು ವೇತನವನ್ನು ಪಡೆಯುತ್ತಾರೆ. ಈ ವಿಷಯವನ್ನು ಪ್ರಮುಖ ಉದ್ಯೋಗ ದೊರಕಿಸುವ ಸಂಸ್ಥೆಯಾದ ಮೋಂಡೋ ಪ್ರಕಟಿಸಿದ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. BLS reports ಪ್ರಕಾರ ಜಾಹೀರಾತು, ಪ್ರಚಾರ ಹಾಗೂ ಮಾರುಕಟ್ಟೆಯನ್ನು ನಿರ್ವಹಿಸುವ ಅಧಿಕಾರಿಗಳ ವೇತನ 2016ರಲ್ಲಿ $127,560 (ರೂ. 8167526.48) ರಷ್ಟಿತ್ತು. ಇದರಲ್ಲಿ ಹೆಚ್ಚಿನವರು ಪ್ರಮುಖ ಉದ್ಯಮಗಳಲ್ಲಿ ವ್ಯಾಪಾರ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.

3. ಯೋಜನಾ ನಿರ್ವಾಹಕರು (ಪ್ರಾಜೆಕ್ಟ್ ಮ್ಯಾನೇಜ್ಮೆಂಟ್)

3. ಯೋಜನಾ ನಿರ್ವಾಹಕರು (ಪ್ರಾಜೆಕ್ಟ್ ಮ್ಯಾನೇಜ್ಮೆಂಟ್)

ಒಂದು ವೇಳೆ ನೀವು ಉದ್ಯಮದ ಒಡೆಯರಾಗಲು ಬಯಸಿದರೆ ಹಾಗೂ ಕೆಲವು ತಂತ್ರಜ್ಞಾನದ ಕೌಶಲಗಳನ್ನು ಹೊಂದಿದ್ದರೆ ಹಾಗೂ ಯೋಜನೆಯೊಂದನ್ನು ಕಾರ್ಯಗತಗೊಳಿಸುವ ಬಗ್ಗೆ ಅನುಭವವಿದ್ದರೆ ಇನ್ನೂ ಹೆಚ್ಚಿನ ಉತ್ತಮ ವೇತನ ಪಡೆಯಲು ಆಸನ(Asana) ಅಥವಾ ಬೇಸ್ ಕ್ಯಾಂಪ್ ನಂತಹ ಸಾಫ್ಟ್ ವೇರ್ ಗಳನ್ನು ಕಲಿಯುವುದು ನಿಮಗೆ ಶ್ರೇಯಸ್ಕರವಾಗಿದೆ. ಈ ತಂತ್ರಜ್ಞಾನವನ್ನು ಬಳಸಿ ತಮ್ಮ ಯೋಜನಾ ನಿರ್ವಹಣೆಯ ಕಾರ್ಯವನ್ನು ಸುಲಭವಾಗಿ ನಿರ್ವಹಿಸಬಲ್ಲ ನಿರ್ವಾಹಕರಿಗೆ ಹೆಚ್ಚಿನ ಬೇಡಿಕೆ ಇದೆ. ಈ ಆಪ್ ಗಳನ್ನು ಬಳತಿ ತಮ್ಮ ತಂಡವನ್ನು ಸೂಕ್ತ ದಾರಿಯಲ್ಲಿ ಮುನ್ನಡೆಸುವ, ಅಂಕಿ ಅಂಶಗಳು ಹಾಗೂ ಕಾರ್ಯಗಳ ಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಸರಿದಾರಿಯಲ್ಲಿ ಮುನ್ನಡೆಸಬಲ್ಲ ನಿರ್ವಾಹಕರು ಹೆಚ್ಚಿನ ಬೇಡಿಕೆ ಪಡೆಯುತ್ತಾರೆ. ಇವರಿಗೆ ತಂತ್ರಜ್ಞಾನದ ಆಳದ ಪರಿಚಯವಿಲ್ಲದಿದ್ದರೂ ಸರಿ, ಯೋಜನೆಯನ್ನು ಮುನ್ನಡೆಸುವ ಸಾಮರ್ಥ್ಯವೇ ಹೆಚ್ಚಿನ ವೇತನ ಪಡೆಯಲು ನೆರವಾಗುತ್ತದೆ.

ಇವರು ಈ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಸಹೋದ್ಯೋಗಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು ಪ್ರತಿ ಕಾರ್ಯವನ್ನೂ ಅವಧಿ ಮೀರುವ ಮುನ್ನವೇ ಮುಗಿಸಿ ಮುಂದಿನ ಕಾರ್ಯವನ್ನು ಕಾರ್ಯಗತಗೊಳಿಸಿ ಒಟ್ಟಾರೆ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದಕ್ಕಾಗಿ ಇವರು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಟೂಲ್ಸ್ ಎಂಬ ತಂತ್ರಜ್ಞಾನಗಳ ನೆರವು ಪಡೆಯಬೇಕಾಗುತ್ತದೆ. ಈ ತಂತ್ರಜ್ಞಾನದ ಆಧುನಿಕ ಆವೃತ್ತಿಗಳನ್ನು, ಉದಾಹರಣೆಗೆ Enterprise Resource Planning (ERP) ಎಂಬ ತಂತ್ರಜ್ಞಾನವನ್ನು ಕಲಿತು ತಮ್ಮ ಕೌಶಲವನ್ನು ಉತ್ತಮಗೊಳಿಸುವ ಮೂಲಕ ಸುಲಭವಾಗಿ ಆರಂಕಿಯ ವೇತನ ಪಡೆಯಬಹುದು. ಸ್ಯಾಲರಿ.ಕಾಂ ವರದಿಗಳ ಪ್ರಕಾರ ಈ ERP ಯೋಜನಾ ನಿರ್ವಾಹಕರು $129,633. ( ರೂ. 8296939.79) ರಷ್ಟು ವಾರ್ಷಿಕ ವೇತನ ಪಡೆಯುತ್ತಾರೆ.

4. ಹಣಕಾಸು ನಿರ್ವಾಹಕರು

4. ಹಣಕಾಸು ನಿರ್ವಾಹಕರು

ಅಂಕಿ ಅಂಶಗಳಲ್ಲಿ ಉತ್ತಮವಾಗಿರುವವರು ಹಾಗೂ ಇವುಗಳ ವಿಶ್ಲೇಷಣೆಯಲ್ಲಿ ನುರಿತ ಮನಸ್ಸುಳ್ಳವರಿಗೆ ಈ ಹುದ್ದೆ ಹೇಳಿ ಮಾಡಿಸಿದ್ದಾಗಿದೆ.
ದೊಡ್ಡ ಹಾಗೂ ಪ್ರಮುಖ ಸಂಸ್ಥೆಗಳಿಗೆ ತಮ್ಮ ವ್ಯಾಪಾರ ಹಾಗೂ ಉತ್ಪನ್ನಗಳ ಅಂಕಿ ಅಂಶಗಳ ವಿಶ್ಲೇಷಣೆ ಸತತವಾಗಿ ಬೇಕಾಗಿರುತ್ತದೆ ಹಾಗೂ ಈ ಅಂಕಿ ಅಂಶಗಳನ್ನು ಆಧರಿಸಿಯೇ ಪ್ರತಿ ವರ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಈ ಕೆಲಸವನ್ನು ನಿರ್ವಹಿಸಲು ಹಣಕಾಸು ನಿರ್ವಾಹಕರು ಅಗತ್ಯವಾಗಿದ್ದು, ಇವರ ಕರ್ತವ್ಯಗಳಲ್ಲಿ ಆರ್ಥಿಕ ಮುನ್ಸೂಚನೆ, ಪ್ರವೃತ್ತಿಯ ವಿಶ್ಲೇಷಣೆ, ಹೊಸ ಉತ್ಪನ್ನಗಳ ಯಶಸ್ಸಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ಮೊದಲಾದವು ಸೇರಿರುತ್ತವೆ. ಇವರ ನಿರ್ಧಾರಗಳ ಮೂಲಕವೇ ಸಂಸ್ಥೆ ಒಂದು ಹಂತಕ್ಕೆ ಬರಲು ಸಾಧ್ಯವಾಗುತ್ತದೆ. ಆದರೆ ಈ ಹುದ್ದೆಯನ್ನು ಪಡೆಯಲು ಈ ಕ್ಷೇತ್ರದಲ್ಲಿ ಕನಿಷ್ಟ ಐದು ವರ್ಷಗಳಾದರೂ ಕಾರ್ಯ ನಿರ್ವಹಿಸಿರುವ ಅನುಭವದ ಅಗತ್ಯವಿದೆ. ಬಿಎಲ್ ಎಸ್ ವರದಿಯ ಪ್ರಕಾರ ಈ ಹುದ್ದೆ ಪಡೆದವರಿಗೆ ವಾರ್ಷಿಕ ಡಾಲರ್ 121,750 ವೇತನ ದೊರಕುತ್ತದೆ.

5. ಸಮಸ್ಯೆ ಪರಿಹಾರಕ್ಕೆ ತಂತ್ರಜ್ಞಾನದ ಬಳಕೆ

5. ಸಮಸ್ಯೆ ಪರಿಹಾರಕ್ಕೆ ತಂತ್ರಜ್ಞಾನದ ಬಳಕೆ

ಸಮಸ್ಯೆಗಳಿಲ್ಲದ ಸ್ಥಳವೇ ಇಲ್ಲವೆಂದು ಹೇಳಬಹುದು. ಸಂಸ್ಥೆಯ ವಹಿವಾಟು ಹೆಚ್ಚಿದ್ದಷ್ಟೂ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಈ ಸಮಸ್ಯೆಗಳನ್ನು ಎದುರಿಸಿ ಸಮರ್ಥವಾಗಿ ಪರಿಹಾರ ಒದಗಿಸಬಲ್ಲವರಿಗೆ ಸದಾ ಬೇಡಿಕೆ ಇರುತ್ತದೆ. ಆದರೆ ತಂತ್ರಜ್ಞಾನವನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವವರಿಗೆ ಹೆಚ್ಚಿನ ಬೇಡಿಕೆ ಇದೆ ಹಾಗೂ ವೇತನವೂ ಉತ್ತಮವಾಗಿರುತ್ತದೆ.
ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಉದ್ಯೋಗ ಪಡೆಯುವ ವ್ಯಕ್ತಿಗಳು ಕಂಪ್ಯೂಟರ್ ಇಂಜಿನಿಯರ್ ಎಂಬ ಹುದ್ದೆ ಪಡೆಯುತ್ತಾರೆ ಹಾಗೂ ತಂತ್ರಜ್ಞಾನದ ಕುರಿತಾದ ಸಮಸ್ಯೆಗಳನ್ನು ಪರಿಹರಿಸುವುದೇ ಇವರ ಮುಖ್ಯ ಕಾರ್ಯವಾಗಿರುತ್ತದೆ. ಕಂಪ್ಯೂಟರ್ ವಿಜ್ಞಾನಿ, ಪ್ರೋಗ್ರಾಮರ್ ಅಥವಾ ಸಲಹೆಗಾರರಾಗಿರೂ ಇವರು ಕಾರ್ಯನಿರ್ವಹಿಸುತ್ತಾರೆ. ಬಿಎಲ್ಎಸ್ ಪ್ರಕಾರ 2016 ರಲ್ಲಿ ಈ ಕ್ಷೇತ್ರದಲ್ಲಿ ಸಂಶೋಧನಾ ವಿಜ್ಞಾನಿಗಳಿಗೆ ವಾರ್ಷಿಕ $111,840 ರಷ್ಟು ವೇತನ ದೊರಕುತ್ತದೆ. ಈ ಕ್ಷೇತ್ರದಲ್ಲಿ 2024ರಲ್ಲಿ ಉದ್ಯೋಗಕ್ಕೆ ಬೇಡಿಕೆ ಶೇಖಡಾ ಹನ್ನೊಂದರಷ್ಟು ಏರಲಿದೆ ಎಂದೂ ಸಮೀಕ್ಷೆ ತಿಳಿಸುತ್ತದೆ.

6. ಮಾರಾಟ/ವ್ಯಾಪಾರ

6. ಮಾರಾಟ/ವ್ಯಾಪಾರ

ಈ ಕ್ಷೇತ್ರದಲ್ಲಿರುವ ವೃತ್ತಿಪರರು ತಾವು ಮಾರಾಟ ಮಾಡಿದ ಒಟ್ಟು ಮೊತ್ತದ ಒಂದು ಭಾಗವನ್ನು ಕಮೀಷನ್ ರೂಪದಲ್ಲಿ ಪಡೆಯುವುದರಿಂದ ಇವರ ವೇತನ ಪ್ರತಿತಿಂಗಳೂ ಬದಲಾಗುತ್ತಾ ಇರುತ್ತದೆ. ಆದರೆ ಆರಂಕಿಯ ವೇತನ ಪಡೆಯಬೇಕಾದರೆ ಈ ವೃತ್ತಿಯಲ್ಲಿ ಸೊಗಸಾದ ಮಾತುಗಾರರಾಗಿರಬೇಕಾಗಿರುವುದು ತುಂಬಾ ಅಗತ್ಯ. ಇವರಿಗೆ ವ್ಯಾಪಾರದ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಕಲೆ ಸಿದ್ದಿಸಿರಬೇಕು. ಈ ವೃತ್ತಿಪರರಿಗೆ $100,000+ಕಮೀಶನ್ ಎಂಬ ಪ್ರಲೋಭನೆಯನ್ನು ಸುಲಭವಾಗಿ ಹೆಚ್ಚಿನ ಸಂಸ್ಥೆಗಳು ಒಡ್ಡುತ್ತವೆ. ಆದರೆ ಈ ಉದ್ಯೋಗ ಪಡೆಯಲು ಕನಿಷ್ಟ ಐದು ವರ್ಷಗಳ ಅನುಭವದ ಅವಶ್ಯಕತೆ ಇದೆ. ಈಗಿರುವ ನಿಮ್ಮ ಕೌಶಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ನೀವು ಸೇಲ್ಸ್ ಟ್ರೈನಿಂಗ್ ಎಂಬ ತರಬೇತಿ ಶಿಬಿರಗಳಲ್ಲಿ ಭಾಗವಹಿಸಬೇಕು ಹಾಗೂ ಇನ್ನೂ ಉತ್ತಮ ಅವಕಾಶಗಳನ್ನು ಪಡೆಯಬಹುದು. ಬಿಎಲ್ಎಸ್ ವರದಿಗಳ ಪ್ರಕಾರ ಸೇಲ್ಸ್ ಮ್ಯಾನೇಜರ್ ಹುದ್ದೆಯಲ್ಲಿರುವ ವ್ಯಕ್ತಿಗಳು 2016ರಲ್ಲಿ $117,960 ರಷ್ಟು ವಾರ್ಷಿಕ ವೇತನ ಪಡೆಯುತ್ತಿದ್ದಾರೆ.

7. ಸಂಪರ್ಕ ಹಾಗೂ ಸಾರ್ವಜನಿಕ ಸಂಬಂಧ (Communications and public relations)

7. ಸಂಪರ್ಕ ಹಾಗೂ ಸಾರ್ವಜನಿಕ ಸಂಬಂಧ (Communications and public relations)

ಈ ಬಗೆಯ ಹುದ್ದೆಗಳನ್ನು ಪಡೆಯಲು ಸಾರ್ವಜನಿಕರೊಂದಿಗೆ ಉತ್ತಮವಾಗಿ ಸಂವಹನೆ ನಡೆಸುವ ಕೌಶಲ ಅಗತ್ಯವಾಗಿದೆ. ವಿವಿಧ ಬಗೆಯ ಜನರೊಂದಿಗೆ ವ್ಯವಹರಿಸುವ ಕೌಶಲವನ್ನು ನೀವು ಪಡೆದಿದ್ದರೆ ನಿಮಗೆ ಈ ಆರಂಕಿಯ ವೇತನ ಸುಲಭವಾಗಿ ದೊರಕುತ್ತದೆ. ಸಾರ್ವಜನಿಕ ಸಂಬಂಧ, ದೇಣಿಗೆ ಪಡೆಯುವ, ವ್ಯಾಪಾರ ಸಂಪರ್ಕ ಮೊದಲಾದ ಕ್ಷೇತ್ರಗಳಲ್ಲಿ ಈ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಸಾರ್ವಜನಿಕ ಸಂಬಂಧ ನಿರ್ವಾಹಕರು ಒಂದು ಉದ್ಯಮದ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳುವುದು ಹಾಗೂ ಇದಕ್ಕೆ ಅಗತ್ಯವಿರುವ ಕೆಲಸಗಳನ್ನು ನಿರ್ವಹಿಸುವ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಇದಕ್ಕಾಗಿ ಇವರಿಗೆ ಸಾರ್ವಜನಿಕರ ಪ್ರತಿಕ್ರಿಯೆಯ ಬಗ್ಗೆ ಆಳವಾದ ಜ್ಞಾನವಿರಬೇಕು. ಈ ಜ್ಞಾನವನ್ನು ಹೆಚ್ಚಾಗಿ ರಾಜಕಾರಣಿಗಳು, ಉದ್ಯಮಪತಿಗಳು ಹಾಗೂ ದೊಡ್ಡ ಸಂಸ್ಥೆಗಳು ಬಳಸಿಕೊಳ್ಳಲು ಸಿದ್ಧರಿರುತ್ತಾರೆ. ಬಿಎಲ್ಎಸ್ ವರದಿಯ ಪ್ರಕಾರ 2016ರಲ್ಲಿ ಈ ಹುದ್ದೆಯಲ್ಲಿರುವ ನಿರ್ವಾಹಕರು $107,320 ರಷ್ಟು ವಾರ್ಷಿಕ ವೇತನವನ್ನು ಪಡೆಯುತ್ತಾರೆ.

8. ಶಿಕ್ಷಕ ಹಾಗೂ ಪ್ರೇರಕ (Teaching and motivating)

8. ಶಿಕ್ಷಕ ಹಾಗೂ ಪ್ರೇರಕ (Teaching and motivating)

ಸಾಮಾನ್ಯವಾಗಿ ಶಿಕ್ಷಕರ ಸಂಭಾವನೆ ಕಡಿಮೆ ಇರುತ್ತದೆ. ಆರಂಕಿಯ ಸಂಬಳವಂತೂ ಇವರಿಗೆ ಎಷ್ಟೇ ಅನುಭವವಿದ್ದರೂ ಪಡೆಯಲು ಸಾಧ್ಯವಿಲ್ಲ. 2016ರಲ್ಲಿ ಒಬ್ಬ ಪ್ರೌಢಶಾಲಾ ಶಿಕ್ಷಕರಿಗೆ ವಾರ್ಷಿಕ $58,030 (ರೂ. 3715666.70) ರಷ್ಟು ಮಾತ್ರವಿತ್ತು. ಆದರೆ ಈ ಹುದ್ದೆಯಲ್ಲಿರುವವರು ತಮ್ಮ ಮಾತಿನ ಕೌಶಲವನ್ನು ಇತರ ಕ್ಷೇತ್ರಗಳಲ್ಲಿ ವಿಸ್ತರಿಸುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಬಹುದು. ಸಲಹಾಕಾರ ಅಥವಾ ಜೀವನ ತರಬೇತುರಾರ ಹುದ್ದೆಗಳನ್ನು ಇವರು ಪಡೆಯಬಹುದು.
ಈ ಹುದ್ದೆಗಳನ್ನು ಅಲಂಕರಿಸುವವರಿಗೆ ಒಂದು ನಿರ್ದಿಷ್ಟ ಗುಂಪಿಗೆ ಸೇರಿದ ವ್ಯಕ್ತಿಗಳನ್ನು ಅಥವಾ ಒಂದು ಸಂಸ್ಥೆಯ ಉದ್ಯೋಗಿಗಳಿಗೆ ತರಬೇತಿ ನೀಡುವ ಅಥವಾ ಒಂದು ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಕೌಶಲವಿರಬೇಕಾಗುತ್ತದೆ. ಇವರಿಗೆ ಹೆಚ್ಚಿನ ಬೇಡಿಕೆ ಇದ್ದು ಉತ್ತಮ ವೇತನ ಪಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಜೀವನ ತರಬೇತುರಾರರು ತಮ್ಮದೇ ಆದ ಸಂಬಳ ನೀಡಲು ಬೇಡಿಕೆ ಇಡಬಹುದು. 2017ರಲ್ಲಿ ಈ ಹುದ್ದೆಯಲ್ಲಿರುವವರಿಗೆ ವಾರ್ಷಿಕ $209,400 ರಷ್ಟು ವೇತನವಿದೆ.

9. ಹೂಡಿಕೆದಾರರು

9. ಹೂಡಿಕೆದಾರರು

ಒಂದು ವೇಳೆ ನೀವು ಹಿಂದಿನಿಂದಲೂ ನಿಮ್ಮ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿ ಇತರರನ್ನೂ ಈ ಹೂಡಿಕೆಯಲ್ಲಿ ಒಳಗೊಳ್ಳುವಂತೆ ಮಾಡುವ ಮೂಲಕ ಅವರಿಗೂ ಲಾಭ ನೀಡಿ ನೀವೂ ಲಾಭ ಗಳಿಸುತ್ತಾ ಬಂದಿದ್ದರೆ ಹಾಗೂ ಹೂಡಿಕೆಯ ಬಗ್ಗೆ ಸೂಕ್ತ ಸಲಹೆಗಳನ್ನು ನೀಡುತ್ತಾ ಬಂದಿದ್ದರೆ ನೀವು ವೈಯಕ್ತಿಕ ಆರ್ಥಿಕ ಸಲಹಾಕಾರ ಹುದ್ದೆಯನ್ನು ಪಡೆಯಲು ಅರ್ಹರಿದ್ದೀರಿ. ಈ ಸಲಹಾಕಾರರು ಕೇವಲ ಬ್ಯಾಂಕುಗಳಿಂದ ಮಾತ್ರವಲ್ಲ, ಹೂಡಿಕೆ ತಜ್ಞರು, ದೊಡ್ಡ ಸಂಸ್ಥೆಗಳು ಸಹಾ ಇವರ ಸೇವೆಯನ್ನು ಪಡೆಯಬಯಸುತ್ತವೆ. ಅಷ್ಟೇ ಅಲ್ಲ, ದೊಡ್ಡ ದೊಡ್ಡ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಸಂಸ್ಥೆಗಳೂ ಉದ್ಯೋಗ ನೀಡುತ್ತವೆ.
ಈ ಕೌಶಲಗಳೊಂದಿಗೆ ನೀವು ಭದ್ರತೆ ಹಾಗೂ ಸರಕುಗಳ ಒಪ್ಪಂದದ ಬಗ್ಗೆ ಹೆಚ್ಚಿನ ಕೌಶಲಗಳನ್ನು ಪಡೆದರೆ ಇನ್ನೂ ಉತ್ತಮ ವೇತನ ಪಡೆಯಬಹುದು. ಅಷ್ಟೇ ಅಲ್ಲ, ನೀವು ದಳ್ಳಾಳಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸ್ವತಂತ್ರವಾಗಿಯೂ ನಿಮ್ಮದೇ ಆದ ಗ್ರಾಹಕರನ್ನು ಪಡೆಯುವ ಮೂಲಕ ಕಮೀಶನ್ ಆಧಾರಿತ ಗಳಿಕೆಯನ್ನು ಪಡೆಯಬಹುದು.

10. ವೈಮಾನಿಕ ಚಾಲನೆ/ಪೈಲಟ್

10. ವೈಮಾನಿಕ ಚಾಲನೆ/ಪೈಲಟ್

ಒಂದು ವೇಳೆ ಅಸಾಂಪ್ರದಾಯಿಕ ಉದ್ಯೋಗ ಹಾಗೂ ಉತ್ತಮ ಗಳಿಕೆ ನಿಮ್ಮ ಆದ್ಯತೆಯಾಗಿದ್ದರೆ ವಿಮಾನದ ಪೈಲಟ್ ಆಗುವುದು ಒಂದು ಉತ್ತಮ ಆಯ್ಕೆಯಾಗಿದೆ. ವಿಮಾನಯಾನದ ಬಗ್ಗೆ ಸಾಕಷ್ಟು ಜ್ಞಾನ, ಮಿಲಿಟರಿಯಲ್ಲಿ ಸೇವೆ ಅಥವಾ ವೈಮಾನಿಕಾ ಶಾಲೆಯ ತರಬೇತಿ ಮೊದಲಾದವುಗಳು ವಾಣಿಜ್ಯ ಪೈಲಟ್ ಅಥವಾ Airline Transport Pilot License (ATPL) ಎಂಬ ರಹದಾರಿ ಪತ್ರವನ್ನು ಪಡೆಯಲು ನೆರವಾಗುತ್ತವೆ. ಈ ಲೈಸನ್ಸ್ ನಿಂದ ವಿಮಾನಯಾನ ಸಂಸ್ಥೆಯ ವಿಮಾನಕ್ಕಾದರೆ ಪ್ರತಿ ಹಾರಾಟದ ಘಂಟೆಯ ಪ್ರಕಾರ ಹಾಗೂ ಖಾಸಗಿ ಸಂಸ್ಥೆಯಾದ ನಿಗದಿತ ವೇತನದ ರೂಪದಲ್ಲಿ ಉತ್ತಮ ಆದಾಯ ಪಡೆಯಬಹುದು. ಬಿ. ಎಲ್ ಎಸ್ ವರದಿಯ ಪ್ರಕಾರ 2016ರಲ್ಲಿ ವಿಮಾನದ ಪೈಲಟ್ ಗಳ ವಾರ್ಷಿಕ ವೇತನ $105,720 ರಷ್ಟಿದೆ.

English summary

10 Job Skills That Will Help You Land a Six-Figure Salary

If you want to make more money in the upcoming years or are ready to start searching for six-figure jobs, brushing up on some in-demand job skills could help you reach your earning goals.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X