For Quick Alerts
ALLOW NOTIFICATIONS  
For Daily Alerts

ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

ಯಾವುದೇ ದೊಡ್ಡ ಉದ್ಯಮ ಪ್ರಾರಂಭವಾದಾಗ ಚಿಕ್ಕದಾಗಿಯೇ ಇದ್ದು ನಿಧಾನವಾಗಿ ಬೆಳೆಯುತ್ತಾ ಹೆಮ್ಮರವಾಗಿ ಬೆಳೆದಿರುತ್ತದೆ. ಅದುವರೆಗೆ ಆ ಉದ್ಯಮಕ್ಕೆ ನೀಡಬೇಕಾದ ಪೋಷಣೆ ಹಾಗೂ ಕಾಳಜಿಯೇ ಇದರ ಮೂಲಮಂತ್ರವಾಗಿದೆ.

By Siddu
|

ಯಾವುದೇ ದೊಡ್ಡ ಉದ್ಯಮ ಪ್ರಾರಂಭವಾದಾಗ ಚಿಕ್ಕದಾಗಿಯೇ ಇದ್ದು ನಿಧಾನವಾಗಿ ಬೆಳೆಯುತ್ತಾ ಹೆಮ್ಮರವಾಗಿ ಬೆಳೆದಿರುತ್ತದೆ. ಅದುವರೆಗೆ ಆ ಉದ್ಯಮಕ್ಕೆ ನೀಡಬೇಕಾದ ಪೋಷಣೆ ಹಾಗೂ ಕಾಳಜಿಯೇ ಇದರ ಮೂಲಮಂತ್ರವಾಗಿದೆ. ಯಾವುದೇ ಉದ್ಯಮವನ್ನು ಸೂಕ್ತವಾಗಿ ಯೋಜಿಸಿ ಸರಿದಾರಿಯಲ್ಲಿ ನಿರ್ವಹಿಸಿದರೆ ಖಂಡಿತವಾಗಿಯೂ ಯಶಸ್ಸು ದೊರಕುತ್ತದೆ. ಅಂದಹಾಗೆ, ಹೆಚ್ಚಿನವರು ಯಾವುದೇ ಉದ್ಯಮ ಪ್ರಾರಂಭಿಸಲು ದೊಡ್ಡ ಮೊತ್ತದ ಬಂಡವಾಳವಿಲ್ಲದಿದ್ದರೆ ಆಗದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಇಂದು ಚಿಕ್ಕ ಬಂಡವಾಳದಲ್ಲಿಯೇ ಪ್ರಾರಂಭಿಸಿ ದೊಡ್ಡ ಉದ್ಯಮವಾಗುವ ಹಲವಾರು ಅವಕಾಶಗಳಿವೆ.

ನಮ್ಮ ದೇಶದ ಯಶಸ್ವೀ ಉದ್ಯಮಿಗಳ ಇತಿಹಾಸವನ್ನು ಅವಲೋಕಿಸಿದರೆ ಇವರಿಗೆ ತಮ್ಮ ಮಹತ್ವಾಕಾಂಕ್ಷೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಎಂದಿಗೂ ಅವಕಾಶವಿದ್ದೇ ಇದ್ದಿದ್ದು ಇದನ್ನು ಬಳಸಿಕೊಂಡಿದ್ದೇ ಇವರ ಯಶಸ್ಸಿಗೆ ಕಾರಣವಾಗಿದೆ. ಕೆಲವರಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಕುಶಾಗ್ರಮತಿ ಇದ್ದರೂ ಇವರು ತಮ್ಮ ಕೌಶಲ್ಯವನ್ನು ಒಂದೇ ಕಡೆಗೆ ಕೇಂದ್ರೀಕರಿಸದೇ ಇರುವ ಕಾರಣ ಇನ್ನೂ ಒಂದು ನಿರ್ದಿಷ್ಟ ಯೋಜನೆಯನ್ನು ಪ್ರಾರಂಭಿಸಲು ಸಾಧ್ಯವಾಗದಿರುವುದನ್ನು ಗಮನಿಸಬಹುದು. ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

ಈ ಬಗ್ಗೆ ವಾಲ್ಟ್ ಡಿಸ್ನಿ ಹೀಗೆ ಹೇಳುತ್ತಾರೆ: "ಒಂದು ವೇಳೆ ನೀವು ಕನಸು ಕಾಣಬಲ್ಲಿರಾದರೆ, ನೀವು ಅದನ್ನು ಸಾಧಿಸಲೂ ಬಲ್ಲಿರಿ". ಈ ಮಾತುಗಳನ್ನು ಆಶಾವಾದಿಗಳ ದೃಷ್ಟಿಯಿಂದ ಪರಿಗಣಿಸಿದರೆ ಸುಲಭ ಸಾಧ್ಯವಾದ ಕೆಲವು ಯೋಜನೆಗಳನ್ನು ಕೇವಲ ಹತ್ತು ಸಾವಿರ ರೂಪಾಯಿಯಷ್ಟು ಅಲ್ಪ ಬಂಡವಾಳದಲ್ಲಿಯೇ ಪ್ರಾರಂಭಿಸಿ ಯಶಸ್ಸು ಪಡೆಯಬಹುದು.
ಬನ್ನಿ, ಇಂತಹ ಕೆಲವು ಯೋಜನೆಗಳ ಬಗ್ಗೆ ಅರಿಯೋಣ..

1. ಪ್ರಯಾಣ ಸಂಸ್ಥೆ (Travel agency)

1. ಪ್ರಯಾಣ ಸಂಸ್ಥೆ (Travel agency)

ಕಳೆದ ಒಂದು ದಶಕದಲ್ಲಿ ಪ್ರಯಾಣದ ಪ್ರಮಾಣ ಹಲವು ಪಟ್ಟು ಏರಿರುವುದನ್ನು ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಅಲೆಮಾರಿ ಗೀಳು ಅಥವಾ ಜೀವಮಾನದಲ್ಲೊಮ್ಮೆಯಾದರೂ ಒಂದು ಸ್ಥಳವನ್ನು ನೋಡಬೇಕೆಂಬ ಹಂಬಲ ಎಲ್ಲರಲ್ಲಿಯೂ ಇರುತ್ತದೆ. ಹಿಂದಿನ ದಿನಗಳಲ್ಲಿ ಇದು ಆರ್ಥಿಕ ಹಾಗೂ ಸಮಯಾಭಾವದಿಂದ ಕಷ್ಟಸಾಧ್ಯವಾಗಿತ್ತು. ಇಂದು ಜನರ ಮನಃಸ್ಥಿತಿ ಬದಲಾಗಿದ್ದು, ಆರೋಗ್ಯ ಚೆನ್ನಾಗಿದ್ದಾಗಲೇ ಜಗತ್ತನ್ನು ನೋಡಿಬಿಡುವ ಪ್ರವೃತ್ತಿ ಇಂದು ಹೆಚ್ಚುತ್ತಿದೆ. ಈ ಅವಕಾಶವನ್ನು ಕಂಡು ಕೊಂಡಿರುವ ಉದಯೋನ್ಮುಖ ವಾಣಿಜ್ಯೋದ್ಯಮಿಗಳಿಗೆ ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಈಗ ಸೂಕ್ತ ಸಮಯವಾಗಿದೆ. ಅತಿ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ಈ ಉದ್ಯಮವನ್ನು ಪ್ರಾರಂಭದಲ್ಲಿ ನಿಮ್ಮ ಮನೆಯಲ್ಲಿಯೇ ಪ್ರಾರಂಭಿಸಬಹುದು. ಇದಕ್ಕೆ ಈಗಾಗಲೇ ಹೆಸರು ಗಳಿಸಿರುವ ಸಂಸ್ಥೆಯೊಂದರ ಸಹಭಾಗಿತ್ವ ಅಗತ್ಯ. ಈ ಮೂಲಕ ಪಡೆಯಬಹುದಾದ ನೆರವಿನೊಂದಿಗೆ ಈ ಉದ್ಯಮಕ್ಕೆ ಅಗತ್ಯವಾದ ARC, CLIA, ಅಥವಾ IATA ಮೊದಲಾದ ಪ್ರಮಾಣೀಕರಣಗಳನ್ನೂ ಶೀಘ್ರದಲ್ಲಿ ಪಡೆಯಬಹುದು. ಈ ಮೂಲಕ ಹೆಚ್ಚಿನ ಕಮೀಶನ್ ಪಡೆಯಬಹುದು ಹಾಗೂ ಈ ಕೆಲಸವನ್ನು ಸುಲಭವಾಗಿ ಮತ್ತು ಅಗ್ಗದ ನಿರ್ವಹಣಾ ವೆಚ್ಚದಲ್ಲಿ ನಿರ್ವಹಿಸಬಹುದು. ಈ ಲಾಭ ಸಂಸ್ಥೆಯಿಂದ ಸಂಸ್ಥೆಗೆ ಬದಲಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಬಂಡವಾಳ ಹತ್ತು ಸಾವಿರಕ್ಕೂ ಕಡಿಮೆಯೇ ಇರುತ್ತದೆ. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

2. ಮೊಬೈಲ್ ರೀಚಾರ್ಜ್ ಅಂಗಡಿ
 

2. ಮೊಬೈಲ್ ರೀಚಾರ್ಜ್ ಅಂಗಡಿ

ಇಂದು ಮೊಬೈಲ್ ರೀಚಾರ್ಜ್ ಮಾಡಲು ಆನ್ಲೈನ್ ಸೌಲಭ್ಯವಿದ್ದರೂ ಕೆಲವರು ಇಂದಿಗೂ ಅಂಗಡಿಗಳಲ್ಲಿ ಹಣ ಕೊಟ್ಟೇ ರೀಚಾರ್ಜ್ ಮಾಡಿಸಲಿಚ್ಛಿಸುತ್ತಾರೆ. ಈ ಜನರಿಂದಾಗಿ ಚಿಕ್ಕ ಅಂಗಡಿಯೊಂದನ್ನು ತೆರೆಯುವ ಅವಕಾಶವಿದೆ. ಇದಕ್ಕೆ ದೊಡ್ಡ ಸ್ಥಳಾವಕಾಶ ಬೇಕೆಂದಿಲ್ಲ. ಒಂದು ಕುರ್ಚಿ ಮೇಜು ಇಟ್ಟುಕೊಳ್ಳುವಷ್ಟು ಸ್ಥಳವಾದರೂ ಸರಿ. ಇದಕ್ಕೆ ಬಾಡಿಗೆಯೂ ಕಡಿಮೆಯೇ ಇರುತ್ತದೆ. ಈ ಉದ್ಯಮಕ್ಕಾಗಿ ನೀವು ಇರುವ ಸ್ಥಳದ ಮೊಬೈಲ್ ಜಾಲ ನಿರ್ವಹಿಸುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಗಟು ದರದಲ್ಲಿ ಮೊಬೈಲು ಕೂಪನ್ನುಗಳನ್ನು ಅಥವಾ ಕರೆನ್ಸಿಯನ್ನು ಕೊಳ್ಳಬೇಕಾಗುತ್ತದೆ. ಪ್ರತಿ ಕೂಪನ್ನು ಅಥವಾ ಕರೆನ್ಸಿ ಮಾರಾಟವಾದರೆ ನಿಮಗೆ ಅದರಲ್ಲಿ ಕಮೀಶನ್ ದೊರಕುತ್ತದೆ. ಬಾಡಿಗೆ ಪಡೆದಿರುವ ಸ್ಥಳ ಚಿನ್ನದ ಬೆಲೆ ಬಾಳದ ಹೊರತು ಹೆಚ್ಚಿನ ಸಂದರ್ಭಗಳಲ್ಲಿ ಈ ಉದ್ಯಮಕ್ಕೆ ಹತ್ತು ಸಾವಿರಕ್ಕೂ ಕಡಿಮೆ ಬಂಡವಾಳ ಸಾಕಾಗುತ್ತದೆ.

3. ಉಪಾಹಾರ ಪಾಯಿಂಟ್

3. ಉಪಾಹಾರ ಪಾಯಿಂಟ್

ನಿಮ್ಮ ಸುತ್ತಮುತ್ತ ಉಪಾಹಾರ ಮಂದಿರಗಳಲ್ಲಿ ಬೆಳಗ್ಗಿನ ಹೊತ್ತು ಎಷ್ಟು ಜನರು ಗುಂಪುಗೂಡಿರುತ್ತಾರೆ ಎಂಬುದನ್ನು ನೀವು ನೋಡಿ ಚಕಿತರಾಗಿದ್ದಿರಬಹುದು. ಏಕೆಂದರೆ ಮಾರುಕಟ್ಟೆಯಲ್ಲಿ ಸಿದ್ಧ ಹಾಗೂ ರುಚಿಕರ, ಆರೋಗ್ಯಕರ ಆಹಾರಕ್ಕೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ. ಅದರಲ್ಲೂ ಹಗಲಿನ ತಮ್ಮ ಕೆಲಸಗಳಿಗೆ ತಲುಪಬೇಕಾದ ವ್ಯಕ್ತಿಗಳು ಹೆಚ್ಚಾಗಿ ಸಿದ್ದ ಉಪಾಹಾರವನ್ನೇ ಆಪೇಕ್ಷಿಸುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನೀವು ಸಿದ್ದರಿದ್ದರೆ ಇದಕ್ಕಾಗಿ ಸೂಕ್ತ ಸ್ಥಳವೊಂದು ಬೇಕಾಗುತ್ತದೆ. ಅದಕ್ಕೂ ಮುಖ್ಯವಾಗಿ ಆಯಾ ಸ್ಥಳದ ಪಂಚಾಯತಿ ಅಥವಾ ಮುನಿಸಿಪಾಲಿಟಿಯಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಸ್ಥಳಲ್ಲೆ ಅನುಗುಣವಾಗಿ ಬಾಡಿಗೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಚಿಕ್ಕ ಸ್ಥಳಕ್ಕೆ ಐದು ಸಾವಿರದಷ್ಟು ಬಾಡಿಗೆ ಇರುತ್ತದೆ. ಉಳಿದ ಬಂಡವಾಳದ ಹಣವನ್ನು ಆಯಾ ದಿನದ ಉಪಾಹಾರ ತಯಾರಿಕೆಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ಹಾಗೂ ಗ್ರಾಹಕರಿಗೆ ಕುಳಿತುಕೊಳ್ಳಲು ಸೆಕೆಂಡ್ ಹ್ಯಾಂಡ್ ಕುರ್ಚಿ ಮೇಜುಗಳನ್ನು ಕೊಳ್ಳಲು ಬಳಸಬಹುದು.

4. ಮನೆ ಶಿಕ್ಷಣ ಕೇಂದ್ರ (Tuition centre)

4. ಮನೆ ಶಿಕ್ಷಣ ಕೇಂದ್ರ (Tuition centre)

ಅತಿ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ಉದ್ಯಮವೆಂದರೆ ಮನೆಯಲ್ಲಿಯೇ ಪಾಠ ಹೇಳುವುದು. ಇದಕ್ಕೆ ಮನೆಯ ಒಂದು ಕೋಣೆಯನ್ನು ಮೀಸಲಾಗಿಟ್ಟರೆ ಬಂಡವಾಳವೇ ಬೇಕಾಗಿಲ್ಲ. ಸಾಮಾನ್ಯವಾಗಿ ಮನೆಪಾಠ ಹೇಳುವ ಶಿಕ್ಷಕರು ತಮ್ಮ ಮನೆಯಲ್ಲಿಯೇ ಪಾಠ ಹೇಳುವುದರಿಂದ ಬಾಡಿಗೆ ಹಾಗೂ ಇತರ ಸೌಲಭ್ಯಗಳಿಗಾಗಿ ನೀಡಬೇಕಾದ ಹಣ ನಿವ್ವಳವಾಗಿ ಉಳಿಯುತ್ತದೆ. ಆದರೆ ಈ ಮೂಲಕ ಹಣ ಗಳಿಸಬೇಕಾದರೆ ನೀವು ಉತ್ತಮ ಶಿಕ್ಷಕರಾಗಿರುವುದು ಮಾತ್ರವಲ್ಲ, ನಿಮ್ಮ ನೈಪುಣ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಲೂ ಬೇಕಾಗುತ್ತದೆ. ಯಾವಾಗ ನಿಮ್ಮ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಉಳಿದವರಿಗೆ ನಿಮ್ಮ ಹೆಸರನ್ನು ಶಿಫಾರಸ್ಸು ಮಾಡುತ್ತಾರೋ, ಆಗ ಹೆಚ್ಚಿನ ವಿದ್ಯಾರ್ಥಿಗಳಿಂದ ನೀವು ಹೆಚ್ಚಿನ ಹಣ ಗಳಿಸಬಹುದು.

5. ಹಣ್ಣಿನ ರಸದ ಪುಟ್ಟ ಮಳಿಗೆ

5. ಹಣ್ಣಿನ ರಸದ ಪುಟ್ಟ ಮಳಿಗೆ

ಬೇಸಿಗೆಯ ಬಿಸಿಯ ಬೇಗೆಯಲ್ಲಿ ಹಣ್ಣಿನ ರಸದ ಸೇವನೆಯಿಂದ ದಣಿವಾರಿಸಿಕೊಳ್ಳುವುದು ಯಾರಿಗೆ ಇಷ್ಟವಿಲ್ಲ? ಈ ಹೆಚ್ಚಿನ ಲಾಭದ ಉದ್ಯಮವನ್ನು ನೀವು ಪ್ರಾರಂಭಿಸಬೇಕೆಂದಿದ್ದರೆ ಮೊದಲು ಇದಕ್ಕಾಗಿ ಮುನಿಸಿಪಾಲಿಟಿಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಕೆಲವರು ಅಕ್ರಮವಾಗಿ ಅಂಗಡಿ ತೆರೆದಿದ್ದರೂ ಮುಂದೊಮ್ಮೆ ಇದು ಸರ್ಕಾರಕ್ಕೆ ತಿಳಿದು ಗಳಿಸಿದ ಲಾಭಕ್ಕೂ ಹತ್ತು ಪಟ್ಟು ದಂಡ ಕಟ್ಟ ಬೇಕಾಗುತ್ತದೆ ಹಾಗೂ ಮಾನಹಾನಿಯೂ ಎದುರಾಗುತ್ತದೆ. ಸುಂದರವಾದ ಅಂಗಡಿಯನ್ನು ನಿರ್ಮಿಸಲು ಹಾಗೂ ಇದಕ್ಕೆ ಬಾಡಿಗೆಯನ್ನೂ ತೆರಬೇಕಾಗುವ ಮೂಲಕ ಪ್ರಾರಂಭದಲ್ಲಿ ಹೆಚ್ಚಿನ ಬಂಡವಾಳ ಬೇಕಾಗಬಹುದು. ಇದರ ಹೊರತು ಒಂದು ಬಾರಿಗೆ ಕೊಳ್ಳಬೇಕಾದ ಹಣ್ಣಿನ ರಸ ಹಿಂಡುವ ಉಪಕರಣಗಳು, ಜ್ಯೂಸರ್, ಕೆಲಸದವರ ಸಂಬಳ ಇತ್ಯಾದಿಗಳನ್ನು ಭರಿಸಬೇಕಾಗುತ್ತದೆ.

6. ದರ್ಜಿ

6. ದರ್ಜಿ

ಬೆಂಗಳುರು, ಕೊಲ್ಕತ್ತಾ, ಮುಂಬೈ, ದೆಹಲಿ ಮೊದಲಾದ ಮಹಾನಗರಗಳಲ್ಲಿ ಸ್ವಯಂ-ನಿರ್ಮಿತ ವಿನ್ಯಾಸಗಳನ್ನು ನೀಡುವ ಉತ್ತಮ ದರ್ಜಿಗಳಿಗೆ ಸದಾ ಬೇಡಿಕೆ ಇದೆ. ಈ ನೈಪುಣ್ಯವನ್ನು ನೀವು ಹೊಂದಿದ್ದರೆ ಒಂದೆರಡು ಹೊಲಿಗೆ ಮೆಶೀನುಗಳನ್ನು ಇರಿಸಲು ಸಾಧ್ಯವಿರುವಷ್ಟು ಚಿಕ್ಕದಾದ ಕೋಣೆಯನ್ನು ಬಾಡಿಗೆಗೆ ಪಡೆದು ನಿಮ್ಮದೇ ವಸ್ತ್ರ ವಿನ್ಯಾಸ ಅಂಗಡಿಯನ್ನು ತೆರೆಯಬಹುದು. ಮೂಲ ಬಂಡವಾಳ ಮಾತ್ರವೇ ಹೆಚ್ಚೇ ಹೊರತು ಉಳಿದಂತೆ ವಿದ್ಯುತ್ ಮತ್ತು ಇತರ ಖರ್ಚುಗಳು ಕಡಿಮೆಯೇ ಇರುತ್ತದೆ.

7. ಆನ್ಲೈನ್ ಬೇಕರಿ

7. ಆನ್ಲೈನ್ ಬೇಕರಿ

'ಓವೆನ್ ಫ್ರೆಶ್' ಎಂಬ ಹೆಸರು ತಾಜಾ ಬೇಕರಿ ಪದಾರ್ಥಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯದ್ದಾಗಿದ್ದು, ಈ ಮಟ್ಟಕ್ಕೇರಲು ಇದರ ಸ್ಥಾಪಕರು ಬಹಳವೇ ಕಷ್ಟಪಟ್ಟಿದ್ದಾರೆ. ಉತ್ತಮ ಗುಣಮಟ್ಟ, ಹಲವು ಜನರ ಸಹಯೋಗ ಹಾಗೂ ಬಂಡವಾಳ ಹೂಡಿಕೆಯಿಂದ ಇದು ಸಾಧ್ಯವಾಗಿದೆ. ಇಂದು ಆನ್ಲೈನ್ ಮೂಲಕ ಆಹಾರ ತರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಈ ಉದ್ಯಮ ಸಾಂಪ್ರಾದಾಯಿಕ ಉದ್ಯಮವನ್ನು ಹಿಂದಿಕ್ಕುವ ಎಲ್ಲಾ ಸೂಚನೆಗಳನ್ನು ನೀಡುತ್ತಿದೆ. ವಿಶೇಷವಾಗಿ ಬೇಕರಿ ಉತ್ಪನ್ನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇದಕ್ಕೆ ಹಲವು ಜನರ ಸಹಯೋಗದ ಅಗತ್ಯವಿಲ್ಲ, ಒಬ್ಬರೂ ನಿರ್ವಹಿಸಬಹುದು ಎಂಬುದನ್ನು ಕೋಲ್ಕಾತ್ತಾದ ಕೇವಲ ಇಪ್ಪತ್ತಮೂರು ವರ್ಷ ವಯಸ್ಸಿನ ಚಾರುಲತಾ ಘೋಷ್ ಎಂಬ ವಿದ್ಯಾರ್ಥಿನಿ ತನ್ನ Confectioner's Touch ಎಂಬ ಆಪ್ ಮೂಲಕ ಸಾಧಿಸಿ ತೋರಿಸಿದ್ದಾಳೆ. 2013 ರಲ್ಲಿ ಪ್ರಾರಂಭವಾದ ಈ ಉದ್ಯಮ ಇಂದು ದೊಡ್ಡ ಉದ್ಯಮವಾಗುವತ್ತ ದಾಪುಗಾಲು ಇರಿಸುತ್ತಿದೆ.
"ನಾನು ಈ ಉದ್ಯಮವನ್ನು ಕೇವಲ ಎರಡು ಸಾವಿರ ರೂಪಾಯಿಗಳಲ್ಲಿ ಪ್ರಾರಂಭಿಸಿದೆ. ಉದ್ಯಮ ಜನಪ್ರಿಯತೆ ಗಳಿಸುತ್ತಾ ಸಾಗಿದಂತೆ ನಾನು ಇದರ ಗಳಿಕೆಯ ಹಣವನ್ನು ಜ಼ೊಮಾಟೋ, ಕಸ್ಟಮ್ ಬಾಕ್ಸ್, ಕೇಕ್ ಬೋರ್ಡ್ ಮೊದಲಾದ ಕಡೆಗಳಲ್ಲಿಯೂ ಹೂಡಿಕೆ ಮಾಡಿದೆ" ಎಂದು ಹೇಳುವ ಚಾರುಲತಾ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಆಕೆಯ ಅನುಭವದ ಪ್ರಕಾರ ಇದುವರೆಗಿನ ಎಲ್ಲಾ ಆನ್ಲೈನ್ ವ್ಯವಹಾರದಲ್ಲಿ ಗರಿಷ್ಟವಾಗಿ ಮಾರಾಟವಾಗುವ ಬೇಕರಿ ಉತ್ಪನ್ನವೆಂದರೆ ಕೇಕ್.

8. ಬ್ಲಾಗಿಂಗ್

8. ಬ್ಲಾಗಿಂಗ್

ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಹಣಗಳಿಸಬಹುದಾದ ಇನ್ನೊಂದು ವಿಧಾನವೆಂದರೆ ಬ್ಲಾಗಿಂಗ್ ಅಥವಾ ಬ್ಲಾಗ್ ಬರವಣಿಗೆ. ಇದಕ್ಕಾಗಿ ಅತಿ ಕಡಿಮೆ ಬಂಡವಾಳ ಸಾಕು. ಇದಕ್ಕಾಗಿ ಒಂದು ಡೊಮೈನ್ ಹೆಸರನ್ನು ಪಡೆಯಲು ಅಲ್ಪ ಬಂಡವಾಳ ಬೇಕಾಗುತ್ತದೆ. ಸುಮಾರು ರೂ. 3600 ನೀಡಿದರೆ ಅನಿಯಮಿತ ಸ್ಥಳಾವಕಾಶವಿರುವ ಅಂತರ್ಜಾಲ ತಾಣದ ಕೊಂಡಿ ದೊರಕುತ್ತದೆ. ನಿಮ್ಮ ಬರವಣಿಗೆಗಳನ್ನು ಹೆಚ್ಚು ಹೆಚ್ಚು ಜನರಿಗೆ ಒದಗಿಸುವ ಮೂಲಕ ಚಿಕ್ಕಾಸೂ ಖರ್ಚಿಲ್ಲದೇ ಪ್ರಚಾರ ಮಾಡಿ ಜಾಹೀರಾತಿನ ಮೂಲಕ ಹಣ ಗಳಿಸಬಹುದು.

9. ಯೂ ಟ್ಯೂಬ್ ಚಾನೆಲ್

9. ಯೂ ಟ್ಯೂಬ್ ಚಾನೆಲ್

ಚಿಕ್ಕ ಬಂಡವಾಳದಿಂದ ದೊಡ್ಡದನ್ನು ಗಳಿಸ ಬಯಸುವ ಪ್ರತಿಭಾಶಾಲಿಗಳಿಗೆ ಯೂಟ್ಯೂಬ್ ಉತ್ತಮ ಮಾಧ್ಯಮವಾಗಿದೆ. ಯಾರು ಬೇಕಾದರೂ ತಮ್ಮ ಪ್ರತಿಭೆಯನ್ನು ಉಚಿತವಾಗಿ ಯೂಟ್ಯೂಬ್ ವೀಡಿಯೋ ಮೂಲಕ ಅಪ್ಲೋಡ್ ಅಥವಾ ತಾಣದಲ್ಲಿ ದಾಖಲಿಸಬಹುದು. ಈ ವಾಹಿನಿಗಳು ಎಷ್ಟು ಜನಪ್ರಿಯವಾಗುತ್ತವೋ ಅದನ್ನು ಅನುಸರಿಸಿ ಯೂಟ್ಯೂಬ್ ಹಣವನ್ನು ಸಂದಾಯ ಮಾಡುತ್ತದೆ.

10. ಕಾರ್ಯಕ್ರಮ ಸಂಘಟನೆ (Event organising)

10. ಕಾರ್ಯಕ್ರಮ ಸಂಘಟನೆ (Event organising)

ಸಾಮಾನ್ಯವಾಗಿ ಕಾರ್ಯಕ್ರಮ ಸಂಘಟಕರು ದಿನವಿಡೀ ತಮ್ಮ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಕಾರ್ಯಕ್ರಮವೊಂದು ಯಶಸ್ವಿಯಾಗಿ ನಡೆಯಬೇಕಾದರೆ ಇದಕ್ಕೆ ಹತ್ತು ಹಲವು ಪೂರ್ವ ಸಿದ್ದತೆಗಳು, ಇದಕ್ಕಾಗಿ ಹತ್ತು ಹಲವು ಜನರನ್ನು ಸಂಘಟಿಸುವುದು, ಎಲ್ಲರ ಕೆಲಸ ಅಚ್ಚುಕಟ್ಟಾಗಿ ನೇರವೇರುವಂತೆ ಮಾಡುವುದು, ನಡುವೆ ಎದುರಾಗುವ ಅಡ್ಡಿ ಆತಂಕಗಳು, ತಡವಾಗುವುದು, ಅಗತ್ಯ ಸಲಕರಣೆಗಳನ್ನು ಹೊಂದಿಸುವುದು, ಕಾರ್ಯಕ್ರಮದ ಸಮಯಕ್ಕೆ ಬೇಕಾದವುಗಳನ್ನು ಆಯಾ ಸಮಯಕ್ಕೆ ಬರುವಂತೆ ನಿರ್ದೇಶಿಸುವುದು, ಕಾರ್ಯಕ್ರಮದ ಸ್ಥಳದ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿ ದಾರಿ ತಪ್ಪದಂತೆ ನೋಡಿಕೊಳ್ಳುವುದು ಮೊದಲಾದವೆಲ್ಲಾ ಇವರ ಕರ್ತವ್ಯಗಳಾಗಿವೆ. ಯಾವಾಗ ಈ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿ ತೋರುತ್ತೀರೋ ಆಗ ನಿಮಗೆ ಜನಪ್ರಿಯತೆ ಹಾಗೂ ಅವಕಾಶಗಳು ತಾವಾಗಿಯೇ ಬರುತ್ತವೆ. ಇದಕ್ಕಾಗಿ ಆನ್ಲೈನ್ ಮಾರುಕಟ್ಟೆ ವ್ಯವಹಾರವನ್ನೂ ಕಲಿತುಕೊಳ್ಳಬೇಕಾಗಿ ಬರಬಹುದು. ಈ ವ್ಯವಹಾರಕ್ಕೆ ಅತಿ ಕಡಿಮೆ ಬಂಡವಾಳವೇ ಸಾಕಾಗುತ್ತದೆ.

11. ಮದುವೆ ದಳ್ಳಾಳಿಗಳು (Wedding consultants)

11. ಮದುವೆ ದಳ್ಳಾಳಿಗಳು (Wedding consultants)

ಭಾರತದಲ್ಲಿ 'ಭರ್ಜರಿ ಮದುವೆ' ಎಂಬ ಪದಕ್ಕೆ ಆಳವಾದ ಅರ್ಥವಿದ್ದು ಇದಕ್ಕೊಂದು ಕಾರಣವೂ ಇದೆ. ಭಾರತದ ಎಷ್ಟೋ ಪಂಗಡಗಳಲ್ಲಿ ಇಂದಿಗೂ ಮದುವೆಯನ್ನು ಶುಭ ಸಂದರ್ಭಕ್ಕಿಂತಲೂ ಪ್ರತಿಷ್ಠೆಯ ಪ್ರದರ್ಶನದ ಸಂದರ್ಭವೆಂದೇ ಪರಿಗಣಿಸಲಾಗುತ್ತದೆ. ಅಂತೆಯೇ ವಿವಾಹ ಸಂದರ್ಭಗಳಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ಜರುಗುತ್ತದೆ. ವಿವಾಹವಾಗ ಬಯಸುವ ಜೋಡಿಗಳನ್ನು ಒಂದುಗೂಡಿಸಲು ಇಂದು ನೂರಾರು ಆನ್ಲೈಸ್ ಮ್ಯಾಟ್ರಿಮನಿ ಅಥವಾ ವಿವಾಹ ಸಂಬಂಧ ತಾಣಗಳಿದ್ದು ವಧೂವರರಿಗೆ ಆಯ್ಕೆಗಳು ಹೆಚ್ಚಾಗಿಯೇ ಲಭಿಸುತ್ತಿವೆ. ಪ್ರತಿ ಜೋಡಿ ಯಶಸ್ವಿಯಾದರೂ ಎರಡೂ ಕಡೆಯಿಂದ ಸಂಭಾವನೆ ಪಡೆಯುವ ಮೂಲಕ ಉತ್ತಮ ಲಾಭ ಗಳಿಸಬಹುದು. ಈ ಅವಕಾಶವನ್ನು ಕಂಡುಕೊಂಡ ಉಬರ್ ನಂತಹ ದಿಗ್ಗಜ ಸಂಸ್ಥೆಗಳೂ ಈ ನಿಟ್ಟಿನಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿವೆ. ಈ ಉದ್ಯಮಕ್ಕೆ ಹೆಚ್ಚಿನ ಬಂಡವಾಳ ಬೇಕಾಗಿಲ್ಲ. ಬೇಕಿರುವುದು ಒಂದು ವೆಬ್ ಸೈಟ್ ಹಾಗೂ ಬಾಡಿಗೆ ಹೆಚ್ಚಿರದ ಸ್ಥಳದಲ್ಲೊಂದು ಕಛೇರಿ ಮಾತ್ರ. ಸಂಭಾವ್ಯ ವಧೂ ವರ ಗ್ರಾಹಕರನ್ನು ಪಡೆಯಲು ಸೂಕ್ತವಾದ ಮಾಧ್ಯಮವೆಂದರೆ ಅಂತರ್ಜಾಲ. ನಿಮ್ಮ ತಾಣ ಮಾತ್ರ ಯುವ ಜನತೆಯನ್ನು ತಕ್ಷಣವೇ ಸೆಳೆಯುವಷ್ಟು ಆಕರ್ಷಕ ಹಾಗೂ ಹುಡುಕಿದಾಗ ಸುಲಭವಾಗಿ ಸಿಗುವಂತಿರಬೇಕು.

12. ಆನ್ಲೈನ್ ಶಿಕ್ಷಣ

12. ಆನ್ಲೈನ್ ಶಿಕ್ಷಣ

ಯಾವುದೇ ಬಗೆಯ ಶಿಕ್ಷಣವಾದರೂ ಸರಿ, ಇದೊಂದು ಪುಣ್ಯದ ಕಾರ್ಯವೇ ಆಗಿದ್ದು ಈ ಮೂಲಕ ಗಳಿಸುವ ಹಣವೂ ಉತ್ತಮವೇ ಆಗಿರುತ್ತದೆ. ಒಂದು ವಿಷಯದ ಬಗ್ಗೆ ಆನ್ಲೈನ್ ಮೂಲಕ ಅಗತ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಇಂದು ಯಶಸ್ವಿಯಾಗುತ್ತಿರುವ ಶಿಕ್ಷಣ ವಿಧಾನವಾಗುತ್ತಿದೆ. ಕೆಲವು ವಿಷಯಗಳಂತೂ ಉಚಿತವಾಗಿಯೇ ಲಭ್ಯವಾಗುತ್ತಿವೆ. ಉಳಿದವು ಡಿಜಿಟಲ್ ಮಾಧ್ಯಮ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳಾಗಿವೆ. ಈ ಮಾಧ್ಯಮ ಸಂಸ್ಥೆಗಳು ಅತ್ಯಂತ ಆಧುನಿಕ ಮಾಧ್ಯಮ ಉಪಕರಣಗಳೊಂದಿಗೆ ಶಿಕ್ಷಣವನ್ನು ಇನ್ನೂ ಉತ್ತಮವಾಗಿ ಹಾಗೂ ಸುಲಭವಾಗಿ ಲಭಿಸುವಂತೆ ಮಾಡುತ್ತವೆ. ಈ ಉದ್ಯಮಕ್ಕಾಗಿ ಸಂಸ್ಥೆ ನಿಮಗೆ ವಿಧಿಸುವ ಸಾಮಾನ್ಯ ಶುಲ್ಕವೇ ನಿಮ್ಮ ಬಂಡವಾಳವಾಗಿದ್ದು ಉಳಿದಂತೆ ಶಿಕ್ಷಣ ನೀಡುವ ನಿಮ್ಮ ಪ್ರತಿಭೆಯೇ ನಿಜವಾದ ಬಂಡವಾಳವಾಗಿದೆ.

13. ಛಾಯಾಗ್ರಹಣ

13. ಛಾಯಾಗ್ರಹಣ

ವೃತ್ತಿಪರ ಛಾಯಾಗ್ರಾಹಕರಾಗಬೇಕಾದರೆ ನಿಮ್ಮಲ್ಲೊಂದು ಉತ್ತಮ ಗುಣಮಟ್ಟದ ಹೆಚ್ ಡಿ ಕ್ಯಾಮೆರಾ ಇರಬೇಕು ಹಾಗೂ ಇದರ ಮೂಲಕ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯುವ ಚಾಕಚಕ್ಯತೆ ಹಾಗೂ ನೈಪುಣ್ಯವೂ ಅಗತ್ಯವಿದೆ. ಈ ಕ್ಯಾಮೆರಾ ಹಾಗೂ ನಿಮ್ಮ ಚಿತ್ರಗಳನ್ನು ಸರಿಪಡಿಸಲು ಅಗತ್ಯವಿರುವ ಫೋಟೋಶಾಪ್ ಮೊದಲಾದ ಸಾಫ್ಟ್ವೇರ್ ಗಳನ್ನು ಕೊಳ್ಳಲು ಕೊಂಚ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. ಉಳಿದಂತೆ ಇದಕ್ಕೆ ಬೇಕಾಗಿರುವುದು ನಿಮ್ಮ ಲಭ್ಯತೆ ಹಾಗೂ ಈ ಲಭ್ಯತೆಯನ್ನು ಆನ್ಲೈನ್ ಮೂಲಕ ಪ್ರಕಟಿಸುವ ಜಾಹೀರಾತು ಮಾತ್ರ.

14. ಜಾಹೀರಾತು ಅಭಿವೃದ್ದಿ ಪ್ರಚಾರಕ

14. ಜಾಹೀರಾತು ಅಭಿವೃದ್ದಿ ಪ್ರಚಾರಕ

ಇದೊಂದು ಭಿನ್ನವಾದ ಹಾಗೂ ಕೇವಲ ಆನ್ಲೈನ್ ಮೂಲಕವೇ ನಿರ್ವಹಿಸಬಹುದಾದ ವ್ಯವಹಾರವಾಗಿದೆ. ಇತ್ತೀಚೆಗೆ ಎಲ್ಲಾ ಸಂಸ್ಥೆಗಳೂ ತಮ್ಮ ಸೇವೆಗಳಿಗೆ ಅಗತ್ಯವಾದ ಪೂರಕ ಸೌಲಭ್ಯಗಳನ್ನು ತಾವೇ ಸಿದ್ಧಪಡಿಸಿಕೊಳ್ಳುವ ಬದಲು ಸಿದ್ದರೂಪದಲ್ಲಿ ಲಭ್ಯವಿರುವ ಸೇವೆಗಳನ್ನು ಕೊಳ್ಳಲು ಉತ್ಸುಕತೆ ತೋರುತ್ತವೆ. ಕೊಂಚ ಹೆಚ್ಚೇ ಹಣ ನೀಡಬೇಕಾದರೂ ಚಿಂತೆಯಿಲ್ಲ. ಒತ್ತಡವನ್ನು ನಿರ್ವಹಿಸುವುದು ಹಾಗೂ ಸಮಯ ಉಳಿಯುವುದು ಇವುಗಳಿಗೆ ಅಗತ್ಯವಾಗಿದೆ. ಹಾಗಾಗಿ ಇಂದು ವಿಶೇಷವಾಗಿ ಜಾಹೀರಾತುಗಳನ್ನು ಸಿದ್ಧ ರೂಪದಲ್ಲಿ ನೀಡುವ ಸಂಸ್ಥೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಜಾಹೀರಾತುಗಳಲ್ಲಿ ಹೆಚ್ಚಿನ ಎಲ್ಲಾ ವಿವರಗಳು ಸಿದ್ದರೂಪದಲ್ಲಿ ಲಭ್ಯವಿದ್ದು, ಸಂಸ್ಥೆಯ ಉತ್ಪನ್ನವನ್ನು ಇದರಲ್ಲಿ ಅಳವಡಿಸಿದರೆ ಜಾಹೀರಾತು ಸಹ ಶೀಘ್ರವೇ ಸಿದ್ಧವಾಗುತ್ತದೆ. ಈ ಬಗೆಯ ಉದ್ಯಮ ನಡೆಸಲು ನಿಮಗೆ ನಿಮ್ಮ ಸಮಯ ಹಾಗೂ ಒಂದು ಅಂತರ್ಜಾಲ ತಾಣ (ಡೊಮೈನ್ ಹೆಸರು, ನೀಡುವ ಸೇವೆ ಹಾಗೂ SEOಗಳು ಇರಬೇಕು) ಇದ್ದರೆ ಇದನ್ನು ಸಂಭಾವ್ಯ ಗ್ರಾಹಕರಿಗೆ ತಿಳಿಸುವ ಮೂಲಕ ವ್ಯವಹಾರವನ್ನು ಅಭಿವೃದ್ದಿ ಪಡಿಸಬಹುದು.

15. ಸಾಮಾಜಿಕ ಜಾಲತಾಣ ತಂತ್ರಜ್ಞ (Social media strategist)

15. ಸಾಮಾಜಿಕ ಜಾಲತಾಣ ತಂತ್ರಜ್ಞ (Social media strategist)

ಇಂದು ಸಾಮಾಜಿಕ ಜಾಲತಾಣ ಉಸಿರಿನಷ್ಟೇ ಅಗತ್ಯವಾದ ಮಾಧ್ಯಮವಾಗಿಬಿಟ್ಟಿದೆ. ದೊಡ್ಡ ಸಂಸ್ಥೆಗಳು, ಉದ್ಯಮ ಪ್ರಾರಂಭಿಸುತ್ತಿರುವವರು, ಖಾಸಗಿ ವಾಹಿನಿಗಳನ್ನು ಪ್ರಾರಂಭಿಸುವವರು ಎಲ್ಲರೂ ತಮ್ಮ ಇರುವಿಕೆಯನ್ನು ಈ ಜಾಲತಾಣಗಳ ಮೂಲಕ ಪ್ರಕಟಿಸುತ್ತಾ ಬಂದಿದ್ದಾರೆ. ಹೆಚ್ಚಿನ ಎಲ್ಲಾ ದೊಡ್ಡ ಸಂಸ್ಥೆಗಳು ತಮ್ಮದೇ ಪ್ರತ್ಯೇಕ ಸಾಮಾಜಿಕ ತಾಣಗಳು ಅಥವಾ ಜನಪ್ರಿಯ ತಾಣಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ. ಈ ಪ್ರವಾಹದಲ್ಲಿ ಸ್ಥಾನ ಪಡೆಯಲು ಹಲವರು ಉತ್ಸುಕರಾಗಿದ್ದು, ಇವರಿಗೆ ಜಾಲತಾಣದಲ್ಲಿ ಸ್ಥಾನ ಮಾಡಿಕೊಡುವ ತಂತ್ರಜ್ಞರ ಅಗತ್ಯವಿದೆ. ಒಂದು ವೇಳೆ ನಿಮ್ಮಲ್ಲಿ ಈ ಪ್ರತಿಭೆ ಇದ್ದರೆ ನಿಮ್ಮ ಪ್ರತಿಭೆಯನ್ನು ಕೊಳ್ಳ ಬಯಸುವವರು ಇದ್ದೇ ಇರುತ್ತಾರೆ. ನಿಮ್ಮ ಇರುವಿಕೆಯನ್ನು ಫೇಸ್ಬುಕ್, ಲಿಂಕ್ಡ್ ಇನ್ ಮೊದಲಾದ ಜನಪ್ರಿಯ ತಾಣಗಳಲ್ಲಿ ಪ್ರಕಟಿಸಿ ಉತ್ತಮ ದರ್ಜೆ ಗಳಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಪಡೆಯಬಹುದು. ಇದಕ್ಕಾಗಿ ಅಲ್ಪ ಪ್ರಮಾಣದ ಹಣ ಮಾತ್ರವೇ ಬೇಕಾಗುತ್ತದೆ.

16. ಫ್ಯಾಷನ್ ಡಿಸೈನಿಂಗ್

16. ಫ್ಯಾಷನ್ ಡಿಸೈನಿಂಗ್

ಹಳೆಯ ಸೀರೆಗಳಿಗೆ ಕೊಂಚ ಒಪ್ಪ ಓರಣ ನೀಡಿ ಹೊಸದಾಗಿಸುವ ಲತಾಸೀತಾ ಎಂಬ ಫ್ಯಾಶನ್ ಸಂಸ್ಥೆಯ ಸಂಸ್ಥಾಪಕಿಯಾಗಿರುವ ಮೇಘನಾ ನಾಯಕ್ ರವರು ಹೀಗೆ ಹೇಳುತ್ತಾರೆ: "ನನಗೆ ಭಾರತದಲ್ಲಿ ಲತಾಸೀತಾ ಸಂಸ್ಥೆಯನ್ನು ಪ್ರಾರಂಭಿಸಲು ಸ್ವಪ್ರೇರಣೆ ಹಾಗೂ ಆತ್ಮವಿಶ್ವಾಸವಿತ್ತು. ಇಲ್ಲಿ ಈಗಾಗಲೇ ಹಳೆಯ ಸೀರೆಗಳನ್ನು ಒಪ್ಪವಾಗಿಸುವ ಪರಿ ಇದೆ ಹಾಗೂ ಇದಕ್ಕೆ ಕೊಂಚ ಭಿನ್ನ ಶೈಲಿ ಮತ್ತು ಓರಣ ನೀಡಿ ಸೊಗಸಾಗಿಸುವುದೇ ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ" (ಈ ಮಾತನ್ನೇ ವೆಗಾಬಾಂಬ್ ಸಹಾ ಉಲ್ಲೇಖಿಸಿದೆ) ಈ ಸಂಸ್ಥೆಗೆ ಅಗತ್ಯವಾಗಿರುವ ಬಂಡವಾಳವೆಲ್ಲಾ ಹೆಚ್ಚಾಗಿ ವಿನ್ಯಾಸ ನೀಡಲು ಅಗತ್ಯವಿರುವ ಸಾಮಾಗ್ರಿಗಳಿಗೆ, ಇಬ್ಬರು ಉದ್ಯೋಗಿಗಳಿಗೆ ನೀಡುವ ವೇತನ ಹಾಗೂ ಚಿಕ್ಕ ಕೋಣೆಯ ಬಾಡಿಗೆ ಮಾತ್ರ ಆಗಿದೆ. ಉಳಿದಂತೆ ಈ ಸೀರೆಗಳು ಇಂದು ಹೆಚ್ಚು ಜನಪ್ರಿಯವಾಗುತ್ತಿವೆ.

17. ಆನ್ಲೈನ್ ದೇಹದಾರ್ಢ್ಯ ತರಬೇತುದಾರ

17. ಆನ್ಲೈನ್ ದೇಹದಾರ್ಢ್ಯ ತರಬೇತುದಾರ

ಇಂದು ವಿಶ್ವದ ಹೆಚ್ಚಿನ ಜನರು ಆರೋಗ್ಯದ ಕಡೆಗೆ ತಮ್ಮ ಗಮನ ಹರಿಸುತ್ತಿದ್ದು ವ್ಯಾಯಮಕ್ಕೂ ಬೆಲೆ ನೀಡುತ್ತಿದ್ದಾರೆ. ವ್ಯಾಯಾಮವನ್ನು ಮನೆಯಲ್ಲಿ ನಿರ್ವಹಿಸಲು ಕಷ್ಟಕರವಾದುದರಿಂದ ಹೆಚ್ಚಿನ ಸೌಲಭ್ಯವಿರುವ ವ್ಯಾಯಮ ಶಾಲೆಗಳಿಗೂ ಹೋಗುತ್ತಿದ್ದಾರೆ. ಆದರೆ ಇದು ದುಬಾರಿಯಾದ ಕಾರಣ ಮನೆಯಲ್ಲಿಯೇ ವ್ಯಾಯಾಮ ಮಾಡುವವರಿಗೆ ಸೂಕ್ತ ತರಬೇತಿ ನೀಡುವ ನೀಡುವ ತರಬೇತುದಾರರಿಗೆ ಸದಾ ಬೇಡಿಕೆ ಇರುತ್ತದೆ. ಇವರು ಒಂದೇ ಸಮಯದಲ್ಲಿ ಹಲವು ಮನೆಗಳಿಗೆ ಹೋಗಲು ಸಾಧ್ಯವಿಲ್ಲದ ಕಾರಣ ಆನ್ಲೈನ್ ಮೂಲಕ ನೇರ ವೀಡಿಯೂ ಚಿತ್ರೀಕರಣ ವಿಧಾನದಲ್ಲಿ ತರಬೇತಿ ನೀಡಬಹುದು. ಒಂದು ವೇಳೆ ತರಬೇತಿ ನೀಡುವ ಕಲೆ ನಿಮ್ಮಲ್ಲಿದ್ದರೆ ಈ ವೀಡಿಯೋ ನೇರ ಪ್ರಸಾರವನ್ನು ನೀಡುವ ತಾಣವನ್ನು ಬಾಡಿಗೆಗೆ ಪಡೆದುಕೊಳ್ಳುವುದು ನಿಮ್ಮ ಬಂಡವಾಳವಾಗಿದೆ. ಉಳಿದಂತೆ ನಿಮ್ಮ ಲಭ್ಯತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಪಡೆದು ಲಾಭ ಪಡೆಯಬಹುದು.

18. ಗ್ರಾಫಿಕ್ಸ್ ವಿನ್ಯಾಸಕಾರ

18. ಗ್ರಾಫಿಕ್ಸ್ ವಿನ್ಯಾಸಕಾರ

ಈ ಕಲೆಯಲ್ಲಿ ನಿಷ್ಣಾತರು ಮನೆಯಲ್ಲಿಯೇ ಕುಳಿತು ತಮ್ಮ ಸಮಯವನ್ನು ಗ್ರಾಫಿಕ್ಸ್ ಕಲೆಯಲ್ಲಿ ವಿನಿಯೋಗಿಸುವ ಮೂಲಕ ಉತ್ತಮ ಸಂಭಾವನೆ ಪಡೆಯುತ್ತಾರೆ ಎಂದು ಹೆಚ್ಚಿನವರು ತಿಳಿದಿದ್ದಾರೆ. ಇದು ಕೊಂಚ ಉತ್ಪ್ರೇಕ್ಷೆ ಎನಿಸಿದರೂ ಗ್ರಾಫಿಕ್ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಇದ್ದೇ ಇದೆ. ಒಂದು ವೇಳೆ ನಿಮ್ಮಲ್ಲಿ ಈ ಕಲೆಯನ್ನು ನಿರ್ವಹಿಸುವ ಪ್ರತಿಭೆ ಇದ್ದು ಇದಕ್ಕಾಗಿ ಅಗತ್ಯವಿರುವ ಕಂಪ್ಯೂಟರ್ ಹಾಗೂ ಸಾಫ್ಟ್ವೇರುಗಳು ಇದ್ದರೆ ನಿಮ್ಮ ಕಲೆಯನ್ನು ಪಡೆಯಲು ಗ್ರಾಹಕರು ಉತ್ತಮ ಸಂಭಾವನೆ ನೀಡಲು ಸಿದ್ದರಿದ್ದಾರೆ. ನಿಮ್ಮ ಕಲೆ ಗ್ರಾಹಕರಿಗೆ ಆಕರ್ಷಕವಾಗಿರುವಂತೆ ನಿಮ್ಮನ್ನು ನೀವು ಜಾಹೀರಾತಿನ ಮೂಲಕ ಪ್ರಕಟಿಸಿಕೊಳ್ಳುವುದೂ ಅಗತ್ಯವಾಗಿದ್ದು, ತಮ್ಮ ಹೊಸ ಕಾರ್ಯಕ್ಕಾಗಿ ಗ್ರಾಹಕರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.

19. ನೃತ್ಯ/ಸಂಗೀತ ಶಾಲೆ

19. ನೃತ್ಯ/ಸಂಗೀತ ಶಾಲೆ

ಈ ಉದ್ಯಮಕ್ಕೆ ಅಗತ್ಯವಿರುವುದು ಎಂದರೆ ಸಾಕಷ್ಟು ಸ್ಥಳಾವಕಾಶವಿರುವ ಕಟ್ಟಡ. ಉಳಿದಂತೆ ನಿಮ್ಮ ಪ್ರತಿಭೆಯೇ ಈ ಉದ್ಯಮ ಮುನ್ನಡೆಸಲು ಅಗತ್ಯವಾಗಿದೆ. ಈ ಉದ್ಯಮದಲ್ಲಿ ಮುಂದುವರೆಯುತ್ತಾ ಹೋದಂತೆ ಹೆಚ್ಚು ಸಹಾಯಕರ ಅಗತ್ಯವೂ ಬೇಕಾಗಬಹುದು ಹಾಗೂ ಇದಕ್ಕಾಗಿ ನೀಡುವ ವೇತನದಿಂದಾಗಿ ವೆಚ್ಚವೂ ಹೆಚ್ಚಬಹುದು. ಆದರೆ ಇವೇಲ್ಲಾ ಪ್ರಾರಂಭಿಕ ತೊಡಕುಗಳು ಮಾತ್ರ. ನಿಮ್ಮ ಪ್ರತಿಭೆಯೇ ಇಲ್ಲಿ ನಿಜವಾದ ಬಂಡವಾಳವಾಗಿದ್ದು, ನಿಮ್ಮ ವಿದ್ಯಾರ್ಥಿಗಳು ನಿಮ್ಮಿಂದ ಬಹಳಷ್ಟನ್ನು ಕಲಿತು ಇತರರನ್ನೂ ಇಲ್ಲಿ ಕಲಿಸಲು ಕಳಿಸುವ ಮೂಲಕ ನಿಮ್ಮ ಉದ್ಯಮ ಹೆಚ್ಚು ಹೆಚ್ಚು ಬೆಳೆಯುತ್ತದೆ.

20. ಸಾಹಿತ್ಯ ಬರವಣಿಗೆ

20. ಸಾಹಿತ್ಯ ಬರವಣಿಗೆ

ಸಿನೆಮಾ, ನಾಟಕಗಳಿಗೆ ಸಾಹಿತ್ಯ, ಸಂಭಾಷಣೆ ಮೊದಲಾದವುಗಳನ್ನು ಒದಗಿಸುವ ಅತ್ಯಧಿಕ ಜನರು ಮುಂಬೈ ನಗರದಲ್ಲಿದ್ದಾರೆ. ಇವರು ಯಾವುದೇ ಸಮಯದಲ್ಲಿ ಎಲ್ಲಿಂದಲೂ ಗ್ರಾಹಕರ ಅಗತ್ಯಕ್ಕೆ ತಕ್ಕ ಸಾಹಿತ್ಯವನ್ನು ಬರೆದು ನೀಡುವ ಪ್ರತಿಭೆ ಹೊಂದಿದ್ದಾರೆ. ಇವರಿಗೆ ಕೆಲಸ ಮುಗಿಸಿ ಕೊಡುವ ಅಂತಿಮ ಗಡುವು ಸಹಾ ಇದ್ದು, ಈ ಗಡುವಿನೊಳಗೇ ಕೆಲಸ ಮುಗಿಸಿಕೊಡುವ ಮೂಲಕ ಹೆಚ್ಚಿನ ಸಂಭಾವನೆಯನ್ನೂ ಪಡೆಯುತ್ತಾರೆ. ಇದಕ್ಕಾಗಿ ಈ ವ್ಯಕ್ತಿಗಳಿಗೆ ಮೂಲ ಬಂಡವಾಳವೇ ಬೇಕಾಗಿಲ್ಲ. ಈ ಕೆಲಸವನ್ನು ಮನೆಯಲ್ಲಿಯೇ ತಮ್ಮ ಸಮಯದಲ್ಲಿ ಪೂರೈಸಬಹುದಾಗಿದ್ದು ಮನೆ ಬಾಡಿಗೆ ನೀಡುತ್ತಿದ್ದರೆ ಈ ಬಾಡಿಗೆಯೇ ಬಂಡವಾಳವೆಂದುಕೊಳ್ಳಬಹುದು. ಈ ಕೆಲಸಕ್ಕೆ ನಿಮ್ಮಲ್ಲಿ ನಿಜವಾದ ಪ್ರತಿಭೆ ಇರಬೇಕು ಹಾಗೂ ಪ್ರತಿ ಕೆಲಸಕ್ಕೆ ಸೂಕ್ತವಾದ ಸಾಹಿತ್ಯವನ್ನು ಬರೆದುಕೊಡುವ ಹಾಗೂ ಸಮಯ ಮಿತಿಯಲ್ಲಿ ಗ್ರಾಹಕರಿಗೆ ತಲುಪುವಂತೆ ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ. ಉತ್ತಮ ಸಾಹಿತ್ಯ ಹೆಚ್ಚು ಹೆಚ್ಚು ಗ್ರಾಹಕರನ್ನು ತರುತ್ತದೆ.

21. ಸಂಶೋಧನೆ ಆಧಾರಿತ ಉದ್ಯಮ

21. ಸಂಶೋಧನೆ ಆಧಾರಿತ ಉದ್ಯಮ

ಹೆಚ್ಚಿನ ಎಲ್ಲಾ ದೊಡ್ಡ ಸಂಸ್ಥೆಗಳಲ್ಲಿ ತಮ್ಮದೇ ಆದ ಸಂಶೋಧನಾ ತಂಡವಿರುತ್ತದೆ. ಜೊತೆಗೆ ಹೊಸದಾಗಿ ಪ್ರಾರಂಭಿಸಿದ ಶಾಖೆಗಳು ಹಾಗೂ ಇತರ ಕ್ಷೇತ್ರದಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಲು ಹೆಚ್ಚುವರಿ ಸಂಶೋಧನೆಗಾಗಿ ಸ್ವತಂತ್ರವಾಗಿ ಕೆಲಸ ಮಾಡುವ ವ್ಯಕ್ತಿಗಳ ನೆರವನ್ನು ಪಡೆಯ ಬಯಸುತ್ತವೆ. ಈ ನೆರವು ಹೆಚ್ಚಿನ ಸಂದರ್ಭದಲ್ಲಿ ಒಂದು ಗುತ್ತಿಗೆಯಂತಿರುತ್ತದೆ. ಪರಿಣಾಮವಾಗಿ ಎಲ್ಲೆಲ್ಲಿ ಅವಕಾಶಗಳಿವೆ, ಯಾವ ಸಂಸ್ಥೆಗೆ ಇದರಿಂದ ಲಾಭವಾಗಬಹುದು ಎಂಬ ಮಾಹಿತಿಯನ್ನು ಒದಗಿಸುವ ಕ್ಷಮತೆಯುಳ್ಳ ವ್ಯಕ್ತಿಗಳಿಗೆ ಹೆಚ್ಚಿನ ಲಾಭವಿದೆ. ಇದಕ್ಕಾಗಿ ನಿಮ್ಮ ಸಮಯ, ಒಂದು ಲ್ಯಾಪ್ ಟಾಪ್ ಹಾಗೂ ಕುಳಿತುಕೊಳ್ಳುವ ಸ್ಥಳದ ಬಾಡಿಗೆಗೆ ನೀಡುವ ಕೊಂಚ ಬಂಡವಾಳವೇ ಸಾಕಾಗುತ್ತದೆ. ಒಂದು ವೇಳೆ ನಿಮ್ಮೊಂದಿಗೆ ಇನ್ನೊಬ್ಬರು ಪಾಲುದಾರರಾಗಿದ್ದರೆ ಅಥವಾ ನಿಮಗಾಗಿ ಕೆಲಸ ಮಾಡುವವರಿದ್ದರೆ ಅವರ ವೇತನವನ್ನೂ ಈ ಬಂಡವಾಳದಲ್ಲಿ ಭರಿಸಬೇಕಾಗುತ್ತದೆ.

22. ಸಲಹಾಕಾರ ಸೇವೆಗಳು

22. ಸಲಹಾಕಾರ ಸೇವೆಗಳು

ಇತ್ತೀಚಿನ ವರ್ಷಗಳಲ್ಲಿ ಮನೆಯಲ್ಲಿಯೇ ನೀಡುವ ಸಲಹಾಕಾರ ಉದ್ಯೋಗಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ಏಕವ್ಯಕ್ತಿಯಾಧಾರಿತವಾಗಿದ್ದರೂ ಉಳಿದವರು ತಮ್ಮ ಕ್ಷೇತ್ರದಲ್ಲಿ ಪಾಂಡಿತ್ಯವುಳ್ಳ ವ್ಯಕ್ತಿಗಳನ್ನು ವೇತನಾಧಾರದ ಮೇಲೆ ನೇಮಿಸಿಕೊಂಡು ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ವ್ಯವಹಾರವನ್ನು ಪ್ರಾರಂಭಿಸಲು ಆ ವಿಷಯದ ಮೇಲೆ ನೀವು ಹೊಂದಿರುವ ಪಾಂಡಿತ್ಯವೇ ನಿಜವಾದ ಬಂಡವಾಳವಾಗಿದ್ದರೂ ಗ್ರಾಹಕರೊಂದಿಗೆ ಸಂವಾದ ನಡೆಸಲು ಅಗತ್ಯವಾದ ಸ್ಥಳಾವಕಾಶಕ್ಕಾಗಿ ನೀಡುವ ಅಲ್ಪ ಬಾಡಿಗೆಯನ್ನು ಮಾತ್ರ ಭರಿಸಬೇಕಾಗುತ್ತದೆ.

English summary

Business can start only 10 thousand

Your idea will bring you your company, your company will bring you the people, and the people will bring you the market.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X