For Quick Alerts
ALLOW NOTIFICATIONS  
For Daily Alerts

2018 ರಲ್ಲಿ ತೆರಿಗೆ ಉಳಿತಾಯ ಮಾಡಲು ಈ 16 ವಿಧಾನಗಳು ನಿಮ್ಮದಾಗಿರಲಿ..

2018-19ರ ಸಾಲಿನಲ್ಲಿ ಸಂಬಳದಾರರಿಗೆ, ವ್ಯವಹಾರಸ್ಥರಿಗೆ ಯಾವ ತೆರಿಗೆ ಉಳಿತಾಯ ಆಯ್ಕೆಗಳಿವೆ? 2018ರಲ್ಲಿ ಯಾವುದರಲ್ಲಿ ಹೆಚ್ಚು ಪ್ರತಿಫಲ ಹಾಗು ತೆರಿಗೆ ಪ್ರಯೋಜನ ಸಿಗಲಿದೆ ಎಂಬುದನ್ನು ನೋಡೋಣ.

By Siddu Thoravat
|

2017 ಕಳೆದು 2018ರ ಹೊಸ ವರ್ಷಕ್ಕೆ ಕಾಲಿಟ್ಟಿದ್ದು, ಎಲ್ಲರೂ ಹೊಸ ಕನಸು, ಹೊಸ ಗುರಿ, ಹೊಸ ಚಿಂತನೆಗಳೊಂದಿಗೆ ನೂತನ ಪಯಣ ನಡೆಸಿದ್ದೇವೆ.

2018-19ರ ಸಾಲಿನಲ್ಲಿ ತೆರಿಗೆ ಉಳಿತಾಯ ಹಾಗು 80ಸಿ ಸೆಕ್ಷನ್ ಅಡಿಯಲ್ಲಿ ಉತ್ತಮ ಉಳಿತಾಯ ಹೂಡಿಕೆಗಳನ್ನು ಆಯ್ಕೆ ಮಾಡಲು ಬಯಸುವವರಿಗೆ ಈ ಲೇಖನ ಉಪಯುಕ್ತ. ಸಂಬಳದಾರರಿಗೆ, ವ್ಯವಹಾರಸ್ಥರಿಗೆ ಯಾವ ತೆರಿಗೆ ಉಳಿತಾಯ ಆಯ್ಕೆಗಳಿವೆ? 2018 ರಲ್ಲಿ ಯಾವುದರಲ್ಲಿ ಹೆಚ್ಚು ಪ್ರತಿಫಲ ಹಾಗು ತೆರಿಗೆ ಪ್ರಯೋಜನ ಸಿಗಲಿದೆ ಎಂಬುದನ್ನು ನೋಡೋಣ ಬನ್ನಿ.. ಪ್ರತಿಯೊಂದು ಕಂಪನಿಯು ಉದ್ಯೋಗಿಗಳಿಗೆ ಈ 11 ಸೌಲಭ್ಯಗಳನ್ನು ಒದಗಿಸಬೇಕು...

1. ಇಎಲ್ಎಸ್ಎಸ್ (ELSS) ಟ್ಯಾಕ್ಸ್ ಸೇವಿಂಗ್ ಮ್ಯೂಚುಯಲ್ ಫಂಡ್ಸ್

1. ಇಎಲ್ಎಸ್ಎಸ್ (ELSS) ಟ್ಯಾಕ್ಸ್ ಸೇವಿಂಗ್ ಮ್ಯೂಚುಯಲ್ ಫಂಡ್ಸ್

ಇಎಲ್ಎಸ್ಎಸ್ (ELSS) ಟ್ಯಾಕ್ಸ್ ಸೇವಿಂಗ್ ಮ್ಯೂಚುಯಲ್ ಫಂಡ್ ನಿಂದ ವರ್ಷಕ್ಕೆ ಸುಮಾರು 1.5 ಲಕ್ಷ ರೂಪಾಯಿಯ ಉಳಿತಾಯದ ಮೇಲೆ ತೆರಿಗೆಯ ಲಾಭವನ್ನು ಪಡೆಯಬಹುದು. ಇತರ ಯಾವುದೇ ಮ್ಯೂಚುಯಲ್ ಫಂಡ್ ಗಳಂತೆ ಇಎಲ್ಎಸ್ಎಸ್ (ELSS) ಟ್ಯಾಕ್ಸ್ ಸೇವಿಂಗ್ ಮ್ಯೂಚುಯಲ್ ಫಂಡ್ಸ್ ಸಹ ರಿಟರ್ನ್ಸ್ ಭರವಸೆ ನೀಡುವುದಿಲ್ಲ. ಇಎಲ್ಎಸ್ಎಸ್ (ELSS) ಫಂಡ್ ನಲ್ಲಿ ಇನ್ವೆಸ್ಟ್ ಮಾಡುವುದರಿಂದ ಶೇಕಡಾ 12 ರಿಂದ 18ರಷ್ಟು ಹೆಚ್ಚಿನ ರಿಟರ್ನ್ಸ್ ಪಡೆಯಬಹುದು. ಇತರೆ ಟ್ಯಾಕ್ಸ್ ಸೇವಿಂಗ್ ಯೋಜನೆಗಳಿಗೆ ಹೋಲಿಸಿದರೆ ಇಎಲ್ಎಸ್ಎಸ್ ಫಂಡ್ಸ್ ಲಾಕ್-ಇನ್ ಅವಧಿ ಕೇವಲ 3 ವರ್ಷಗಳು ಮಾತ್ರ. ಹೂಡಿಕೆದಾರರು ಡಿವಿಡೆಂಡ್ ಆಪ್ಷನ್ ಅನ್ನು ಆಯ್ಕೆ ಮಾಡಿ ಲಾಕ್-ಇನ್ ಅವಧಿಯಲ್ಲೂ ಸಹ ರೆಗ್ಯುಲರ್ ಆದಾಯವನ್ನು ಪಡೆಯಬಹುದು. ಎಸ್ಐಪಿ (SIP) ಮೂಲಕ ಇಎಲ್ಎಸ್ಎಸ್ ಫಂಡ್ ನಲ್ಲಿ ಪ್ರತಿ ತಿಂಗಳು ಇನ್ವೆಸ್ಟ್ ಮಾಡುವುದರಿಂದ ಭಾರಿ ಮೊತ್ತದ ಇನ್ವೆಸ್ಟ್ಮೆಂಟ್ ಒಂದೇ ಸಲ ಮಾಡಬೇಕೆಂಬ ಹೊಣೆಯು ಕಡಿಮೆಯಾಗುವುದಲ್ಲದೆ, ಹೆಚ್ಚಿನ ರಿಟರ್ನ್ಸ್ ಕೊಟ್ಟು ಮಾರ್ಕೆಟ್ ಏರುಪೇರುಗಳಿಂದ ಸುರಕ್ಷಿತವಾಗಿರಬಹುದು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಪ್ರತಿ ತಿಂಗಳು ಎಸ್ಐಪಿ (SIP) 3 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಉದಾಹರಣೆಗೆ, ನಿಮ್ಮ SIP 2017ರ ನವೆಂಬರ್ ನಲ್ಲಿ ಪ್ರಾರಂಭವಾದರೆ ಅಕ್ಟೋಬರ್ 2020ರಲ್ಲಿ 3 ತಿಂಗಳ ಲಾಕ್ ಇನ್ ಅವಧಿಯು ಮುಕ್ತಾಯವಾಗುತ್ತದೆ. ಹಾಗೆಯೇ 2017 ಡಿಸೆಂಬರ್ ನಲ್ಲಿ ಮಾಡಿದ ನಿಮ್ಮ ಎರಡನೇ SIP ಇನ್ವೆಸ್ಟ್ಮೆಂಟ್ ಲಾಕ್ ಇನ್ ಅವಧಿಯು ನವೆಂಬರ್ 2020ರ ವರೆಗೆ ಇರುತ್ತದೆ.
ಇಎಲ್ಎಸ್ಎಸ್ ಫಂಡ್ ಒಂದು ಈಕ್ವಿಟಿ ಮ್ಯೂಚುಯಲ್ ಫಂಡ್ ಸ್ಕೀಮ್ ಮತ್ತು ನೀವು ಅದರಲ್ಲಿ 3 ಅಥವಾ ಹೆಚ್ಚು ವರ್ಷಗಳ ಇನ್ವೆಸ್ಟ್ಮೆಂಟ್ ಮಾಡುವುದರಿಂದ ಈ ಫಂಡ್ ನಿಂದ ಬರುವ ರಿಟರ್ನ್ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.
ಆಕ್ಸಿಸ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್, ರಿಲಯನ್ಸ್ ಟ್ಯಾಕ್ಸ್ ಸೇವರ್ ಫಂಡ್, ಡಿಎಸ್ಪಿ ಬಿಆರ್ ಟ್ಯಾಕ್ಸ್ ಸೇವರ್ ಫಂಡ್ ಇತ್ಯಾದಿಗಳು ಕೆಲವು ಅಗ್ರ ಇಎಲ್ಎಸ್ಎಸ್ (ELSS) ತೆರಿಗೆ ಉಳಿತಾಯ ಮ್ಯೂಚುಯಲ್ ಫಂಡ್ ಗಳಾಗಿವೆ.
2018-2019ರಲ್ಲಿ ತೆರಿಗೆಯನ್ನು ಉಳಿಸಲು ನಿಮಗೆ ಸಹಾಯ ಮಾಡುವ ಅದ್ಭುತ ರಿಟರ್ನ್ಸ್ ಅನ್ನು ಒದಗಿಸುವ ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಇದು ಒಂದು. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

2. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

2. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಅನುಗುಣವಾಗಿ ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳನ್ನು ಕಡಿಮೆ ಮಾಡುತ್ತಿದೆ. ಪಿಎಫ್ ಖಾತೆಯಲ್ಲಿನ ಬಡ್ಡಿದರಗಳು (ಒಂದು ಕಾಲದಲ್ಲಿ ತುಂಬಾ ಇಷ್ಟವಾದ ಸ್ಕೀಮ್) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೂ ಸಹ ಈಗಲೂ ಇದು ಭಾರತದಲ್ಲಿ ಆದಾಯ ತೆರಿಗೆ ಉಳಿಸಲು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇದು ವರ್ಷಕ್ಕೆ(2017 ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ) ಶೇ. 7.8 ಬಡ್ಡಿ ದರವನ್ನು ಒದಗಿಸುತ್ತದೆ. ಪ್ರತೀ ತ್ರೈಮಾಸಿಕದಲ್ಲೂ ಭಾರತ ಸರ್ಕಾರವು ಬಡ್ಡಿದರವನ್ನು ಪರಿಷ್ಕರಿಸುತ್ತಲೇ ಇರುತ್ತದೆ.
ಮೆಚ್ಯೂರಿಟಿಯಲ್ಲಿ ಪಡೆದ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ ಮತ್ತು ಪಿಪಿಎಫ್ ಖಾತೆಯು 15 ವರ್ಷಗಳ ಲಾಕ್ ಇನ್ ಅವಧಿಯನ್ನು ಹೊಂದಿದೆ.
ರೂ. 1.5 ಲಕ್ಷ ವರೆಗಿನ ಹೂಡಿಕೆಯ ಆದಾಯ ತೆರಿಗೆ ದರ ಯು/ಎಸ್ 80ಸಿ ಗೆ ಅರ್ಹವಾಗಿದೆ. ಇದಲ್ಲದೆ, ಈ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದರೆ, ಪಿಪಿಎಫ್ ಖಾತೆಯಲ್ಲಿನ ಸಾಲ ಸೌಲಭ್ಯವು 3ನೇ ಹಣಕಾಸು ವರ್ಷದಿಂದ 5ನೇ ಹಣಕಾಸು ವರ್ಷದ ವರೆಗೆ ಲಭ್ಯವಿರುತ್ತದೆ. ಪಾವತಿಸಿದ ಬಡ್ಡಿಯ ಮೇಲೆ ವರ್ಷಕ್ಕೆ ಶೇಕಡಾ 2ರಷ್ಟು ಬಡ್ಡಿಯ ದರವನ್ನು ಲೋನ್ ಮೇಲೆ ಬಡ್ಡಿಯಾಗಿ ಹಾಕಲಾಗುವುದು. 6ನೇ ಹಣಕಾಸು ವರ್ಷದಿಂದ ಹಣವನ್ನು ಹಿಂಪಡೆಯಬಹುದು.
ನಾನ್ -ರೆಸಿಡೆಂಟ್ ಇಂಡಿಯನ್ಸ್ (ಎನ್ಆರ್ಐ) ಗಳಿಗೆ ಪಿಪಿಎಫ್ ಖಾತೆಯನ್ನು ತೆರೆಯಲು ಅರ್ಹತೆಯಿರುವುದಿಲ್ಲ.
ಅಕ್ಟೋಬರ್ ನಲ್ಲಿ 2017ರ ಹೊಸ ಪಿಪಿಎಫ್ ನಿಯಮಗಳ ಪ್ರಕಾರ ಎನ್ಆರ್ಐಗಳು ಪಿಪಿಎಫ್ ಮುಚ್ಚದೇ ಮುಂದುವರೆಸಿಕೊಂಡು ಹೋದರೆ, ಅಂಚೆ ಕಚೇರಿಯ ಎಸ್ಬಿ ಬಡ್ಡಿಯು ಮಾತ್ರ ಸಿಗಬಹುದು. ಯಾರೂ ಸಹ ಎಚ್ಯುಎಫ್(HUF- ಹಿಂದೂ ಅವಿಭಜಿತ ಕುಟುಂಬ) ಅಥವಾ ಸಂಘಗಳ ಪರವಾಗಿ ಹೂಡಿಕೆ ಮಾಡುವಂತಿಲ್ಲ. ಕನಿಷ್ಠ ಇನ್ವೆಸ್ಟ್ಮೆಂಟ್ ಮೊತ್ತವು ರೂ. 500 ಮತ್ತು ಗರಿಷ್ಟ ಮೊತ್ತ ರೂ. 150 ,000. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಇನ್ವೆಸ್ಟ್ ಮಾಡಿದರೆ ಯಾವುದೇ ಬಡ್ಡಿಯಿಲ್ಲದೆ ಹಣವು ನಿಮ್ಮ ಖಾತೆಗೆ ಜಮೆಯಾಗುವುದು.
ಪ್ರತಿ ತಿಂಗಳೂ ಸಹ ಪಿಪಿಎಫ್ ನಲ್ಲಿ ಇನ್ವೆಸ್ಟ್ ಮಾಡಬಹುದು. ನೀವು ತಿಂಗಳ 5ನೇ ತಾರೀಖಿಗೆ ಹೂಡಿಕೆ ಮಾಡಬಹುದಾದರೆ, ತಿಂಗಳ ಉಳಿದ ಅವಧಿಗೆ ನೀವು ಬಡ್ಡಿಯನ್ನು ಪಡೆಯಬಹುದು. 5ನೇ ಏಪ್ರಿಲ್ ಮೊದಲು ನೀವು 1.5 ಲಕ್ಷ ಹೂಡಿಕೆ ಮಾಡಿದರೆ, ಇಡೀ ಹಣಕಾಸು ವರ್ಷಕ್ಕೆ ನೀವು ಬಡ್ಡಿಯನ್ನು ಪಡೆಯುತ್ತೀರಿ. ಇದು 15 ವರ್ಷಗಳ ಅವಧಿಗೆ ಪಿಪಿಎಫ್ ನಿಂದ ಆದಾಯವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ.
ಪಿಪಿಎಫ್ ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. 2018ರಲ್ಲಿ ತೆರಿಗೆ ಯು/ಎಸ್ 80ಸಿ ಉಳಿಸಲು ಉತ್ತಮ ಹೂಡಿಕೆಯ ಯೋಜನೆಗಳಲ್ಲಿ ಒಂದಾಗಿದೆ. ತೆರಿಗೆ ಉಳಿತಾಯ ಬಯಸುವವರು ಮತ್ತು ನಿವೃತ್ತಿಯ ಉದ್ದೇಶಕ್ಕಾಗಿ ಅಥವಾ ಮಕ್ಕಳ ಮದುವೆಗೆ ಅಥವಾ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಸಂಗ್ರಹಿಸಲು ಬಯಸುವವರಿಗೆ ಮತ್ತು ಸುರಕ್ಷಿತ ಮತ್ತು ಹೆಚ್ಚಿನ ಆದಾಯವನ್ನು ಹುಡುಕುತ್ತಿರುವವರಿಗೆ ಇದು ಸೂಕ್ತವಾಗಿದೆ.

3. ಸುಕಾನ್ಯಾ ಸಮೃದ್ಧಿ ಖಾತೆ ಯೋಜನೆ

3. ಸುಕಾನ್ಯಾ ಸಮೃದ್ಧಿ ಖಾತೆ ಯೋಜನೆ

ನಿಮಗೆ ಹೆಣ್ಣು ಮಗು ಇದ್ದರೆ, ನೀವು ಸುಕಾನ್ಯಾ ಸಮೃದ್ಧಿ ಖಾತೆ ಯೋಜನೆಯ ಭಾಗವಾಗಿ 1.5 ಲಕ್ಷ ರೂಪಾಯಿಗಳಷ್ಟು ಹೂಡಿಕೆ ಮಾಡಬಹುದು ಮತ್ತು ಹೆಚ್ಚಿನ ಬಡ್ಡಿದರಗಳನ್ನು ಪಡೆಯಬಹುದು. ವರ್ಷಕ್ಕೆ(2017 ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ) ಬಡ್ಡಿಯ ದರವು ಶೇಕಡಾ 8.1. ಹೆಣ್ಣು ಮಗಳಿಗೆ 15 ವರ್ಷವಾಗುವವರೆಗೆ ಪೋಷಕರು ಅಥವಾ ಪಾಲಕರು ಹಣವನ್ನು ಕಟ್ಟಬಹುದು. ಹುಡುಗಿಗೆ 21 ವರ್ಷವಾದಾಗ ಮೊತ್ತವು ಮೆಚ್ಯೂರ್ ಆಗುತ್ತದೆ ಮತ್ತು 16 ವರ್ಷದಿಂದ 21 ವರ್ಷಗಳ ವರೆಗೆ ಹಣವನ್ನು ಕಟ್ಟಬೇಕಾಗಿಲ್ಲ. ಮೆಚ್ಯುರಿಟಿಯ ನಂತರ ಸಿಗುವ ಬಡ್ಡಿಯು ತೆರಿಗೆ ರಹಿತವಾಗಿರುತ್ತದೆ. ಇತರೆ ತೆರಿಗೆ ಉಳಿತಾಯ ಹೂಡಿಕೆ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಸುಕಾನ್ಯಾ ಸಮೃದ್ಧಿ ಖಾತೆಗಳ ವಿವರಗಳನ್ನು ಪರಿಶೀಲಿಸಬಹುದು.

4. ಟ್ಯಾಕ್ಸ್ ಸೇವರ್ ಬ್ಯಾಂಕ್ ಎಫ್ಡಿ ಸ್ಕೀಮ್

4. ಟ್ಯಾಕ್ಸ್ ಸೇವರ್ ಬ್ಯಾಂಕ್ ಎಫ್ಡಿ ಸ್ಕೀಮ್

ಇದೊಂದು ಐಟಿ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆಯನ್ನು ಉಳಿಸಲು ಹಳೆಯ ಮತ್ತು ಉತ್ತಮ ಹೂಡಿಕೆಯ ಯೋಜನೆ. ಕಳೆದ ವರ್ಷದ ಡೆಮೊನೆಟೈಝಶನ್ ನಂತರ ಬಡ್ಡಿ ದರವು ಕಡಿಮೆಯಾಗಿದೆ. ವರ್ಷಕ್ಕೆ ಶೇ. 4.5 ನಿಂದ ಶೇ. 7.5ರಷ್ಟು ಇತ್ತೀಚಿನ ಬಡ್ಡಿಯ ದರ.
ಟ್ಯಾಕ್ಸ್ ಸೇವರ್ ಬ್ಯಾಂಕ್ ಎಫ್ಡಿ ಯೋಜನೆಗಳಿಂದ ಪಡೆದ ಬಡ್ಡಿಗೆ ತೆರಿಗೆ ವಿಧಿಸಲಾಗುವುದು. ಅಂದರೆ, ಹೂಡಿಕೆಯಲ್ಲಿ ಮಾತ್ರ ತೆರಿಗೆ ವಿನಾಯಿತಿ ಲಭ್ಯವಿದೆ. ರಿಟರ್ನ್ ಮೇಲೆ ಇರುವುದಿಲ್ಲ. ಈ ಯೋಜನೆಯಲ್ಲಿ 5 ವರ್ಷಗಳ ಲಾಕ್ ಇನ್ ಅವಧಿಯಿರುತ್ತದೆ.
ಬ್ಯಾಂಕ್ ಗಳು ನೀಡುವ ಅತ್ಯುತ್ತಮ ಟ್ಯಾಕ್ಸ್ ಸೇವರ್ ಬ್ಯಾಂಕ್ ಎಫ್ಡಿ ಯೋಜನೆಗಳೆಂದರೆ: ರತ್ನಾಕರ್ ಬ್ಯಾಂಕ್ - 7.2%, ಐಡಿಎಫ್ಸಿ ಬ್ಯಾಂಕ್ - 7.2%, ಡಿಸಿಬಿ ಬ್ಯಾಂಕ್ - 7.1%, ಕರೂರ್ ವೈಶ್ಯ ಬ್ಯಾಂಕ್ - 7% ಮತ್ತು ಲಕ್ಷ್ಮಿ ವಿಲಾಸ್ ಬ್ಯಾಂಕ್ - 7%.
ಸಾಮಾನ್ಯ ಟ್ಯಾಕ್ಸ್ ಸೇವರ್ ಬ್ಯಾಂಕ್ ಎಫ್ಡಿ ಯೋಜನೆಗಳಿಗೆ ಹೋಲಿಸಿದರೆ, ಹಿರಿಯ ನಾಗರೀಕರಿಗೆ ಅವರ ತೆರಿಗೆ ಉಳಿತಾಯಕ್ಕಾಗಿ ಶೇ.0.5ರಷ್ಟು ಹೆಚ್ಚು ಬಡ್ಡಿದರೆ ಸಿಗುತ್ತದೆ.

5. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (ಎಸ್ಸಿಎಸ್ಎಸ್)

5. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (ಎಸ್ಸಿಎಸ್ಎಸ್)

ಈ ತೆರಿಗೆ ಉಳಿಸುವ ಯೋಜನೆಯು ಹಿರಿಯ ನಾಗರಿಕರಿಗೆ ಖಚಿತವಾದ ಆದಾಯವನ್ನು ನೀಡುತ್ತದೆ ಮತ್ತು ಸರ್ಕಾರದ ಬೆಂಬಲವಿರುವುದರಿಂದ ಪ್ರಿನ್ಸಿಪಾಲ್ ಅಮೌಂಟ್ ಸುರಕ್ಷಿತವಾಗಿರುತ್ತದೆ.
60 ಅಥವಾ ಹೆಚ್ಚಿನ ವರ್ಷದವರು ತೆರಿಗೆ ಉಳಿಸಲು ಈ ಸೀನಿಯರ್ ಸಿಟಿಜನ್ ಸೇವಿಂಗ್ ಅಕೌಂಟ್ ತೆರೆಯಬಹುದು. ಬಡ್ಡಿ ದರವು ವರ್ಷಕ್ಕೆ (2017 ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ) ಶೇ. 8.3.
5 ವರ್ಷಗಳ ಮೆಚ್ಯುರಿಟಿ ಅವಧಿಯಿರುತ್ತದೆ. ಪ್ರತಿ ಕ್ವಾರ್ಟರ್ ಕೊನೆಯಲ್ಲಿ ಬಡ್ಡಿಯನ್ನು ಪಾವತಿಸಲಾಗುವುದು. ಹಿರಿಯ ನಾಗರಿಕರಿಗೆ ತ್ರೈಮಾಸಿಕ ಬಡ್ಡಿ ಸಿಗುವುದರಿಂದ ತೆರಿಗೆಯನ್ನು ಉಳಿಸಲು ಇದು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ.
ಗರಿಷ್ಠ ಬಂಡವಾಳ ಮಿತಿ ರೂ. 15 ಲಕ್ಷ. ಯಾವುದೇ ಫಿಕ್ಸೆಡ್ ಡೆಪಾಸಿಟ್ ಯೋಜನೆಯಂತೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುವುದು.
ಡೆಪಾಸಿಟ್ 1 ವರ್ಷದ ನಂತರ ಶೇ. 1.5 ಗೆ ಸಮನಾದ ಮೊತ್ತ ಮತ್ತು 2 ವರ್ಷಗಳ ನಂತರ ಡೆಪಾಸಿಟ್ ಶೇ. 1ಕ್ಕೆ ಸಮನಾದ ಮೊತ್ತವನ್ನು ಕಡಿತಗೊಳಿಸಿ ಅಕೌಂಟ್ ಅನ್ನು ಅಕಾಲಿಕವಾಗಿ ಮುಚ್ಚುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

6. ರಾಜೀವ್ ಗಾಂಧಿ ಈಕ್ವಿಟಿ ಸೇವಿಂಗ್ ಸ್ಕೀಮ್ (RGESS)

6. ರಾಜೀವ್ ಗಾಂಧಿ ಈಕ್ವಿಟಿ ಸೇವಿಂಗ್ ಸ್ಕೀಮ್ (RGESS)

ಇದು ಹೂಡಿಕೆದಾರರಿಗೊಂದು ಹೊಸ ತೆರಿಗೆ ಉಳಿತಾಯ ಯೋಜನೆ. ಮೊದಲ ಬಾರಿಗೆ ಇನ್ವೆಸ್ಟ್ ಮಾಡುವ ವರ್ಷಕ್ಕೆ 12 ಲಕ್ಷ ರೂಪಾಯಿ ಆದಾಯವಿರುವ ಹೂಡಿಕೆದಾರರಿಗೆ ತೆರಿಗೆ ಉಳಿತಾಯದ ಲಾಭಗಳನ್ನು ನೀಡುತ್ತದೆ.
ಗರಿಷ್ಠ ಬಂಡವಾಳ ಹೂಡಿಕೆಯು ಪ್ರತಿ ಹಣಕಾಸು ವರ್ಷಕ್ಕೆ 50,000 ರೂ. ಈ ಮೊತ್ತವನ್ನು ಬಿಎಸ್ಇ 100 ಸ್ಟಾಕ್ ಗಳು ಅಥವಾ ಆರ್ ಜಿ ಇ ಎಸ್ ಎಸ್ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು.
ಇಂತಹ ಹೂಡಿಕೆಯ ಮೊತ್ತದ 50% ತೆರಿಗೆ ಉಳಿತಾಯಕ್ಕಾಗಿ 80 ಸಿಸಿಜಿಗೆ ಅರ್ಹತೆ ಪಡೆಯುತ್ತದೆ. ನೀವು ಬಿಎಸ್ಇ 100 ಸ್ಟಾಕ್ ಗಳಲ್ಲಿ ಅಥವಾ ಮೊದಲ ಬಾರಿಗೆ ಆರ್ ಜಿ ಇ ಎಸ್ ಎಸ್ ಮ್ಯೂಚುವಲ್ ಫಂಡ್ಗಳಲ್ಲಿ 50,000 ರೂ. ಹೂಡಿಕೆ ಮಾಡಿದರೆ, ನೀವು ಮೊದಲ ಬಾರಿಗೆ ರೂ. 25,000 ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ಇದು ಒಂದು ಬಾರಿ ಮಾತ್ರ. ಹೆಚ್ಚೆಂದರೆ ನಿಮಗೆ ರೂ. 7,725 (30% ತೆರಿಗೆ) ತೆರಿಗೆ ಪರಿಹಾರವನ್ನು ಪಡೆಯಬಹುದು. ಸತತ 3 ವರ್ಷಗಳ ಕಾಲ ಈ ಪ್ರಯೋಜನವನ್ನು ಪಡೆಯಬಹುದು.
ಷೇರುಗಳು ಮತ್ತು ಆರ್ ಜಿ ಇ ಎಸ್ ಎಸ್ ಮ್ಯೂಚುಯಲ್ ಫಂಡ್ ಗಳಂತಹ ಹೆಚ್ಚಿನ ಅಪಾಯದ ಆಯ್ಕೆಗಳಲ್ಲಿ ಹೂಡಿಕೆಯು ಮಾಡಲ್ಪಡುವುದರಿಂದ ರಿಟರ್ನ್ಸ್ ಅನ್ನು ಖಾತರಿಪಡಿಸಲಾಗಿಲ್ಲ.
2017ರ ಏಪ್ರಿಲ್ 1ರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದಾಗಿ ಬಹಳ ಕಡಿಮೆ ಹೂಡಿಕೆದಾರರು ಈ ಯೋಜನೆಯ ಲಾಭವನ್ನು ಪಡೆಯುತ್ತಾರೆ. ಇದರಿಂದಾಗಿ, ಹಣಕಾಸು ವರ್ಷ 2017-18ರಲ್ಲಿ ಹೊಸ ಹೂಡಿಕೆದಾರರು ವಿಭಾಗ 80CCG ಯಡಿಯಲ್ಲಿ ಡಿಡಕ್ಷನ್ ಕ್ಲೇಮ್ ಮಾಡಲು ಅರ್ಹರಾಗಿರುವುದಿಲ್ಲ. ಆದರೆ, ಹಣಕಾಸು ವರ್ಷದ 2016-17ರಲ್ಲಿ ಅಥವಾ ಅದಕ್ಕಿಂತ ಮುಂಚೆ ಯಾವುದೇ ವ್ಯಕ್ತಿಯು ಡಿಡಕ್ಷನ್ ಕ್ಲೇಮ್ ಮಾಡಿದ್ದಲ್ಲಿ ಹಣಕಾಸಿನ ವರ್ಷ 2017-18ರಲ್ಲಿ ಅರ್ಹರಿಗೆ ಡಿಡಕ್ಷನ್ ಕ್ಲೇಮ್ ಮಾಡಲು ಅನುಮತಿ ನೀಡಲಾಗುವುದು.

7. ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್)

7. ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್)

ವಾಲಂಟರಿ ಪ್ರಾವಿಡೆಂಟ್ ಫಂಡ್ ಉದ್ಯೋಗಿಯು ತನ್ನ ಪ್ರಾವಿಡೆಂಟ್ ಫಂಡ್ ಖಾತೆಗೆ ನೀಡಿವ ಕಾಂಟ್ರಿಬ್ಯುಶನ್.
ಎಂಪ್ಲೋಯೀ ಕಾಂಟ್ರಿಬ್ಯೂಟ್ ಮಾಡಬಹುದಾದ ಗರಿಷ್ಟ ಮೊತ್ತವು ಬೇಸಿಕ್ ಮತ್ತು DAಯ ಶೇ. 100 ಆಗಿರುತ್ತದೆ.
ಇದು ಇಪಿಎಫ್ ಗಿರುವ ಬಡ್ಡಿ ದರವನ್ನು ಹೊಂದುತ್ತದೆ. ಹಣಕಾಸು ವರ್ಷ 2016-17ಕ್ಕೆ ಇಪಿಎಫ್ ಬಡ್ಡಿದರವು ವರ್ಷಕ್ಕೆ 8.65% ಆಗಿತ್ತು. ಹಾಗೂ ಹಣಕಾಸು ವರ್ಷ 20178 ಕ್ಕೆ 8.4% ಕ್ಕೆ ಇಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.
ವಿ.ಪಿ.ಎಫ್ ನಲ್ಲಿ ಬಂಡವಾಳವನ್ನು ನಿವೃತ್ತಿ ಸಮಯದಲ್ಲಿ ಮಾತ್ರ ಹಿಂತೆಗೆದುಕೊಳ್ಳಬಹುದು. ಆದ್ದರಿಂದ ಆದಾಯ ತೆರಿಗೆ ಉಳಿಸಲು ಇದು ಅತ್ಯುತ್ತಮ ತೆರಿಗೆ ಉಳಿತಾಯ ಆಯ್ಕೆಗಳಲ್ಲಿ ಒಂದಾಗಿದೆ. ಮೆಚುರಿಟಿ ರಿಟರ್ನ್ಸ್ ತೆರಿಗೆ ಮುಕ್ತವಾಗಿರುತ್ತದೆ. ನೀವು ವಿಪಿಎಫ್ Vs ಇಪಿಎಫ್ Vs ಪಿಪಿಎಫ್ ನಡುವಿನ ಹೋಲಿಕೆಯನ್ನೂ ಪರಿಶೀಲಿಸಬಹುದು ಮತ್ತು ವ್ಯತ್ಯಾಸಗಳನ್ನು ತಿಳಿಯಬಹುದು.

8. ನ್ಯೂ ಪೆನ್ಷನ್ ಸ್ಕೀಮ್ (ಎನ್ಪಿಎಸ್)

8. ನ್ಯೂ ಪೆನ್ಷನ್ ಸ್ಕೀಮ್ (ಎನ್ಪಿಎಸ್)

ನಿವೃತ್ತಿಗಾಗಿ ಉಳಿಸಲು ಬಯಸುವ ಮತ್ತು 2018ರಲ್ಲಿ ಯು/ಎಸ್ 80ಸಿ ಅಡಿಯಲ್ಲಿ ತೆರಿಗೆಯನ್ನು ಉಳಿಸಲು ಇನ್ನೊಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಎನ್ಪಿಎಸ್ ನಲ್ಲಿ ರಿಟರ್ನ್ಸ್ ಬದಲಾಗುತ್ತಿರುತ್ತದೆ.
ಕಳೆದ 5 ವರ್ಷಗಳಲ್ಲಿ, ಹಲವಾರು ಎನ್ಪಿಎಸ್ ನಿಧಿಗಳು 10% ರಿಂದ 15% ರವರೆಗೆ ರಿಟರ್ನ್ಸ್ ನೀಡಿವೆ. ನೀವು ಉತ್ತಮ ಎನ್ಪಿಎಸ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದಾದರೆ, ಮ್ಯೂಚುಯಲ್ ಫಂಡ್ ರಿಟರ್ನ್ ಗೆ ಸುಲಭವಾಗಿ ಹೋಲಿಸಬಹುದಾದ ಶೇ. 12-15 ವರೆಗೆ ರಿಟರ್ನ್ ಗಳಿಸುವ ಅವಕಾಶವನ್ನು ನೀವು ಪಡೆದುಕೊಳ್ಳಬಹುದು. ಇದು ಕಡಿಮೆ ಬೆಲೆಯ ಇನ್ವೆಸ್ಟ್ಮೆಂಟ್ ಆಯ್ಕೆಯಾಗಿದೆ. ನಿಧಿ ನಿರ್ವಹಣೆ ಶುಲ್ಕಗಳು ಹೂಡಿಕೆಯ ಮೌಲ್ಯದ 0.0009% ರಷ್ಟು ಕಡಿಮೆಯಿದೆ.
ನೀವು ಪ್ರತಿ ತಿಂಗಳು ರೂ. 500 ಅಥವಾ ವರ್ಷಕ್ಕೆ 6,000 ಹೂಡಿಕೆ ಮಾಡಬಹುದು. ಎನ್ಪಿಎಸ್ ನಲ್ಲಿ ಹೂಡಿಕೆಯ ಗರಿಷ್ಠ ಮಿತಿ ಇಲ್ಲ. ನೀವು ಟೈರ್- I ಯೋಜನೆಯಲ್ಲಿ 1.5 ಮಿಲಿಯನ್ ವರೆಗೆ ಹೂಡಿಕೆ ಮತ್ತು ತೆರಿಗೆ ವಿನಾಯಿತಿ ಯು/ಎಸ್ 80ಸಿ ಪಡೆಯಬಹುದು.
ಹೂಡಿಕೆದಾರರಿಗೆ ಇಕ್ವಿಟಿಯ ಅಲೊಕೇಶನ್, ಬಾಂಡ್ ಗಳು ಮತ್ತು ಗಿಲ್ಟ್ಸ್ ಆಯ್ಕೆ ಮಾಡುವ ಅವಕಾಶವಿದೆ. ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ವಿಧಿಸಲಾಗುತ್ತದೆ. ಎನ್ಪಿಎಸ್ ಯೋಜನೆಗೆ ಸೇರುವ ಮೊದಲು ಯೋಜನೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ನೀವು ನ್ಯೂ ಪೆನ್ಷನ್(ಎನ್ಪಿಎಸ್) ಸ್ಕೀಮ್ ಅನ್ನು ಆನ್ಲೈನ್ ಅಥವಾ ಆಫ್ಲೈನ್ ಅನ್ನು ತೆರೆಯಬಹುದು.

9. ನ್ಯೂ ಪೆನ್ಷನ್ ಸ್ಕೀಮ್ (ಎನ್ಪಿಎಸ್) ಯು/ಎಸ್ 80ಸಿಸಿಡಿ

9. ನ್ಯೂ ಪೆನ್ಷನ್ ಸ್ಕೀಮ್ (ಎನ್ಪಿಎಸ್) ಯು/ಎಸ್ 80ಸಿಸಿಡಿ

80 ಸಿಯ ಜೊತೆಗೆ ಮತ್ತೊಂದು ರೂ. 50,000 ವಿನಾಯಿತಿ ಪಡೆಯಲು ಟೈರ್-ಐ ಯೋಜನೆಯಲ್ಲಿ ಯುಎಸ್ 80ಸಿಸಿಡಿಯಲ್ಲಿ ಹೂಡಿಕೆ ಮಾಡಬಹುದು. ಟೈರ್ -1 ರಲ್ಲಿ, ನಿವೃತ್ತಿಯ ಮೊದಲು ನೀವು ನಿಮ್ಮ ಹೂಡಿಕೆ ಹಿಂಪಡೆಯಲು ಸಾಧ್ಯವಿಲ್ಲ. ಅಂದರೆ, ನಿಮ್ಮ ಹಣವನ್ನು ನಿವೃತ್ತಿಯ ತನಕ ಲಾಕ್ ಮಾಡಲಾಗುತ್ತದೆ (ಕೆಲವು ಪರಿಸ್ಥಿತಿಗಳನ್ನು ಹೊರತುಪಡಿಸಿ). ಮತ್ತು ಇದು ನಿವೃತ್ತಿ ನಂತರದ ಮೂಲ ಧನದ ಮೊತ್ತವನ್ನು ಸಂಗ್ರಹಿಸುವುದಕ್ಕಾಗಿ ಉತ್ತಮ ರಿಟೈರ್ಮೆಂಟ್ ಯೋಜನೆಯಾಗಿದೆ.

10. ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎನ್ಎಸ್ ಸಿ)

10. ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎನ್ಎಸ್ ಸಿ)

ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟನ್ನು ಪೋಸ್ಟ್ ಆಫೀಸ್ ಮತ್ತು ಪ್ರಿನ್ಸಿಪಾಲ್ ಇವರಿಂದ ನೀಡಲಾಗುತ್ತದೆ ಮತ್ತು ಬಡ್ಡಿಯನ್ನು ಸರ್ಕಾರವು ಬೆಂಬಲಿಸುವುದರಿಂದ ಇದು ಒಂದು ಸುರಕ್ಷಿತ ಉಳಿತಾಯ ಆಯ್ಕೆ.
ಎನ್ಎಸ್ಸಿ ಈಗ 5 ವರ್ಷ ಅವಧಿಯವರೆಗೆ ಲಭ್ಯವಿದೆ. ಹಿಂದೆ 10 ವರ್ಷಗಳ ಎನ್ಎಸ್ಸಿಗಳು ಇದ್ದವು. ಈಗ ಅದನ್ನು ನಿಲ್ಲಿಸಲಾಗಿದೆ. ಎನ್ಎಸ್ಸಿ ಯಲ್ಲಿ ಕನಿಷ್ಠ ರೂ. 500 ಮತ್ತು ರೂ. 1000, 5000 ಅಥವಾ 10000 ಅಪವರ್ತ್ಯಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡಬಹುದು. ಹೂಡಿಕೆ ಗರಿಷ್ಟ ಮಿತಿಯೇನಿಲ್ಲ. 5 ವರ್ಷಗಳ ಎನ್ಎಸ್ಸಿ ಯ ಬಡ್ಡಿದರವು ವರ್ಷಕ್ಕೆ ಶೇ. 7.8 (2017 ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ). ಹಣಕಾಸು ಸಚಿವಾಲಯ ಕ್ವಾರ್ಟರ್ ನಿಂದ ಕ್ವಾರ್ಟರ್ ಗೆ ಬದಲಾಗಬಹುದಾದ ಬಡ್ಡಿ ದರವನ್ನು ಪ್ರಕಟಿಸುತ್ತದೆ. ಪ್ರತಿ ಅರ್ಧ ವರ್ಷಕ್ಕೆ ಬಡ್ಡಿಯು ಚಕ್ರಬಡ್ಡಿಯಾಗುತ್ತದೆ. ಬಂದಿರುವ ಬಡ್ಡಿಯ ಮೇಲೆ ತೆರಿಗೆ ಬೀಳುತ್ತದೆ.ಆದಾಯ ತೆರಿಗೆ ಕಟ್ಟುವಾಗ ಐಟಿಆರ್ ಫಾರ್ಮ್ ನಲ್ಲಿ ಇತರೆ ಆದಾಯ ಹೂಡಿಕೆ ತೋರಿಸಬೇಕು. ಇಂತಹ ಬಡ್ಡಿಯನ್ನು ತೆರಿಗೆ ವಿನಾಯಿತಿ ಯು/ಎಸ್ 80ಸಿ (ರೂ 1.5 ಲಕ್ಷಗಳ ಮಿತಿಯೊಳಗೆ)ಯಲ್ಲಿ ಕ್ಲೇಮ್ ಮಾಡಬಹುದು.
ನೀವು ಇತರ ಆದಾಯ ಮತ್ತು ವಿನಾಯಿತಿ ಯು/ಎಸ್ 80ಸಿ ಎಂದು ತೋರಿಸಬಹುದು ಮತ್ತು ಅಂತಹ ಬಡ್ಡಿಗೆ ಯಾವುದೇ ತೆರಿಗೆಯನ್ನು ಪಾವತಿಸುವುದು ಬೇಡ.
ವ್ಯಕ್ತಿಗಳು, ಜಾಯಿಂಟ್ ಮತ್ತು ಪೋಷಕರಿಂದ ಬೆಂಬಲವಿರುವ ಮೈನರ್ ಗಳೂ ಕೂಡ ಎನ್ಎಸ್ಸಿ ಯಲ್ಲಿ ಇನ್ವೆಸ್ಟ್ ಮಾಡಬಹುದು.

11. ಯೂನಿಟ್ ಲಿಂಕ್ಡ್ ಇನ್ವೆಸ್ಟ್ಮೆಂಟ್ ಪ್ಲಾನ್ (ಯುಎಲ್ ಐಪಿ )

11. ಯೂನಿಟ್ ಲಿಂಕ್ಡ್ ಇನ್ವೆಸ್ಟ್ಮೆಂಟ್ ಪ್ಲಾನ್ (ಯುಎಲ್ ಐಪಿ )

2010ರ ನಂತರ ಐಆರ್ಡಿಎ ಸಲಹಾಸೂತ್ರಗಳ ಪ್ರಕಾರ ಇನ್ಶೂರೆನ್ಸ್ ಕಂಪನಿಗಳು ಯುಎಲ್ಐಪಿ ಶುಲ್ಕಗಳನ್ನು ಕಡಿಮೆ ಮಾಡಿವೆ. ಯುಎಲ್ಐಪಿ ಲೈಫ್ ರಿಸ್ಕ್ ಕವರೇಜ್ ಅನ್ನು ಒದಗಿಸುತ್ತದೆ. ಹೊಸ ಯುಎಲ್ಐಪಿ ಪಾಲಿಸಿಗಳಲ್ಲಿ ಪಾಲಿಸಿ ಮತ್ತು ಆಡಳಿತಾತ್ಮಕ ಶುಲ್ಕಗಳು ಬಹಳ ಕಡಿಮೆ ಇದೆ. ರಿಟರ್ನ್ ಭರವಸೆ ಇರುವುದಿಲ್ಲ. ಸ್ಕೀಮ್ ಆಧಾರದ ಮೇಲೆ ಶೇ. 5 ಆದಾಯವನ್ನು ಶೇ. 11 ಗೆ ರಿಟರ್ನ್ ಮಾಡುತ್ತದೆ.
ಉತ್ತಮ ಆದಾಯವನ್ನು ಹೊಂದಲು ನೀವು 10-12 ವರ್ಷಗಳಿಂದ ಯುಲಿಪ್ ಗಳನ್ನು ಹೊಂದಿರಬೇಕು. ಯುಲಿಪ್ ಗಳನ್ನು ತೆಗೆದುಕೊಳ್ಳಲು ನಾನು ಪ್ರೋತ್ಸಾಹಿಸುವುದಿಲ್ಲವಾದರೂ, ನೀವು ಸ್ಟಾಕ್ ಮಾರ್ಕೆಟ್ಸ್ ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ನಂಬಿಕೆ ಇರದಿದ್ದರೆ, ಹಣ ಉಳಿಸಲು, ಲೈಫ್ ಇನ್ಶೂರೆನ್ಸ್ ಕವರೇಜ್ ಮತ್ತು ಸ್ವಲ್ಪ ಆದಾಯವನ್ನು ಪಡೆಯಲು ಇದನ್ನು ಒಂದು ಆಯ್ಕೆಯಾಗಿರಿಸಿಕೊಳ್ಳಬಹುದು.

12. ಲೈಫ್ ಇನ್ಶೂರೆನ್ಸ್ ಪ್ಲಾನ್ಸ್

12. ಲೈಫ್ ಇನ್ಶೂರೆನ್ಸ್ ಪ್ಲಾನ್ಸ್

ಒಂದು ಲೈಫ್ ಇನ್ಶುರೆನ್ಸ್ ತೆಗೆದುಕೊಳ್ಳುವುದು ಆರ್ಥಿಕ ಯೋಜನೆಯಲ್ಲಿ ಮೊದಲ ಹಂತವಾಗಿದೆ. ಕಡಿಮೆ ವೆಚ್ಚಗಳು ಮತ್ತು ಹೆಚ್ಚಿನ ಅಪಾಯದ ವ್ಯಾಪ್ತಿಯೊಂದಿಗೆ ಬರುವ ಕಾರಣದಿಂದಾಗಿ ಒಂದು ಉತ್ತಮ ಅವಧಿಯ ವಿಮೆಯ ಯೋಜನೆಯನ್ನು ಆರಿಸಿಕೊಳ್ಳಬೇಕು.
ಟರ್ಮ್ ಇನ್ಶುರೆನ್ಸ್ ಯೋಜನೆಗಳು ಯಾವುದೇ ಮೆಚುರಿಟಿ ಮೌಲ್ಯದೊಂದಿಗೆ ಬರುವುದಿಲ್ಲ. ಇವುಗಳು ರಿಸ್ಕ್ ಕವರೇಜ್ ಗಾಗಿ ಮತ್ತು ಹಣ ಉಳಿಸುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಿಲ್ಲ.
ನಿಮ್ಮ ಜೀವನವನ್ನು ಉಳಿಸಲು ಸಹಾಯ ಮಾಡುವ ಮತ್ತು ಆದಾಯ ತೆರಿಗೆ ಉಳಿಸುವ 10/15 ವರ್ಷಗಳ ವೆಚ್ಚ/ ಆದಾಯದ ಆಧಾರದ ಮೇಲೆ ಸಾಕಾಗುವ ಜೀವ ವಿಮಾ ರಕ್ಷಣೆಯನ್ನು ಪರಿಗಣಿಸಿ.

13. ಹೋಂ ಲೋನ್ ಪ್ರಿನ್ಸಿಪಾಲ್ ಮರುಪಾವತಿ

13. ಹೋಂ ಲೋನ್ ಪ್ರಿನ್ಸಿಪಾಲ್ ಮರುಪಾವತಿ

ಇನ್ನೂ ನಿಮ್ಮ ಕನಸಿನ ಮನೆಯನ್ನು ಹೊಂದಿಲ್ಲವಾದರೆ, ಈಗ ಅದಕ್ಕೆ ಸರಿಯಾದ ಸಮಯ. ಹೋಂ ಲೋನ್ ಪ್ರಿನ್ಸಿಪಾಲ್ ಮರುಪಾವತಿಯ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು (ಬಡ್ಡಿ 2 ಲಕ್ಷದವರೆಗಿನ ತೆರಿಗೆಯಿಂದ ವಿನಾಯಿತಿ ಪಡೆದುಕೊಂಡಿರುತ್ತದೆ). ಹೋಂ ಲೋನ್ ಪ್ರಿನಿಸಿಪಾಲ್ ಮರುಪಾವತಿಯ ಮೇಲೆ ತೆರಿಗೆ ವಿನಾಯಿತಿ ಪಡೆಯಲು ನೀವು ಅರ್ಹರಾಗುತ್ತೀರಿ. ನಿಮಗೆ ಮನೆ ಇಲ್ಲದಿದ್ದರೆ, ನೀವು ಇದನ್ನು ಆದ್ಯತೆಯೆಂದು ಪರಿಗಣಿಸಬಹುದು ಮತ್ತು ತೆರಿಗೆ ವಿನಾಯಿತಿಯನ್ನು ಕೂಡ ಪಡೆಯಬಹುದು.

14. ಗೃಹ ಸಾಲದ ಮೇಲಿನ ಬಡ್ಡಿ - ಸೆಕ್ಷನ್ 24

14. ಗೃಹ ಸಾಲದ ಮೇಲಿನ ಬಡ್ಡಿ - ಸೆಕ್ಷನ್ 24

ನೀವು ಗೃಹ ಸಾಲ ತೆಗೆದುಕೊಂಡು ರಿಯಾಯಿತಿಯಾಗಿ 2 ಲಕ್ಷ ರೂಪಾಯಿ ಅಥವಾ 1 .5 ಲಕ್ಷದ ವರೆಗೆ ಮರುಪಾವತಿಯ ಮೇಲೆ ಬಡ್ಡಿಯನ್ನು ಯು/ಎಸ್ 80ಸಿ ಅಡಿಯಲ್ಲಿ ಬಡ್ಡಿಯನ್ನು ಕ್ಲೇಮ್ ಮಾಡಬಹುದು. ಉದಾಹರಣೆಗೆ, ನೀವು ಮನೆಯನ್ನು ಖರೀದಿಸಿ 22 ಲಕ್ಷ ಬಡ್ಡಿಯನ್ನು ಕಟ್ಟುತ್ತಿದ್ದರೆ, ರಿಯಾಯಿತಿಯಂತೆ 2 ಲಕ್ಷ ರೂಪಾಯಿಗಳನ್ನು ಕ್ಲೇಮ್ ಮಾಡಬಹುದು. ಒಂದೇ ಒಂದು ಕಂಡೀಶನ್ ಎಂದರೆ ಅದು ಸ್ವಯಂ ಆಕ್ರಮಿತ ಆಸ್ತಿಯಾಗಿರಬೇಕು ಮತ್ತು ಬಾಡಿಗೆ ಆಸ್ತಿಯ ಮೇಲೆ ಯಾವುದೇ ಈ ತರಹದ ಯಾವುದೇ ವಿನಾಯಿತಿ ಸಿಗುವುದಿಲ್ಲ.

15. ಮೊದಲ ಬಾರಿಗೆ ಮನೆ ಕೊಳ್ಳುವವರು- ಗೃಹ ಸಾಲದ ಮೇಲಿನ ಬಡ್ಡಿದರ- ಸೆಕ್ಷನ್ 80ಇಇ

15. ಮೊದಲ ಬಾರಿಗೆ ಮನೆ ಕೊಳ್ಳುವವರು- ಗೃಹ ಸಾಲದ ಮೇಲಿನ ಬಡ್ಡಿದರ- ಸೆಕ್ಷನ್ 80ಇಇ

ನೀವು ಮೊದಲ ಬಾರಿಗೆ ಮನೆ ಖರೀದಿದಾರರಾಗಿದ್ದರೆ, ನೀವು ಹಣವನ್ನು ಮರುಪಾವತಿ ಮಾಡುವ ತನಕ ಗೃಹ ಸಾಲದಲ್ಲಿ ರೂ. 50,000ವರೆಗೆ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದು. ಉದಾ. ನೀವು ಮೊದಲ ಬಾರಿಗೆ ಮನೆ ಖರೀದಿದಾರರು ಮತ್ತು ರೂ. 2.6 ಲಕ್ಷ ಸೆಕ್ಷನ್ 24 ಪ್ರಕಾರ 2 ಲಕ್ಷ ಮತ್ತು 80ಇಇ ಸೆಕ್ಷನ್ ನಲ್ಲಿ ರೂ. 50000. ಒಟ್ಟಿಗೆ 2.5 ಲಕ್ಷ ಕ್ಲೇಮ್ ಮಾಡಬಹುದು.

16. ಪೆನ್ಷನ್ ಫಂಡ್ಸ್

16. ಪೆನ್ಷನ್ ಫಂಡ್ಸ್

ಪಿಂಚಣಿ ನಿಧಿಗಳು ಆದಾಯ ನಿವೃತ್ತಿಯ ನಂತರ ನಿವೃತ್ತಿಯನ್ನು ಒದಗಿಸುತ್ತವೆ. ಅವರು ಮುಂದೂಡಲ್ಪಟ್ಟ ವರ್ಷಾಶನ ಮತ್ತು ತಕ್ಷಣದ ವರ್ಷಾಶನವನ್ನು ಹೊಂದಿದ್ದಾರೆ.
ಮುಂದೂಡಲ್ಪಟ್ಟ ವರ್ಷಾಶನ ಯೋಜನೆ ಅಡಿಯಲ್ಲಿ, ನಿಮ್ಮ ನಿವೃತ್ತಿ ವರೆಗೆ ನೀವು ವಾರ್ಷಿಕವಾಗಿ ಹೂಡಿಕೆ ಮಾಡಿಕೊಳ್ಳುತ್ತೀರಿ. ನಿಮ್ಮ ನಿವೃತ್ತಿಯನ್ನು ನೀವು ತಲುಪಿದ ನಂತರ, ನೀವು 60% ರಷ್ಟು ಸಂಗ್ರಹಿಸಿದ ಕಾರ್ಪಸ್ ಅನ್ನು ಹಿಂತೆಗೆದುಕೊಳ್ಳಬಹುದು ಮತ್ತು ಉಳಿದಿರುವ ಹೂಡಿಕೆಯಲ್ಲಿ ಒಂದು ವಾರ್ಷಿಕ ನಿಧಿಯಲ್ಲಿ ಮರು ಹೂಡಿಕೆ ಮಾಡಬೇಕಾಗುತ್ತದೆ.
ಆದರೆ ತಕ್ಷಣದ ವರ್ಷಾಶನ ಯೋಜನೆಗಳ ಅಡಿಯಲ್ಲಿ, ನೀವು ಒಂದು ಬಾರೀ ಮೊತ್ತವನ್ನು ಒಂದೇ ಬಾರಿಗೆ ಹೂಡಿಕೆ ಮಾಡಿ ಮುಂದಿನ ತಿಂಗಳಿನಿಂದ ಮಾಸಿಕ ಪಿಂಚಣಿ ಪಡೆಯುತ್ತೀರಿ. ನಿಮ್ಮ ನಿವೃತ್ತಿ ಕಾರ್ಪಸ್ ಅನ್ನು ಹೂಡಲು ನೀವು ಸಾಮಾನ್ಯವಾಗಿ ಇದನ್ನು ಬಳಸುತ್ತೀರಿ.
ತೆರಿಗೆ ಉಳಿತಾಯ ಹೂಡಿಕೆಯ ಆಯ್ಕೆಗಳಲ್ಲದೇ ಬಾಡಿಗೆ ವಿನಾಯಿತಿಗೆ ,ವೈದ್ಯಕೀಯ ವಿಮೆ ತೆರಿಗೆ ವಿನಾಯಿತಿಗಳನ್ನು ಇಲ್ಲಿ ಹೇಳುವುದಿಲ್ಲ. ಏಕೆಂದರೆ ಅವೆಲ್ಲ ತೆರಿಗೆ ಉಳಿತಾಯ ಸ್ಕೀಮ್ ಗಳಾಗಿರುವುದಿಲ್ಲ.

ಕೊನೆ ಮಾತು

ಕೊನೆ ಮಾತು

ಈ ಉನ್ನತ 16 ತೆರಿಗೆ ಉಳಿತಾಯ ಯೋಜನೆಗಳು ವಿಭಾಗ 80ಸಿ ಅಡಿಯಲ್ಲಿ 1.5 ಲಕ್ಷಗಳವರೆಗೆ ಹೂಡಿಕೆ ಮಾಡಲು ಸಹಕರಿಸುತ್ತವೆ. ಎನ್ಪಿಎಸ್ ಅಡಿಯಲ್ಲಿ ರೂ. 50,000, ಮನೆ ಸಾಲ ಬಡ್ಡಿದರ ರೂ. 2 ಲಕ್ಷ ಹೀಗೆ ಅನೇಕ ಪ್ರಯೋಜನ ಲಭ್ಯವಿದೆ. ನಿಮ್ಮ ಹೂಡಿಕೆ ಅವಧಿ, ಗಂಡಾಂತರದ ಪ್ರಮಾಣ, ಅಗತ್ಯತೆ ಮತ್ತು ಇಲ್ಲಿ ಸೂಚಿಸಲಾದ ವೈಶಿಷ್ಟ್ಯಗಳ ಆಧಾರದ ಮೇಲೆ ನಿಮಗೆ ಸೂಕ್ತವಾದ ಕೆಲವು ಹೂಡಿಕೆ ಆಯ್ಕೆಗಳನ್ನು ಪರಿಗಣಿಸಬಹುದು.

English summary

Best tax saving plans in India for 2018-19

Given here 16 Best tax saving plans in India for 2018-19.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X