For Quick Alerts
ALLOW NOTIFICATIONS  
For Daily Alerts

ಕುಟುಂಬ ಉಳಿತಾಯ ಖಾತೆ ತೆರೆಯಬೇಕೆ? ಇಲ್ಲಿ ನೋಡಿ..

ಕುಟುಂಬ ಉಳಿತಾಯ ಖಾತೆಯಲ್ಲಿ ಸದಸ್ಯರ ಸಂಖ್ಯೆಯನ್ನು ಆಧರಿಸಿ ತ್ರೈಮಾಸಿಕ ಅಂತ್ಯಕ್ಕೆ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡಿದರೆ ಸಾಕು. ಅಂದರೆ ಪ್ರತೀ ವೈಯಕ್ತಿಕ ಅಥವಾ ಏಕ ಖಾತೆಯಲ್ಲಿ ಹಣವನ್ನು ಉಳಿಸಲೇಬೇಕಾದ ಅವಶ್ಯಕತೆಯಿರುವುದಿಲ್ಲ

|

ಒಬ್ಬ ವ್ಯಕ್ತಿಯು ಏಕ ಉಳಿತಾಯ ಖಾತೆಯನ್ನು (single savings account) ಕುಟುಂಬದ ಎಲ್ಲ ಸದಸ್ಯರ ಜೊತೆಗೆ ಹೊಂದಿರಬಹುದೇ? ಕುಟುಂಬದ ಉಳಿತಾಯ ಖಾತೆಯಲ್ಲಿ, ಅನೇಕ ವೈಯಕ್ತಿಕ ಖಾತೆಗಳನ್ನು ಒಟ್ಟಿಗೆ ಸೇರಿಸಿ ಪ್ರತ್ಯೇಕವಾಗಿ ಕಾರ್ಯನಿರ್ವಹಣೆ ಮಾಡಬಹುದೇ? ಹೌದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಈ ಸೌಲಭ್ಯ ಲಭ್ಯವಿದೆ.

ಕುಟುಂಬ ಉಳಿತಾಯ ಖಾತೆಯಲ್ಲಿ ಸದಸ್ಯರ ಸಂಖ್ಯೆಯನ್ನು ಆಧರಿಸಿ ತ್ರೈಮಾಸಿಕ ಅಂತ್ಯಕ್ಕೆ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡಿದರೆ ಸಾಕು. ಅಂದರೆ ಪ್ರತೀ ವೈಯಕ್ತಿಕ ಅಥವಾ ಏಕ ಖಾತೆಯಲ್ಲಿ ಹಣವನ್ನು ಉಳಿಸಲೇಬೇಕಾದ ಅವಶ್ಯಕತೆಯಿರುವುದಿಲ್ಲ. ವ್ಯಕ್ತಿಗಳು, ಸಂಘಗಳು, ಸಾಮಾಜಿಕ ಸಂಸ್ಥೆಗಳು, ಕ್ಲಬ್ ಗಳು, ಟ್ರಸ್ಟ್ ಗಳು ಮತ್ತು ಭಾರತದಲ್ಲಿರುವ ವಿದೇಶಿಯರು ಈ ಕುಟುಂಬ ಉಳಿತಾಯ ಖಾತೆಯನ್ನು ಹೊಂದಬಹುದಾಗಿದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

ಜೊತೆಗೆ ಅನೇಕ ಬ್ಯಾಂಕುಗಳು ಚಿನ್ನ, ಲಾಕರ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಡಿಮ್ಯಾಟ್ ಖಾತೆ ಮುಂತಾದವುಗಳ ಮೇಲೆ ಹೇರಲಾಗುವ ಶುಲ್ಕಗಳ ಮೇಲೆ ರಿಯಾಯಿತಿ ನೀಡುತ್ತವೆ ಮತ್ತು ಇವುಗಳನ್ನು ಕಡಿಮೆ ದರದಲ್ಲಿ ಪಡೆದುಕೊಳ್ಳುವ ಸೌಲಭ್ಯವೂ ಇರುತ್ತದೆ.

ಕುಟುಂಬ ಉಳಿತಾಯ ಖಾತೆಗಳನ್ನು ನೀಡುವ ಕೆಲವು ಉತ್ತಮ ಬ್ಯಾಂಕುಗಳು ಪಟ್ಟಿ ಇಲ್ಲಿವೆ ನೋಡಿ..

1. ಎಚ್ ಡಿ ಎಫ್ ಸಿ ಕುಟುಂಬ ಉಳಿತಾಯ ಖಾತೆ

1. ಎಚ್ ಡಿ ಎಫ್ ಸಿ ಕುಟುಂಬ ಉಳಿತಾಯ ಖಾತೆ

ಕುಟುಂಬದ ಎಲ್ಲಾ ಸದಸ್ಯರೂ ಎಚ್ ಡಿ ಎಫ್ ಸಿ ಯಲ್ಲಿ ಪ್ರತ್ಯೇಕ ಖಾತೆಯನ್ನು ಹೊಂದಿದ್ದ ಪಕ್ಷದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕುಟುಂಬ ಉಳಿತಾಯ ಖಾತೆಯನ್ನು ತೆರೆಯಲು ಅರ್ಹರಾಗಿರುತ್ತಾನೆ. ಆದರೆ ಚಾಲ್ತಿ ಖಾತೆ ಮತ್ತು ಎಚ್ ಯು ಎಫ್ ಖಾತೆಗಳನ್ನು ಹೊಂದಿರುವವರು ಈ ಗುಂಪಿನ ಜೊತೆ ಖಾತೆಗಳನ್ನು ತೆರೆಯಲು ಅರ್ಹರಾಗಿರುವುದಿಲ್ಲ. ಕನಿಷ್ಟ 2 ಮತ್ತು ಗರಿಷ್ಟ 4 ಖಾತೆಗಳನ್ನು ಒಂದು ಗುಂಪು ಮಾಡಿ ಒಂದು ಕುಟುಂಬದ ಖಾತೆಯನ್ನು ತೆರೆಯಬಹುದಾಗಿದೆ.
ಖಾತೆಯ ಆರಂಭಿಸುವಾಗ ಮತ್ತು ಗುಂಪಿನ ಸದಸ್ಯರ ಜೊತೆ ಖಾತೆ ತೆರೆಯುವಾಗ, ಹಿಂದಿನ ಷರತ್ತುಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಕಡ್ಡಾಯ. ಜೊತೆಗೆ, ಖಾತೆ ತೆರೆಯುವ ವೇಳೆ ಆರಂಭದಲ್ಲಿ ಕಟ್ಟಬೇಕಾದ ಹಣವು ತಿಂಗಳ ಸರಸರಿ ಸಮನಾಗಿರಬೇಕು. ಇನ್ನಷ್ಟು ಸರಳವಾಗಿ ಇದನ್ನು ಹೇಳಬಹುದಾದರೆ, ಮಕ್ಕಳು ಅಥವಾ ಹಿರಿಯ ನಾಗರೀಕರ ಖಾತೆಯು ತೆರೆಯುವಾಗ ಪ್ರಾರಂಭಿಕವಾಗಿ ಪಾವತಿ ಮಾಡಬೇಕಾದ ಮೊತ್ತವೆಂದರೆ ಅದು 5000 ರೂ.ಗಳಾಗಿದ್ದು ಸಾಮಾನ್ಯ ಉಳಿತಾಯ ಖಾತೆಗಳನ್ನು ತೆರೆಯಬೇಕಾದಲ್ಲಿ 10000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಎಲ್ಲಾ ಖಾತೆಗಳನ್ನು ಸೇರಿಸಿ ಸರಾಸರಿ ತಿಂಗಳಿಗೆ ರೂ. 40,000 ಬ್ಯಾಲೆನ್ಸ್ ಖಾತೆಯಲ್ಲಿ ಉಳಿಸಿಕೊಂಡಿರಬೇಕಾಗುತ್ತದೆ. ಲಾಕರ್ ವ್ಯವಸ್ಥೆಯನ್ನು ಪಡೆದ ಮೊದಲನೇ ವರ್ಷದಲ್ಲಿ ಶುಲ್ಕದ ರೀತಿಯಲ್ಲಿ ಪಾವತಿಸಬೇಕಾದ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ಕೊಡಲಾಗುತ್ತದೆ.

ಅಲ್ಲದೆ ಈ ಖಾತೆಯನ್ನು ಹೊಂದಿರುವ ಎಲ್ಲರೂ ಉಚಿತವಾಗಿ ಅಂತರಾಷ್ಟ್ರೀಯ ಡೆಬಿಟ್ ಕಾರ್ಡನ್ನು ಪಡೆಯಬಹುದಾಗಿದೆ. ಯಾವುದೇ ಬ್ಯಾಂಕ್ ಎಟಿಎಂ ಗಳಿಂದ ಉಚಿತವಾಗಿ ನಗದು ವಾಪಸಾತಿ ವ್ಯವಹಾರಗಳನ್ನು ಮಾಡಬಹುದಾಗಿದೆ. ಜೊತೆಗೆ, ಇದರಲ್ಲಿ ಸರಳ ಉಳಿತಾಯ ಖಾತೆಗಳನ್ನು ಉಳಿತಾಯ ಖಾತೆಗಳಿಗೆ ಪರಿವರ್ತಿಸುವ ಸೌಲಭ್ಯವನ್ನು ನಾಮನಿರ್ದೇಶಿತ ಖಾತೆಗಳಿಗೆ ನೀಡಲಾಗುತ್ತದೆ. ಆದರೆ ಎನ್ಆರ್ಒ ಖಾತೆಯಿಂದ ಇದರ ಸೌಲಭ್ಯವನ್ನು ಪಡೆಯಲು ಅವಕಾಶವಿರುವುದಿಲ್ಲ. ಪ್ರತೀ ಖಾತೆಗೆ ತಿಂಗಳಿಗೆ ರೂ. 50,000ವರೆಗೆ ಉಚಿತ ಡಿಡಿ ಸೌಲಭ್ಯವನ್ನು ನೀಡಲಾಗುತ್ತದೆ. ಅತಿಹೆಚ್ಚು ಸಾಲ ಹೊಂದಿರುವ ವಿಶ್ವದ 10 ದೇಶಗಳು, ಭಾರತ ಎಷ್ಟನೇ ಸ್ಥಾನದಲ್ಲಿದೆ?

2. ಕೋಟಕ್ ಮೈ ಫ್ಯಾಮಿಲಿ
 

2. ಕೋಟಕ್ ಮೈ ಫ್ಯಾಮಿಲಿ

ಕೋಟಕ್ ಮೈ ಫ್ಯಾಮಿಲಿ ಖಾತೆಯ ಮೂಲಕ ಖಾತೆದಾರ ವಾರ್ಷಿಕ ಶೇ. 6ರಷ್ಟು ಹಣ ಗಳಿಸುವ ಸೌಲಭ್ಯವನ್ನು ಕೊಡಲಾಗಿದೆ. ಈ ಖಾತೆಯಲ್ಲಿರುವವರು ಸಕ್ರಿಯ ಹಣದ ಸೌಲಭ್ಯವನ್ನು ಆಯ್ಕೆ ಮಾಡಬಹುದಾಗಿದೆ. ಈ ಸೌಲಭ್ಯದಲ್ಲಿ ಬ್ಯಾಲೆನ್ಸಗಿಂತ ಹೆಚ್ಚಿನ ಪ್ರಮಾಣದ ಹಣ ಟರ್ಮ್ ಡೆಪಾಸಿಟ್ (ಠೇವಣಿ) ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಬಡ್ಡಿಯನ್ನು ಗಳಿಸಬಹುದಾಗಿದೆ. ಖಾತೆಯನ್ನು ಹೊಂದಿದ ಕುಟುಂಬದ ಪ್ರತಿಯೊಬ್ಬರೂ ನಿಗದಿತ ಬ್ಯಾಲೆನ್ಸ್ ಹಣವನ್ನು ಒಂದು ಖಾತೆಯಲ್ಲಿ ಅಥವಾ ಇತರ ಖಾತೆಗಳಲ್ಲಿಯೂ ಇಡಬಹುದಾದ ಸೌಲಭ್ಯವಿದೆ.

ಪ್ರತೀ ಕುಟುಂಬಕ್ಕೆ ಒಬ್ಬರು ನಿರ್ವಾಹಕ ಅಧಿಕಾರಿಯ (Relationship Manager) ಸೇವೆಯನ್ನು ಬ್ಯಾಂಕ್ ನೀಡುತ್ತದೆ. ಇಲ್ಲಿ ಎರಡು ಆಯ್ಕೆಗಳಿವೆ. ಮೊದಲನೆಯದಾಗಿ, ಮೂವರು ಕುಟುಂಬದ ಸದಸ್ಯರು ಒಟ್ಟಾಗಿ ಖಾತೆಯನ್ನು ತೆರೆಯಬಹುದಾಗಿದ್ದು, ಇದರಲ್ಲಿ ಸರಾಸರಿ ಮಾಸಿಕ ರೂ. 50,000 ಗಳನ್ನು ಪ್ರತೀ ಕುಟುಂಬದವರು ಇರಿಸಬೇಕಾಗುತ್ತದೆ. ಎರಡನೆಯದಾಗಿ ಖಾತೆಯ ಪೂರ್ವದಲ್ಲಿ ಕುಟುಂಬದ ಸದಸ್ಯರ ಸಂಖ್ಯೆಯು 5ರವರೆಗೆ ಇದ್ದಲ್ಲಿ ಪ್ರತೀ ಕುಟುಂಬದ ಖಾತೆಯಲ್ಲಿ ಮಾಸಿಕ ಬ್ಯಾಲೆನ್ಸ್ ರೂ. 1,00,000 ಹೊಂದಿರಬೇಕಾಗುತ್ತದೆ.
ಕುಟುಂಬ ಉಳಿತಾಯದೊಂದಿಗೆ ಬರುವ ಕೆಲವು ಪ್ರಯೋಜನಗಳಲ್ಲಿ ಮನೆ ಬಾಗಿಲಿಗೆ ಕೆಲವು ಸೇವೆಗಳನ್ನು ಕಲ್ಪಿಸಿಕೊಡುವ ವ್ಯವಸ್ಥೆ ಕೂಡಾ ಒಂದು. ಏಸ್ (Ace Savings Account) ಮತ್ತು ಪ್ರೊ ಖಾತೆದಾರರಿಗೆ (Pro Savings Account) ಉಚಿತ ಎಟಿಎಂ ಬಳಕೆ ಮತ್ತು ಟ್ರಾವೆಲ್ ಕಾರ್ಡ್ ಅನ್ನು ಶೇ. 25% ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ.
ಕ್ಲಾಸಿಕ್ ಅಥವಾ ಪ್ಲಾಟಿನಂ ಡೆಬಿಟ್ ಕಾರ್ಡುಗಳ ಮೂಲಕ ಹೆಚ್ಚು ಮೊತ್ತವನ್ನು ಹಿಂಪಡೆಯುವ ಮಿತಿಗೆ ಅನುಗುಣವಾಗಿ ಮತ್ತು ವಿಶೇಷ ಕೊಡುಗೆಗಳನ್ನು ಬ್ಯಾಂಕ್ ನೀಡುತ್ತದೆ. ವಿಶೇಷ ಕೊಡುಗೆಗಳಾದ ಹ್ಯಾಷ್ ಟ್ಯಾಗ್ ಬ್ಯಾಂಕಿಂಗ್ ವ್ಯವಸ್ಥೆ ಲಭ್ಯವಿರುತ್ತದೆ. ಜೊತೆಗೆ ಕೆಲವು ನಿಗದಿತ ಕಾರ್ಯಕ್ರಮಕ್ಕೆ ಸಂಬಧಿಸಿದ ಪ್ರಯೋಜನದಡಿಯಲ್ಲಿ ಡೆಬಿಟ್ ಕಾರ್ಡ್ ಮೂಲಕ ಮಾಡಿದ ಖರ್ಚಿನಲ್ಲಿ ಹಣವನ್ನು ಮೂರು ವರ್ಗಗಳ ಅಡಿಯಲ್ಲಿ ಹಿಂತಿರುಗಿಸಬಹುದು.

3. ಐಸಿಐಸಿಐ ಬ್ಯಾಂಕ್ ಪ್ಯಾಮಿಲಿ ಬ್ಯಾಂಕಿಂಗ್

3. ಐಸಿಐಸಿಐ ಬ್ಯಾಂಕ್ ಪ್ಯಾಮಿಲಿ ಬ್ಯಾಂಕಿಂಗ್

ಪ್ಯಾಮಿಲಿ ಬ್ಯಾಂಕಿಂಗ್ ಮಾಡುವ ಪ್ರತಿಯೊಬ್ಬ ಕುಟುಂಬದ ಸದಸ್ಯರೂ ತಮ್ಮ ಗ್ರಾಹಕರ ಐಡಿಯನ್ನು ಐಸಿಐಸಿಐ ಬ್ಯಾಂಕ್ ನೊಂದಿಗೆ ಪ್ಯಾಮಿಲಿ ಐಡಿ ಎಂದು ಕರೆಯಲ್ಪಡುವ ಒಂದು ಪ್ರತ್ಯೇಕ ಐಡಿಯ ಮೂಲಕ ಕಾರ್ಯನಿರ್ವಹಿಸಬಹುದು. ಕನಿಷ್ಠ ಸರಾಸರಿ ಮಾಸಿಕ ಬ್ಯಾಲೆನ್ಸ್ ಅನ್ನು ಕುಟುಂಬ ಮಟ್ಟದಲ್ಲಿ ನಿರ್ವಹಿಸಬೇಕು. ಆದರೆ, ಸದಸ್ಯರಲ್ಲಿ ಪ್ರತಿಯೊಬ್ಬರೂ ಕನಿಷ್ಟ ಬ್ಯಾಲೆನ್ಸ್ ಇರಿಸಬೇಕಾದ ಅವಶ್ಯಕತೆಗಳು ಇರುವುದಿಲ್ಲ. ಈ ಸೌಲಭ್ಯಕ್ಕಾಗಿ ಫಾರ್ಮ್ ಭರ್ತಿ ಮಾಡಿ ಮತ್ತು ಕೆಲವು ಸಂಬಂಧಿತ ವಿವರಗಳನ್ನು ಒದಗಿಸಬೇಕಾಗುತ್ತದೆ.
ಕುಟುಂಬದ ಮುಖ್ಯಸ್ಥನ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ ಮತ್ತು ಇದನ್ನು ಐಸಿಐಸಿಐ ಬ್ಯಾಂಕಿನಿಂದ ಪ್ರಾರಂಭಿಕ ಐಡಿ ಎಂದು ಗುರುತಿಸಲಾಗುತ್ತದೆ.

1. ಸಿಲ್ವರ್ ಕುಟುಂಬ ಖಾತೆಯ ವಿಭಾಗದಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ ರೂ. 50,000 ಆಗಿದ್ದು ಮತ್ತು ಇದನ್ನು ನಿರ್ವಹಿಸದೇ ಇದ್ದ ಪಕ್ಷದಲ್ಲಿ 100 + 2% ಅಥವಾ ರೂ 500, ಅಥವಾ ಯಾವುದು ಕಡಿಮೆಯೋ ಅದನ್ನು ಮಾಸಿಕ ಸರಾಸರಿ ಬ್ಯಾಲೆನ್ಸ್ ಗೆ ಚಾರ್ಜ್ ಮಾಡಲಾಗುತ್ತದೆ.
2. ಗೋಲ್ಡ್ ಪ್ರಿವಿಲೇಜ್ ಖಾತೆಯಡಿ ಬರುವ ಕುಟುಂಬಕ್ಕೆ ಕನಿಷ್ಟ ಅವಶ್ಯಕ ಸರಾಸರಿ ಬ್ಯಾಲೆನ್ಸ್ ರೂ. 1,00,000 ಆಗಿದ್ದು, ಇದನ್ನು ನಿರ್ವಹಿಸದೇ ಇದ್ದ ಪಕ್ಷದಲ್ಲಿ ಯಾವುದೇ ತಿಂಗಳಲ್ಲಿ ಈ ಖಾತೆಗಳಿಗೆ 100 + 2% ಅಥವಾ ರೂ. 500, ಅಥವಾ ಯಾವುದು ಕಡಿಮೆಯೋ ಅದನ್ನು ಮಾಸಿಕ ಸರಾಸರಿ ಬ್ಯಾಲೆನ್ಸ್ ಗೆ ಚಾರ್ಜ್ ಮಾಡಲಾಗುತ್ತದೆ
3. ಕುಟುಂಬ ಉಳಿತಾಯ ಖಾತೆ
ಕುಟುಂಬ ಖಾತೆಯ ಮಾಸಿಕ ಬ್ಯಾಲೆನ್ಸ್ ಅನ್ನು ಶಾಖೆ ಹೊಂದಿರುವ ಸ್ಥಳವನ್ನು ಆಧರಿಸಿ ನಿಗದಿ ಮಾಡಲಾಗುತ್ತದೆ. ನಗರ ಅಥವಾ ಮೆಟ್ರೊಗಳಿಗೆ ಕನಿಷ್ಟ ರೂ. 30,000 ಮತ್ತು ಸಣ್ಣ ಪಟ್ಟಣ ಅಥವಾ ಗ್ರಾಮೀಣ ಪ್ರದೇಶಕ್ಕೆ ರೂ. 20,000 ನಿಗದಿ ಮಾಡಲಾಗುತ್ತದೆ.
4. ಅಲ್ಲದೆ, ಒಂದೇ ಗುಂಪಿನಡಿ ಹೊಂದಿರುವ ಖಾತೆಯಲ್ಲಿನ ಕುಟುಂಬದ ಸದಸ್ಯರಿಗೆ ಇತರ ಖಾಸಗಿ ಬ್ಯಾಂಕಿಂಗ್ ಮತ್ತು ಸಂಪತ್ತು ನಿರ್ವಹಣಾ ಸೇವೆಗಳನ್ನು ನೀಡಲಾಗುತ್ತಿದೆ.

4. ಯೂನಿಯನ್ ಫ್ಯಾಮಿಲಿ ಸೇವಿಂಗ್ ಸ್ಕೀಮ್

4. ಯೂನಿಯನ್ ಫ್ಯಾಮಿಲಿ ಸೇವಿಂಗ್ ಸ್ಕೀಮ್

ಯೂನಿಯನ್ ಫ್ಯಾಮಿಲಿ ಸೇವಿಂಗ್ ಸ್ಕೀಮ್ ಈ ಖಾತೆಯಲ್ಲಿ, ಕನಿಷ್ಠ 2 ಮತ್ತು ಗರಿಷ್ಠ 6 ಕುಟುಂಬದ ಸದಸ್ಯರ ಒಂದು ಗುಂಪನ್ನು ರಚಿಸಬಹುದು. ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರು ಈ ಯೋಜನೆಯಡಿಯಲ್ಲಿ ಇತರ ಕುಟುಂಬದ ಸದಸ್ಯರೊಂದಿಗೆ ಸೇರಿ ಈ ಖಾತೆಯನ್ನು ತೆರೆಯಬಹುದಾಗಿದೆ.
ಕುಟುಂಬ ಸದಸ್ಯರು ಅಂದರೆ ಅಜ್ಜಿ, ತಾತ, ತಂದೆ, ತಾಯಿ, ಸಂಗಾತಿ, ಸಹೋದರ, ಸಹೋದರಿ, ಮಗ, ಮಗಳು ಇವರುಗಳನ್ನು ಒಳಗೊಂಡಿದೆ. ಇದರ ಸೌಲಭ್ಯವನ್ನು ಪಡೆಯಲು ಇಡೀ ಗುಂಪು ತ್ರೈಮಾಸಿಕ ಹಣ 1 ಲಕ್ಷ ಹಣವನ್ನು ಉಳಿತಾಯ ಖಾತೆಯಲ್ಲಿ ನಿರ್ವಹಿಸಿಕೊಂಡು ಬರಬೇಕಾಗುತ್ತದೆ. ಅಥವಾ ಹತ್ತು ಲಕ್ಷ ರೂಪಾಯಿಗಳನ್ನು ಟರ್ಮ್ ಡಿಪಾಸಿಟ್ ಖಾತೆಯ ರೂಪದಲ್ಲಿ ಇರಿಸಬೇಕಾಗುತ್ತದೆ. ತೆರೆದ ಅಥವಾ ಗುಂಪು ಮಾಡಲಾದ ಹೊಸ ಕುಟುಂಬ ಉಳಿತಾಯ ಖಾತೆಯಡಿಯಲ್ಲಿ ರೂ. 50000 ಬ್ಯಾಲೆನ್ಸ್ ಅನ್ನು ಇರಿಸಬೇಕಾಗುವುದು.
ಕುಟುಂಬ ಖಾತೆ ಯೋಜನೆಯಲ್ಲಿ ಒಂದು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೇನೆಂದರೆ ವೈಯಕ್ತಿಕ ಖಾತೆಯ ವ್ಯವಹಾರಗಳ ಕಾರ್ಯಾಚರಣೆಯನ್ನು ರಹಸ್ಯವಾಗಿ ಮತ್ತು ಮೊದಲೇ ನೀಡಲ್ಪಟ್ಟ ಆದೇಶದ ಪ್ರಕಾರ ಇದೆಯೇ ಎಂದು ನೋಡಿಕೊಳ್ಳಬೇಕು.

ಯೂನಿಯನ್ ಬ್ಯಾಂಕ್ ಕುಟುಂಬ ಖಾತೆ ಯೋಜನೆಯ ಇನ್ನೊಂದು ಆಕರ್ಷಕ ವಿಶೇಷತೆಯೇನೆಂದರೆ ಇಲ್ಲಿ ತ್ರೈಮಾಸಿಕ ಸರಾಸರಿ ಸಮತೋಲನವನ್ನು ನಿರ್ವಹಿಸದೇ ಇದ್ದ ಪಕ್ಷದಲ್ಲಿ ಯಾವುದೇ ಫೆನಾಲ್ಟಿ ಅಥವಾ ಶುಲ್ಕಗಳನ್ನು ಗುಂಪಿನ ಖಾತೆಯನ್ನು ಹೊಂದಿದವರು ಭರಿಸಬೇಕಾದ ಅವಶ್ಯಕತೆಯಿರುವುದಿಲ್ಲ. ಆದರೆ ಉಚಿತ ಪ್ರಯೋಜನಗಳನ್ನು ಒದಗಿಸುವುದನ್ನು ನಿಲ್ಲಿಸಲಾಗುತ್ತದೆ.

5. ಸ್ಟಾಂಡರ್ಡ್ ಚಾರ್ಟರ್ಡ್ ಪರಿವಾರ್ ಅಕೌಂಟ್

5. ಸ್ಟಾಂಡರ್ಡ್ ಚಾರ್ಟರ್ಡ್ ಪರಿವಾರ್ ಅಕೌಂಟ್

ಇದರಲ್ಲಿ ಸಂಪತ್ತಿನ ಶೇಖರಣೆ ಮತ್ತು ಸಂರಕ್ಷಣೆಗಾಗಿ ಅನುಕೂಲಕರವಾಗುವಂತೆ ಕುಟುಂಬ ಉಳಿತಾಯ ಖಾತೆಯು ನಿಮಗೆ ಅನುಕೂಲಕರ ಸೌಲಭ್ಯಗಳನ್ನು ಒದಗಿಸುತ್ತದೆ. ಗುಂಪಿಗೆ ಬ್ಯಾಲೆನ್ಸ್ ಹಂಚಿಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಸೌಲಭ್ಯವು ಈ ಖಾತೆಯಲ್ಲಿ ಲಭ್ಯವಿದೆ. ಪರಿವಾರ ಖಾತೆ ಅಡಿಯಲ್ಲಿ, ಎಲ್ಲಾ ಖಾತೆಗಳಲ್ಲಿ ಪ್ರತಿ ತ್ರೈಮಾಸಿಕಕ್ಕೆ ಸರಾಸರಿ ರೂ. 25,000 (ಬ್ಯಾಲೆನ್ಸ್) ಸಮತೋಲನವನ್ನು ಉಳಿಸಿಕೊಳ್ಳಬೇಕು.

ಈ ಖಾತೆಯು ಸಂಗಾತಿ, ಮಕ್ಕಳು, ಹೆತ್ತವರು ಅಥವಾ ಅತ್ತೆ ಮಾವ ಮತ್ತು ಒಡಹುಟ್ಟಿದವರನ್ನು ಸದಸ್ಯರನ್ನಾಗಿ ಪರಿಗಣಿಸುತ್ತದೆ. ನಾಲ್ಕು ಆಕ್ಸೆಸ್ ಪ್ಲಸ್ ಉಳಿತಾಯ ಖಾತೆಗಳನ್ನು ಪರಿವಾರ ಖಾತೆಯಲ್ಲಿ ಒಟ್ಟುಗೂಡಿಸಬಹುದು. ಈ ಖಾತೆಗಳನ್ನು ಜಂಟಿಯಾಗಿ ಅಥವಾ ವೈಯಕ್ತಿಕ ಆಧಾರದ ಮೇಲೆ ತೆರೆಯಬಹುದು. ಆದ್ದರಿಂದ ಎಲ್ಲಾ 5 ವ್ಯಕ್ತಿಗಳೂ ಕುಟುಂಬದ ಖಾತೆಯಲ್ಲಿರಬಹುದು ಮತ್ತು ಯಾವುದೇ ಸಂಯೋಜನೆಯೊಂದಿಗೆ 4 ಖಾತೆಗಳನ್ನು ತೆರೆಯಬಹುದು.

ಹಕ್ಕುತ್ಯಾಗ

ಹಕ್ಕುತ್ಯಾಗ

ಈ ಮೇಲಿನ ಮಾಹಿತಿಗೆ ಸಂಬಂಧಿಸಿದಂತೆ ಎಲ್ಲ ಅಂಶಗಳನ್ನು ನಿಖರವಾಗಿಟ್ಟುಕೊಳ್ಳಲು ಪ್ರಯತ್ನ ಮಾಡಿದ್ದೇವೆ. ಆದರೂ, ಬ್ಯಾಂಕ್ ಅದರ ನಿಯಮಗಳು ಮತ್ತು ಷರತ್ತುಗಳನ್ನು ನವೀಕರಿಸಿ ಅಥವಾ ಬದಲಾವಣೆ ಮಾಡಿದೆಯೇ ಅಥವಾ ಯಾವುದಾದರೂ ಭಿನ್ನತೆಗಳಿವೆಯೇ ಎಂದು ನೀವು ನಿಮ್ಮ ವೈಯಕ್ತಿಕ ಬ್ಯಾಂಕುಗಳಲ್ಲಿ ಅಲ್ಲಿಯ ಉತ್ಪನ್ನಗಳು ಮತ್ತು ವೈಶಿಷ್ಟ್ಯತೆಗಳ ಬಗ್ಗೆ ಪರಿಶೀಲಿಸುವುದು ಸೂಕ್ತ.

English summary

Best Banks To Open Family Savings Account

Family Savings Account, maintenance of average quarterly balance will be at group level, which means there is no need to maintain in every single account.
Story first published: Tuesday, March 27, 2018, 10:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X