For Quick Alerts
ALLOW NOTIFICATIONS  
For Daily Alerts

ಸ್ವಂತಮನೆ ಕಟ್ಟುವುದು ಈಗ ಸುಲಭ! ಇಲ್ಲಿವೆ ವಿವಿಧ ಬಗೆಯ ಗೃಹಸಾಲ ಸೌಲಭ್ಯಗಳು

ಬ್ಯಾಂಕ್ ಗಳು ಸೇರಿದಂತೆ ಇತರೆ ಹಣಕಾಸು ಸಂಸ್ಥೆಗಳು ವಿವಿಧ ಬಗೆಯ ಗೃಹಸಾಲಗಳನ್ನು ಇತ್ತೀಚಿನ ದಿನಗಳಲ್ಲಿ ಒದಗಿಸುತ್ತಿವೆ.

By Siddu
|

ಸ್ವಂತ ಮನೆ ಹೊಂದುವುದು ಬದುಕಿನ ಪ್ರಮುಖ ಘಟ್ಟ ಹಾಗು ಮಹತ್ವದ ಮೈಲಿಗಲ್ಲು. ಅದಕ್ಕಾಗಿ 'ಮನೆ ಕಟ್ಟಿ ನೋಡು ಒಮ್ಮೆ ಮದುವೆ ಮಾಡಿ ನೋಡು' ಎಂದು ಹಿರಿಯರು ಹೇಳಿರುವುದು. ಜನರು ಇಂದು ಅತ್ಯಂತ ಧಾವಂತದಲ್ಲಿ ಬದುಕು ಸಾಗಿಸುತ್ತಿದ್ದು, ಪ್ರತಿಯೊಬ್ಬರೂ ತಮ್ಮದೇ ಸ್ವಂತ ಸೂರಿನ ಒಡೆಯರಾಗಿ ಅಲ್ಲಿ ತಮ್ಮ ಬಿಡುವಿನ ವೇಳೆಯನ್ನು ಬಾಹ್ಯ ಜಗತ್ತಿನ ಜಂಜಡಗಳಿಂದ ಮುಕ್ತರಾಗಿ ಒಂದು ದಿವ್ಯ ಏಕಾಂತದ ಅನುಭೂತಿಯನ್ನು ಹೊಂದುವ ಕನಸನ್ನು ಕಾಣುವುದು ಅತ್ಯಂತ ಸಹಜ. ಅದರಲ್ಲೂ ಇಂದಿನ ಕಾಲಮಾನದ ಯುವಕರು ತಾವು ದುಡಿಯಲು ಆರಂಭಿಸಿದ ಕೆಲವು ವರ್ಷಗಳಲ್ಲೇ ಸ್ವಂತ ಮನೆಯನ್ನು ಹೊಂದಬೇಕೆನ್ನುವ ಹಂಬಲ ಬೆಳೆಸಿಕೊಳ್ಳುತ್ತಿದ್ದಾರೆ.

ತೀವ್ರ ಗತಿಯಲ್ಲಿ ಏರುತ್ತಿರುವ ರಿಯಲ್ ಎಸ್ಟೇಟ್ ದರಗಳ ನಾಗಾಲೋಟದ ಕಾರಣದಿಂದ ಮನೆ ಖರೀದಿ ಇತ್ತೀಚಿನ ದಿನಗಳಲ್ಲಿ ದುಸ್ತರವಾಗುತ್ತಾ, ಮಾಯಾ ಮರೀಚಿಕೆಯಂತೆ ಭಾಸವಾಗುತ್ತಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಬ್ಯಾಂಕ್ ಗಳು ಕೊಡ ಮಾಡುತ್ತಿರುವ ಗೃಹಸಾಲ ಸ್ವಂತ ಮನೆ ಹೊಂದುವವರ ಪಾಲಿನ ಆಪತ್ಬಾಂಧವನಾಗಿದ್ದು, ಇದರ ನೆರವಿನಿಂದ ಮನೆಖರೀದಿ ಸುಲಭವಾಗುತ್ತಿದೆ. ಜೀವಮಾನದ ಪರಿಶ್ರಮದ ದುಡಿಮೆಯಲ್ಲಿ ಉಳಿತಾಯ ಮಾಡಿದ ಹಣವನ್ನು ಮನೆ ಖರೀದಿಗೆ ಬಳಸುವುದು ಜಾಣತನದ ನಿರ್ಧಾರವಲ್ಲ ಎಂಬುದು ಪರಿಣಿತರ ಅಭಿಮತ.

ಬ್ಯಾಂಕ್ ಗಳು ಸೇರಿದಂತೆ ಇತರೆ ಹಣಕಾಸು ಸಂಸ್ಥೆಗಳು ವಿವಿಧ ಬಗೆಯ ಗೃಹಸಾಲಗಳನ್ನು ಇತ್ತೀಚಿನ ದಿನಗಳಲ್ಲಿ ಒದಗಿಸುತ್ತಿವೆ. ಗೃಹಸಾಲದ ಬೇಡಿಕೆಯು ಇತ್ತೀಚಿನ ವರ್ಷಗಳಲ್ಲಿ ಹಲವು ಪಟ್ಟು ಏರಿಕೆ ಕಂಡಿದ್ದು, ಜನರ ಸಾಲದ ಅಗತ್ಯತೆಗಳಲ್ಲಿ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಕಂಡು ಬರುತ್ತವೆ. ಜನರ ವಿವಿಧ ಸ್ವರೂಪದ ಬೇಡಿಕೆಗಳಿಗೆ ಅನುಗುಣವಾಗಿ ಬ್ಯಾಂಕ್ ಗಳು ಸಹ ಹಲವು ಬಗೆಯ ಸಾಲಗಳನ್ನು ರೂಪಿಸಿ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುವತ್ತ ಚಿತ್ತಹರಿಸಿವೆ. ಬಹಳಷ್ಟು ಬ್ಯಾಂಕ್ ಗಳು ನಿರ್ದಿಷ್ಟ ಸಮುದಾಯಗಳನ್ನು ತಲುಪಲು ವಿಶೇಷವಾಗಿ ಸಾಲಗಳನ್ನು ವಿನ್ಯಾಸಗೊಳಿಸಿವೆ. ಇವುಗಳಲ್ಲಿ ಗಮನಾರ್ಹವಾದವೆಂದರೆ ಮಹಿಳೆಯರಿಗೆ ಮತ್ತು ಕೃಷಿಕರಿಗಾಗಿ ರೂಪಿಸಲಾಗಿರುವ ಗೃಹಸಾಲ ಮತ್ತು ಭೂಮಿ/ನಿವೇಶನ ಖರೀದಿಗಾಗಿಯೇ ಪರಿಚಯಿಸಲಾಗಿರುವ ವಿಶೇಷ ಬಗೆಯ ಸಾಲ. ಸ್ವಂತ ಮನೆ ಖರೀದಿಗೆ ಇದು ಸುಸಮಯ, ಯಾಕೆ ಗೊತ್ತೆ?

ಗೃಹಸಾಲದ ಬಗೆಗಳು

ಗೃಹಸಾಲದ ಬಗೆಗಳು

ಮನೆ ಖರೀದಿಗೆ ಮಾತ್ರವಲ್ಲದೇ ಅದಕ್ಕೆ ಸಂಬಂಧಿಸಿದ ಇತರೆ ಹಲವು ಉದ್ದೇಶಗಳಿಗಾಗಿ ಬ್ಯಾಂಕ್ ಗಳು ಸಾಲ ಒದಗಿಸುತ್ತವೆ. ಕೆಲವು ಜನಪ್ರಿಯ ಗೃಹಸಾಲಗಳ ಕುರಿತ ಚುಟುಕು ಪರಿಚಯದತ್ತ ಒಮ್ಮೆ ಕಣ್ಣಾಡಿಸೋಣ ಬನ್ನಿ..

ಭೂಮಿ ಖರೀದಿ ಉದ್ದೇಶಕ್ಕೆ ನೀಡಲಾಗುವ ಸಾಲ

ಭೂಮಿ ಖರೀದಿ ಉದ್ದೇಶಕ್ಕೆ ನೀಡಲಾಗುವ ಸಾಲ

ಹಲವಾರು ಹಣಕಾಸು ಸಂಸ್ಥೆಗಳು ಭೂಮಿ ಖರೀದಿಯ ಉದ್ದೇಶಕ್ಕೆ ಸಾಲವನ್ನು ನೀಡುತ್ತವೆ. ಭೂಮಿ ಖರೀದಿ ಪ್ರಸ್ತುತ ದಿನಗಳಲ್ಲಿ ಅತ್ಯಂತ ಫ಼್ಲೆಕ್ಸಿಬಲ್ ಆಯ್ಕೆಯಾಗಿದ್ದು, ಭೂಮಿಯ ಮಾಲೀಕರು ತಮಗೆ ಆರ್ಥಿಕವಾಗಿ ಅನುಕೂಲವಾದಾಗ ಗೃಹ ನಿರ್ಮಾಣ ಮಾಡಲು ಇದು ನೆರವಾಗುತ್ತದೆ. ಒಂದು ವೇಳೆ ಗೃಹ ನಿರ್ಮಾಣ ಸಾಧ್ಯವಾಗದಿದ್ದರೂ ಸಹ ಖರೀದಿಸಿದ ಭೂಮಿಯು ಒಳ್ಳೆಯ ಹೂಡಿಕೆಯಾಗಿ ಸಂಪತ್ತು ಸೃಜನೆಗೆ ನೆರವಾಗುತ್ತದೆ. ಭೂಮಿಯ ಮೌಲ್ಯದ ಶೇ. 85ರಷ್ಟು ಮೊತ್ತ ಸಾಲವಾಗಿ ಏರ್ಪಾಡು ಮಾಡುವ ವ್ಯವಸ್ಥೆಯನ್ನು ಖಾಸಗಿ ರಂಗದ ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಗಳು ಮಾಡುತ್ತಿವೆ. ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಗೃಹ ಖರೀದಿ ಸಾಲ

ಗೃಹ ಖರೀದಿ ಸಾಲ

ಹೊಸ ಮನೆ ಅಥವಾ ಪೂರ್ವ ನಿರ್ಮಿತ ಮನೆ ಖರೀದಿಗೆ ದೊರಕುವ ಬಹು ಜನಪ್ರಿಯ ಸಾಲ ಇದಾಗಿದೆ. ಈ ಬಗೆಯ ಸಾಲವನ್ನು ಬಹುತೇಕ ಬ್ಯಾಂಕ್ ಗಳು ಒದಗಿಸುತ್ತಿದ್ದು, ಇವು ಹಲವಾರು ಭಿನ್ನ ರೂಪಗಳಲ್ಲಿ ದೊರೆಯಲಿವೆ. ಈ ಬಗೆಯ ಸಾಲದ ಬಡ್ಡಿ ದರವು ನಿಶ್ಚಿತ ಇಲ್ಲವೇ ಫ಼್ಲೋಟಿಂಗ್ ರೂಪದಲ್ಲಿ ಲಭ್ಯವಿದ್ದು, ಬಡ್ಡಿ ದರವು ಪ್ರಸಕ್ತ ಮಾರುಕಟ್ಟೆಯಲ್ಲಿ ಶೇ. 9.85 ರಿಂದ 11.25ರ ತನಕ ಇರುತ್ತವೆ. ಹಾಗೆಯೇ ಮನೆ ಮೌಲ್ಯದ ಶೇ. 85 ರಷ್ಟರವರೆಗಿನ ಮೊತ್ತವನ್ನು ಸಾಲವಾಗಿ ಹಲವಾರು ಬ್ಯಾಂಕಿಂಗ್ ಸಂಸ್ಥೆಗಳಿಂದ ನೀಡುತ್ತವೆ. ಗೃಹ ವಿಮೆ ಯಾಕೆ ಖರೀದಿಸಬೇಕು? 

ಗೃಹ ನಿರ್ಮಾಣ ಸಾಲ

ಗೃಹ ನಿರ್ಮಾಣ ಸಾಲ

 ಗೃಹ ಸಾಲ ಪಡೆಯುವ ಮುನ್ನ 11 ಸಂಗತಿ ತಪ್ಪದೆ ನೋಡಿ ಗೃಹ ಸಾಲ ಪಡೆಯುವ ಮುನ್ನ 11 ಸಂಗತಿ ತಪ್ಪದೆ ನೋಡಿ

ಮನೆ ವಿಸ್ತರಣಾ ಸಾಲ

ಮನೆ ವಿಸ್ತರಣಾ ಸಾಲ

ಪ್ರಸ್ತುತವಿರುವ ಮನೆಗೆ ಒಂದು ಬಾಲ್ಕನಿ ನಿರ್ಮಿಸುವ ಅಥವಾ ಹೆಚ್ಚುವರಿಯಾಗಿ ಒಂದು ಬೆಡ್ ರೂಂ ಕಟ್ಟಿಸಿಕೊಳ್ಳುವ ಕನಸು ನಿಮಗಿದೆಯಾ? ಹಾಗಿದ್ದರೆ ಚಿಂತೆ ಪಡಬೇಕಿಲ್ಲ. ಕೆಲವು ಬ್ಯಾಂಕ್ ಗಳು ಮನೆಯ ಸ್ವರೂಪವನ್ನು ಮರು ವಿನ್ಯಾಸಗೊಳಿಸುವ ಹಾಗೂ ಹೆಚ್ಚುವರಿ ಬೆಡ್ ರೂಂ ಗಳನ್ನು ನಿರ್ಮಿಸುವಂತಹ ಉದ್ದೇಶಗಳಿಗೆ ಪೂರಕವಾಗಿ ಮನೆ ವಿಸ್ತರಣಾ ಸಾಲಗಳನ್ನು ರೂಪಿಸಿವೆ. ಎಚ್.ಡಿ.ಎಫ಼್.ಸಿ, ಬ್ಯಾಂಕ್ ಒದಗಿಸುವ ಮನೆ ವಿಸ್ತರಣೆ ಮತ್ತು ಮನೆ ನವೀಕರಣ ಸಾಲಗಳು ಈ ಶ್ರೇಣಿಯಲ್ಲಿ ಲಭ್ಯವಿರುವ ಬಹುಬೇಡಿಕೆಯುಳ್ಳ ಅತ್ಯಂತ ಯಶಸ್ವಿ ಸಾಲಗಳು.

ಮನೆ ಬದಲಾವಣೆ ಸಾಲಗಳು

ಮನೆ ಬದಲಾವಣೆ ಸಾಲಗಳು

ಇದು ವಿಶಿಷ್ಟ ಬಗೆಯ ಸಾಲವಾಗಿದೆ. ಈಗಾಗಲೇ ಗೃಹ ಸಾಲ ಪಡೆದು ಮನೆ ಖರೀದಿಸಿರುವವರು ಒಂದೊಮ್ಮೆ ಬೇರೊಂದು ಹೊಸ ಮನೆ ಹೊಂದುವ ಅಪೇಕ್ಷೆ ಹೊಂದಿದ್ದರೆ, ಅವರಿಗೆ ಈ ಬಗೆಯ ಸಾಲ ಅತ್ಯಂತ ಸೂಕ್ತ. ಪ್ರಸ್ತುತ ಸಾಲದ ಬಾಕಿ ಮೊತ್ತವನ್ನು ಹೊಸ ಮನೆಯ ಸಾಲಕ್ಕೆ ವರ್ಗಾಯಿಸಿಕೊಳ್ಳುವ ಮೂಲಕ ಖರೀದಿದಾರರು ಹೊಸ ಮನೆಯ ಖರೀದಿಯಲ್ಲಿ ತೊಡಗಬಹುದು ಮತ್ತು ಅವರು ಹಳೆಯ ಸಾಲವನ್ನು ಚುಕ್ತಾಗೊಳಿಸಿದ ಬಳಿಕವೇ ಹೊಸ ಸಾಲಕ್ಕಾಗಿ ಪ್ರಯತ್ನಿಸಬೇಕಿಲ್ಲ. ಈ ಬಗೆಯ ಸಾಲವು ಅತ್ಯಂತ ಅನುಕೂಲಕರವಾಗಿದ್ದರೂ ಸಹ ಅದು ಅತ್ಯಂತ ದುಬಾರಿ ಎಂಬುದನ್ನು ಅರಿತುಕೊಂಡು ಮುಂದುವರೆಯವುದು ಅಪೇಕ್ಷಣೀಯ.

ಮನೆ ಸುಧಾರಣೆ ಸಾಲ

ಮನೆ ಸುಧಾರಣೆ ಸಾಲ

ಮನೆಯ ಒಳಗಿನ ಮತ್ತು ಬಾಹ್ಯ ಪ್ರದೇಶಗಳಲ್ಲಿನ ರಿಪೇರಿ, ಪೈಂಟಿಂಗ್, ಓವರ್ಹೆಡ್ ನೀರಿನ ಟ್ಯಾಂಕ್ ಮತ್ತು ಎಲೆಕ್ಟ್ರಿಕ್ ಸಕಾರ್ಯಗಳಿಂದ ಮನೆಗೆ ಆಧುನಿಕತೆಯ ಲಕ್ಷಣ ಪ್ರಾಪ್ತವಾಗುತ್ತದೆ ಮತ್ತು ಮನೆಯ ಅಂದಕ್ಕೆ ವಿಶೇಷ ಮೆರಗು ದೊರಕಿ ಕಂಗೊಳಿಸುತ್ತದೆ. ಒಂದೊಮ್ಮೆ ಈ ರಿಪೇರಿ ಮತ್ತು ಅಧುನೀಕರಣದ ಅಗತ್ಯಗಳಿಗೆ ಹಣಕಾಸಿನ ಅಭಾವ ಕಂಡುಬಂದಲ್ಲಿ ಯೂನಿಯನ್ ಬ್ಯಾಂಕ್ ಆಫ಼್ ಇಂಡಿಯಾ, ಐಸಿಐಸಿಐ ಮತ್ತು ವಿಜಯಾ ಬ್ಯಾಂಕ್ ವಿಶೇಷ ಬಗೆಯ ಮನೆ ಸುಧಾರಣಾ ಸಾಲಗಳನ್ನು ಮಂಜೂರು ಮಾಡುತ್ತದೆ.

ಬ್ಯಾಲನ್ಸ್ ಟ್ರಾನ್ಸ್ಫ಼ರ್ ಅಥವಾ ಬಾಕಿ ವರ್ಗಾವಣೆ ಸಾಲಗಳು

ಬ್ಯಾಲನ್ಸ್ ಟ್ರಾನ್ಸ್ಫ಼ರ್ ಅಥವಾ ಬಾಕಿ ವರ್ಗಾವಣೆ ಸಾಲಗಳು

ಒಂದೊಮ್ಮೆ ನಾವು ಸಾಲ ಹೊಂದಿರುವ ಬ್ಯಾಂಕ್ ಗಿಂತ ಬೇರೆ ಬ್ಯಾಂಕಿನ ಬಡ್ಡಿ ದರ ಕಡಿಮೆಯಿದ್ದಲ್ಲಿ, ಅಥವಾ ಉತ್ತಮ ಸೇವೆಗಳನ್ನು ಒದಗಿಸುತ್ತಿದ್ದಲ್ಲಿ ಅಥವಾ ಶೂನ್ಯ ಪರಿಷ್ಕರಣಾ ( ಪ್ರೋಸೆಸ್ಸಿಂಗ್) ಶುಲ್ಕದಂತಹ ಯಾವುದಾದರು ವಿಶೇಷ ಕೊಡುಗೆ ಲಭಿಸುತ್ತಿದ್ದಲ್ಲಿ ನಮ್ಮ ಪ್ರಸ್ತುತ ಬ್ಯಾಂಕಿನಲ್ಲಿನ ಸಾಲವನ್ನು ಆ ಮತ್ತೊಂದು ಬ್ಯಾಂಕ್ ಗೆ ವರ್ಗಾಯಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ನಮ್ಮ ಬಾಕಿ ಸಾಲದ ಮೊತ್ತಕ್ಕೆ ಹೊಸ ಬ್ಯಾಂಕ್ ನ ಪರಿಷ್ಕೃತ ಬಡ್ಡಿ ದರ ಅನ್ವಯಗೊಳ್ಳುತ್ತದೆ.

ಅನಿವಾಸಿ ಭಾರತೀಯರ ಗೃಹಸಾಲಗಳು

ಅನಿವಾಸಿ ಭಾರತೀಯರ ಗೃಹಸಾಲಗಳು

ಅನಿವಾಸಿ ಭಾರತೀಯರು ವಾಸದ ಉದ್ದೇಶದ ಮನೆಗಳನ್ನು ತಮ್ಮ ದೇಶದಲ್ಲಿ ಖರೀದಿಸುವುದನ್ನು ಉತ್ತೇಜಿಸಲು ಪರಿಚಯಿಸಲಾಗಿರುವ ಸಾಲದ ಪ್ರಕಾರ ಇದು. ಈ ಬಗೆಯ ಸಾಲದ ಅರ್ಜಿ ನಮೂನೆ ಮತ್ತು ಪ್ರಕ್ರಿಯೆಗಳು ಉಳಿದವುಗಳಿಗಿಂತ ಭಿನ್ನವಾಗಿರುತ್ತದೆ. ಬಹುತೇಕ ಸರಕಾರಿ ಸ್ವಾಮ್ಯದ ಮತ್ತು ಖಾಸಗಿ ರಂಗದ ಬ್ಯಾಂಕ್ ಗಳು ಈ ಬಗೆಯ ಸಾಲಗಳಿಗೆ ವಿಶೇಷವಾದ ಒತ್ತು ಕೊಟ್ಟು ಸೂಕ್ತ ಬಗೆಯ ಪ್ರಚಾರದ ಮೂಲಕ ಅನಿವಾಸಿ ಭಾರತೀಯರನ್ನು ಸೆಳೆಯಲು ಯತ್ನಿಸುತ್ತಿವೆ.

ಬ್ರಿಡ್ಜ್ ಸಾಲಗಳು

ಬ್ರಿಡ್ಜ್ ಸಾಲಗಳು

ಈ ಬಗೆಯ ಸಾಲಗಳು ಅಲ್ಪಾವಧಿಯದ್ದಾಗಿರುತ್ತವೆ. ಹೊಸ ಮನೆ ಖರೀದಿ ಉದ್ದೇಶ ಹೊಂದಿರುವ ಹಾಲಿ ಮನೆ ಮಾಲೀಕರ ನೆರವಿಗೆ ಧಾವಿಸಲು ಅನುಕೂಲ ಕಲ್ಪಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ಹಾಲಿ ಮನೆಯನ್ನು ಮಾರಿ ಅದರ ಬದಲಿಗೆ ಮತ್ತೊಂದು ಮನೆಯನ್ನು ಖರೀದಿಸಲು ಉದ್ದೇಶಿಸುವವರಿಗೆ ಇದು ಅತ್ಯುಪಯುಕ್ತ ರೀತಿಯ ಸಾಲವಾಗಿರುತ್ತದೆ. ತಮ್ಮ ಹಾಲಿ ಮನೆಗೆ ಖರೀದಿದಾರರು ದೊರಕುವವರೆಗೆ ಉದ್ದೇಶಿತ ಹೊಸ ಮನೆ ಖರೀದಿಗೆ ಅವಶ್ಯಕವಿರುವ ಹಣಕಾಸು ಒದಗಿಸಿಕೊಳ್ಳಲು ಈ ಸಾಲ ಸಹಾಯ ಮಾಡುತ್ತದೆ. ಈ ಬಗೆಯ ಸಾಲಕ್ಕೆ ಸಾಮಾನ್ಯವಾಗಿ ಹೊಸ ಮನೆಯನ್ನು ಬ್ಯಾಂಕ್ ಗೆ ಅಡವು ಇರಿಸಬೇಕಾಗುತ್ತದೆ ಹಾಗೂ ಇಂತಹ ಸಾಲಗಳು ಸಾಮಾನ್ಯವಾಗಿ ಎರಡು ವರ್ಷಗಳ ಅಲ್ಪ ಅವಧಿಗೆ ಸೀಮಿತವಾಗಿ ದೊರೆಯುತ್ತವೆ. ವಿಜಯಾ ಬ್ಯಾಂಕ್, ಎಚ್.ಡಿ.ಎಫ಼್.ಸಿ ಮುಂತಾದ ಪ್ರಮುಖ ಬ್ಯಾಂಕ್ ಗಳಲ್ಲಿ ಈ ಸಾಲಗಳ ಕುರಿತು ವಿಚಾರಿಸಬಹುದು

ಮುದ್ರಾಂಕ ಶುಲ್ಕ ಸಾಲ (Stamp Duty Loans)

ಮುದ್ರಾಂಕ ಶುಲ್ಕ ಸಾಲ (Stamp Duty Loans)

ಇದು ಹೆಚ್ಚು ಪ್ರಚಲಿತವಲ್ಲದ ಸಾಲ. ಮನೆಖರೀದಿಯ ವೇಳೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಪಾವತಿಗೆ ಈ ಮೂಲಕ ಸಾಲ ಪಡೆಯಬಹುದು.

ಕೊನೆಮಾತು

ಕೊನೆಮಾತು

ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಮನೆ ಖರೀದಿಗಾಗಿ ಗೃಹಸಾಲದ ಮೂಲವನ್ನು ಆಶ್ರಯಿಸಿರುವುದು ದೇಶದ ಎಲ್ಲೆಡೆಯೂ ಕಂಡುಬರುವ ಸಾಮಾನ್ಯ ಸಂಗತಿಯಾಗಿದೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಲಭ್ಯವಿರುವ ವಿವಿಧ ಬಗೆಯ ಸಾಲಗಳನ್ನು ತುಲನೆ ಮಾಡಿ ಪ್ರತಿಯೊಂದು ಬಗೆಯ ಸಾಲದ ಅನುಕೂಲ ಮತ್ತು ಅನಾನುಕೂಲತೆಗಳನ್ನು ಅರಿತುಕೊಂಡು ಮುಂದುವರೆಯಬೇಕಾದುದು ಕ್ಷೇಮಕರ. ನಮ್ಮ ಅಗತ್ಯಕ್ಕೆ ಸರಿಹೊಂದುವ ಸಾಲವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಅನಗತ್ಯವಾಗಿ ಹಲವು ಕಾಗದ ಪತ್ರಗಳನ್ನು ಕಲೆಹಾಕುವ, ಭರ್ತಿ ಮಾಡುವ, ಪರಿಶೀಲಿಸುವ, ಸಂಗ್ರಹಿಸಿ ಇಟ್ಟುಕೊಳ್ಳುವ ಕೆಲಸವನ್ನು, ನಿರಂತರವಾದ ವಿನಾಕಾರಣದ ಬ್ಯಾಂಕ್ ಅಲೆದಾಟವನ್ನು ಸಹ ತಪ್ಪಿಸಬಹುದು. ತನ್ಮೂಲಕ ಸಾಲ ಮಂಜೂರಾತಿಯ ಪ್ರಕ್ರಿಯೆ ಸರಳಗೊಳ್ಳುತ್ತದೆ. ಗೃಹ ಸಾಲದ ಮೊತ್ತವನ್ನು ಲೆಕ್ಕಿಸಲು ಅಂತರ್ಜಾಲದಲ್ಲಿ ಲಭ್ಯವಿರುವ ಹಲವು ಮಾದರಿಗಳ ಇ.ಎಮ್.ಐ ಕ್ಯಾಲ್ಕುಲೇಟರ್ ಗಳ ಪೈಕಿ ಒಂದರ ನೆರವು ಪಡೆದು ಕಂತುಗಳ ಪಾವತಿ ವೇಳಾಪಟ್ಟಿಯನ್ನು ಅರಿತುಕೊಂಡು ತನ್ಮೂಲಕ ಆರ್ಥಿಕ ವ್ಯವಹಾರವನ್ನು ಉತ್ತಮ ಬಗೆಯಲ್ಲಿ ನಿರ್ವಹಿಸಬಹುದು. ಬಡ ಮತ್ತು ಮಧ್ಯಮ ವರ್ಗದ ಜನರು ಸ್ವಂತ ಮನೆ ಹೊಂದುವುದನ್ನು ಪ್ರೋತ್ಸಾಹಿಸಲು ಸರಕಾರಗಳೂ ಕೂಡ ಹಲವು ಬಗೆಯ ಯೋಜನೆಗಳ ಮೂಲಕ ಶ್ರಮಿಸುತ್ತಿವೆ. ಮನೆ ಮಾಲೀಕರಿಗೆ ಆದಾಯ ತೆರಿಗೆ ಪಾವತಿಯಲ್ಲಿ ರಿಯಾಯಿತಿ ಲಭ್ಯವಿದೆ.

English summary

Types of Home Loan in India

Banks and other housing finance establishments offer different types of home loans these days. The demand for home loans has increased manifold in recent years and people have different expectations when it comes to a home loan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X